Evening Digest: ಕ್ಯಾನ್ಸರ್​ಗೂ ಸಿಕ್ತು ಔಷಧ!, ಪ್ರಿಯಾಂಕ್ ಖರ್ಗೆ ಅಲ್ಲ ಪ್ರಚಾರ ಖರ್ಗೆ; ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಕ್ಯಾನ್ಸರ್​ಗೂ ಸಿಕ್ತು ಔಷಧ!

ವೈದ್ಯಕೀಯ ಸಂಶೋಧನೆಗಳು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿವೆ. ಗುಣಪಡಿಸಲೇ ಆಗದ ಖಾಯಿಲೆ ಎನಿಸಿದ್ದ ಕ್ಯಾನ್ಸರ್​ಗೂ ನಿಧಾನವಾಗಿ ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ  ಸ್ತನ ಕ್ಯಾನ್ಸರ್​ನಿಂದ (Breast Cancer Treatment) ಬಳಲುತ್ತಿದ್ದ ಮಹಿಳೆಯೋರ್ವರಿಗೆ ಕೆಲವೇ ತಿಂಗಳುಗಳ ಕಾಲ ಬದುಕುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ ಈಗ ಆ ಮಹಿಳೆಯಲ್ಲಿ ಕ್ಯಾನ್ಸರ್​ನ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ವರದಿಯಾಗಿದೆ. ಸ್ತನ ಕ್ಯಾನ್ಸರ್​ನಿಂದ ಬಳಸುತ್ತಿದ್ದ ಮಹಿಳೆ ಇದೀಗ ಪ್ರಯೋಗಾತ್ಮಕ ಔಷಧದಿಂದ (Drug Trial) ಸಂಪೂರ್ಣ ಗುಣಮುಖವಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ಮೂಲದ ಮಹಿಳೆಯೊಬ್ಬರು ಯುಕೆ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಪ್ರಯೋಗದ ನಂತರ ಸ್ತನ ಕ್ಯಾನ್ಸರ್‌ನ ಯಾವುದೇ ಪುರಾವೆಗಳನ್ನು ತೋರಿಸುತ್ತಿಲ್ಲ ಎಂದು ವೈದ್ಯರು ಹೇಳಿದ ನಂತರ ಸೋಮವಾರ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ನಲ್ಲಿ ಇಬ್ಬರು ಅರೆಸ್ಟ್

ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ (Vastu Expert) ಚಂದ್ರಶೇಖರ್ ಗುರೂಜಿ (Chandrashekhar Guruji) ಹತ್ಯೆ ಪ್ರಕರಣದಲ್ಲಿ (Murder Case) ಇಬ್ಬರು ಆರೋಪಿಗಳನ್ನು (Accused) ಬಂಧಿಸಲಾಗಿದೆ. ಹತ್ಯೆ (Murder) ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು (Police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡಿ ಕಾರ್‌ನಲ್ಲಿ (Car) ಎಸ್ಕೇಪ್ (Escape) ಆಗಿದ್ದ ಹಂತಕರು, ಕೇವಲ ನಾಲ್ಕೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸರಳ ವಾಸ್ತು ಮೂಲಕ ಜನಪ್ರಿಯರಾಗಿದ್ದ ಚಂದ್ರಶೇಖರ್‌ ಗುರೂಜಿ ಅವರನ್ನು ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಧಾರುಣವಾಗಿ ಹತ್ಯೆ ಮಾಡಲಾಗಿದೆ. ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಆಗಮಿಸಿದ ಇಬ್ಬರು ಹಂತಕರು, ಚಾಕುವಿನಿಂದ ಮತ್ತೆ ಮತ್ತೆ ಇರಿದು ಗುರೂಜಿಯನ್ನು ಕೊಲೆ ಮಾಡಿ, ಬಳಿಕ ಕಾರ್‌ನಲ್ಲಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ:Breaking News: ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್‌ನಲ್ಲಿ ಇಬ್ಬರು ಅರೆಸ್ಟ್! ನಾಲ್ಕೇ ಗಂಟೆಗಳಲ್ಲಿ ಕೋಳ ತೊಡಿಸಿದ ಪೊಲೀಸರು

ಪ್ರಿಯಾಂಕ್ ಖರ್ಗೆ ಅಲ್ಲ ಪ್ರಚಾರ ಖರ್ಗೆ

ಬೆಂಗಳೂರು (ಜು.5): PSI ನೇಮಕಾತಿ ಅಕ್ರಮಕ್ಕೆ (PSI Recruitment Case) ಸಂಬಂಧಿಸಿದಂತೆ ಕಾಂಗ್ರೆಸ್​, ಬಿಜೆಪಿ ಸರ್ಕಾರದ ವಿರುದ್ಧ ಒಂದಾದ ಮೇಲೊಂದು ಆರೋಪ ಮಾಡುತ್ತಿದೆ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ‘ಪಿಎಸ್‌ಐ ಹಗರಣದಲ್ಲಿ ಸರ್ಕಾರದ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿಯಾದ ಆರೋಪ ಕೇಳಿಬರುತ್ತಿದ್ದೆ ಎಂದು ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ. ಕಾಂಗ್ರೆಸ್​  ಆರೋಪಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನಾವು ತನಿಖೆ ಮಾಡಲು ಸಿದ್ದ ದಾಖಲೆ ಕೊಡಿ ಎಂದ್ರು. CID ಪ್ರಿಯಾಂಕ್​ ಖರ್ಗೆ (Priyank Kharge) ಅವರಿಗೆ ಪತ್ರ ಬರೆದು ದಾಖಲೆ ಕೇಳಿದ್ರು ಅವರು ಸಾಕ್ಷಿ ಕೊಡಲಿಲ್ಲ. ವಿಜಯೇಂದ್ರ (Vijayendra) ಬಗ್ಗೆ ಕಾಂಗ್ರೆಸ್​ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ್ದ ಅವ್ರು ಯಾರ ಪುತ್ರ, ಯಾರ ಪುತ್ರಿ ಅಂತ ಬರೋದಿಲ್ಲ, ಸಾಕ್ಷಿ ಕೊಡದೆ ಸುಮ್ಮನೆ ವಿಜಯೇಂದ್ರ ಮೇಲೆ ಆರೋಪ ಮಾಡಲಾಗ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: Araga Jnanendra: ಪ್ರಿಯಾಂಕ್ ಖರ್ಗೆ ಅಲ್ಲ ಪ್ರಚಾರ ಖರ್ಗೆ; PSI ಕೇಸ್​ನಲ್ಲಿ ವಿಜಯೇಂದ್ರ ಕೈವಾಡವಿಲ್ಲ

ಜಮೀರ್ ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆ

ಬೆಂಗಳೂರು (ಜು.07):  ಎಸಿಬಿ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್​ಮೆಂಟ್​ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿದ್ಧಾರೆ. ಮಲ್ಯ ರಸ್ತೆಯ UB ಸಿಟಿ ಎದುರಿನ ಫ್ಲ್ಯಾಟ್ (Near UB City Flat) ಮೇಲೆ ರೇಡ್ ನಡೆಸಿದ್ದಾರೆ. ನಾಲ್ಕನೇ ಪ್ಲೋರ್​ನ 402ನೇ ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆದಿದೆ. ಮನೆ, ಟ್ರಾವೆಲ್ಸ್​ ಕಚೇರಿ, ಫ್ಲ್ಯಾಟ್​ನಲ್ಲಿ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್​ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ (Zameer Ahmed) ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ ಪಿಸ್ತೂಲ್ ನ ಗುಂಡುಗಳು ಇರಬಹುದು.  ಆದರೆ ಇದೇ ಫ್ಲಾಟ್ ನಲ್ಲಿ 1 Empty bullet case ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ.  ಪಿಸ್ತೂಲ್ ನಿಂದ ಗುಂಡು ಹಾರಿದ್ರೆ ಮಾತ್ರ ಈ Empty bullet case ಉಳಿಯುತ್ತದೆ.

ಸುಪ್ರೀಂಕೋರ್ಟ್ ಜಡ್ಜ್ ಅಭಿಪ್ರಾಯಕ್ಕೆ ನಿವೃತ್ತ ಜಡ್ಜ್​ಗಳ ವಿರೋಧ

ದೆಹಲಿ: ನೂಪುರ್ ಶರ್ಮಾ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್​ ನೀಡಿದ್ದ ಈ ಆದೇಶದ ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಟೀಕಿಸಿ ಸಿಜೆಐ ಎನ್.ವಿ. ರಮಣ (CJI NV Ramana) ಅವರಿಗೆ ಪತ್ರ ಬರೆದಿದ್ದಾರೆ. ನೂಪೂರ್ ಶರ್ಮಾ (Nupur Sharma Controversy) ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್  ಜಡ್ಜ್​ಗಳ ಅಭಿಪ್ರಾಯದ ವಿರು (Supreme Court Comments On Nupur Sharma) ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ.
Published by:Pavana HS
First published: