Evening Digest: ಡಿ.15ರಂದು ರೈತರ ಖಾತೆಗಳಿಗೆ ಹಣ; ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಡಿ.15ರಂದು ರೈತರ ಖಾತೆಗಳಿಗೆ ಹಣ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman NIdhi)ಯೋಜನೆಯಡಿ ಮುಂದಿನ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಈ ಗಾಗಲೇ ರೈತರು(Farmers) ಹತ್ತನೇ ಕಂತಿಗಾಗಿ ಕಾಯುತ್ತಿದ್ದು, ಡಿಸೆಂಬರ್ 15ರಂದು ಹತ್ತನೇ ಕಂತಿನ 2 ಸಾವಿರ ರೂ. ಖಾತೆಗೆ ಬರುತ್ತದೆ ಎಂದು ತಿಳಿಸಿದೆ. ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿಯಾದ ರೈತರ ಖಾತೆಗಳಿಗೆ ಹತ್ತನೇ ಕಂತಿನ 2,000 ರೂ.ಗಳನ್ನು ಸರ್ಕಾರ(Government) ಕಳುಹಿಸಲಿದೆ.ಅಲ್ಲದೇ, ಕಳೆದ ವರ್ಷ 25 ಡಿಸೆಂಬರ್ 2020 ರಂದು, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಹಣವನ್ನು ವರ್ಗಾಯಿಸಿತ್ತು. ಇಲ್ಲಿಯವರೆಗೆ, ಸರ್ಕಾರವು ದೇಶದ 11.37 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 1.58 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರವಾಗಿ ವರ್ಗಾಯಿಸಿದೆ.

ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರು (Bengaluru) ಲೈಫ್​ ನಾಳೆಯಿಂದ (ಡಿ.1) ಮತ್ತಷ್ಟು ದುಬಾರಿಯಾಗಲಿದೆ. ಸಿಲಿಕಾನ್​ ಸಿಟಿ ಆಟೋ ಪ್ರಯಾಣ ನಿಮ್ಮ ಜೇಬು ಸುಡಲಿದೆ. ಡಿಸೆಂಬರ್​​ 1ರಿಂದ ಆಟೋ ಚಾರ್ಜ್​ (Auto Fare) ಏರಿಕೆಯಾಗಿದ್ದು, ಹೊಸ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ನಾಳೆಯಿಂದ ಬೆಂಗಳೂರು ಜನರಿಗೆ ಆಟೋ ಪ್ರಯಾಣ ದುಬಾರಿಯಾಗಲಿದೆ. ಕೊರೋನಾ ಹೊಡೆತ, ಗ್ಯಾಸ್ ದರ ಏರಿಕೆಯಿಂದ ನಲುಗಿದ್ದ ಆಟೋ ಚಾಲಕರಿಗೆ ಕೊನೆಗೂ ಸರ್ಕಾರ ಕೊಂಚ ರಿಲೀಫ್​ ನೀಡಿದೆ. ಡಿ.1ರಿಂದ Minimum Meter Rate 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಕಿಲೋ ಮೀಟರ್​ಗೆ 13 ರೂಪಾಯಿಯಿಂದ 15 ರೂಪಾಯಿಗೆ ಏರಿಕೆಯಾಗಲಿದೆ.

ಈಶ್ವರಪ್ಪರನ್ನು DK Shivakumar ಮಹಿಷಾಸುರನಿಗೆ ಹೋಲಿಸಿದ್ದು ಏಕೆ?

ಕಳೆದ ಎರಡ್ಮೂರು ದಿನಗಳಿಂದ ಸಚಿವ ಕೆ.ಎಸ್​.ಈಶ್ವರಪ್ಪ (Minister K. S. Eshwarappa) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಧ್ಯೆ ವಾಕ್ಸಮರ ಜೋರಾಗಿದೆ. ಸಿದ್ದರಾಮಯ್ಯ ಕುಡುಕ ಎಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ (DK Shivakumar) ತಿರುಗೇಟು ನೀಡಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಇದ್ಯಾಲ್ಲ ಅದೇನದು?  ಮಹಿಷಾಸುರ(Mahishasura).. ಹಾ.. ಹಿಡ್ಕಂಡಿದ್ದಾರಲ್ಲ.. ಅದನ್ನೊಂದು ಕೊಟ್ಬಿಡಿ ಈಶ್ವರಪ್ಪ ಕೈಗೆ ಎಂದು ವ್ಯಂಗ್ಯ ಮಾಡಿದರು. ಸಿದ್ದರಾಮಯ್ಯ ಕುಡುಕ ಎಂದ ಈಶ್ವರಪ್ಪ ಮಹಿಷಾಸುರ ಎಂಬರ್ಥದಲ್ಲಿ ಡಿಕೆ ಶಿವಕುಮಾರ್ ಕುಹಕವಾಡಿದರು.

ಮತ್ತೆ ಕಿರುತೆರೆಗೆ ಬಂದ Golden Star Ganesh

ಕಾಮಿಡಿ ಪ್ರೋಗ್ರಾಂ(Comedy Program) ನಡೆಸುಕೊಡುತ್ತಿದ್ದಿದ್ದು ಇದೇ ನಮ್ಮ ಗೋಲ್ಡನ್​ ಸ್ಟಾರ್(Golden Star)​. ನಮಸ್ಕಾರ.. ನಮಸ್ಕಾರ.. ನಮಸ್ಕಾರ.. ಅಂತಾನೆ ಎಲ್ಲರ ಮನಗೆದ್ದಿದ್ರು ಗೋಲ್ಡನ್​ ಸ್ಟಾರ್​. ಆಗ ಇನ್ನೂ ಕಾಮಿಡಿ ಟೈಂ ಗಣೇಶ್(Ganesh)​. ಉದಯ ಟವಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡ ಟೈಂಗೆ ಸಖತ್​ ಟಿಆರ್​ಪಿ(TRP( ಜೊತೆಗೆ ಜನಪ್ರಿಯತೆ ಗಳಿಸಿತ್ತು. ಇದಾದ ಬಳಿಕ ಗಣೇಶ್​ ಸಿನಿಮಾರಂಗಕ್ಕೆ ಕಾಲಿಟ್ಟು ದೊಡ್ಡ ಯಶಸ್ಸನ್ನು ಕಂಡರು. ಕಾಮಿಡಿ ಟೈಂ ಗಣೇಶ್​ನಿಂದ ಗೋಲ್ಡನ್​ ಸ್ಟಾರ್​ ಬಿರುದು ಪಡೆದುಕೊಂಡರು. ಚೆಲ್ಲಾಟ, ಮುಂಗಾರು ಮಳೆ, ಹುಡುಗಾಟ ಸಿನಿಮಾಗಳು ಸೂಪರ್​-ಡೂಪರ್(Super - Duper)​ ಹಿಟ್​ ಆಗಿತ್ತು. ವಿಷಯ ಅದಲ್ಲ.. ಮತ್ತೆ ಗೋಲ್ಡನ್​ ಸ್ಟಾರ್​ ಗಣೇಶ್​ ಕಿರುತೆರೆಗೆ ಬರುತ್ತಿದ್ದಾರೆ ಅದು ‘ಗೋಲ್ಡನ್​ ಗ್ಯಾಂಗ್’(Golden Gang)​ ಜೊತೆ. ಗಣೇಶ್​ ಅಭಿನಯದ 'ಸಖತ್‌'(Sakath) ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಎಲ್ಲರನ್ನು ರಂಜಿಸುತ್ತಿದೆ. ಈ ಮಧ್ಯೆ ಗಣೇಶ್‌ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಒಂದು ಕಾಲದಲ್ಲಿ ಕಿರುತೆರೆಯಿಂದಲೇ ಹೆಸರು ಮಾಡಿದವರು ಗಣೇಶ್. ಇದೀಗ ಅವರು ಜೀ ಕನ್ನಡ(Zee Kannada) ವಾಹಿನಿಗಾಗಿ ಹೊಸ ರಿಯಾಲಿಟಿ ಶೋ ಗೋಲ್ಡನ್​ ಗ್ಯಾಂಗ್​ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್​ನಿಂದ ಕೆಎಲ್ ರಾಹುಲ್, ರಷೀದ್ ಖಾನ್ ಒಂದು ವರ್ಷ ನಿಷೇಧ?

ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ (Punjab Kings captain KL Rahul) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಪ್ಲೇಯರ್ ರಷೀದ್ ಖಾನ್ (Sunrisers Hyderabad player Rashid Khan) ಅವರು ಈ ಬಾರಿಯ ಇಂಡಿಯನ್ ಪ್ರೀಮಿಯರ್​ನಲ್ಲಿ ನಿಷೇಧಕ್ಕೊಳಗಾಗುವ ಭೀತಿಯಲ್ಲಿದ್ದಾರೆ. ಅವರ ತಂಡಗಳು ಇನ್ನೂ ರಿಟೆಂಶನ್ ಲಿಸ್ಟ್ (Players’ retention list) ಅನ್ನು ಸಲ್ಲಿಸುವ ಮುನ್ನವೇ ಬೇರೊಂದು ಐಪಿಎಲ್ ತಂಡವನ್ನ ಸಂಪರ್ಕಿಸಿ ಮಾತುಕತೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ ಹೈದಬಾರಾದ್ ತಂಡಗಳು ಈ ಬಗ್ಗೆ ಬಿಸಿಸಿಐಗೆ ದೂರು ಕೊಟ್ಟಿರುವುದು ತಿಳಿದುಬಂದಿದೆ. ಒಂದು ವೇಳೆ, ಈ ಆರೋಪ ನಿಜವೇ ಆದಲ್ಲಿ ಕೆಎಲ್ ರಾಹುಲ್ ಮತ್ತು ರಷೀದ್ ಖಾನ್​ಗೆ ಒಂದು ವರ್ಷ ಬ್ಯಾನ್ ಹೇರುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ನಿದರ್ಶನ ನಮ್ಮ ಮುಂದೆ ಇದೆ. ಹೀಗಾಗಿ, ರಾಹುಲ್ ಮತ್ತು ರಷೀದ್ ಈ ವರ್ಷ ನಿಷೇಧವಾದರೆ ಅಚ್ಚರಿ ಅನಿಸುವುದಿಲ್ಲ.
Published by:Kavya V
First published: