Evening Digest: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ: ಕಾಂಡೋಮ್​​ಗಳಿಂದ ಚರಂಡಿ ಬ್ಲಾಕ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ: ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಂಕಿಪಾಕ್ಸ್ ಪ್ರಕರಣ ( Monkeypox Case), ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜ್ಯದಲ್ಲಿ ಮೊದಲ ಕಿಪಾಕ್ಸ್ ಕೇಸ್ ಇಂದು ಪತ್ತೆಯಾಗಿದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು,  ಆಫ್ರಿಕಾ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಲಕ್ಷಣಗಳಿರೋದು (Monkeypox Symptoms) ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಅವರನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸೂಚನೆ ನೀಡಿದಂತೆ 72 ಗಂಟೆಗಳ ಮಧ್ಯಂತರದಲ್ಲಿ 2 ಬಾರಿ ಪರೀಕ್ಷೆಗಳನ್ನು(2 Time Test)  ನಡೆಸಲಾಗಿದೆ ಎಂದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Monkeypox: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ

ಜಾಡುತ್ತಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಬಂಧನ!

ಹುಬ್ಬಳ್ಳಿಯಲ್ಲಿ (Hubballi) ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ರಕ್ಷಕರೇ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಮಾವನ ಮನೆ ಸೇರಿದ್ದಾರೆ. ಶಿಸ್ತಿನ ಇಲಾಖೆ ಅಂತ ಹೆಸರಾಗಿರೋ ಪೊಲೀಸ್  (Police) ಇಲಾಖೆಯ ಸಿಬ್ಬಂದಿಯೇ ಶಿಸ್ತು ಮರೆತು ಜೂಜಾಟದಲ್ಲಿ (Gambling) ಭಾಗಿಯಾದ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ (Inspector) ಜೆ.ಎಂ.ಕಾಲಿಮಿರ್ಚಿ ನೇತೃತ್ವದಲ್ಲಿ ದಾಳಿ (Raid) ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ಹುಬ್ಬಳ್ಳಿಯ ಅಕ್ಷಯ ಕಾಲನಿಯಲ್ಲಿ ನಡೆದಿದೆ. ಅಕ್ಷಯ ಕಾಲೋನಿಯ (Colony) ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸ್ ಸಿಬ್ಬಂದಿ, ಅಂದರ್ – ಬಾಹರ್ ಆಟವಾಡುತ್ತಿದ್ದರು.

ಕಾಂಡೋಮ್​​ಗಳಿಂದ ಚರಂಡಿ ಬ್ಲಾಕ್

ವಿಶ್ವಾದ್ಯಂತ ಕೋವಿಡ್ 19 (Covid-19) ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಕ್ರೀಡಾಕೂಟಗಳು (Sports Tournament) ಕಳೆ ಕಳೆದುಕೊಂಡಿದ್ದವು. ಈಗ ಜಗತ್ತು ಮತ್ತೊಮ್ಮೆ ಸಹಜ ಸ್ಥಿತಿಯತ್ತ ಸ್ಥಿರವಾಗಿ ಸಾಗುತ್ತಿರುವಾಗ, 2022 ರ ಕಾಮನ್‌ವೆಲ್ತ್ ಆಟಗಳು (Commonwealth Games) ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28 ರಿಂದ ಪ್ರಾರಂಭವಾವಾಗಿವೆ. ಕಾಮನ್​ವೆಲ್ತ್​​​​ ಗೇಮ್ಸ್​​ ಆಟದ ಜೊತೆಜೊತೆಗೆ ಆಟಗಾರರಿಗೆ ವಿತರಣೆಯಾದ 1,50,000 ಕಾಂಡೋಮ್​ಗಳ ಬಗ್ಗೆಯೂ ದೊಡ್ಡ ಸುದ್ದಿಯಾಗಿದೆ. ಹೀಗೆ ಕಾಮನ್​ ವೆಲ್ತ್​ ಗೇಮ್ಸ್​​ನಲ್ಲಿ ಬಳಕೆಯಾಗುವ ಕಾಂಡೋಮ್​​ಗಳಿಂದ ಡ್ರೈನೇಜೇ ಬ್ಲಾಕ್​​ ಆಗಿತ್ತು ಎಂಬುವುದು ನಿಮಗೆ ಗೊತ್ತೇ?

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Commonwealth Games: ‘ಕಾಮ’ನ್​​ವೆಲ್ತ್​​ ರಹಸ್ಯ: ಸಾವಿರಾರು ಬಳಸಿದ ಕಾಂಡೋಮ್​​ಗಳಿಂದ ಚರಂಡಿಯೇ ಬ್ಲಾಕ್!

ಕೊಳಕಾದ ಹಾಸಿಗೆ ಮೇಲೆ ವೈದ್ಯರನ್ನೇ ಮಲಗಿಸಿದ ಸಚಿವರು

ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಾಮಜ್ರಾ (Punjab Health Minister Chetan Singh Jouramajra) ಅವರು ಆಸ್ಪತ್ರೆಯಲ್ಲಿ ಕೊಳಕು ಹಾಸಿಗೆಯನ್ನು ನೋಡಿ ಗರಂ ಆದರು. ಜೊತೆಯಲ್ಲೇ ಇದ್ದ ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಬಿಎಫ್‌ಯುಎಚ್‌ಎಸ್) ಉಪಕುಲಪತಿ ರಾಜ್ ಬಹದ್ದೂರ್ (Raj Bahadur) ಅವರನ್ನು ಕೊಳಕಾದ ಬೆಡ್​ ಮೇಲೆ ಮಲಗುವಂತೆ ಒತ್ತಾಯಿಸಿದರು. ಮಲಗುವವರೆಗೂ ಸಚಿವರು ಅವರನ್ನು ಬಿಡಲೇ ಇಲ್ಲ. ನೀವೇ ಮಲಗಲು ಇಷ್ಟಪಡದ ಬೆಡ್​ ಮೇಲೆ ರೋಗಿಗಳನ್ನು ಮಲಗಿಸುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು. ಈ ಘಟನೆಯ ವಿಡಿಯೋ ಸಾಕಷ್ಟು ವೈರಲ್​ ಸಹ ಆಗಿದೆ. ಈಗ ಉಪಕುಲಪತಿ ರಾಜ್ ಬಹದ್ದೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತೆರಿಗೆ ರಿಟರ್ನ್ ಸಲ್ಲಿಸಲು ನಾಳೆಯೇ ಕೊನೆ ದಿನಾಂಕ

ಐಟಿಆರ್ ಫೈಲಿಂಗ್ (ITR Filing) ಎವೈ 2022-23: 2022-23 ರ ಮೌಲ್ಯ ಮಾಪನ ವರ್ಷಕ್ಕೆ ನಿಮ್ಮ ಆದಾಯ ತೆರಿಗೆ (Income Tax ) ರಿಟನ್ರ್ಸ್ ಸಲ್ಲಿಸಲು ಕೇವಲ ಇವತ್ತು ಮತ್ತು ನಾಳೆ ಮಾತ್ರ ಸಮಯ. ಆದಾಯ ತೆರಿಗೆ ಇಲಾಖೆಯು ತೆರಿಗೆದಾರರನ್ನು ನಿಗದಿತ ದಿನಾಂಕದೊಳಗೆ ಐಟಿಆರ್ ಸಲ್ಲಿಸುವಂತೆ ಒತ್ತಾಯಿಸುತ್ತಿದೆ. ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ  (Last Date) ಜುಲೈ 31 (July 31).  ತೆರಿಗೆದಾರರು ಈ ಮಹತ್ವದ ಕೆಲಸವನ್ನು ಪೂರ್ಣಗೊಳಿಸಲು ಶನಿವಾರ ಮತ್ತು ಭಾನುವಾರ ಅಷ್ಟೇ ಸಮಯ ಇರೋದು. ತೆರಿಗೆದಾರರು ಆನ್‍ಲೈನ್‍ಲ್ಲಿ (Online) ಅಥವಾ ಆಫ್‍ಲೈನ್‍ (Offline)ನಲ್ಲಿ ಐಟಿಆರ್ ಫೈಲ್ ಮಾಡಬಹುದು. ಎರಡೂ ಸಂದರ್ಭಗಳಲ್ಲಿ, ವ್ಯಕ್ತಿಯು ಐಟಿಆರ್ ಫಾರ್ಮ್ ಅನ್ನು ಅವಲಂಬಿಸಿ ನಿರ್ದಿಷ್ಟ ದಾಖಲೆಗಳ ಸೆಟ್ ಅನ್ನು ಒದಗಿಸಬೇಕಾಗುತ್ತದೆ.
Published by:Kavya V
First published: