Evening Digest: ಪವಿತ್ರಾ ಬಗ್ಗೆ ಸುಚೇಂದ್ರ ಪ್ರಸಾದ್ ಮಾತು, ಹರ್ಷ ಹಂತಕರಿಗೆ ರಾಜಾತಿಥ್ಯ! ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಪವಿತ್ರಾ ಲೋಕೇಶ್​ ಬಗ್ಗೆ ಸುಚೇಂದ್ರ ಪ್ರಸಾದ್ ಹೀಗಂದ್ರಾ? 

ಹಿರಿಯ ನಟಿ ಪವಿತ್ರಾ ಲೋಕೇಶ್ ಅವರ ವಿಚಾರ ಚರ್ಚೆಗೆ ಗ್ರಾಸವಾಗಿದೆ. ನರೇಶ್ ಜೊತೆಗಿನ ಸಂಬಂಧದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವಿವಿಧ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ನರೇಶ್ ಜೊತೆ ಹೊಟೇಲ್ ನಲ್ಲಿ ಕಾಣಿಸಿಕೊಂಡಿದ್ದ.. ಪವಿತ್ರಾಳ ಮೇಲೆ ನರೇಶ್ ಪತ್ನಿ ರಮ್ಯಾ ಹಲ್ಲೆಗೆ ಯತ್ನಿಸಿರುವುದು ಇದೀಗ ಮತ್ತಷ್ಟು ಗಲಾಟೆಗೆ ಕಾರಣವಾಗಿದೆ. ಪವಿತ್ರಾ ಅವರನ್ನ ಮದುವೆಯಾಗಿದ್ದೇನೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರಂತೆ. ಹಿಂದೂ ವಿವಾಹ ಕಾಯ್ದೆ ಪ್ರಕಾರ 16 ವರ್ಷಗಳ ಹಿಂದೆ ಮದುವೆಯಾಗಿದ್ದೇವೆ ಎಂದು ಸುಚೀಂದ್ರ ಪ್ರಸಾದ್ ಹೇಳಿದ್ದಾರೆ. ದಂಪತಿಗಳು ಎಂದು ಸಾಬೀತುಪಡಿಸಲು ಪುರಾವೆಗಳಿವೆ. ತನ್ನ ಪಾಸ್ಪೋರ್ಟ್ನಲ್ಲಿ ಪವಿತ್ರಾ ಪತ್ನಿ ಎಂದು ನಮೂದಿಸಿದ್ದು, ಆಕೆಯ ಪಾಸ್ಪೋರ್ಟ್ನಲ್ಲಿ ಪತಿ ಎಂದು ನಮೂದಿಸಲಾಗಿದೆ ಎಂದು ಅವರು ಹೇಳಿದ್ದಾರಂತೆ.

ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

ಆಂಧ್ರಪ್ರದೇಶದಲ್ಲಿ ಇಂದು (ಜುಲೈ 4)  ಪ್ರಧಾನಿ ನರೇಂದ್ರ ಮೋದಿ ಅವರ ಸುರಕ್ಷತೆಯಲ್ಲಿ ಭದ್ರತಾ ಲೋಪ (PM Security Scare) ಜರುಗಿದೆ. ವಿಜಯವಾಡದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಹತ್ತಿರದಲ್ಲೇ ಕಪ್ಪು ಬಲೂನುಗಳು ಹಾರುತ್ತಿರುವುದು ಕಂಡುಬಂದಿದೆ. ಆಂದ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi Security Scare) ಅವರ ಹೆಲಿಕಾಪ್ಟರ್ ಟೇಕಾಫ್ ಆದ ಕೂಡಲೇ ಕಪ್ಪು ಬಲೂನ್‌ಗಳು ಹಾರಿದ್ದರಿಂದ ಭದ್ರತಾ ಲೋಪ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್ ಹತ್ತಿರ ಬಲೂನ್‌ಗಳು ಹಾರಿವೆ. ಘಟನೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯ ವಿಭಜನೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಜೀವ್ ರತನ್ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಹರ್ಷ ಹತ್ಯೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ? 

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿವಮೊಗ್ಗದ (Shivamogga) ಬಜರಂಗದಳ ಕಾರ್ಯಕರ್ತ (Bajarangadal) ಹರ್ಷ ಹತ್ಯೆ ಕೇಸ್‌ (Harsha Murder Case) ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇದೀಗ ಹತ್ಯೆ ಕೇಸ್‌ ಆರೋಪಿಗಳು (Accused) ಏನ್ ಮಾಡ್ತಿದ್ದಾರೆ. ಜೈಲಿನಲ್ಲಿ (Jail) ಮುದ್ದೆ ಮುರಿಯುತ್ತಾ ಇರಬಹುದು ಅಂತ ನೀವ್ ಅಂದುಕೊಂಡರೆ ಅದು ನಿಮ್ಮ ತಪ್ಪು. ಯಾಕೆಂದ್ರೆ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ಆರೋಪಿಗಳು ಜೈಲಲ್ಲೇ ಟಿಕ್‌ ಟಾಕ್ (TikTok) ಮಾಡುತ್ತಾ, ಜೈಲಿನಿಂದಲೇ ಮನೆಯವರಿಗೆ ವಿಡಿಯೋ ಕಾಲ್ (Video Call) ಮಾಡುತ್ತಾ ಹಾಯಾಗಿದ್ದಾರಂತೆ! ಹೌದು, ಇಂಥದ್ದೊಂದು ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಹಂತಕರ ಟಿಕ್ ಟಾಕ್ ವಿಡಿಯೋ ನೋಡಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು (Police) ಎರಡು ದಿನದ ಹಿಂದೆ ದೂರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ದಾಳಿ ಮಾಡಿದ್ರು.

ಇದನ್ನೂ ಓದಿ: Harsha Murder Case: ಹರ್ಷ ಹತ್ಯೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ? ಕಾರಾಗೃಹದೊಳಗಿಂದಲೇ ಟಿಕ್‌ಟಾಕ್, ವಿಡಿಯೋ ಕಾಲ್!

IPS ಅಧಿಕಾರಿ ಅಮೃತ್ ಪೌಲ್ ಬಂಧನ

ಬೆಂಗಳೂರು (ಜು.4): ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (IPS Scam) ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ‌ ಪೊಲೀಸರು (CID Police) ಬಂಧಿಸಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ಕೆಳ ಹಂತದ ಅಧಿಕಾರಿ- ಸಿಬ್ಬಂದಿಯನ್ನ ಬಂಧನ ಮಾಡುತ್ತಿದ್ದ ಪೊಲೀಸರು‌ ಇದೀಗ ಹಿರಿಯ ಐಪಿಎಸ್ ಅಧಿಕಾರಿಯನ್ನು (Senior IPS Officer) ಬಂಧಿಸಿದ್ದು, ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು.

ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣ; IPS ಅಧಿಕಾರಿ ಅಮೃತ್ ಪೌಲ್ ಬಂಧನ

Breaking News: ಲಂಚ ಸ್ವೀಕರಿಸಿದ ಆರೋಪ; ಡಿಸಿ ಜೆ. ಮಂಜುನಾಥ್​ ಅರೆಸ್ಟ್

ಬೆಂಗಳೂರು (ಜು. 4): ರಾಜ್ಯದಲ್ಲಿ ಇಂದೆಂದೂ ನಡೆಯದ ವಿದ್ಯಮಾನ ನಡೆದಿದೆ. ಪ್ರತ್ಯೇಕ ಕೇಸ್​ನಲ್ಲಿ IAS ಹಾಗೂ IPS ಅಧಿಕಾರಿಯನ್ನು ಅರೆಸ್ಟ್ (Arrest)​ ಮಾಡಲಾಗಿದೆ. 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಂಗಳೂರು ನಗರದ ಹಿಂದಿನ ಡಿಸಿ ಮಂಜುನಾಥ್​ರನ್ನು (DC Manjunath) ಬಂಧಿಸಲಾಗಿದೆ. ಹೈಕೋರ್ಟ್ (High Court)​ ಚಾಟಿ ಬೀಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಡಿಸಿ ಮಂಜುನಾಥ್ ಅವರನ್ನು ಯಶವಂತಪುರ (Yashwanthpura) ಫ್ಲಾಟ್​ನಲ್ಲಿ ಬಂಧಿಸಲಾಗಿದೆ.
Published by:Annappa Achari
First published: