Evening Digest: ಹೆಚ್ಚಾಯ್ತು ಬಿಯರ್​ ರೇಟ್ ; ಮುಂಬೈನಲ್ಲಿ ಹೊಸ ಕೋವಿಡ್​ ತಳಿ ಪತ್ತೆ: ಈ ದಿನದ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಕುಮಾರಸ್ವಾಮಿ ಅವರಲ್ಲಿ ಕಣ್ಣೀರಿಗೆ ಬರವಿಲ್ಲ
  ಜೆಡಿಎಸ್ ಪಕ್ಷದಿಂದ ದಲಿತರನ್ನು ಸಿಎಂ ಮಾಡುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ. ಜೆಡಿಎಸ್‌ ಪಕ್ಷದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ#LuckyDipCMHDK ಅವರು ಸ್ಪಷ್ಟನೆ ನೀಡಬಹುದು.ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ. ರಬ್ಬರ್ ಸ್ಟ್ಯಾಂಪ್‌ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

  ಹೆಚ್ಚಾಯ್ತು ಬಿಯರ್​ ರೇಟ್
  ರಾಜ್ಯ ಬೆಲೆ ಏರಿಕೆ ಬಿಸಿ ಮುಂದುವರಿದೆ. ಪೆಟ್ರೋಲ್ ​, ಡೀಸೆಲ್​ ಗಗನಕ್ಕೇರಿದ್ದಾಯ್ತು, ವಿದ್ಯುತ್​ ಬೆಲೆಯೂ ಹೆಚ್ಚಳವಾಯ್ತು ಇದೀಗ ಎಣ್ಣೆ ಪ್ರಿಯರಿಗೆ ಕಿಕ್​ ಇಳಿಸೋ ಸುದ್ದಿ ಹೊರಬಿದ್ದಿದೆ. ಮದ್ಯಪಾನ ಕುಡಿದ್ರೆ ಕಿಕ್​ ಏರುತ್ತಿತ್ತು, ಆದ್ರೆ ಇನ್ಮುಂದೆ ರೇಟ್​ ಕೇಳಿದ್ರೆ ಇಳಿಯುತ್ತೆ ಕಿಕ್​, ಇದೀಗ ಮದ್ಯಪಾನದ ಬೆಲೆ ಏರಿಕೆ ಕುರಿತು ಮದ್ಯಪಾನ ಕಂಪನಿಗಳು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಸಹ ಪಡೆದಿದೆ. ಬಜೆಟ್​ನಲ್ಲಿ ಮಧ್ಯಪಾನದ ಮೇಲಿನ ಯಾವುದೇ ತೆರಿಗೆ ಬಗ್ಗೆ ಪ್ರಸ್ತಾಪ ಮಾಡದಿದ್ರೂ ಬಿಯರ್​ ಬೆಲೆ ಏರಿಕೆ ಮಾಡೋ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಬ್ರಾಂಡ್​ಗಳ ಬಿಯರ್​ ಬೆಲೆ ಹೆಚ್ಚಾಗಲಿದೆ.

  ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
  ರಾಜ್ಯದ ಮೇಲೆ ಅಲ್ ಖೈದಾ ಉಗ್ರ ಆಯ್ಮಾನ್ ಜವಾಹಿರಿ ಕಣ್ಣು ಬಿದ್ದಿದೆ. ಮುಸ್ಕಾನ್​ ಹೊಗಳಿ ಅಲ್​​ಖೈದಾ ಉಗ್ರನ ವಿಡಿಯೋ ವಿಚಾರವಾಗಿ ಎಸ್.ಕೆ.ಆಲೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂತಹದ್ದನ್ನೆಲ್ಲಾ ಬಿಜೆಪಿಯವರೇ ಹುಟ್ಟುಹಾಕುವುದು. ಎಲ್ರೀ ಉಗ್ರ? ಯಾರು ಉಗ್ರ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಆರ್​ಎಸ್​​ಎಸ್​ನವರೇ ಇಂತಹ ವಿಡಿಯೋಗಳನ್ನು ಕಳುಹಿಸುವುದು. ಈ ಬಗ್ಗೆ ತನಿಖೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಸಿದ್ದರಾಮಯ್ಯ ಹೇಳಿದ್ರು.

  ಮುಂಬೈನಲ್ಲಿ ಹೊಸ ಕೋವಿಡ್​ ತಳಿ ಪತ್ತೆ
  ಕೋವಿಡ್​ ಸೋಂಕು ಕಡಿಮೆಯಾದ ಹಿನ್ನಲೆ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದ ಮುಂಬೈನಲ್ಲಿ ಕೋವಿಡ್​ ಹೊಸ ತಳಿ ಪತ್ತೆಯಾಗಿದೆ. ಈ ಕೋವಿಡ್​ ಎಕ್ಸ್‌ಇ (XE) ರೂಪಾಂತರ ತಳಿ ಮೊದಲು ಬ್ರಿಟನ್​ ನಲ್ಲಿ ಪತ್ತೆಯಾಗಿತ್ತು. ಬೃಹನ್ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ ಪ್ರಕಾರ ಕಪ್ಪ ತಳಿ ಪತ್ತೆಯಾಗಿದ್ದು, ಸೋಂಕು ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ಗಂಭೀರ ಗುಣಲಕ್ಷಣ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಗಿದೆ. ಇನ್ನು ಈ ಹೊಸ ತಳಿಯು ಕೋವಿಡ್​ ಗಿಂತ ಹೆಚ್ಚಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ತಿಳಿಸಿತು.

  ಶರದ್​ ಪವಾರ್​​- ಮೋದಿ ಭೇಟಿ
  ಎನ್​ಸಿಪಿ ನಾಯಕ ಶರದ್​ ಪವಾರ್ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಸುಮಾರು 20 ನಿಮಿಷಗಳ ಕಾಕ ಚರ್ಚೆ ನಡೆಸಿದ್ದು, ಎಲ್ಲರ ಗಮನ ಸೆಳೆದಿದೆ. ಮಹಾರಾಷ್ಟ್ರದಲ್ಲಿ ನಡೆದ ಜಾರಿ ನಿರ್ದೇಶನಾಲಯದ ದಾಳಿ ಬೆನ್ನಲ್ಲೇ ನಡೆದಿರುವ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಎನ್​ಸಿಪಿ ಮಿತ್ರಪಕ್ಷವಾಗಿರುವ ಆಡಳಿತ ಪಕ್ಷ ಶಿವಸೇನೆ ನಾಯಕರ ಮೇಲೆ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಿರುವ ಬೆನ್ನಲ್ಲೇ ಈ ನಾಯಕರು ಭೇಟಿ ನಡೆಸಿದ್ದು, ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

  ಏಕ್ ಭಾರತ್, ಶ್ರೇಷ್ಠ ಭಾರತ

  ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಕಛ್‌ನಿಂದ ಕೊಹಿಮಾದವರೆಗೆ ಬಿಜೆಪಿಯು ‘ಏಕ್ ಭಾರತ್, ಶ್ರೇಷ್ಠ ಭಾರತ’ ಒಂದು ಭಾರತ, ಶ್ರೇಷ್ಠ ಭಾರತ) ಸಂಕಲ್ಪವನ್ನು ಬಲಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರು, ಸಂಸದರು ಮತ್ತು ಶಾಸಕರನ್ನು ಉದ್ದೇಶಿಸಿ ಮಾತನಾಡಿದರು. ಬುಧವಾರ ಬಿಜೆಪಿಯ 42 ನೇ ಸಂಸ್ಥಾಪನಾ ದಿನ. ಕುಟುಂಬದ ನೇತೃತ್ವದ ಪಕ್ಷಗಳು ದೇಶದ ಯುವಕರನ್ನು ಎಂದಿಗೂ ಪ್ರಗತಿಗೆ ತರಲು ಬಿಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಕೇವಲ ಟಾಂಗ್ ಕೊಟ್ಟಿದ್ದಾರೆ. ಅವರು ಯಾವಾಗಲೂ ದ್ರೋಹಕ್ಕೆ ಒಳಗಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. "ಇಂದು ನಾವು ಹೆಮ್ಮೆಪಡಬೇಕು, ಇಂದು ಈ ಸಮಸ್ಯೆಯ ಬಗ್ಗೆ ದೇಶವನ್ನು ಎಚ್ಚರಿಸುತ್ತಿರುವ ಏಕೈಕ ಪಕ್ಷ ಬಿಜೆಪಿ ಎಂದು ಅವರು ಹೇಳಿದ್ದಾರೆ.
  Published by:Seema R
  First published: