Evening Digest: ಬಿಎಂಟಿಸಿ ಬಸ್​​ನಲ್ಲಿ ನಿಂತು ಪ್ರಯಾಣಿಸುವಂತಿಲ್ಲ: ಕಾಂಗ್ರೆಸ್ ಪಾದಯಾತ್ರೆ ಏನಾಯ್ತು? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬಿಎಂಟಿಸಿ ಬಸ್​​ನಲ್ಲಿ ನಿಂತು ಪ್ರಯಾಣಿಸುವಂತಿಲ್ಲ: ರಾಜ್ಯದಲ್ಲಿ ಕೊರೊನಾ (Corona) ಹಾಗೂ ಓಮಿಕ್ರಾನ್​​(Omicron) ಪ್ರಕರಣಗಳ ಹೆಚ್ಚಾದ ಹಿನ್ನೆಲೆಯಲ್ಲಿ ನಿನ್ನೆ ತಜ್ಞರ ಜೊತೆ ಸಭೆ ನಡೆಸಿದ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ರಾಜ್ಯಾದ್ಯಂತ ವೀಕೆಂಡ್​ ಕರ್ಫ್ಯೂ(Weekend Curfew), ನೈಟ್​ ಕರ್ಫ್ಯೂ (Night Curfew) ಸೇರಿದಂತೆ ಬೆಂಗಳೂರಿನಲ್ಲಿ ಶಾಲೆಗಳನ್ನು 2 ವಾರಗಳ ಕಾಲ ಬಂದ್​ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೇ ಹೆಚ್ಚಿನ ಪಾಸಿಟಿವ್​ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಬೆಂಗಳೂರು ಜಿಲ್ಲೆಯನ್ನು ಒಂದು ರಾಜ್ಯಕ್ಕೆ ಸಮನಾಗಿ ಪರಿಗಣಿಸಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್​ ನಿನ್ನೆಯೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ಸಂಚಾರ ವಿಚಾರದಲ್ಲೂ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಿಎಂಟಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇನ್ಮುಂದೆ ಬಿಎಂಟಿಸಿ ಬಸ್​ ಏರುವ ಮುನ್ನ ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಲೇಬೇಕು.

ಪೂರ್ತಿ ಓದಿಗಾಗಿ: BMTC Guidelines: ಬಿಎಂಟಿಸಿ ಬಸ್​​ಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ; ಜೊತೆಗೆ ಈ ಎಲ್ಲಾ ರೂಲ್ಸ್ ಪಾಲಿಸಲೇಬೇಕು

ನೀರಿಗೋಸ್ಕರ ನಡೆಯುತ್ತೇನೆ

ನಿಗಧಿಯಾಗಿರುವ ಪಾದಯಾತ್ರೆ (Mekedatu Padaytre) ದಿನಾಂಕ ಬದಲಾಗಲ್ಲ. ಎಲ್ಲ ಕೋವಿಡ್ ಮಾರ್ಗಸೂಚಿ (COVID Guidelines) ಗಳನ್ನು ಅನುಸರಿಸಿ ನಾವು ಪಾದಯಾತ್ರೆ ಮಾಡುತ್ತೇವೆ. ನಾವು ಮಾತ್ರ ಓಡಾಡೋದು ಇವರಿಗೆ ಕಾಣಿಸುತ್ತಾ? ಬೇರೆ ಯಾರೂ ಓಡೋಡಾದು ಇವರಿಗೆ ಕಾಣಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D K Shivakumar) ಪ್ರಶ್ನೆ ಮಾಡಿದ್ದಾರೆ. ನಾನು ಪಾದಯಾತ್ರೆ ಯಾಕೆ ಅಂತ ಕರೀತಿರಿ. ನಾನು ನೀರಿಗಾಗಿ ನಡೆಯುತ್ತಿದ್ದೇವೆ. ಕಾವೇರಿ ತಾಯಿಯ ನೀರನ್ನು (Cauvery Water) ಬೆಂಗಳೂರಿಗೆ (Bengaluru) ತರಲು ನಡೆಯುತ್ತಿದ್ದೇವೆ . ಆ ನೀರನ್ನು ತರಬೇಕು ಅನ್ನೋದು ನಮ್ಮ ಉದ್ದೇಶ. ಆ ನೀರನ್ನು ಇವರಿಗೂ ಸಹ ಕುಡಿಸುತ್ತೇವೆ. ನಾನು ಮೆರವಣಿಗೆ, ಧರಣಿ ಯಾವುದನ್ನೂ ಮಾಡಲ್ಲ. ನೀರಿಗಾಗಿ ನಡೆಯುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ಸಿಗರಿಗೆ ಸಿಎಂ ವಾರ್ನಿಂಗ್​

ನಿನ್ನೆಯಷ್ಟೇ ರಾಜ್ಯ ಸರ್ಕಾರ ಕೋವಿಡ್​ ಕಠಿಣ ನಿಯಮಗಳನ್ನು (Covid Guidelines) ಜಾರಿಗೆ ತಂದಿದ್ದು, ಇದಕ್ಕೆ ಕಾಂಗ್ರೆಸ್​​ Congress ಆಕ್ರೋಶ ವ್ಯಕ್ತಪಡಿಸಿದೆ. ಮೇಕೆದಾಟು ಪಾದಯಾತ್ರೆ (Mekedatu Padaytre) ಹತ್ತಿಕ್ಕುವ ಸಲುವಾಗಿಯೇ ನಿಯಮಗಳನ್ನು ತಂದಿದ್ದಾರೆ ಎಂದು ಕೈ ನಾಯಕರು ಟೀಕಿಸಿದ್ದರು. ಇದಕ್ಕೆ ಸಿಎಂ ಬಸವರಾಜ ಬೊಮ್ಮಯಿ (CM Basavaraj Bommai) ತಿರುಗೇಟು ಕೊಟ್ಟಿದ್ದಾರೆ. ಪಾದಯಾತ್ರೆ ಮಾಡೇ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ನಾಯಕರ ವಿರುದ್ಧ ನಾಗಮಂಗಲ ತಾಲೂಕಿನ ಬಿಜಿ ನಗರದಲ್ಲಿ ಸಿಎಂ ಕಿಡಿಕಾರಿಸರು. ಕೊರೋನಾ ಎಲ್ಲರಿಗೂ ಒಂದೇ ಅಲ್ವಾ, ಅದೇನು ಪಕ್ಷ ಆಧಾರಿತವಾಗಿ ಬರುತ್ತಾ.? ಕೊರೋನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ, ಹೆಚ್ಚಾಗುತ್ತಿರುವಾಗ ಸರ್ಕಾರದ ಕರ್ತವ್ಯ ಇರುತ್ತದೆ. ಹಿಂದಿನ ಎರಡು ಅಲೆಯ ಅನುಭವದಿಂದ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೋನಾಕ್ಕಾಗಿಯೇ ಒಂದು ಕಾನೂನು ಇದೆ. ಆ ಕಾನೂನು ಅನ್ವಯ ಅನುಸರಿಸಬೇಕು ಎಂದು ಮಾತಿನಲ್ಲೇ ಚಾಟಿ ಬೀಸಿದರು.

ಪೂರ್ತಿ ಓದಿಗಾಗಿ:ಪಟ್ಟು ಬಿಡದೆ ಪಾದಯಾತ್ರೆಗೆ ಮುಂದಾಗಿರುವ Congress ನಾಯಕರಿಗೆ ಮೃದುವಾಗೇ ವಾರ್ನಿಂಗ್ ಕೊಟ್ಟ CM

ಫ್ಲೈಓವರ್ ಮೇಲೆ ಸಿಲುಕಿದ PM Car

ಕಾರ್ಯಕ್ರಮದಲ್ಲಿ ಭಾಗಿಯಾಗಲು ಪಂಜಾಬ್​​ಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಭದ್ರತೆಯಲ್ಲಿ ಭಾರೀ ಲೋಪ (Security Breach) ಉಂಟಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ದೇಶದ ಪ್ರಧಾನ ಮಂತ್ರಿಗಳು ಬರುತ್ತಾರೆ ಎಂದು ಗೊತ್ತಿದ್ದು, ಪಂಜಾಬ್​ ಸರ್ಕಾರ (Punjab Government) ರಸ್ತೆ ಸಂಚಾರದಲ್ಲಿ ಸುರಕ್ಷತೆ ವಹಿಸಿಲ್ಲ. ಇದರಿಂದಾಗಿ ಫ್ಲೈ ಒವರ್​ ಮೇಲೆ ಪ್ರಧಾನಿ ಅವರ ಕಾರು 15-20 ನಿಮಿಷ ಸಿಲುಕಿತು. ಜೊತೆಗೆ ಹೆಚ್ಚುವರಿ ಭದ್ರತೆ ನೀಡುವಲ್ಲಿ ಕೂಡ ವಿಫಲವಾಗಿದೆ ಎಂದು ಕಾಂಗ್ರೆಸ್​ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಸಿಂಪಲ್​ ಆಗಿ ಸುಮಂತ್​​ ಜೊತೆ ಸಪ್ತಪದಿ ತುಳಿದ ನಟಿ ಶುಭ ಪೂಂಜಾ!

ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜ (Shubha Poonja) ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಈ ಹಿಂದೆಯೆ ನಟಿ ಶುಭ ಪೂಂಜ ಮದುವೆಯಾಗಬೇಕಿತ್ತು. ಆದರೆ, ಕೊರೋನಾ(Corona) ಕಾರಣದಿಂದ ಮುಂದೂಡಿಕೆಯಾಗಿತ್ತು. ನಟಿ ಶುಭ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್(Sumanth)​ ಜೊತೆ ಮದುವೆಯಾಗಿದ್ದಾರೆ.  ಸುಮಂತ್ ಹಾಗೂ ಶುಭಾ ಮಂಗಳೂರಿ(Mangaluru)ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ(Simple Marriage) ಕಾರ್ಯಕ್ರಮ ನಡೆಯಿತು. ಹಲವಾರು ಸಿನಿರಂಗದ ಗಣ್ಯರು ಶುಭ ಪೂಂಜಾಗೆ ಶುಭಾಶಯ ತಿಳಿಸಿದ್ದಾರೆ. ನಟಿ ಮದುವೆಯಾಗಿರುವ  ಬಗ್ಗೆ ಸ್ವತಃ ನಟಿ ಶುಭ ಪೂಂಜಾ ಪೋಸ್ಟ್​ವೊಂದನ್ನು ಮಾಡಿದ್ದಾರೆ.
Published by:Kavya V
First published: