Evening Digest: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ; ಗದಗದಲ್ಲಿ 7 ಶಿಕ್ಷಕರ ಅಮಾನತು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
    ಮೇಲುಕೋಟೆಯಲ್ಲಿ ಇದೀಗ ಸಲಾಂ ಮಂಗಳಾರತಿ ವಿವಾದ
    ಕೊಲ್ಲೂರು ಬಳಿಕ ಇದೀಗ ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಪ್ರತಿನಿತ್ಯ ಸಂಜೆ 7 ಗಂಟೆಯ ವೇಳೆಯಲ್ಲಿ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಇದು ಟಿಪ್ಪು ಸುಲ್ತಾನ್ ಆದೇಶದ ಮೇರೆಗೆ ಮಾಡುತ್ತಿರುವ ಆರತಿ ಎನ್ನಲಾಗುತ್ತಿದೆ. ಹೀಗಾಗಿ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಇದೀಗ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೊಬ್ಬರು ಇದು ಮಂಡ್ಯ ಎಡಿಸಿ ಶೈಲಜಾ ಅವರಿಗೆ ಮನವಿ ಮಾಡಿದ್ದಾರೆ

    ಏಳು ಶಿಕ್ಷಕರ ಅಮಾನತು
    ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ವಸ್ತ್ರ ಸಂಹಿತೆ ನೀತಿ ಪಾಲಿಸುವುದು ಕಡ್ಡಾಯ ಎಂದು ಪರೀಕ್ಷೆಗೆ ಮುನ್ನವೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತು. ಈ ನಡುವೆಯೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಧರಿಸಲು ಶಿಕ್ಷಕರು ಅನುಮತಿ ನೀಡಿದ ಘಟನೆ ಗದಗದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆ ಐವರು ಮೇಲ್ಚಿಚಾರಕರು, ಇಬ್ಬರು ಅಧೀಕ್ಷಕರು ಸೇರಿ 7 ಜನರ ಅಮಾನತು ಮಾಡಲಾಗಿದೆ.

    ಮಂಗಳೂರು ವಿವಿಯಲ್ಲಿ ಲಾಠಿ ಜಾರ್ಜ್
    ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್​​ಎಸ್​​ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್​ ಭಟ್ ಆಹ್ವಾನವನ್ನು ವಿರೋಧಿಸಿ ಸಿಎಫ್ಐ ವಿದ್ಯಾರ್ಥಿಗಳ ಪ್ರತಿಭಟನೆ ಉದ್ವಿಗ್ನಗೊಂಡಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಮಂಗಳೂರು ವಿವಿ ಗೇಟ್ ಮುಂಭಾಗದಲ್ಲಿ ಸಿಎಫ್​ಐ ಪ್ರತಿಭಟನೆ ನಡೆಸಿದ ಸಿಎಫ್ಐ ಕಾರ್ಯಕರ್ತರು 'ಕಲ್ಲಡ್ಕ ಪ್ರಭಾಕರ್ ಭಟ್ ಗೋ ಬ್ಯಾಕ್' ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಇದೇ ವೇಳೆ ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕೆಲವು ಸಿಎಫ್​ಐ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

    ತುಟ್ಟಿ ಭತ್ಯೆ ಹೆಚ್ಚಳ
    ಕೇಂದ್ರ ಸರ್ಕಾರಿ ನೌಕರರಿಗೆ ಯುಗಾದಿ ಹಬ್ಬದ ಮುನ್ನ ಕೇಂದ್ರ ವಿಶೇಷ ಉಡುಗೊರೆ ನೀಡಿದೆ. ಏರುತ್ತಿರುವ ಇಂಧನ ಮತ್ತು ತೈಲ ಬೆಲೆ, ಹಣದುಬ್ಬರದ ನಡುವೆಯೇ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಸಜ್ಜಾಗಿದೆ. ಮೋದಿ ಸಂಪುಟವು ಇಂದು ನಡೆಯಲಿರುವ ಸಭೆಯಲ್ಲಿ ಇಂದು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಘೋಷಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

    ದೆಹಲಿ ಸಿಎಂ ಮನೆ ಮುಂದೆ ಬಿಜೆಪಿ ಪ್ರತಿಭಟನೆ
    ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ ಮುಖ್ಯಮಂತ್ರಿಗಳ ಮನೆಗೆ ನುಗ್ಗಿದ ಕಾರ್ಯಕರ್ತರು ಅವರ ಮನೆ ಬ್ಯಾರಿ ಕೇಡ್​ಗಳನ್ನು ದಾಟಿ ಅವರ ಮನೆಯ ಪ್ರವೇಶಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಈ ನಡುವೆಯೂ ಗೇಟ್​​, ಸಿಸಿಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಗೊಳಿಸಿದ್ದಾರೆ

    ಏ. 1ರಂದು ಮಕ್ಕಳೊಂದಿಗೆ ಮೋದಿ ಸಂವಾದ
    ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 1 ರಂದು ಪರೀಕ್ಷಾ ಪೇ ಚರ್ಚಾ 2022ರ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ವಿದ್ಯಾರ್ಥಿಗಳೊಂದಿಗಿನ 'ಪರೀಕ್ಷಾ ಪೇ ಚರ್ಚಾ' ಸಂವಾದದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಯನ್ನ ತೆಗೆದುಕೊಳ್ಳುವ ಹಾದಿಯಲ್ಲಿರುವ ಮಕ್ಕಳ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಗಮನವಹಿಸಿ ಮಾತನಾಡಲಿದ್ದಾರೆ. PPC 2022 ರ ಐದನೇ ಆವೃತ್ತಿಯು ನವದೆಹಲಿಯ ತಾಲ್ಕೋಟ್ರಾ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜ್ಯದ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಸಂವಾದದಲ್ಲಿ ಮೈಸೂರು ವಿದ್ಯಾರ್ಥಿನಿ ಭಾಗಿಯಾಗಿ ಮೋದಿ ಜೊತೆ ಮಾತಾಡಲಿದ್ದಾರೆ.
    Published by:Seema R
    First published: