Evening Digest: ಮಂಡ್ಯದಿಂದಲೇ ನಿಖಿಲ್​ ಕಣಕ್ಕೆ; ಮದ್ಯ ಸೇವಿಸುವವರು ಪಾಪಿಗಳಂತೆ; ಈ ದಿನದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ರಾಜೀನಾಮೆ ಸಲ್ಲಿಸಿದ ಇಬ್ರಾಹಿಂ
  ರಾಹುಲ್ ಗಾಂಧಿ ರಾಜ್ಯಕ್ಕೆ ಬರುವ ದಿನದಂದೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಸಿ.ಎಂ ಇಬ್ರಾಹಿಂ. ಈಮೂಲಕ ಕಾಂಗ್ರೆಸ್ ವಕ್ತಾರರಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಅವರ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

  ನಾಳೆ ರಾಜ್ಯಕ್ಕೆ ಅಮಿತ್​ ಶಾ
  ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯೋತ್ಸವದಲ್ಲಿ ಭಾಗಿಯಾಗುವ ಸಲುವಾಗಿ ನಾಳೆ ಸಿದ್ಧಗಂಗಾ ಮಠಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ವಿಧಾನಸೌಧದಿಂದ ನೇರವಾಗಿ ತುಮಕೂರಿಗೆ ತೆರಳಿದ ಅವರು ನಾಳಿನ ಕಾರ್ಯಕ್ರಮದ ಸಿದ್ಧತೆ ವೀಕ್ಷಣೆ ಮಾಡಿದರು. ಈ ವೇಳೆ ಸಚಿವ ಮಾಧುಸ್ವಾಮಿ, ವಿ ಸೋಮಣ್ಣ ಕೂಡ ಉಪಸ್ಥಿತರಿದ್ದರು.

  ಗಂಡಸ್ತನದ ಬಗ್ಗೆ ಎಚ್​ಡಿಕೆ ಪ್ರಶ್ನೆ
  ರಾಜ್ಯದಲ್ಲಿ ಹಲಾಲ್ ​ ಮಾಂಸ ನಿಷೇಧ ಕುರಿತು ಭಾರೀ ಸುದ್ದಿಯಾಗಿದ್ದು, ಹಿಂದೂಗಳು ಯುಗಾದಿ ಹಬ್ಬಕ್ಕೆ ಮುಸ್ಲಿಂರ ಬಳಿ ಮಾಂಸ ಖರೀದಿ ಮಾಡ್ಬೇಡಿ ಅಂತ ಹಿಂದೂ ಸಂಘಟನೆಗಳು ಕರೆ ಕೊಟ್ಟಿವೆ. ದೇಶದಲ್ಲಿ ಎಂಥಾ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಸಂಘಟನೆಗಳು ಏನ್​ ಮಾಡ್ತಿವೆ, ಹಿಂದೂ ಪರಿಷತ್, ಭಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು ಎಂದು ಹಿಂದೂ ಮುಖಂಡರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇನ್ನು ಸಿಎಂ ವಿರುದ್ಧ ಕೆಂಡಾಮಂಡಲರಾದ ಕುಮಾರಸ್ವಾಮಿ ಸರ್ಕಾರಕ್ಕೆ ಮಾನಮರ್ಯಾದೆ ಇದ್ರೆ, ಸಿಎಂ ಬಸವರಾಜ ಬೊಮ್ಮಾಯಿಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು ಎಂದು ಕಿಡಿಕಾರಿದ್ರು.

  ಮಂಡ್ಯದಿಂದಲೇ ನಿಖಿಲ್​ ಕಣಕ್ಕೆ
  ಮುಂದಿನ ಬಾರಿ ನಡೆಯುವ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನ ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಲೋಕಸಭೆಗೆ ನಿಲ್ಲಿಸುತ್ತೇನೆ ಎಂದು ತಿಳಿಸಿದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು

  ಮದ್ಯ ಸೇವಿಸುವವರು ಮಹಾಪಾಪಿಗಳು
  ಮದ್ಯ ಸೇವಿಸುವ ಜನರು ಮಹಾಪಾಪಿಗಳು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ​ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ವಿಷಕಾರಿ ಮದ್ಯ ಸೇವಿಸಿ ಸಾಯುವವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾತ್ಮ ಗಾಂಧಿಜೀ ಅವರು ಕೂಡ ಮದ್ಯ ಸೇವನೆಯನ್ನು ವಿರೋಧಿಸಿದ್ದರು. ಅವರ ತತ್ವಗಳಿಗೆ ವಿರುದ್ಧವಾಗಿ ನಡೆಯುವವರು ಮಹಾಪಾಪಿಗಳು. ಇವರನ್ನು ನಾನು ಭಾರತೀಯರು ಎಂದು ಪರಿಗಣಿಸುವುದಿಲ್ಲ ಎಂದಿದ್ದಾರೆ.

  ಪತ್ರಕರ್ತರ ಮೇಲೆ ವಾಗ್ದಾಳಿ
  ದೇಶಾದ್ಯಂತ ಗಣನೀಯವಾಗಿ ಇಂಧನ ಬೆಲೆ ಏರಿಕೆ ಕಂಡುವಂದಿದ್ದು, ಇದೀಗ 108 ರೂ ಗಡಿ ದಾಟಿದೆ. ಈ ಕುರಿತು ಬಾಬಾ ರಾಮ್​ದೇವ್ ಅವರಲ್ಲಿ ರಿಪೋರ್ಟರ್ ಒಬ್ಬರು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ವೈರಲ್ ಆಗಿದೆ. ಈ ಹಿಂದೆ 2014 ರ ಚುನಾವಣೆ ಸಂದರ್ಭ ಬಾಬಾ ರಾಮ್​ದೇವ್ ಅವರು ನೀಡಿದ್ದ ಹೇಳಿಕೆಗನುಗಣವಾಗಿ ಪತ್ರಕರ್ತರೊಬ್ಬರು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಸಿಟ್ಟಾದ ಬಾಬಾ ರಾಮ್​ದೇವ್ ಪ್ರತಿಕ್ರಿಯಿಸಿದ ರೀತಿ ಈಗ ಎಲ್ಲೆಡೆ ವೈರಲ್ ಆಗಿದೆ. 2014ರಲ್ಲಿ ಸರ್ಕಾರ ಬದಲಾದರೆ ಪೆಟ್ರೋಲ್ ಬೆಲೆ 40 ರೂ.ಗೆ ಇಳಿಯುವ ಬಗ್ಗೆ ಈ ಹಿಂದೆ ಮಾಡಿದ್ದ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗ ಗುರು ಬಾಬಾ ರಾಮ್‌ದೇವ್ ಕ್ಯಾಮೆರಾ ಮುಂದೆಯೇ ತಾಳ್ಮೆ ಕಳೆದುಕೊಂಡು ಪತ್ರಕರ್ತರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
  Published by:Seema R
  First published: