Evening Digest: ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ; ಭಾರೀ ಮಳೆಗೆ ತತ್ತರಿಸಿದ ಜನ; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟ

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶ್ರೀಗಳ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಇಬ್ಬರು ಅಪ್ರಾಪ್ತ ಬಾಲಕಿಯರು ನೀಡಿದ ದೂರಿನ ಮೇರೆ ಶ್ರೀಳ ವಿರುದ್ಧ ಅತ್ಯಾಚಾರ, ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿದ್ದು, ಈಗ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ದೂರು ದಾಖಲಾಗಿದೆ. ಹೌದು ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಒಬ್ಬರಲ್ಲಿ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯಾಗಿದ್ದು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ.

ಮಳೆ ಹಾನಿ ಮಾಹಿತಿ ನೀಡಿದ ಸಚಿವ ಆರ್ ಅಶೋಕ್

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್.ಅಶೋಕ್ (Minister R Ashok) ಮಳೆಯಿಂದಾದ ಹಾನಿಯ (Rain Loss) ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸರ್ಕಾರ (Government) ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಮತ್ತೆ ಮಳೆ ಅವಾಂತರ ಆಗಿದೆ. ಕಳೆದ 24 ಗಂಟೆಗಳಲ್ಲಿ 820 ಮಿಲಿ ಮೀಟರ್ ಮಳೆಯಾಗಿದೆ. 27 ಜಿಲ್ಲೆಗಳಲ್ಲಿ ಮಳೆ (Rainfall) ಸುರಿದಿದ್ದು, ರಾಮನಗರ, ಚಾಮರಾಜಗರ, ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 9 ಮಿಲಿ ಮೀಟರ್ ಮಳೆಯಾಗಿದೆ. 20 ಹಳ್ಳಿಗಳಲ್ಲಿ ಡ್ಯಾಮೇಜ್ ಆಗಿದೆ. 187 ಹಳ್ಳಿಗಳಿಗೆ ಎಫೆಕ್ಟ್ ಆಗಿದೆ. ಇದುವರೆಗೂ 96 ಜನರು ಸಾವನ್ನಪ್ಪಿದ್ದು, ಮೂರು ದಿನದಲ್ಲಿ ಮೂವರು ಮೃತರಾಗಿದ್ದಾರೆ (Rain Death) ಎಂದು ಹೇಳಿದರು.

ಇದನ್ನೂ ಓದಿ: Karnataka Rains: ಸರ್ಕಾರ ಸಂತ್ರಸ್ತರ ಪರವಾಗಿದೆ, ಮಳೆ ಹಾನಿ ಮಾಹಿತಿ ನೀಡಿದ ಸಚಿವ ಆರ್ ಅಶೋಕ್

ಅಧಿಕಾರದ ಮದ ನಿಮ್ಮ ತಲೆಗೇರಿದೆ

ಭ್ರಷ್ಟಾಚಾರದ ಪ್ರಕರಣದ ನಂತರ ಜುಲೈನಲ್ಲಿ ಹಿಂತೆಗೆದುಕೊಳ್ಳಲಾದ ಕೇಜ್ರಿವಾಲ್  ಸರಕಾರದ ಮದ್ಯ ಪರವಾನಗಿ (Government Liquor License) ನೀತಿಯ ಕುರಿತು ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆಯವರು (Anna Hazare) ಪಕ್ಷದ ಮಾಜಿ ಮಾರ್ಗದರ್ಶಕ, ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಪತ್ರ ಬರೆದಿದ್ದು, ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಏರಿದೆ ಎಂದು ತೋರುತ್ತಿದೆ ಎಂಬಂತಹ ಕಟುಸಾಲುಗಳಲ್ಲಿ ಹಜಾರೆಯವರು ಕೇಜ್ರಿವಾಲ್ ಸರಕಾರವನ್ನು (Government) ಟೀಕಿಸಿದ್ದಾರೆ. ನೀವು ಮುಖ್ಯಮಂತ್ರಿಗಳಾದ ನಂತರ ನಾನು ನಿಮಗೆ ಇದೇ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ. ಇದಕ್ಕೆ ಕಾರಣವೇನೆಂದರೆ ನಿಮ್ಮದೇ ಸರಕಾರದ ಮದ್ಯ ನೀತಿಯ ಕುರಿತು ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವುಂಟಾಗಿದೆ ಎಂದು ಹಿಂದಿ ಭಾಷೆಯಲ್ಲಿರುವ ಪತ್ರವು ತಿಳಿಸಿದೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲ ಕೇಸ್ ರದ್ದು

2002ರಲ್ಲಿ ಗುಜರಾತ್‌ನಲ್ಲಿ ನಡೆದ ಬಾಬ್ರಿ ಮಸೀದಿಗೆ (Babri Masjid) ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ರದ್ದುಗೊಳಿಸಿದೆ. ಈ ಪ್ರಕರಣಗಳು ಈಗ "ಸಮಯದ ಜೊತೆಗೂಡಲು ಅಸಮರ್ಥವಾಗಿವೆ" ಎಂದು ದೇಶದ ಸರ್ವೋಚ್ಛ ನ್ಯಾಯಾಲಯವು ಈ ಆದೇಶದ ವೇಳೆ ಹೇಳಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಒಂಬತ್ತು ಪ್ರಕರಣಗಳ ಪೈಕಿ ಎಂಟು ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ. ಪ್ರಸ್ತುತ ಗುಜರಾತ್‌ನ (Gujarat) ನರೋಡಾ ಗಾಂವ್‌ನಲ್ಲಿರುವ ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ವಾದದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ ಎಂದು ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: Babri Masjid: ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಎಲ್ಲ ಕೇಸ್ ರದ್ದು; ಸುಪ್ರೀಂ ಆದೇಶ

ಮಹೇಶ್​ ಬಾಬು ಸಿತಾರಾ ಭರ್ಜರಿ ಎಂಟ್ರಿ

ಮಹೇಶ್ ಬಾಬು- ಸಿತಾರಾ: ಸೂಪರ್ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಮಗಳು ಸಿತಾರಾ ಅವರೊಂದಿಗೆ ಜೀ ತೆಲುಗಿನಲ್ಲಿ ಪ್ರಸಾರವಾಗಲಿರುವ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಪ್ರೀಮಿಯಂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಮಗಳ ಕೈ ಹಿಡಿದು ಡ್ಯಾನ್ಸ್ ಶೋಗೆ ಕರೆದು ಕೊಂಡು ಹೋಗಿದ್ದಾರೆ. ಸಿನಿಮಾ ಬಿಟ್ಟರೆ ಹೊರಗಡೆ ಅಪರೂಪಕ್ಕೆ ಕಾಣಿಸಿಕೊಳ್ಳುವ ಸೂಪರ್ ಸ್ಟಾರ್ ಮಹೇಶ್ ಬಾಬು ಟಿವಿ ಶೋ ಒಂದಕ್ಕೆ ಮಗಳನ್ನು ಕರೆದೊಯ್ದಿದ್ದಾರೆ. ಮಗಳು ಸಿತಾರಾ ಜೊತೆಗೆ ತೆರೆ ಮೇಲೆಯೂ ಮಹೇಶ್ ಬಾಬು ಮಿಂಚಿದ್ರು.
Published by:Pavana HS
First published: