Evening Digest: RSS ಬಗ್ಗೆ ಮಾತಾಡಿದ್ರೆ ಹುಷಾರ್ ಎಂದ ಅಶೋಕ್: ಕಂಟೈನರ್ ಡಿಪೋದಲ್ಲಿ ಸ್ಫೋಟಕ್ಕೆ 49 ಮಂದಿ ಬಲಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
RSS ಬಗ್ಗೆ ಮಾತಾಡಿದ್ರೆ ಹುಷಾರ್ ಎಂದ ಅಶೋಕ್​​: ಕಳೆದ 75 ವರ್ಷದಿಂದ RSS ಜನಸೇವೆ ಮಾಡುತ್ತಿದೆ. ಆದರೆ ಸಿದ್ದರಾಮಯ್ಯ (Siddaramaiah) ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾತಾಡಿದ ಸಚಿವ ಆರ್.​ ಅಶೋಕ್​, (R. Ashok) ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ರೆ ಹುಷಾರ್ ಎಂದಿದ್ದಾರೆ. ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ. ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಟಿ ಹೋಯಿತು. ಕೇವಲ ಸೋನಿಯ ಗಾಂಧಿ (Sonia Gandhi) ಮೆಚ್ಚಿಸಲು ಹೋಗಿ, ನೀವು ಚುನಾವಣೆಯಲ್ಲಿ (Election) ಸುಟ್ಟು ಹೋಗ್ತಿರಿ ಹುಷಾರ್ ಎಂದು ಸಿದ್ದರಾಮಯ್ಯಗೆ ಆರ್​ ಅಶೋಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:RSS ಬಗ್ಗೆ ಮಾತಾಡಿದ್ರೆ ಬಂದ್ರೆ ಹುಷಾರ್; ನೀವೇ ಸುಟ್ಟು ಹೋಗ್ತೀರಾ, ಸಿದ್ದುಗೆ ಸಚಿವ ಅಶೋಕ್ ಟಾಂಗ್

ಬಿಜೆಪಿಯವರಿಗೆ ಕೋಮುವಾದಿ ನಶೆ ತಲೆಗೆ ಹತ್ತಿದೆ- ಸಿದ್ದರಾಮಯ್ಯ

ಶಾಲಾ ಪಠ್ಯ ಪುಸ್ತಕ (Text Book) ಪರಿಷ್ಕರಣೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ (BJP, Congress Leaders) ನಡುವೆ ವಾಗ್ಯುದ್ದ ಮುಂದುವರೆದಿದೆ.  ಸರ್ಕಾರ ಮೊಂಡಾಟ ಮಾಡಿದರೆ ಜನರು ತಕ್ಕ ಪಾಠ ಕಲಿಸುತ್ತಾರೆ, ಸರ್ಕಾರದ ಪಠ್ಯಕ್ರಮವನ್ನು ಸಾಹಿತಿಗಳು, ರಾಜಕಾರಣಿಗಳು (Politician) ಸಾಮಾನ್ಯ ಜನರು ವಿರೋಧಿಸುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಮೊಂಡಾಟ ಮುಂದುವರಿಸಿದರೆ ಜನರು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah)  ಹೇಳಿದ್ದಾರೆ.

ಕಂಟೈನರ್ ಡಿಪೋದಲ್ಲಿ ಸ್ಫೋಟಕ್ಕೆ 49 ಮಂದಿ ಬಲಿ

ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿರುವ ಶಿಪ್ಪಿಂಗ್ ಕಂಟೈನರ್ ಡಿಪೋದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೀತಾಕುಂದ ಪ್ರದೇಶದ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 300 ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Container Depot Fire: ಬಾಂಗ್ಲಾದ ಶಿಪ್ಪಿಂಗ್ ಕಂಟೈನರ್ ಡಿಪೋದಲ್ಲಿ ಸ್ಫೋಟಕ್ಕೆ 49 ಮಂದಿ ಬಲಿ, 300 ಜನರಿಗೆ ಗಾಯ

ಕಾಶ್ಮೀರವನ್ನು ನಿಭಾಯಿಸಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್

ಉದ್ದೇಶಿತ ಹತ್ಯೆಗಳಿಂದಾಗಿ (Targeted Killing) ಕಾಶ್ಮೀರಿ ಪಂಡಿತರನ್ನು (Kashmiri Pandits) ಜಮ್ಮುಕಾಶ್ಮೀರ (Jammu and Kashmir) ತೊರೆಯುವಂತೆ ಒತ್ತಾಯಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal) ಕಳವಳ ವ್ಯಕ್ತಪಡಿಸಿದರು.  ದಾಳಿಯನ್ನು ತಡೆಯಲು ಕೇಂದ್ರವು ಕ್ರಿಯಾ ಯೋಜನೆಯನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ದೆಹಲಿಯ ಜಂತರ್ ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷದ 'ಜನ್ ಆಕ್ರೋಶ್ ರ್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರು 1990 ರ ದಶಕದಲ್ಲಿ ತಮಗೆ ಏನಾಯಿತು ಎಂಬುದನ್ನು ಪುನರಾವರ್ತಿಸುತ್ತಿದ್ದಾರೆ ಎಂದು ಹೇಳಿದರು. "ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಸಾಧ್ಯವಿಲ್ಲ, ಅವರಿಗೆ ಕೊಳಕು ರಾಜಕೀಯ ಮಾಡಲು ಮಾತ್ರ ತಿಳಿದಿದೆ. ದಯವಿಟ್ಟು ಕಾಶ್ಮೀರದ ವಿಚಾರದಲ್ಲಿ ರಾಜಕೀಯ ಮಾಡಬೇಡಿ" ಎಂದು ಎಎಪಿ ಮುಖ್ಯಸ್ಥರು ವಾಗ್ದಾಳಿ ನಡೆಸಿದರು.

ಶಾರುಖ್ ಖಾನ್ - ಕತ್ರಿನಾಗೂ ಕೋವಿಡ್ ಕಂಟಕ

ಕಳೆದ ಕೆಲ ದಿನಗಳ ಹಿಂದೆ ಕರಣ್ ಜೋಹರ್ (Karan Johar)  ಬರ್ತ್ ಡೇಯನ್ನು ಆಚರಿಸಿಕೊಂಡಿದ್ದರು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 50 ರಿಂದ 55 ಜನಕ್ಕೆ ಕೊರೋನಾ (Corona) ಪಾಸಿಟಿವ್ ಬಂದಿದೆ. ಹೌದು, ಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿನ ಕೊರೋನಾ ಸ್ಪೋಟವಾಗಿದ್ದು, ಇದರ ಜೊತೆ ಇದೀಗ ಬಾಲಿವುಡ್ ಬಾದ್​ಶಾ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಮಾಹಿತಿಯೊಂದು ವರಿ ಮೂಲಕ ತಿಳಿದುಬಂದಿದ್ದು, ಈ ಇಬ್ಬರೂ ಸ್ಟಾರ್​ ಗಳು ಸದ್ಯ ಕ್ವಾರಂಟೈನ್​ ನಲ್ಲಿ ಇರುವುದಾಗಿ ತಿಳಿದುಬಂದಿದೆ. ಅಲ್ಲದೇ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕರಣ್ ಜೋಹಾರ್ ಅವರ ಬರ್ತಡೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
Published by:Kavya V
First published: