Evening Digest: ಸಿಎಂ ಮೂಗ ಬಸವನ ರೀತಿ ಇರ್ತಾರೆ ಎಂದ ಖರ್ಗೆ: ರೋಹಿತ್ ಚಕ್ರತೀರ್ಥ ಒಬ್ಬ ನಾಡದ್ರೋಹಿ ಎಂದ ಸಿದ್ದರಾಮಯ್ಯ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿಎಂ ಮೂಗ ಬಸವನ ರೀತಿ ಇರ್ತಾರೆ ಎಂದ ಖರ್ಗೆ : ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನಡೆಯನ್ನು ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ (Priyank Kharge) ಖಂಡಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರೋ ಅಕ್ರಮದ (Scam) ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ದಾರೆ. ಮೂಗ ಬಸವನ ರೀತಿ ಇರ್ತೀರಿ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ. ಬಸವ, ಬುದ್ಧ, ಅಂಬೇಡ್ಕರ್​ಗೆ (Ambedkar) ಅವರು ಅವಮಾನ (Insult) ಮಾಡಿದ್ದಾನೆ. ನಾರಾಯಣಗುರು, ನಾಡಗೀತೆಗೆ ಅವಮಾನ ಮಾಡಿದ್ದಾನೆ. ಯಾಕೆ ನೀವು ಅವನ ಮೇಲೆ ಕ್ರಮ ಜರುಗಿಸಲಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ಎಂದು ಎಂದು ಪ್ರಶ್ನಿಸಿ, ಸಿಎಂ ಬೊಮ್ಮಾಯಿ ವಿರುದ್ಧ ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Text Book Row: ನಮ್ಮ ಸಿಎಂ ಯಾರು? ಮೂಗ ಬಸವನ ರೀತಿ ಇರ್ತಾರೆ, ನಿಮಗಿಂತಲೂ ಚಕ್ರತೀರ್ಥ ದೊಡ್ಡವರಾ?- ಪ್ರಿಯಾಂಕ್ ಖರ್ಗೆ

‘ರೋಹಿತ್ ಚಕ್ರತೀರ್ಥ ಒಬ್ಬ ನಾಡದ್ರೋಹಿ’

ಪಠ್ಯಪುಸ್ತಕ ಪರಿಷ್ಕರಣೆ ಕಮಿಟಿಯನ್ನು (Textbook Revision Committee) ವಿಸರ್ಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ನಾಯಕರು ಇದೀಗ ಸಿಎಂ ಬಸವರಾಜ ಬೊಮ್ಮಾಯಿ (Siddaramaiah) ವಿರುದ್ಧ ಕಿಡಿಕಾರಿದ್ದಾರೆ.   ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ (Tweet) ಮಾಡಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ರೋಹಿತ್ ಚಕ್ರತೀರ್ಥನನ್ನ ನಾಡದ್ರೋಹಿಗೆ ಹೋಲಿಸಿರೋ ಸಿದ್ದರಾಮಯ್ಯ, ಪೂರ್ವಗ್ರಹಪೀಡಿತ ಅಧ್ಯಕ್ಷನನ್ನ ಕಿತ್ತಾಕಿದರೆ ಸಾಲದು. ಈ ಸಮಿತಿ ಮಾಡಿರೋ ಪಠ್ಯವನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟ ರಾಗಾ

ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೀಗ ಈಗ ಅಂಬೇಡ್ಕರ್, ಬುದ್ಧ, ಬಸವಣ್ಣ, ನಾರಾಯಣಗುರು, ಕುವೆಂಪು ವಿರುದ್ಧ ಭಾವನೆ ಮೂಡುವಂತಹ ಪಾಠಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ‌. ಕರ್ನಾಟಕದ ಅಸ್ಮಿತೆಗೆ ವಿರುದ್ದವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಸರ್ಕಾರ ಹೊರಟಿದೆ ಎಂಬ ಅರ್ಥದಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಹೈದ್ರಾಬಾದ್​ ನಲ್ಲಿ ಬಾಲಕಿ ಮೇಲೆ ಗ್ಯಾಂಗ್​ ರೇಪ್

ಕಳೆದ ವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ (Hyderabad's Jubilee Hills) ಶಾಲಾ ಬಾಲಕಿಯ (Schoolgirl) ಮೇಲೆ ಅತ್ಯಾಚಾರ (RAPE) ಎಸಗಿದ ಆರೋಪದ ಮೇಲೆ ಇಬ್ಬರು ಹದಿಹರೆಯದ ಹುಡುಗರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Chief Minister K Chandrashekar Rao) ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಸ್ಥಳೀಯ ಮುಖಂಡರೊಬ್ಬರ ಪುತ್ರ ಎಂದು ತಿಳಿದು ಬಂದಿದೆ. ಸದುದ್ದೀನ್ ಮಲಿಕ್ ಎಂಬ ಆರೋಪಿಯನ್ನು ನಿನ್ನೆ ಬಂಧಿಸಲಾಗಿತ್ತು. ಮೇ 28 ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 17 ವರ್ಷದ ಬಾಲಕಿಯ ಮೇಲೆ ಐವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಹೇಳಿಕೆಯ ಆಧಾರದ ಮೇಲೆ ಪೊಲೀಸರು ಐವರನ್ನೂ ಗುರುತಿಸಿದ್ದಾರೆ. ಆರೋಪಿಗಳಲ್ಲಿ ಮೂವರು ಅಪ್ರಾಪ್ತರು ಎಂದು ತಿಳಿದು ಬಂದಿದೆ.

ಮತ್ತೆ ಜ್ಯಾಕ್ ಸ್ಪ್ಯಾರೋ ಆಗಿ ಬರ್ತಾರಾ ಜಾನಿ ಡೆಪ್?

ಪೀಪಲ್ ನೀಡಿರುವ ವರದಿಯ ಪ್ರಕಾರ, ಜಾನಿ ಡೆಪ್ ಪೈರೇಟ್ಸ್ ಆಫ್ ಕೆರಿಬಿಯನ್ ಫ್ರಾಂಚೈಸ್‌ಗೆ ಮರಳಬಹುದು ಎಂದು ಮಾಜಿ ಡಿಸ್ನಿ ಕಾರ್ಯನಿರ್ವಾಹಕರು ಹೇಳಿದ್ದಾರೆ. ಪ್ರಕರಣದ ತೀರ್ಪಿನ ನಂತರ ನಟನ ವೃತ್ತಿಜೀವನವು ಪುಟಿದೇಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಜನರೊಂದಿಗೆ ಮಾತನಾಡುತ್ತಾ, ಕಾರ್ಯನಿರ್ವಾಹಕರು ಈ ರೀತಿ ಹೇಳಿದರು, "ಪೈರೇಟ್ಸ್ ಅನ್ನು ಕ್ಯಾಪ್ಟನ್ ಜ್ಯಾಕ್ ಆಗಿ ರೀಬೂಟ್ ಮಾಡಲು ಪೈರೇಟ್ಸ್ ಮುಖ್ಯ, ಇದು ಡಿಸ್ನಿ ಸಂಸ್ಕೃತಿ ಎಂದು ನಾನು ಸಂಪೂರ್ಣವಾಗಿ ನಂಬುತ್ತೇನೆ".
Published by:Kavya V
First published: