Evening Digest: ಮಾ31ಕ್ಕೆ ರಾಜ್ಯಕ್ಕೆ ರಾಹುಲ್​ ಗಾಂಧಿ; ಕುಕ್ಕೆಗೆ ಪವನ್​ ಕಲ್ಯಾಣ್​ ಭೇಟಿ: ಈ ದಿನದ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ರಾಜ್ಯಕ್ಕೆ ರಾಹುಲ್​ ಗಾಂಧಿ
  ಮಾರ್ಚ್ 31ರಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಬಂದು ಇಲ್ಲಿಂದ ತುಮಕೂರಿಗೆ ತೆರಳಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ನಂತರ ಬಿಬಿಎಂಪಿ ವ್ಯಾಪ್ತಿಯ ನಾಯಕರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮರುದಿನ ಏಪ್ರಿಲ್ 1ರಂದು ಜಿಲ್ಲಾ ಪ್ರಮುಖರೊಂದಿಗೆ ಸಭೆ ನಡೆಸುತ್ತಾರೆ. ನಂತರ ಅತಿ ಹೆಚ್ಚು ಸಂಖ್ಯೆಯ ಸದಸ್ಯತ್ವ ಮಾಡಿಸಿದ ಪ್ರಮುಖರೊಂದಿಗೆ ಜೂಂ ಮೀಟಿಂಗ್ ನಲ್ಲಿ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.

  ಹೊಟೇಲ್​ನಲ್ಲಿ ಮಹಿಳೆ ಮೇಲೆ ಹಲ್ಲೆ
  ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಮಾಲೀಕತ್ವದ ಹೋಟೆಲ್ ನಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಮೈಸೂರಿನ ಹೈವೆ ಸರ್ಕಲ್ ನಲ್ಲಿರುವ ನಲಪಾಡ್ ಹೋಟೆಲ್ ನಲ್ಲಿ ಕೃತಿಕಾ ಗೌಡ ಎಂಬ ಯುವತಿ 20 ಲಕ್ಷ ಕೊಟ್ಟ ಲೀಸ್ ನಲ್ಲಿ ರೆಸ್ಟೋರೆಂಟ್​ ನಡೆಸುತ್ತಿದ್ದರು. ಇದಕ್ಕೆ ಕಸ್ತೂರಿ ರೆಸ್ಟೋರೆಂಟ್ ಎಂಬ ಹೆಸರಿಡಲಾಗಿತ್ತು. ಹೋಟೆಲ್​ ಉಸ್ತುವಾರಿ ಸಯ್ಯದ್ ರಿಯಾಜ್​ ) ಎಂಬಾತ ಹೋಟೆಲ್​ ಖಾಲಿ ಮಾಡುವಂತೆ ಜಗಳ ತೆಗೆದಿದ್ದಾನೆ. ಕೃತಿಕಾಗಳನ್ನು ಎಳೆದಾಡಿರೋ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಹೋಟೆಲ್​ ಗಲಾಟೆ ವಿಚಾರ ನನಗೆ ಗೊತ್ತಿಲ್ಲ. ಈಗಾಲೇ ವಿಷಯ ಗೊತ್ತಾಗಿದ್ದು, ಇಬ್ಬರ ಬಳಿಯೂ ಮಾತಾಡಿ ಸಮಸ್ಯೆ ಬಗೆಹರಿಸುವೇ. ಇದಕ್ಕೆ ಬೇರೆ ಆಯಾಮ ಕೊಡ್ಬೇಡಿ ಎಂದು ನಲಪಾಡ್​ ಹೇಳಿದ್ದಾರೆ.

  ಸ್ಕಾಲರ್​ಶಿಪ್​ ನಿಲ್ಲಿಸಲ್ಲ
  ವಿಧಾನಸೌಧದಲ್ಲಿ ಬಜೆಟ್​ ಅಧಿವೇಶನ ನಡೆಯುತ್ತಿದೆ. ವಿಧಾನಪರಿಷತ್​ನಲ್ಲಿ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಕ್ಕಳ ಸ್ಕಾಲರ್​ ಶಿಪ್ ವಿಚಾರವಾಗಿ ವಿಷಯ ಪ್ರಸ್ತಾಪಿಸಿದ್ರು. ಮಕ್ಕಳಿಗೆ ಸರ್ಕಾರ ನೀಡುತ್ತಿರೋ ಸ್ಕಾಲರ್​ ಶಿಪ್​ ನಿಲ್ಲಿಸುವ ಬಗ್ಗೆ ಬಿ.ಕೆ ಹರಿಪ್ರಸಾದ್​ ಬಸವರಾಜ್​ ಬೊಮ್ಮಾಯಿ ಅವ್ರನ್ನು ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಈ ಹಿಂದೆ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್​ಶಿಪ್​ ನಿಲ್ಲಿಸೋದಿಲ್ಲ, ಶಾದಿ ಮಹಲ್ ಮಾತ್ರ ನಿಲ್ಲಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

  ಟೀನಾ ಡಾಬಿ ಎರಡನೇ ಮದುವೆ
  2015ರಲ್ಲಿ ಐಎಎಸ್​ ಟಾಪರ್​​ ಆಗಿ ಹೊರ ಹೊಮ್ಮಿದ್ದ ಟೀನಾ ಡಾಬಿ (Tina Dabi), ವೈಯಕ್ತಿಕ ವಿಚಾರಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. 2018ರಲ್ಲಿ ತಮ್ಮದೇ ಬ್ಯಾಚ್​ನ ಎರಡನೇ ಟಾಪರ್ ಆಗಿದ್​ದ ಕಾಶ್ಮೀರಿ ಮುಸ್ಲಿಂ ಐಎಎಸ್​ ಅಥರ್​ ಅಮೀರ್​ ಅವರನ್ನು ಅವರು ವಿವಾಹವಾಗಿದ್ದರು. ಆದರೆ, ಕಳೆದ ವರ್ಷ ಇವರಿಬ್ಬರು ವಿಚ್ಛೇದನ ಪಡೆದಿದ್ದರು. ಇದೀಗ ಟೀನಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಟೀನಾ ಡಾಬಿ ಇದೀಗ 2013ರ ಬ್ಯಾಚ್​ನ ಐಎಎಸ್​ ಅಧಿಕಾರಿ ಪ್ರದೀಪ್​ ಗಾವಂಡೆ ಅವರನ್ನು ಎರಡನೇ ಮದುವೆ ಆಗಲು ಸಜ್ಜಾಗಿದ್ದಾರೆ. ಇಬ್ಬರು ನಿಶ್ಚಿತಾರ್ಥಕ್ಕೆ ಒಳಗಾಗಿರುವುದರನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಪ್ರಧಾನಿ ಸಂಗ್ರಹಾಲಯ ಉದ್ಘಾಟನೆ
  ದೇಶಕ್ಕೆ ಕೊಡುಗೆ ನೀಡಿದ 14 ಪ್ರಧಾನ ಮಂತ್ರಿಗಳು ಕೊಡುಗೆ ಸ್ಮರಿಸಲು ಎನ್​ಡಿಎ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕಾಗಿ ದೆಹಲಿಯ ನೆಹರೂ ಮ್ಯೂಸಿಯಂನಲ್ಲಿ ಪ್ರಧಾನ ಮಂತ್ರಿಗಳ ಸಂಗ್ರಹಾಲಯವನ್ನು ಆರಂಭಿಸಲಿದೆ. ಈ ಸಂಗ್ರಹಾಯಲದಲ್ಲಿ ದೇಶ ಆಡಳಿತ ನಡೆಸಿದ 14 ಪ್ರಧಾನ ಮಂತ್ರಿಗಳ ಕುರಿತು ಮಾಹಿತಿ ಸಿಗಲಿದೆ. ಇದೇ ಏಪ್ರಿಲ್​ 14ರಂದು ಈ ಪ್ರಧಾನ ಮಂತ್ರಿ ಸಂಗ್ರಹಾಲಯ ಉದ್ಘಾಟನೆ ಮಾಡಲಾಗುವುದು ಎಂದು ಬಿಜೆಪಿ ಮಾಹಿತಿ ನೀಡಿದೆ.

  ಕುಕ್ಕೆಗೆ ಭೇಟಿ ನೀಡಿದ ಪವನ್ ಕಲ್ಯಾಣ್​​
  ತೆಲುಗು ನಟ, ರಾಜಕಾರಣಿ ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ, ಕ್ಷೇತ್ರಲ್ಲಿ ಆಶ್ಲೇಷ ಬಲಿ ಪೂಜೆ, ಆದಿ ಸುಬ್ರಹ್ಮಣ್ಯದ ಹುತ್ತಕ್ಕೆ ವಸ್ತ್ರ ಸಮರ್ಪಿಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯಿಂದ ನಟ ಪವನ್ ಕಲ್ಯಾಣ್ ಅವರನ್ನು ಸನ್ಮಾನಿಸಲಾಯಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ‌ಅವರು ಸನ್ಮಾನಿಸಿದರು. ಪ್ರತೀ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯವನ್ನು ಅನುಸರಿಸರಿಸುವಂತೆ ಆಗಬೇಕು. ಇದರಿಂದ ಪರಿಸರ ಸ್ವಚ್ಛತಾ ಜಾಗೃತಿ ಸಾಧ್ಯ ಎಂದು ಅವರು ಹೇಳಿದರು.
  Published by:Seema R
  First published: