Evening Digest: ಸಿದ್ದರಾಮೋತ್ಸವದಲ್ಲಿ ಸಿದ್ದುಗೆ ವಾರ್ನಿಂಗ್: ದೀದಿ ಸಂಪುಟ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಸಿದ್ದರಾಮೋತ್ಸವದಲ್ಲಿ ಸಿದ್ದುಗೆ ವಾರ್ನಿಂಗ್ : ಜಿಟಿಜಿಟಿ ಮಳೆಯ ನಡುವೆಯೂ ಸಿದ್ದರಾಮೋತ್ಸವ (Siddramotsava) ಮುಂದುವರೆದಿದೆ. ವೇದಿಕೆ ಮೇಲೆ ಸೇರಿರುವ ಪ್ರತಿಯೊಬ್ಬರ ಕಾಂಗ್ರೆಸ್​ ನಾಯಕರೂ (Congress Leaders) ಸಿದ್ದರಾಮಯ್ಯ (Siddaramaiah) ಅವರ 75ನೇ ಹುಟ್ಟುಹಬ್ಬಕ್ಕೆ ಶುಭ ಕೋರಿ, ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ (Former Speaker Ramesh Kumar) ಮಾತ್ರ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮವಾದ ಎಚ್ಚರಿಕೆಯನ್ನು ನೀಡಿದರು. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಸುತ್ತಮುತ್ತ ಸೇರಿರುವವರ ಬಗ್ಗೆ ಸ್ವಲ್ಪ ಹುಷಾರಾಗಿರಿ. ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ. ನೀವು ನಿಮ್ಮ ಕುಟುಂಬಕ್ಕೆ, ಹೆಂಡ್ತಿ ಮಕ್ಕಳಿಗೆ ಸೇರಿದವರಲ್ಲ, ಇಡೀ ರಾಜ್ಯದ ಜನರಿಗೆ ಸೇರಿದವರು ಎಂದು ರಮೇಶ್​ ಕುಮಾರ್​ ಎಚ್ಚರಿಸಿದ್ದಾರೆ. ಪರೋಕ್ಷವಾಗಿ ಸಿದ್ದರಾಮಯ್ಯ ಆಪ್ತರಾಗಿರುವವರಿಗೆ ತಿರುಗೇಟು ಕೊಟ್ಟಿದ್ದಾರೆ.

ಸೂತಕದ ಮನೆಯಲ್ಲಿ ಇದೆಂಥಾ ಸಂಭ್ರಮ?

ಸಿದ್ದರಾಮಯ್ಯನವರ (Siddaramaiah) 75ನೇ ವರ್ಷದ ಹುಟ್ಟುಹಬ್ಬದ (75th birthday) ಪ್ರಯುಕ್ತ ಸಿದ್ದರಾಮೋತ್ಸವ  (Siddaramotsava) ಕಾರ್ಯಕ್ರಮ ನಡೆಯುತ್ತಿದೆ. ದಾವಣಗೆರೆಯ (Davanagere) ಶಾಮನೂರು ಪ್ಯಾಲೇಸ್‌ ಮೈದಾನದಲ್ಲಿ (Shamanuru Palace Ground) ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ. ಇತ್ತ ಬಿಜೆಪಿ ನಾಯಕರು ಸಿದ್ದರಾಮೋತ್ಸವದ ಬಗ್ಗೆ ಕಿಡಿಕಾರಿದ್ದಾರೆ. ಚಿಕ್ಕಮಗಳೂರಲ್ಲಿ ಮಾತಾಡಿದ ಶಾಸಕ ಸಿ.ಟಿ ರವಿ (C.T Ravi) ಅವರು ದೇವರು ಸಿದ್ದರಾಮಯ್ಯನವರಿಗೆ ಆಯಸ್ಸು-ಆರೋಗ್ಯ ಕೊಟ್ಟು ಕಾಪಾಡಲಿ ಎಂದ್ರು. ಸಿದ್ದುಗೆ ಶುಭಹಾರೈಸಿ, ಕೆಲ ಪ್ರಶ್ನೆಗಳನ್ನು ಕಾಂಗ್ರೆಸ್​ ಮುಂದಿಟ್ಟಿದ್ದಾರೆ.  ಎರಡ್ಮೂರು ದಿನದ ಮಳೆಗೆ 13 ಜನ ಅಕಾಲಿಕ ಮರಣ ಹೊಂದಿದ್ದಾರೆ. ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ? ಕಾಂಗ್ರೆಸ್ ಸಂವೇದನಾಶೀಲತೆ ಕಳೆದುಕೊಳ್ತಾ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಡಿ-ಹೊಗಳೋದು ಮಾನವೀಯತೆ ಇರೋರಿಗೆ ಶೋಭೆ ತರೋದಲ್ಲ ಎಂದ್ರು.

ದೀದಿ ಸಂಪುಟ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ?

2011 ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ (Chief Minister Mamata Banerjee) ಈಗಿನ ಸಂಪುಟ ವಿಸ್ತರಣೆ (Cabinet Expansion) ಅತಿದೊಡ್ಡ ಬೆಳವಣಿಗೆ ಎಂದು ಬಿಂಬಿಸಲಾಗಿದೆ. ಎಸ್​ಎಸ್​​ಸಿ ಹಗರಣದಿಂದ (SSC SCAM) ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಬಳಿಕ ದೀದಿ ಸಂಪುಟದಲ್ಲಿ ಐವರು ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಸಂಪುಟ ವಿಸ್ತರಣೆ ನಂತರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹೊಸಬರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಹೆಸರು ಬಾಬುಲ್ ಸುಪ್ರಿಯೊ. ಬಿಜೆಪಿಯ ಮಾಜಿ ಕೇಂದ್ರ ಸಚಿವರಾದ ಸುಪ್ರಿಯೊ ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಮನೆಗೆ ನುಗ್ಗಿ ಮಹಿಳೆಯನ್ನು ಎಳೆದೊಯ್ದ 15 ಪುರುಷರ ಗ್ಯಾಂಗ್

15 ಜನರ ಗುಂಪು (Mob of 15 Men) ಮನೆಗೆ ನುಗ್ಗಿ ಮಹಿಳೆಯನ್ನು ಅಪಹರಿಸಿರುವ (Woman Kidnapped) ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ. ಮಹಿಳೆಯನ್ನು ಕಿಡ್ನಾಪ್​ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗಳನ್ನು ಆಕೆಯನ್ನು ಹಿಂಬಾಲಿಸುತ್ತಿದ್ದರು. ಪ್ರಮುಖ ಆರೋಪಿ ತನ್ನ 14 ಸಹಚರರನ್ನು ತನ್ನೊಂದಿಗೆ ಬರುವಂತೆ ಕೇಳಿಕೊಂಡಿದ್ದಾನೆ. ನಂತರ ಎಲ್ಲರೂ ಮನೆಯ ಮನೆಯ ಬಳಿ ಜಮಾಯಿಸಿ ಆಕೆಯನ್ನು ಕಿಡ್ನ್ಯಾಪ್​ ಮಾಡಿದ್ದಾರೆ. ಈ ಘಟನೆಯು ತಮಿಳುನಾಡಿನ ಮೈಲಾಡುತುರೈನಲ್ಲಿ ವರದಿಯಾಗಿದೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ವರದಿಗಳ ಪ್ರಕಾರ, ಪ್ರಕರಣದ ಆರೋಪಿಯನ್ನು ವಿಘ್ನೇಶ್ವರನ್ ಎಂದು ಗುರುತಿಸಲಾಗಿದೆ. ಈ ಸಂಪೂರ್ಣ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹರ್ ಘರ್ ತಿರಂಗಾ ಎಂದ ರಾಕಿ ಭಾಯ್

ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಆಗಸ್ಟ್ 13-15ರ ವರೆಗೆ ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಕೋರಲಾಗಿದೆ. ಇದಕ್ಕೆ ಇದೀಗ ಸ್ಯಾಂಡಲ್​ವುಡ್​ನ ಸ್ಟಾರ್ ಯಶ್ ಕೂಡ ಕೈ ಜೋಡಿಸಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ. ಈಗಾಗಲೇ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಅಭಿಯಾನಕ್ಕೆ ಯಶ್​ ಸಹ ಸಾಥ್ ನೀಡಿದ್ದಾರೆ. ಈ ಕುರಿತು ನ್ಯಾಷನಲ್ ಸ್ಟಾರ್​ ಯಶ್​ ಸಹ ಟ್ವೀಟ್​ ಮಾಡಿದ್ದು, ‘ನಮ್ಮ ವೈವಿಧ್ಯತೆಯಲ್ಲಿ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವಾದ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ವೇಳೆ ನಮ್ಮ ರಾಷ್ಟ್ರದ ಗುರುತಾದ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ. ಆಗಸ್ಟ್ 13-15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸೋಣ‘ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಶ್​ ತಮ್ಮ ಅಭಿಮಾನಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮನವಿ ಮಾಡಿದ್ದಾರೆ.
Published by:Kavya V
First published: