Evening Digest: ಹಬ್ಬಕ್ಕೆ ಅಡುಗೆ ಎಣ್ಣೆ ಬೆಲೆ ಇಳಿಕೆ; ಶಿವಣ್ಣನಿಗೆ ತೆಲುಗು ನಟ ರಾಮ್​​ಚರಣ್​ ಸಾಂತ್ವನ; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಹಬ್ಬಕ್ಕೆ ಅಡುಗೆ ಎಣ್ಣೆ ಬೆಲೆ ಇಳಿಕೆ : ಖಾದ್ಯ ತೈಲ ಉತ್ಪಾದಕರ ಸಂಸ್ಥೆ (Solvent Extractors Association of India SEA) ಹಾಗೂ ಅದರ ಸದಸ್ಯರು ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಸ್ವಲ್ಪ ರಿಲೀಫ್ ನೀಡುತ್ತಿದ್ದಾರೆ. ಹಬ್ಬದ ದಿನಗಳಲ್ಲಿ(Festival Season) ರುಚಿರುಚಿಯಾದ ಖಾದ್ಯ ಮಾಡುವ ಮನೆ ಮಂದಿಗೆ ಸಂತಸ ನೀಡುತ್ತಿದ್ದಾರೆ. ತೈಲ ಬೆಲೆ(Edible Oil) ಏರಿಕೆಯಿಂದ ಕೊಂಚ ಬೇಸರಗೊಂಡ ಮಹಿಳೆ(Ladies)ಯರಿಗೆ ಸ್ವಲ್ಪ ಪರಿಹಾರ ಒದಗಿಸಲು ಖಾದ್ಯ ತೈಲಗಳ ಸಗಟು ಬೆಲೆಯನ್ನು ಪ್ರತಿ ಕೆಜಿಗೆ 3-5 ರೂಪಾಯಿಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಸೂರ್ಯಕಾಂತಿ ಎಣ್ಣೆಯ ವಿಷಯದಲ್ಲಿ ಮಾತ್ರ ಕಡಿಮೆಯಾಗಿದೆ. ಅಕ್ಟೋಬರ್ 13 ರಂದು ಲೀಟರ್‌ಗೆ 180 ರೂ. ನಿಂದ 168 ರೂ.ಗೆ ಇಳಿಸಿದೆ. ಎಲ್ಲಾ ಇತರ ಖಾದ್ಯ ತೈಲಗಳು ಈ ಅವಧಿಯಲ್ಲಿ ಮಾದರಿ ಬೆಲೆಗಳು ಬಹುತೇಕ ಬದಲಾಗದೆ ಉಳಿದಿವೆ.  ಸೋಯಾ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆಯು ಪ್ರತಿ ಕೆಜಿಗೆ 155.65 ರೂ. ನಿಂದ 153 ರೂ. ಗೆ ಕಡಿಮೆಯಾಗಿದೆ. ಆದರೂ, ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಸರಾಸರಿ ಚಿಲ್ಲರೆ ಬೆಲೆಗಳು ಅಕ್ಟೋಬರ್ 31ರಂದು ಕ್ರಮವಾಗಿ ಕೆಜಿಗೆ 181.97 ರೂ, ಕೆಜಿಗೆ 184.99 ರೂ ಮತ್ತು 168 ರೂ. ಗಳಲ್ಲಿ ಸ್ಥಿರವಾಗಿವೆ ಎಂದು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.

ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ

ದೀಪಾವಳಿ (Deepavali) ಆಚರಣೆಗೆ ದೇಶಾದ್ಯಂತ ಜನರು ಸಜ್ಜಾಗಿದ್ದಾರೆ. ಬೆಳಕಿನ ಹಬ್ಬದ ಈ ಸಂಭ್ರಮವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ (Prime minister Narendra modi) ಅವರು ದೇಶದ ಯೋಧರೊಂದಿಗೆ ಆಚರಿಸಿ, ಸಿಹಿ ಹಂಚಲಿದ್ದಾರೆ. ಜಿ20 ಮತ್ತು ಸಿಒಪಿ26 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಮತ್ತು ಬ್ರಿಟನ್ ಗೆ ತೆರಳಿದ್ದ ಪ್ರಧಾನಿ ಮೋದಿ ಇಂದು  ದೇಶಕ್ಕೆ ಮರಳುತ್ತಿದ್ದು, ನಾಳೆ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ತೆರಳಲಿದ್ದಾರೆ. ಅಲ್ಲಿನ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ ಭಾರತೀಯ ಸೇನಾ ಯೋಧರೊಂದಿಗೆ (Indian Solider) ದೀಪಾವಳಿ ಆಚರಿಸಲಿದ್ದಾರೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ. ಕಳೆದ ಆರು ವರ್ಷಗಳಿಂದಲೂ ಅಂದರೆ 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಕೂಡ ಆ ಸಂಪ್ರದಾಯ ಮುಂದುವರೆಸಿದ್ದಾರೆ.

ಸೋಲಿಗೆ ನಾನೊಬ್ಬನೇ ಕಾರಣ ಅಲ್ಲ

ಹಾನಗಲ್ ಉಪ ಚುನಾವಣೆಯಲ್ಲಿ(Hangal By Election) ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನ್ ಸೋಲನುಭವಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai )ಸಾಮೂಹಿಕ ನಾಯಕತ್ವದ ಜಪ ಮಾಡಲಾರಂಭಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಸೋದಾಗಿ ತಿಳಿಸಿದಾಗ, ಬೊಮ್ಮಾಯಿ ಒಳಗೊಳಗೆ ಬೀಗಿದ್ದರು. ಆದರೆ ಹಾನಗಲ್ ನಲ್ಲಿಯೇ ಬೀಡು ಬಿಟ್ಟು, ಅರ್ಧ ಡಜನ್ ಗೂ ಹೆಚ್ಚು ಸಚಿವರನ್ನು ಸೇರಿಸಿಕೊಂಡು ರಣತಂತ್ರ ಹೆಣೆದರೂ ಹಾನಗಲ್ ನಲ್ಲಿ ಬಿಜೆಪಿ ಗೆಲ್ಲಲಾಗಿಲ್ಲ. ಹೀಗಾಗಿ ಈಗ ಬೊಮ್ಮಾಯಿ ಬಾಯಿಯಿಂದ ಸಾಮೂಹಿಕ ನಾಯಕತ್ವದ ಮಾತು ಕೇಳಿ ಬಂದಿವೆ.

ಸ್ಟಾರ್ ಆಟಗಾರರು ಆಡುತ್ತಿಲ್ಲವಾ, ತೆಗೆದುಹಾಕಿ: ಕಪಿಲ್

ಸತತ ಸೋಲುಗಳಿಂದ ವಿಶ್ವಕಪ್​ನಿಂದ ಹೊರಬೀಳುವ ಸ್ಥಿತಿಗೆ ಬಂದಿರುವ ಟೀಮ್ ಇಂಡಿಯಾ (Indian Cricket Team on brink of exiting T20 World Cup 2021) ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳು ಬಂದಿವೆ. ಭಾರತ ತಂಡದ ಧೋರಣೆ ಬಗ್ಗೆ ಕಟುವಾಗಿ ಟೀಕಿಸುತ್ತಿರುವವರಲ್ಲಿ ಕಪಿಲ್ ದೇವ್ (Former Cricketer Kapil Dev) ಒಬ್ಬರು. ಇವರು ಬಹಳ ಕಠಿಣ ಶಬ್ದಗಳಲ್ಲಿ ಭಾರತದ ಪ್ರದರ್ಶನವನ್ನು ಟೀಕಿಸುತ್ತಾ ಬಂದಿದ್ದಾರೆ. ಈಗ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಮಾಡುವ ಕಾಲ ಬಂದಿದೆ (Time to make big changes in Team) ಎಂದು ಮಾಜಿ ಆಲ್​ರೌಂಡರ್ ಕಪಿಲ್ ದೇವ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಮುನ್ನ ಕಪಿಲ್ ದೇವ್ ಇಂಥದ್ದೊಂದು ಸಲಹೆ ನೀಡಿ ಶಾಕ್ ಕೊಟ್ಟಿದ್ದಾರೆ.

ಶಿವಣ್ಣನಿಗೆ ತೆಲುಗು ನಟ ರಾಮ್​ಚರಣ್​​ ಸಾಂತ್ವನ

ಪವರ್​​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​​ ಮರೆಯಾಗಿ ದಿನಗಳು ಉರುಳುತ್ತಿವೆ. ಆದರೆ ಅಪ್ಪುವಿನ ಅಗಲಿಕೆಯ ನೋವು ಮಾತ್ರ ಕರುಗುತ್ತಿಲ್ಲ. ಪುನೀತ್​ ಅವರ ಮನೆಗೆ (puneeth house) ಪರಭಾಷೆಯ ಖ್ಯಾತ ನಟರು (Famous Actors)ಭೇಟಿ ನೀಡುತ್ತಲೇ ಇದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇಂದು ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ (Megastar Chiranjeevi) ಪುತ್ರ ನಟ ರಾಮ್​ ಚರಣ್​ (Ram Charan) ಭೇಟಿ ನೀಡಿದರು. ಮೊದಲು ಪುನೀತ್ ಅವರ ಸದಾಶಿವನಗರದ​ ಮನೆಗೆ ಭೇಟಿ ನೀಡಿದ ನಟ ರಾಮ್​​ ಚರಣ್​, ಅಪ್ಪು ಫೋಟೋಗೆ ನಮಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಾಮ್​ ಚರಣ್​, ಈ ರೀತಿ ಆಗಬಾರದಿತ್ತು. ಯಾರಿಗಾದರೂ ಆಗಿದ್ರೆ ಒಪ್ಪಬಹುದಿತ್ತು, ಆದ್ರೆ ಪುನೀತ್ ಗೆ ಅಂದ್ರೆ ನಂಬಲಾಗುತ್ತಿಲ್ಲ. ನನಗೆ ಏನು ಹೇಳಬೇಕು ಗೊತ್ತಾಗ್ತಿಲ್ಲ ಎಂದು ಕಂಬನಿ ಮಿಡಿದರು. ನಂತರ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್ ನಿವಾಸಕ್ಕೆ ರಾಮ್​ ಚರಣ್​​ ಭೇಟಿ ನೀಡಿದರು. ಈ ವೇಳೆ ಚರಣ್​ ಕೈ ಹಿಡಿದುಕೊಂಡು ಶಿವಣ್ಣ ಕಣ್ಣೀರಿಟ್ಟ ಕ್ಷಣ ನಿಜಕ್ಕೂ ಕರುಳು ಹಿಂಡುವಂತಿತ್ತು.
Published by:Kavya V
First published: