Evening Digest: ವೇದಿಕೆ ಮೇಲೆಯೇ ಸಂಸದ-ಸಚಿವರ ಕಿತ್ತಾಟ; ರಾಜ್ಯದಲ್ಲಿ ಲಾಕ್​​ಡೌನ್​ ಅನಿವಾರ್ಯ? : ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ವೇದಿಕೆ ಮೇಲೆಯೇ ಸಂಸದ-ಸಚಿವರ ಕಿತ್ತಾಟ : ಸಿಎಂ ಬಸವರಾಜ ಬೊಮ್ಮಾಯಿ (CM Bommai) ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಮುಂದಾಗಿದ್ದರು. ಆದರೆ ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ಸಚಿವ ಡಾ.ಸಿ.ಎನ್.ಅಶ್ವಥ್​ ನಾರಾಯಣ (Minister CN Ashwath Narayan) ಹಾಗೂ ಸಂಸದ ಡಿಕೆ ಸುರೇಶ್​ (MP DK Suresh) ಮಧ್ಯೆ ವೇದಿಕೆ ಮೇಲೆಯೇ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿ ಬಿಡ್ತು. ಅಷ್ಟರಲ್ಲಿ ವೇದಿಕೆಯಲ್ಲಿದ್ದ ಇತರರು, ಪೊಲೀಸರು ಬಂದು ಇಬ್ಬರನ್ನು ತಡೆದರು. ಸಚಿವ ಅಶ್ವಥ್​ ನಾರಾಯಣ ಭಾಷಣ ಮಾಡುತ್ತಿದ್ದಾಗ ಅವರ ಮಾತಿಗೆ ಕೆರಳಿದ ಸಂಸದ ಡಿಕೆ ಸುರೇಶ್​ ಅವರ ಬಳಿಯೇ ಬಂದು ಸಾಕು ಮಾಡು ನಿನ್ನ ಮಾತು ಎಂದು ಗದರಿದರು. ಇಬ್ಬರ ಮಧ್ಯೆ ಜಟಾಪಟಿ ನಡೆಯಿತು. ಇಬ್ಬರನ್ನು ನೆರೆದಿದ್ದವರು ತಡೆದರು. ಸಚಿವ ಅಶ್ವಥ್​ ನಾರಾಯಣ ಮಾತಿನಿಂದ ಕೆರಳಿದ ಡಿಕೆ ಸುರೇಶ್​ ವೇದಿಕೆ ಮೇಲೆ ನೇರವಾಗಿ ಬಂದು ತೋರಿಸು ನಿನ್ನ ಅಭಿವೃದ್ಧಿನಾ ಎಂದು ಸವಾಲೆಸೆದರು. ಈ ವೇಳೆ ಗಂಡಸ್ತನ ತೋರಿಸ್ತೀಯಾ ಎಂಬ ಮಾತುಗಳು ಕೇಳಿ ಬಂತು.

ಲಾಕ್​​ಡೌನ್​ ಅನಿವಾರ್ಯ ಎಂದ ಸಚಿವರು

ರಾಜ್ಯದಲ್ಲಿ ಪಾಸಿಟಿವಿಟಿ ದರ (Positivity Rate) ಶೇ. 5 ರಷ್ಟು ತಲುಪಿದರೆ ರಾಜ್ಯದಲ್ಲಿ ಲಾಕ್​ಡೌನ್​​ (Lockdown) ಮಾಡುವುದು ಅನಿವಾರ್ಯ (unavoidable) ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಅವರು ಇಲ್ಲಿನ ಪಾಲಿಬೆಟ್ಟದಲ್ಲಿ ಹೇಳಿದ್ದಾರೆ. ಆ ಮೂಲಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಆಗುವುದರ ಸುಳಿವು ನೀಡಿದ್ದಾರೆ. ಸದ್ಯ ಕೊಡಗಿನಲ್ಲೂ ಪಾಸಿಟಿವಿಟಿ ದರ 1 ಇದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 1 ಕ್ಕಿಂತ ಜಾಸ್ತಿ ಇದೆ. ಇದು ಕಡಿಮೆ ಆಗುವಂತೆ ಜನರೇ ನೋಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಲಾಕ್ಡೌನ್ ಅನಿವಾರ್ಯ, ಜನರು ಅಂತಹ ಸ್ಥಿತಿಗೆ ಎಡೆಮಾಡಿಕೊಡಬಾರದು ಎಂದಿದ್ದಾರೆ.

ಮಾಜಿ ಶಾಸಕರ ಸೊಸೆಗೆ ISIS ನಂಟು

ಕರಾವಳಿಯ ಮಾಜಿ ಶಾಸಕ ಇದಿನಬ್ಬ (Ullala ex MLA Idinabba) ಪುತ್ರನ ಮನೆಗೆ NIA ಅಧಿಕಾರಿಗಳು ಎರಡನೇ ಬಾರಿ‌ ದಾಳಿ ನಡೆಸಿದ್ದಾರೆ. ಕಳೆದ ಬಾರಿ ಇದಿನಬ್ಬ ಪುತ್ರನ ಮಗನನ್ನ ಅರೆಸ್ಟ್ (Arrest) ಮಾಡಿದ್ದರೆ, ಈ ಬಾರಿ‌ ಸೊಸೆಯನ್ನ (Daughter in Law) ಬಂಧಿಸಿ ದೆಹಲಿಗೆ ಕರೆದೊಯ್ಯಲಿದ್ದಾರೆ. ಉಗ್ರ ಸಂಘಟನೆ ಐಸಿಸ್ ಜೊತೆ ನಂಟಿದ್ದ ಈ ಮಹಿಳೆಯನ್ನು NIA ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.  ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ದಿ.ಇದಿನಬ್ಬ ಪುತ್ರ ಬಿ.ಎಂ ಭಾಷಾ ಮನೆಗೆ ಎನ್.ಐ.ಎ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ‌. ದೆಹಲಿಯಿಂದ ಬಂದಿದ್ದ ಎನ್.ಐ.ಎ ತನಿಖಾಧಿಕಾರಿ ಡಿ.ಎಸ್ಪಿ ಕೃಷ್ಣಕುಮಾರ್ ನೇತೃತ್ವದ ಮೂವರ ತಂಡ ಈ ದಾಳಿ ನಡೆಸಿದೆ.

ಕೋವಿಡ್ ಆಂತಕದ ಮಧ್ಯೆ ಫ್ಲೋರೋನಾ ಭೀತಿ

ಕೊರೋನಾ ವೈರಸ್ ( Coronavirus ) ಪ್ರಸ್ತುತ ದೇಶದಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿದ್ದು ಈಗ ಇದರ ಸಾಲಿಗೆ ಇದೀಗ ಫ್ಲೊರೋನಾ (Flurona) ಸೇರ್ಪಡೆಯಾಗಿದೆ. ಇಸ್ರೇಲ್‌ನ (Israeli ) ವೈದ್ಯರು ಇದೀಗ ಫ್ಲೊರೋನಾದಿಂದ ಬಳಲುತ್ತಿರುವ ರೋಗಿಯನ್ನು ಪತ್ತೆಹಚ್ಚಿದ್ದಾರೆ. ಇದು ಇನ್‌ಫ್ಲುಯೆಂಜಾ ಹಾಗೂ ಕೋವಿಡ್-19 ವೈರಸ್‌ನ ಅಪರೂಪದ ಮಿಶ್ರಣವಾಗಿದೆ. ದೇಶದಲ್ಲಿ ಕಂಡುಬಂದ ಮೊದಲ ಪ್ರಕರಣವಾಗಿದ್ದರೂ ವೈದ್ಯರು ಊಹಿಸಿರುವಂತೆ ಈ ಪ್ರಾಂತ್ಯದಲ್ಲಿ ಈ ರೋಗಲಕ್ಷಣದ ಅನೇಕ ರೋಗಿಗಳು ಇದ್ದಾರೆ ಎಂಬುದಾಗಿ ಕಂಡುಬಂದಿದೆ. ಅದಾಗ್ಯೂ ರೋಗಲಕ್ಷಣಗಳು(Symptoms) ಸೌಮ್ಯವಾಗಿದ್ದು ಗರ್ಭಿಣಿಯರಲ್ಲಿ (Pregnant women) ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದೆ ಎಂಬುದು ವರದಿಯಾಗಿದೆ.

Pushpa OTT ರಿಲೀಸ್​ ಡೇಟ್​

ಪುಷ್ಪ ಸಿನಿಮಾ ಮಾತ್ರ ನಿರೀಕ್ಷೆಗಿಂತ ಮುಂಚೆಯೇ ಓಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡದ ಸದಸ್ಯರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಚಿತ್ರದ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಭಾರೀ ಹಣ ಕೊಟ್ಟು ಪಡೆದುಕೊಂಡಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ. 17 ದಿನಗಳಲ್ಲಿ 300 ಕೋಟಿ ಗಳಿಸಿದ ಚಿತ್ರ. ಬೇರೆ ಭಾಷೆಗಳಲ್ಲಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿದೆ. ಪುಷ್ಪ ಸಿನಿಮಾ ಅಲ್ಲು ಅರ್ಜುನ್​ ಅವರ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ. ಈ ಸಿನಿಮಾ ಬಿಡುಗಡೆಯಾಗಿ 18 ದಿನಗಳಾಗಿವೆ. ಇನ್ನು ನಾಲ್ಕು ದಿನಗಳಲ್ಲಿ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
Published by:Kavya V
First published: