Evening Digest: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ: ಅಡುಗೆ ಎಣ್ಣೆ ಬೆಲೆ ಇಳಿಕೆ: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ: ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪಣವಾಗಿದ್ದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. ಹೆಚ್ಚಿನ ಕಡೆ ಪಕ್ಷೇತರೇ ಹೆಚ್ಚು ಗೆದ್ದಿದ್ದಾರೆ. ಹೀಗಾಗಿ, ಅರ್ಧದಷ್ಟು ನಗರಸಂಸ್ಥೆಗಳು ಅತಂತ್ರ ಫಲಿತಾಂಶ ಕಂಡಿವೆ, ಅಥವಾ ಪಕ್ಷೇತರರ ವಶವಾಗುತ್ತಿದೆ. ರಾಜಕೀಯ ಪಕ್ಷಗಳ ಪೈಕಿ ಕಾಂಗ್ರೆಸ್ ಪಕ್ಷ ಹೆಚ್ಚು ಯಶಸ್ಸು ಕಂಡಿದೆ. 58 ನಗರಸಂಸ್ಥೆಗಳ ಪೈಕಿ ಕಾಂಗ್ರೆಸ್ 21ರಲ್ಲಿ ಗೆದ್ದರೆ ಆಡಳಿತಾರೂಢ ಬಿಜೆಪಿಗೆ 21ರಲ್ಲಿ ಮಾತ್ರ ಅಧಿಕಾರಭಾಗ್ಯ ಸಿಕ್ಕಿದೆ. ಜೆಡಿಎಸ್ ಪಾಲಿಗೆ ಅಧಿಕಾರ ಸಿಕ್ಕಿದ್ದು ಒಂದರಲ್ಲಿ ಮಾತ್ರ. ಐದು ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯಿತಿಗಳ ಒಟ್ಟು 1185 ವಾರ್ಡ್​ಗಳಿಗೆ ಸೋಮವಾರ ಚುನಾವಣೆ ಆಗಿತ್ತು. ಇಂದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅತಿ ಹೆಚ್ಚು ವಾರ್ಡ್​ಗಳನ್ನ ಗೆದ್ದಿದೆ. 501 ವಾರ್ಡ್​ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಬಿಜೆಪಿ 431 ಕ್ಷೇತ್ರಗಳಲ್ಲಿ ಗೆದ್ದಿದೆ. ಜೆಡಿಎಸ್ ಪಕ್ಷ ಕೇವಲ 45 ವಾರ್ಡ್​ಗಳಲ್ಲಿ ಮಾತ್ರ ಗೆಲುವು ಕಂಡಿದೆ. ಪಕ್ಷೇತರರು ಮತ್ತು ಇತರೆ ಪಕ್ಷಗಳವರು 207 ವಾರ್ಡ್​ಗಳಲ್ಲಿ ಜಯ ಸಾಧಿಸಿದ್ಧಾರೆ.

Congressಗೆ ಬುಡವೇ ಇಲ್ವಂತೆ..25 ವರ್ಷಗಳ ಬಳಿಕ ಗಂಡು ಮಗು ಹುಟ್ಟಿದೆಯಂತೆ

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಿಂದ (Karnataka ULB Election Results) ಬಿಜೆಪಿ (BJP) ಬುಡ ಅಲ್ಲಾಡ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ(CM Bommai), ಸಚಿವ ಕೆ.ಎಸ್​.ಈಶ್ವರಪ್ಪ (KS eshwarappa) ಭರಪೂರ ವ್ಯಂಗ್ಯದ ಮಾತುಗಳಿಂದ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಗೆ ಬುಡವೇ ಇಲ್ಲ, ಈಗಾಗಲೇ ಬುಡವೇ ಹೊರಟು ಹೋಗಿದೆ  ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಮಾತಿನಲ್ಲೇ ತಿವಿದಿದ್ದಾರೆ. . 25 ವರ್ಷಗಳ ನಂತರ ಕಾಂಗ್ರೆಸ್ ಗೆ ಗಂಡು ಮಗು ಹುಟ್ಟಿದೆ, ಆ ರೀತಿ ಅವರು ಸಂಭ್ರಮಿಸುತ್ತಿದ್ದಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಅಡುಗೆ ಎಣ್ಣೆ ಬೆಲೆ ಇಳಿಕೆ

ಭಾರತದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್‌ನ ( Solvent Extractors Association of India) (SEA) ಹಲವಾರು ಸದಸ್ಯರು ಹಬ್ಬದ ಋತುವಿನಲ್ಲಿ(Festive season) ಗ್ರಾಹಕರಿಗೆ (Customers) ಕೊಂಚ ನೆಮ್ಮದಿಯನ್ನುಂಟು ಮಾಡುವುದಕ್ಕಾಗಿ ಖಾದ್ಯ ತೈಲಗಳ ಮೇಲಿನ ಗರಿಷ್ಠ ಚಿಲ್ಲರೆ ಬೆಲೆಯನ್ನು ( Edible Oils) (MRP) 10-15%ರಷ್ಟು ಕಡಿಮೆ ಮಾಡಿದ್ದಾರೆ ಎಂದು ಹೇಳಿಕೊಂಡಿದೆ. ಅದಾನಿ ವಿಲ್ಮರ್ (ಫಾರ್ಚ್ಯೂನ್ ಬ್ರ್ಯಾಂಡ್‌ಗಳು), ರುಚಿ ಸೋಯಾ (ಮಹಾಕೋಶ್, ಸನ್‌ರಿಚ್, ರುಚಿ ಗೋಲ್ಡ್, ನ್ಯೂಟ್ರೆಲ್ಲಾ ಬ್ರ್ಯಾಂಡ್‌ಗಳು) ಇಮಾಮಿ (ಹೆಲ್ದಿ ಅಂಡ್ ಟೇಸ್ಟಿ ಬ್ರ್ಯಾಂಡ್‌ಗಳು), ಬಂಗೇ (ಡಾಲ್ಡಾ/ಗಗನ್/ಚಂಬಲ್ ಬ್ರ್ಯಾಂಡ್‌ಗಳು), ಜೆಮಿನಿ (ಫ್ರೀಡಮ್ ಸನ್‌ಫ್ಲವರ್ ಆಯಿಲ್ ಬ್ರ್ಯಾಂಡ್‌ಗಳು) COFCO (ನ್ಯೂಟ್ರಿಲೈವ್ ಬ್ರ್ಯಾಂಡ್), ಫ್ರಿಗೊರಿಫಿಕೊ ಅಲಾನಾ (ಸನ್ನಿ ಬ್ರ್ಯಾಂಡ್‌ಗಳು) ಮತ್ತು ಗೋಕುಲ್ ಆಗ್ರೋ (ವಿಟಾಲೈಫ್, ಮಾಹೆಕ್, ಜೈಕಾ ಬ್ರ್ಯಾಂಡ್‌ಗಳು) ಹೀಗೆ ಇತರ ಕೆಲವೊಂದು ಬ್ರ್ಯಾಂಡ್‌ಗಳು ಆಯಾ ಖಾದ್ಯ ತೈಲ ಬ್ರ್ಯಾಂಡ್‌ಗಳ ಮೇಲಿನ MRP ಕಡಿಮೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

₹10 ಲಕ್ಷ ಕೊಡ್ತಾರಂತೆ ವಿಜಯ್​ ದೇವರಕೊಂಡ

ಟಾಲಿವುಡ್‌ ನಟ ವಿಜಯ್ ದೇವರಕೊಂಡ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ 100 ಜನರಿಗೆ ತಲಾ ₹ 10 ಸಾವಿರ ಮೌಲ್ಯದ ಉಡುಗೊರೆ ಅಥವಾ ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ’ದೇವರು ಸಂತಾ’ ಹೆಸರಿನಲ್ಲಿ ₹ 10 ಲಕ್ಷ ಮೌಲ್ಯದ ಉಡುಗೊರೆ ನೀಡುತ್ತಿದ್ದಾರೆ. ಈ ಬಗ್ಗೆ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ಯಾರು? ಹೇಗೆ? ಉಡುಗೊರೆ ಪಡೆಯಬಹುದು ಎಂಬ ಮಾಹಿತಿ ನೀಡಿದ್ದಾರೆ. ವಿಜಯ್‌ ದೇವರಕೊಂಡ ನಡೆಸುತ್ತಿರುವ ಬಟ್ಟೆ ಕಂಪೆನಿಯ ರೌಡಿ ಸಂಘದ 50 ಜನರಿಗೆ ಹಾಗೂ ಇತರೆ 50 ಮಂದಿ ಯಾರಿಗೆ ಬೇಕಾದರೂ ಜನರಿಗೆ ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ. ಜನವರಿ 1ರಂದು ಗಿಫ್ಟ್‌ ಅನ್ನು ವಿಜಯ್‌ ದೇವರಕೊಂಡ ಅವರೇ ನೀಡಲಿದ್ದಾರೆ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್ ಜಯಭೇರಿ

ನಿರೀಕ್ಷೆಯಂತೆ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಗೆಲುವಿಗೆ ಭಾರತ ಒಡ್ಡಿದ 305 ರನ್ ಸವಾಲಿಗೆ ಉತ್ತರವಾಗಿ ಸೌತ್ ಆಫ್ರಿಕಾದ ಎರಡನೇ ಇನ್ನಿಂಗ್ಸ್ 191 ರನ್​ಗೆ ಅಂತ್ಯಗೊಂಡಿತು. ಈ ಮೂಲಕ ಭಾರತಕ್ಕೆ 113 ರನ್​ಗಳ ಗೆಲುವು ಸಿಕ್ಕಿತು. ಡೀನ್ ಎಲ್ಗಾರ್ ಮತ್ತು ಟೆಂಬ ಬವುಮಾ ಇಬ್ಬರು ಬಂಡೆಯಂತೆ ನಿಂತು ಭಾರತದ ಗೆಲುವನ್ನ ವಿಳಂಬಗೊಳಿಸಿದ್ದಷ್ಟೇ ಕೊನೆಯ ದಿನದ ಹೈಲೈಟ್ ಆಯಿತು. ಭಾರತದ ಗೆಲುವಿಗೆ ಅಡ್ಡಿ ಆಗುತ್ತದೆ ಎಂದು ವರುಣ ಇಂದು ಸೆಂಚೂರಿಯನ್​ನಲ್ಲಿ ತಲೆಹಾಕಿಯೂ ಮಲಗಲಿಲ್ಲ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಪಡೆದಿದೆ.
Published by:Kavya V
First published: