Evening Digest: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ: ನಟಿ ರಶ್ಮಿಕಾ ಸಿನಿಮಾಗೆ ಎದುರಾಯ್ತು ಕಂಟಕ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆ : ನಾಳೆ (ಶುಕ್ರವಾರ) ವರಮಹಾಲಕ್ಷ್ಮಿ ಹಬ್ಬ ಆಚರಿಸಲು ನಾಡಿದ ಜನತೆ ಸಕಲ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಹಬ್ಬದ ಖರೀದಿಗೆ ಮಾರುಕಟ್ಟೆಯತ್ತ ಮುಖ ಮಾಡಿರುವ ಜನತೆಯನ್ನು ವರುಣ ಇನ್ನಿಲ್ಲದಂತೆ ಕಾಡುತ್ತಿದ್ದಾನೆ. ಹೌದು ವರಮಹಾಲಕ್ಷ್ಮಿ ಹಬ್ಬಕ್ಕೆ ವರುಣನ ಕಾಟ ಶುರುವಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಮಳೆ ತಣ್ಣೀರೆರಚಲಿದೆ, ಏಕೆಂದರೆ ಬೆಂಗಳೂರಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಹಬ್ಬದ ದಿನವೂ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Karnataka Rain Alert: ವರಮಹಾಲಕ್ಷ್ಮಿ ಹಬ್ಬಕ್ಕೆ ವರುಣನ ಅಡ್ಡಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರೀ ಮಳೆ

ತೆಂಗಿನಕಾಯಿ ಮಾರುತ್ತಿದ್ದವರು ನೀರಾವರಿ ತಜ್ಞರಾ?

ಇನ್ನು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಹೆಚ್ಡಿಕೆ ಟಾಂಗ್ ನೀಡಿದರು. ಚನ್ನಪಟ್ಟಣ ನೀರಾವರಿ ಬಗ್ಗೆ ಕುಮಾರಸ್ವಾಮಿ ಅವರಿಗೆ ಪರಿಕಲ್ಪನೆ ಇಲ್ಲ ಎಂಬ ಸಿಪಿವೈ ಹೇಳಿಕೆ ವಿಚಾರವಾಗಿ ಮಾತನಾಡಿ, ಪಾಪ ನಾನು ಅವರಷ್ಟು ನೀರಾವರಿ ತಜ್ಞ ಅಲ್ಲ. ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದವರು ನೀರಾವರಿ ತಜ್ಞರಾಗಿದ್ದಾರೆ. ಜನಸಾಮಾನ್ಯರ ಹೊಟ್ಟೆಮೇಲೆ ಮೆಗಾಸಿಟಿ ಅಂತ ಲೂಟಿ ಮಾಡಿ ಸಾವಿರಾರು ಕುಟುಂಬ ಬೀದಿಪಾಲು ಮಾಡಿದ್ರು. ಆಗ ನೀರಾವರಿ ಸೌಲಭ್ಯ ಹೇಗೆ ಕಲ್ಪಿಸಬಹುದು ಅಂತ ಜ್ಞಾನೋದಯ ಆಗಿದೆ. ನಿನ್ನೆ ದಿನ ಕೊಟ್ಟ ಹೇಳಿಕೆ ಗಮನಿಸಿದ್ದೇನೆ, ಚನ್ನಪಟ್ಟಣದಲ್ಲಿ ಎಲ್ಲಾ ಕೆಲಸ ಗಳು, ನೀರಾವರಿ ಸೌಲಭ್ಯ ಸಂಪೂರ್ಣಗೊಂಡಿದೆ ಅಂತ ಹೇಳಿದ್ದಾರೆ. ಮಾಕಳಿ ಮೈನರ್ ಇರಿಗೇಷನ್ ಕೆಲಸ ಮಾಡಲು ಎಲ್ಲಾ ರೆಡಿ ಮಾಡಿ ಇಟ್ಟಿದ್ದಾರಂತೆ.‌ ಈಗ ನಾನು ಅದನ್ನ ಮಾಡಿ ಕ್ರೆಡಿಟ್ ತೆಗೆದುಕೊಳ್ಳಲು ಹೊರಡಿದ್ದೇನಂತೆ. ಜನತಾ ಜಲಾಧಾರೆಯಿಂದ ಮಾಗಡಿ ವೈಜಿ ಗುಡ್ಡ ಸಹ ತುಂಬಲಿದೆ. ನಮ್ಮ ಪರಿಶುದ್ಧವಾದ ಮನಸ್ಸಿಗೆ ದೇವರು ಈಡೇರಿಸುತ್ತಾನೆ ಅನ್ನೋದಕ್ಕೆ ಇದೇ ಉದಾಹರಣೆ ಎಂದರು.‌

ಮದುವೆಯಾದ ಎರಡೇ ದಿನಕ್ಕೆ ಬಯಲಾಯ್ತು ಪತ್ನಿಯ ರಹಸ್ಯ

ಹರ್ಯಾಣದಿಂದ (Haryana) ಕಿಡ್ನ್ಯಾಪ್​ ಮಾಡಿದ ಯುವತಿಯನ್ನು ದಲ್ಲಾಳಿಗಳು ಸಿಕರ್‌ನ ಖಂಡೇಲಾ ಪ್ರದೇಶದಲ್ಲಿ ವಾಸಿಸುವ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ದಲ್ಲಾಳಿಗಳು ಮದುವೆಗಾಗಿ ಹುಡುಗನ ಕುಟುಂಬದಿಂದ 3.3 ಲಕ್ಷ ರೂ ಮೊತ್ತ ಪಡೆದಿದ್ದಾರೆ. ಆದರೆ ಮದುವೆಯಾದ ಎರಡು ದಿನಗಳ ನಂತರ ಹುಡುಗಿ ಮನೆಯಿಂದ ಓಡಿಹೋಗಲು ಪ್ರಯತ್ನಿಸಿದಾಗ, ಹುಡುಗನ ಮನೆಯವರು ಅಕೆಯನ್ನು ಹಿಡಿದಿದ್ದಾರೆ. ಹೀಗಿರುವಾಗ ಯುವತಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಇನ್ನು ಹರ್ಯಾಣದಲ್ಲೂ ಯುವತಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಹರ್ಯಾಣ ಪೊಲೀಸರು (Haryana Police) ಆಕೆಯನ್ನು ಕರೆದೊಯ್ದಿದ್ದಾರೆ. ಇದೀಗ ವರ ತನಗೆ ಮೋಸ ಮಾಡಿದ ದಲ್ಲಾಳಿಗಳ ವಿರುದ್ಧ ಪೊಲೀಸರಿಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ನಟಿ ರಶ್ಮಿಕಾ ಸಿನಿಮಾಗೆ ಎದುರಾಯ್ತು ಕಂಟಕ

‘ಕಿರಿಕ್ ಪಾರ್ಟಿ’  (Kirik Party) ಸಿನಿಮಾದ (Film) ಮೂಲಕ ಚಿತ್ರರಂಗಕ್ಕೆ (Film Industry)  ಪಾದಾರ್ಪಣೆ  ಮಾಡಿದ ಕೊಡಗಿನ ಕುವರಿ, ಕರ್ನಾಟಕದ ಸುಂದರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಟಾಲಿವುಡ್ ಸೇರಿ ಬಾಲಿವುಡ್ ನಲ್ಲೂ  ಸಖತ್ ಮಿಂಚುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಅವರು ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ದುಲ್ಕರ್​ ಸಲ್ಮಾನ್​ (Dulquer Salmaan) ಅಭಿನಯದ ‘ಸೀತಾ ರಾಮಂ’ (Sita Ramam) ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ.  ಈ ಚಿತ್ರವೂ ಸಹ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟ್ರೈಲರ್ ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಆದರೆ ಇದರ ನಡುವೆ ಚಿತ್ರಕ್ಕೆ ಬ್ಯಾನ್​ ಬಿಸಿ ತಟ್ಟಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Sita Ramam: ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್, ಸೀತಾ ರಾಮಂ ಚಿತ್ರತಂಡಕ್ಕೆ ಎದುರಾಯಿತು ಸಂಕಷ್ಟ

ನಾಳೆಯಿಂದ ಕನ್ನಡ ಬಿಗ್​ಬಾಸ್

ಕಲರ್ಸ್ ಕನ್ನಡ (colors Kannada) ವಾಹಿನಿ ವಿಭಿನ್ನ ಧಾರಾವಾಹಿಗಳ (serial) ಮೂಲಕ ಜನರ ಮನಗೆದ್ದಿದೆ. ಕೇವಲ ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅವುಗಳಲ್ಲಿಯೇ ವಿಶೇಷ ಕಾರ್ಯಕ್ರಮ ಬಿಗ್​ಬಾಸ್, (Bigg Boss) ಈ ಬಾರಿ ಎರಡೆರಡು ಬಿಗ್​ಬಾಸ್ ಇರುತ್ತದೆ ಎನ್ನುವ ವಿಚಾರ ಈಗ ಎಲ್ಲರಿಗೂ ತಿಳಿದಿದೆ. ನಾಳೆಯಿಂದ ಬಿಗ್​ಬಾಸ್​ ಓಟಿಟಿ (Bigg Boss OTT) ಮೊದಲ ಸೀಸನ್​ ಆರಂಭವಾಗುತ್ತಿದೆ. ಅಭಿಮಾನಿಗಳು ಯಾವಾಗ ನಾಳೆ ಆಗುತ್ತದೆ, ಬಿಗ್​ಬಾಸ್​​ ಸ್ಟಾರ್ಟ್​​ ಆಗುತ್ತದೆ ಎಂದು ಕಾದು ಕುಳಿತಿದ್ದಾರೆ. ಯಾರೆಲ್ಲಾ ಮನೆ ಒಳಗೆ ಹೋಗುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ. ಎಲ್ಲವೂ ಗುಟ್ಟಾಗಿ ಉಳಿದಿದೆ. ಇದಕ್ಕೆ ವಾಹಿನಿ ಮಾಡಿರುವ ಪ್ಲ್ಯಾನ್​​ ಎನ್ನಲಾಗುತ್ತಿದೆ.
Published by:Kavya V
First published: