Top 5 News: ಅತ್ತ ರಿಷಿ ಸುನಕ್‌ ಸೋಲು, ಇತ್ತ ಯಶ್-ಸುದೀಪ್ ಫ್ಯಾನ್ಸ್ ವಾರ್! 'ಮಂಡೇ' ಬಿಸಿ ಮಾಡಿದ ಸ್ಟೋರಿ ಇಲ್ಲಿದೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ, ಟಾಪ್ 5 ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ರಿಷಿ ಸುನಕ್​ಗೆ ಸೋಲು, ಲಿಜ್ ಟ್ರಸ್ ಬ್ರಿಟನ್ ಹೊಸ ಪ್ರಧಾನಿಯಾಗಿ ಆಯ್ಕೆ

ಬ್ರಿಟನ್ ಪ್ರಧಾನಿ ಸ್ಥಾನದ ಚುನಾವಣೆಯ ಫಲಿತಾಂಶ (UK PM Election Result) ಹೊರಬಿದ್ದಿದ್ದು ರಿಷಿ ಸುನಕ್ ಅವರನ್ನು (Rishi Sunak) ಸೋಲಿಸಿ ಲಿಝ್ ಟ್ರಸ್ ( Liz Truss) ಬ್ರಿಟನ್​ ಹೊಸ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ.  ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮೊದಲ ಭಾರತೀಯ ಮೂಲದ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿಷಿ ಸುನಕ್ ಅವರು ಶನಿವಾರ ತಮ್ಮ ತಂಡ ಮತ್ತು ಬೆಂಬಲಿಗರಿಗೆ ಧನ್ಯವಾದ ಹೇಳುವ ಮೂಲಕ 'ರೆಡಿ ಫಾರ್ ರಿಷಿ' ಅಭಿಯಾನವನ್ನು ಕೊನೆಗೊಳಿಸಿದ್ದರು.

ಪ್ರಶಾಂತ್​ ಇಲ್ಲದ ಯಶ್​ ಝೀರೋ! ರಾಕಿ ಭಾಯ್, ಕಿಚ್ಚ ಸುದೀಪ್ ಫ್ಯಾನ್ಸ್ ವಾರ್!

ಸೋಶಿಯಲ್​ ಮೀಡಿಯಾದಲ್ಲಿ (Social Media) ಇದ್ದಕ್ಕಿದ್ದಂತೆ ನಟ ಯಶ್ (Yash)​ ಹಾಗೂ ಸುದೀಪ್ (Sudeep)​ ಫ್ಯಾನ್​​ಗಳು ಬಿಗ್​ ವಾರ್​ ಶುರು ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ (Sandalwood) ಅನೇಕ ಹ್ಯಾಶ್‌ಟ್ಯಾಗ್‌ಗಳು (Hashtag) ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಕೆಜಿಎಫ್​​ (KGF) ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿರೋ ಯಶ್​, ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ. ಆದ್ರೆ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಫ್ಯಾನ್​ ವಾರ್​ ಶುರುವಾಗಿದ್ದು, ಟ್ವೀಟ್​ ವಾರ್ (Twitter War)​​ ತಾರಕಕ್ಕೇರಿದೆ. ಸುದೀಪ್​ ಅಭಿಮಾನಿಗಳು ಯಶ್​​ ಬಗ್ಗೆ ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಯಶ್​ ಅಭಿಮಾನಿಗಳು (Yash Fans) ಸುದೀಪ್​ ಬಗ್ಗೆ ಬ್ಯಾಡ್​ ಕಾಮೆಂಟ್ ಮಾಡ್ತಿದ್ದಾರೆ. ಇದ್ದಕ್ಕಿದ್ದಂತೆ ಫ್ಯಾನ್​ ವಾರ್​ ಶುರುವಾಗಲು ಕಾರಣ ಏನು ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: Yash-Sudeep Fans War: ಪ್ರಶಾಂತ್​ ಇಲ್ಲದ ಯಶ್​ ಝೀರೋ! ರಾಕಿ ಭಾಯ್, ಕಿಚ್ಚ ಸುದೀಪ್ ಫ್ಯಾನ್ಸ್ ವಾರ್!

ಆಡಿಯೋ ವೈರಲ್​ಗೆ ನೊಂದು ಬೆಳಗಾವಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ! 

ರಾಜ್ಯದಲ್ಲಿ ಮುರುಘಾ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ ದೊಡ್ಡ ಸದ್ದು ಮಾಡ್ತಿದೆ. ಸ್ವಾಮೀಜಿಗಳನ್ನು 3 ದಿನ ಪೊಲೀಸ್ ಕಸ್ಟಡಿ ಕೊಟ್ಟು ಈಗ 9 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇದರ ನಡುವೆ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದೋಗಿದೆ. ಬೆಳಗಾವಿಯ (Belagavi) ಬೈಲಹೊಂಗಲದ ನೇಗಿನಾಳ ಗ್ರಾಮದಲ್ಲಿ ಬಸವಸಿದ್ದಲಿಂಗ ಸ್ವಾಮೀಜಿ (Basavasiddalinga Swamiji) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 50 ವರ್ಷದ ಬಸವಸಿದ್ದಲಿಂಗ ಸ್ವಾಮೀಜಿ ಮಠದಲ್ಲೇ (Mutt) ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​​ನೋಟ್​​  (Death Note) ಬರೆದಿಟ್ಟಿರುವ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮೇಲಿನ ಮಹಡಿಯ ಕೋಣೆಯಲ್ಲಿ ನೇಣಿಗೆ (Hanging) ಶರಣಾಗಿದ್ದಾರೆ. ಹಡೆದ ತಾಯಿ ನನ್ನ ಕ್ಷಮಿಸು, ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರ ಕಡೆಗೆ ಎಂದು ಡೆತ್​​​ನೋಟ್​ನಲ್ಲಿ ಬರೆದಿಟ್ಟಿದ್ದಾರೆ.

ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! 

ಅಹ್ಮದಾಬಾದ್, ಗುಜರಾತ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ತವರು ಗುಜರಾತ್‌ನಲ್ಲಿ (Hometown Gujarat) ವಿಧಾನಸಭಾ ಚುನಾವಣೆ (Assembly Election) ರಂಗೇರುತ್ತಿದೆ. ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕು ಅಂತ ಬಿಜೆಪಿ (BJP) ಹೊಸ ಹೊಸ ತಂತ್ರ ಹೂಡುತ್ತಿದೆ. ಮತ್ತೊಂದೆಡೆ ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಅಂತ ಕಾಂಗ್ರೆಸ್‌ (Congress) ಶತಪ್ರಯತ್ನ ಮಾಡುತ್ತಿದೆ. ಈ ನಡುವೆ ದೆಹಲಿ (Delhi) ಹಾಗೂ ಪಂಜಾಬ್‌ನಲ್ಲಿ (Punjab) ಅಧಿಕಾರ ಗದ್ದುಗೆ ಹಿಡಿದಿರುವ ಆಮ್ ಆದ್ಮಿ ಪಾರ್ಟಿ (Aam Aadmi Party), ಗುಜರಾತ್‌ನಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ಲ್ಯಾನ್ ಮಾಡಿದೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುಜರಾತ್ ಮತದಾರರಿಗಾಗಿ ಕಾಂಗ್ರೆಸ್ ಪ್ರಣಾಳಿಕೆಯನ್ನು (Congress Manifesto) ರಿಲೀಸ್ ಮಾಡಿದ್ದಾರೆ. ರೈತರ 3 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ, 500 ರೂಪಾಯಿಗೆ ಅಡುಗೆ ಅನಿಲ ಪೂರೈಕೆ ಸೇರಿದಂತೆ ಮತದಾರರಿಗೆ ತರಹೇವಾರಿ ಯೋಜನೆಗಳ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: Rahul Gandhi: ರೈತರ ಸಾಲ ಮನ್ನಾ, ಉಚಿತ ವಿದ್ಯುತ್, 500 ರೂಪಾಯಿಗೆ ಗ್ಯಾಸ್! ಮತದಾರರಿಗೆ ರಾಹುಲ್ ಗಾಂಧಿ ಭರವಸೆ

Video: ಇವ್ರೇನು ರಾಕಿ ಭಾಯ್‌ನಾ, ರಾಕಿ ಭಾಯ್ ತಮ್ಮನಾ?

ಸಿನಿಮಾ ತಾರೆಯರು ಅಥವಾ ಸೆಲೆಬ್ರಿಟಿಗಳನ್ನು (Celebrity) ಕಂಡಾಗ ಜನರು ಅವರ ಬಳಿಗೆ ಓಡೋಡಿ ಬರುವುದು ಸಹಜ. ಅದರಲ್ಲೂ ಖ್ಯಾತ ಸಿನಿಮಾ ತಾರೆಯರನ್ನು (Film Actor) ಕಂಡಾಗ ಹತ್ತಿರ ಬಂದು ಮೊದಲಿಗೆ ಕಿಸೆಯಿಂದ ಮೊಬೈಲ್​ ತೆಗೆದು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ಇರಲಾರರು. ಅದರಂತೆ ರಾಕಿಂಗ್​​​ ಸ್ಟಾರ್​ ಯಶ್​ (Rocking Star Yash) ಇದ್ದಕ್ಕಿಂದ್ದಂತೆಯೇ ಸಿಕ್ಕಿದರೆ ಹೇಗಿರುತ್ತದೆ? ಇಲ್ಲೊಬ್ಬಳು ಹುಡುಗಿ ರಾಕಿಂಗ್​ ಸ್ಟಾರ್​ ಯಶ್​ ನೋಡಿ ಕಾರು ನಿಲ್ಲಿಸಿ ಓಡೋಡಿ ಬರುತ್ತಾಳೆ. ಮಾತ್ರವಲ್ಲದೆ, ಕೈಯಲ್ಲಿದ್ದ ಮೊಬೈಲ್​ ಹಿಡಿದುಕೊಂಡು ರಾಕಿ ಭಾಯ್​​ಯೊಂದಿಗೆ ಸೆಲ್ಫಿ (Selfie) ಕ್ಲಿಕ್ಕಿಸಲು ಮುಂದಾಗುತ್ತಾಳೆ. ಆದರೆ ಆಮೇಲೆ ಗೊತ್ತಾಗುತ್ತದೆ ಅದು ರಾಕಿಂಗ್​​ ಸ್ಟಾರ್​ ಅಲ್ಲ, ಅವರಂತೆಯೇ ಇರುವ  ವ್ಯಕ್ತಿ ಎಂದು.
Published by:Annappa Achari
First published: