Evening Digest: ಕೃಷಿ ಕಾನೂನು ರದ್ದು ಮಸೂದೆ ಪಾಸ್; ಸಂವಿಧಾನದ ಪಾಠ ಮಾಡಿದ ಹಂಸಲೇಖ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಕೃಷಿ ಕಾನೂನು ರದ್ದು ಮಸೂದೆ ಪಾಸ್ : ಕಳೆದ ಚಳಿಗಾಲದ ಸಂಸತ್​ ಅಧಿವೇಶನದಲ್ಲಿ (Winter Session) ಕೇಂದ್ರ ಸರ್ಕಾರ ಮಂಡಿಸಿದ್ದ ವಿವಾದಿತ ಮೂರು ಕೃಷಿ ಕಾನೂನು ರದ್ದತಿ ಮಸೂದೆ 2021  (Farm Laws Repeal Bill 2021) ಇಂದು ಲೋಕಸಭೆಯಲ್ಲಿ ಅಂಗೀಕರವಾಯಿತು. ಧ್ವನಿ ಮತದ ಮೂಲಕ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ( ಅವರು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಈ ಮಸೂದೆಯನ್ನು ಮಂಡಿಸಿದರು. ಆದರೆ, ಪ್ರತಿಪಕ್ಷಗಳು ಮಾತ್ರ ಯಾವುದೇ ಚರ್ಚೆಯಾಗದೇ ಮಸೂದೆ ಮಂಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ನಿರ್ಮಿಸಿದವು. ಆದರೆ, ಕೇಂದ್ರ ಸರ್ಕಾರ ಈ ಮಸೂದೆ ಕುರಿತು ಯಾವುದೇ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಸಂವಿಧಾನದ ಪಾಠ ಮಾಡಿದ ಹಂಸಲೇಖ

ಪೇಜಾವರ ಶ್ರೀಗಳ(Pejavara Sri) ಬಗ್ಗೆ ನೀಡಿದ ಹೇಳಿಕೆಯೊಂದು ಈಗ ನಾದಬ್ರಹ್ಮ ಹಂಸಲೇಖ(Hansalekha) ಅವರಿಗೆ ಊರುಳಾಗಿ ಪರಿಣಮಿಸಿದೆ. .ಹಂಸಲೇಖ ವಿರುದ್ಧ ಹಲವು ಬ್ರಾಹ್ಮಣ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ. ಇತ್ತ ಪೊಲೀಸರು(Police) ಸಹ ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯ ಕುರಿತು ಹಂಸಲೇಖ ಅವರ ವಿಚಾರಣೆ ನಡೆಸಲಾಯಿತು. ಬಡವರ ಗೀತೆಯೊಂದರ ಬಗ್ಗೆ ಸವಿಸ್ತಾರವಾದ ಗೀತೆಯೊಂದನ್ನು ರಚಿಸಿ ಸಂವಿಧಾನದ ಪಾಠ ಮಾಡಿದ್ದಾರೆ. ಸದ್ಯ ಈ ಗೀತೆಯೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವೆಂಬರ್ 26ರಂದು 'ಸಂವಿಧಾನ ದಿವಸ'ವನ್ನು ಆಚರಿಸಲಾಗಿದೆ. ಇದರ ನೆನಪಿಗಾಗಿ ಹಂಸಲೇಖ ಅವರು ಭಾರತದ ಬೃಹತ್ ಸಂವಿಧಾನದ ಬಗ್ಗೆ ಗೀತೆ ರಚಿಸಿದ್ದಾರೆ ಎನ್ನಲಾಗಿದೆಇನ್ನು ಹಂಸಲೇಖ ಸಂವಿಧಾನದ ಬಗ್ಗೆ ಬರೆದ ಈ ಸಾಲುಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವೇ ಧ್ವನಿ ನೀಡಿ ಶೇರ್ ಮಾಡಿಕೊಂಡಿದ್ದಾರೆ. ಈ ಸಾಲುಗಳು ಈಗ ವೈರಲ್ ಆಗುತ್ತಿದ್ದು, ಎರಡು ದಿನಗಳ ಹಿಂದೆ ರಚಿಸಿದ ಈ ಗೀತೆಯ ಬಗ್ಗೆ ಚರ್ಚೆಯಾಗುತ್ತಿದೆ. . ಇದೇ ಗೀತೆಯೀಗ ಹಂಸಲೇಖ ಬೆಂಬಲಿಗರ ಮೆಚ್ಚುಗೆ ಗಳಿಸುತ್ತಿದೆ.

U Turn ಹೊಡೆದ ಸಚಿವ Eshwarappa

ಸಚಿವ ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ (Chief Minister) ಆಗ್ತಾರೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿಕೆಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈಶ್ವರಪ್ಪ ತಮ್ಮ ಹೇಳಿಕೆಯಿಂದ ಯು ಟರ್ನ್​​ (U Turn) ತೆಗೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಚುನಾವಣೆ ಬರೋವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ನಾನು ಬದಲಾಗಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು. ನಿನ್ನೆ  ಬೀಳಗಿ ಪಟ್ಟಣದಲ್ಲಿ ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿ ಸಭೆಯ ಭಾಷಣದ ವೇಳೆ ಈಶ್ವರಪ್ಪ, ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ, ಅವರಿಗೆ ಶಕ್ತಿ ಇದೆ ಎಂದಿದ್ದರು. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ವೇದಿಕೆ ಮೇಲೆಯೇ ನಿರಾಣಿಗೆ ಪ್ರಶ್ನೆ ಮಾಡಿದ್ದರು. ಈಶ್ವರಪ್ಪ ಮಾತಿಗೆ ಸಂಸತ ವ್ಯಕ್ತಪಡಿಸಿದ ನಿರಾಣಿ ಸಕ್ಸಸ್ ಗುರುತು ತೋರಿ ನಕ್ಕಿದ್ದರು.

ಸಿದ್ದರಾಮಯ್ಯ ಸ್ವಯಂ ಘೋಷಿತ ಬುದ್ಧಿವಂತ: ಸಚಿವ Sriramulu ವ್ಯಂಗ್ಯ

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪರುಶುರಾಂಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಚಿವ ಶ್ರೀ ಬಿ. ರಾಮುಲು (B. Sriramulu) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದರು. ಸಚಿವ ಕೆ.ಎಸ್​.ಈಶ್ವರಪ್ಪರನ್ನು ಪೆದ್ದ ಎಂದು ಕರೆದಿರುವ ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ. ಅವರು ಒಬ್ಬ ವಕೀಲರು, ಬುದ್ದಿಜೀವಿಗಳು. ಮಾತನಾಡುವುದೇ ಅಭ್ಯಾಸವಾಗಿದೆ, ಸ್ವಯಂ ಘೋಷಿತ ಬುದ್ದಿವಂತ ಎಂದು ವ್ಯಂಗ್ಯವಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ 10% ಸರ್ಕಾರ ಎಂದು ನಾವು ಹೇಳಿದ್ದೆವು. ಕಾಂಗ್ರೆಸ್ ನಾಯಕರು ಪರ್ಸೆಂಟೇಜ್ ಪಿತಾಮಹರು. ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಜನ ಕಿಮ್ಮತ್ತು ಕೊಡಲ್ಲ ಎಂದು ಕುಹಕವಾಡಿದರು.

ಆನ್​ಲೈನ್​ನಲ್ಲೇ ಗಾಂಜಾ ಮಾರಾಟ  

ಆನ್​ಲೈನ್​ ಶಾಪಿಂಗ್​ ತಾಣವಾದ  ಇ – ಕಾಮರ್ಸ್ (E-commerce) ವೇದಿಕೆಯಲ್ಲಿ ಗಾಂಜಾ (Ganja) ಮಾರುತ್ತಿದ್ದ ಆರೋಪದ ಮೇಲೆ ತಂದೆ ಮಗ ಸೇರಿದಂತೆ ಐದು ಮಂದಿಯನ್ನು ವೈಜಾಗ್‍ನಲ್ಲಿ (vizag) ಬಂಧಿಸಲಾಗಿದೆ. ಆರೋಪಿಗಳು ವಿಶಾಖಪಟ್ಟಣದಿಂದ (Visakhapatnam) ಮಧ್ಯಪ್ರದೇಶಕ್ಕೆ (Madya Pradesh) ನಿಷೇಧಿತ ವಸ್ತುಗಳನ್ನು ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳನ್ನು ಸಿ ಹೆಚ್ ಶ್ರೀನಿವಾಸ ರಾವ್, ಜೆ ಕುಮಾರಸ್ವಾಮಿ, ಬಿ ಕೃಷ್ಣಂ ರಾಜು, ಸಿ ಎಚ್ ವೆಂಕಟೇಶ್ವರ ರಾವ್ ಮತ್ತು ಶ್ರೀನಿವಾಸ್ ರಾವ್ ಅವರ ಮಗ ಸಿ.ಎಚ್ ಮೋಹನ ರಾಜು ಅಲಿಯಾಸ್ ರಾಕಿ ಎಂದು ಗುರುತಿಸಲಾಗಿದ್ದು, ಎಲ್ಲರೂ ವಿಶಾಖಪಟ್ಟಣ ನಿವಾಸಿಗಳಾಗಿದ್ದಾರೆ.
Published by:Kavya V
First published: