Evening Digest: ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK; ಸಿದ್ದರಾಮಯ್ಯ-ಬಾಲಕಿಯ ವಿಡಿಯೋ ವೈರಲ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK : ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ (Congress- JDS Alliance) ಸರ್ಕಾರ ಪತನಗೊಂಡ ಬಳಿಕ ದಳಪತಿಗಳಿಗೆ ಅವಕಾಶ ಸಿಕ್ಕಾಗೆಲ್ಲ ಟಕ್ಕರ್ ನೀಡುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರಿಗೆ (MLA G.T.Devegowda), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Former Minister HD Kumaraswamy) ಶಾಕಿಂಗ್ ಸಂದೇಶ ರವಾನಿಸಿದ್ದಾರೆ. ಈಗಾಗಲೇ ಜೆಡಿಎಸ್ (JDS) ಅಂಗಳದಿಂದ ಒಂದು ಕಾಲು ಹೊರಗೆ ಇರಿಸಿರುವ ಜಿ.ಟಿ.ದೇವೇಗೌಡರು 2023ಕ್ಕೆ ಕಾಂಗ್ರೆಸ್ (Congress) ಸೇರ್ಪಡೆಯಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಜಿ.ಟಿ,ದೇವೇಗೌಡರ ಬಗ್ಗೆ ಪಕ್ಷ ತೆಗೆದುಕೊಂಡಿರುವ ನಿರ್ಣಯವನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಜಿಟಿಡಿ ಅವರನ್ನು ಕರೆದುಕೊಳ್ಳುವ ಪ್ರಶ್ನೆಯೇ ಬರಲ್ಲ. ಜಿಟಿ ದೇವೇಗೌಡರಿ ಜೆಡಿಎಸ್ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಮುಂದಿನ ಹೊಸ ನಾಯಕರು ಯಾರು ಎಂಬುದನ್ನು ನೀವೇ ಆಯ್ಕೆ ಮಾಡಬೇಕೆಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.

CM ಸ್ಥಾನದಿಂದ ಬೊಮ್ಮಾಯಿರನ್ನು ಇಳಿಸಲು ಈಶ್ವರಪ್ಪ ಓಡಾಡುತ್ತಿದ್ದಾರೆ

ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಆರ್​​ಎಸ್​ಎಸ್​ (RSS) ಅಲ್ಲ, ಲಾಟರಿ ಹೊಡೆದು ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿಯನ್ನು ಕಿತ್ತು ಹಾಕಲು ಸಚಿವ ಕೆ.ಎಸ್​.ಈಶ್ವರಪ್ಪ (Minister KS Eshwarappa) ಓಡಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಕುಂದಾ ನಗರಿಯಲ್ಲಿ ಕಾಂಗ್ರೆಸ್​ ನಾಯಕರು ಇಂದು ಭರ್ಜರಿ ಪ್ರಚಾರ ನಡೆಸಿದರು. ರಾಮದುರ್ಗದ ಕಲ್ಲೂರಿನಲ್ಲಿ ಸಿದ್ದರಾಮಯ್ಯ ಅವರು ಆಡಳಿತ ಪಕ್ಷ ಬಿಜೆಪಿಯ ನಾಯಕರ ವಿರುದ್ಧ ವಾಗ್ಬಾಣ ಬಿಟ್ಟರು. ಬಿಜೆಪಿ ಸರ್ಕಾರ ಜಿ.ಪಂ, ತಾ.ಪಂ ಚುನಾವಣೆ ಮಾಡಲು ಹೆದರಿಕೊಂಡಿದೆ. ಚುನಾವಣೆಗೆ ಹೆದರಿ ಚುನಾವಣೆಯಲ್ಲಿ ಮುಂದೂಡಿಕೆ ಮಾಡಿದೆ. ಆದ್ದರಿಂದ ಜಿಪಂ,‌ತಾಪಂ ಸದಸ್ಯರು ಪರಿಷತ್ ಚುನಾವಣೆ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಇಂಥವರನ್ನು ಮನೆಗೆಲಸಕ್ಕೆ ಇಟ್ಟುಕೊಂಡರೆ ಬೀಳುತ್ತೆ ಕೇಸ್!

14 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡ ಆರೋಪದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸರು ಉದ್ಯಮಿಯೊಬ್ಬರನ್ನು ಬಂಧಿಸಿದ್ದಾರೆ. ಯಲಹಂಕದ CRPFನ ಕ್ವಾರ್ಟರ್ಸ್‌ ನಿಂದ ಬಾಲಕಿಯನ್ನು ರಕ್ಷಿಸಲಾಗಿದೆ. ಅಪ್ರಾಪ್ತೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಉದ್ಯಮಿ ರಾಜಪ್ರಸಾದ್ ನನ್ನು ಬಾಲನ್ಯಾಯ ಕಾಯ್ದೆಯಡಿ ಬಂಧಿಸಿದ್ದಾರೆ. ಇವರ ಪತ್ನಿ ಸಿಆರ್‌ಪಿಎಫ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬಾಲಕಿ ಇವರ ಮನೆಯಲ್ಲಿ ಕೆಲಸ ಮಾಡೋದನ್ನು ನೋಡಿದ ನೆರೆಹೊರೆಯವರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಮಾಹಿತಿ ಆಧಾರದ ಮೇಲೆಯೇ ಮನೆಗೆ ಆಗಮಿಸಿ, ಮನೆ ಮಾಲೀಕರನ್ನು ಬಂಧಿಸಲಾಗಿದೆ.

ಇನ್ಮುಂದೆ ಟ್ರಾಫಿಕ್ ರೂಲ್ಸ್​​​ ಬ್ರೇಕ್ ಮಾಡಿದ್ರೆ SMSನಲ್ಲೇ ನೋಟಿಸ್​!

ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಾಯೋಗಿಕವಾಗಿ ಯೋಜನೆಯೊಂದನ್ನು ಪ್ರಾರಂಭಿಸಿದ್ದಾರೆ. ಇದರ ಅಡಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ವಾಹನ ಮಾಲೀಕರಿಗೆ SMS ಮೂಲಕ ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ. ನಗರದಲ್ಲಿ ನಿತ್ಯ ಸರಾಸರಿ 20,000 ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಇದರ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ SMS ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ರವಿಕಾಂತೇಗೌಡ ತಿಳಿಸಿದರು.  ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ನೋಟಿಸ್‌ ಗಳನ್ನು ಅಂಚೆ ಇಲಾಖೆಯ ಮೂಲಕ ಕಳುಹಿಸಲಾಗುತ್ತಿತ್ತು ಮತ್ತು ಪ್ರತಿ ನೋಟೀಸ್‌ ಗೆ ಮುದ್ರಣ ಮತ್ತು ಅಂಚೆ ಶುಲ್ಕ ಸೇರಿದಂತೆ 4.50 ರೂ. ವೆಚ್ಚವಾಗುತ್ತಿತ್ತು. ವಾಹನದ ಮಾಲೀಕರು ನೋಟಿಸ್ ಸ್ವೀಕರಿಸದಿದ್ದಲ್ಲಿ, ಟ್ರಾಫಿಕ್ ಪೊಲೀಸರು ಮಾಲೀಕರನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಈಗಾಗಲೇ ಸಿಬ್ಬಂದಿ ಕೊರತೆಯಿದೆ. ಇದು ನಗರದಲ್ಲಿ ಸಂಚಾರ ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ. ಆದರಿಂದ SMS ವ್ಯವಸ್ಥೆ ಮೊರೆ ಹೋಗಲಾಗಿದೆ.

ಸಿದ್ದರಾಮಯ್ಯ-ಬಾಲಕಿಯ ವಿಡಿಯೋ ವೈರಲ್​

ವಿಧಾನ ಪರಿಷತ್ ಚುನಾವಣೆ (MLC Election Campaign) ಪ್ರಚಾರ, ಮುಖಂಡರು, ಕಾರ್ಯಕರ್ತರ ಭೇಟಿ, ರಾಜಕೀಯ ಜಂಜಾಟದ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaih) ಅವರು ಮಗುವಿನೊಂದಿಗೆ ಮಗುವಾಗಿದ್ದು ಗಮನ ಸೆಳೆದಿದೆ. ಮಗುವಿನೊಂದಿಗೆ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಅದರ ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Photo, Video Viral) ಆಗಿದೆ. ತಮ್ಮ ಸುತ್ತಲೂ ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟರು. ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲೂಇದ್ದವರು ಜೋರಾಗಿ ನಗಾಡಿದರು.
Published by:Kavya V
First published: