Evening Digest: ಕೆಜಿಎಫ್‌ ನಟನಿಗೆ ಆಕ್ಸಿಡೆಂಟ್‌, ಕನ್ಹಯ್ಯ ಲಾಲ್ ಅಂತ್ಯಕ್ರಿಯೆ; ಇತ್ತ ಮಾವನನ್ನೇ ಕೊಂದ ಅಳಿಯ -ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕೆಜಿಎಫ್ ನಟನ ಕಾರು ಅಪಘಾತ, ಸಂಪೂರ್ಣ ನಜ್ಜುಗುಜ್ಜಾದ ಐಷಾರಾಮಿ ಕಾರು

ಭಾರತೀಯ ಚಿತ್ರರಂಗವೇ ಸ್ಯಾಂಡಲ್​ ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್​ ಯಶ್ ಅಭಿನಯದ ಕೆಜಿಎಫ್ ಮತ್ತು KGF 2 ಚಿತ್ರವು ಈಗಾಗಳೇ ಬಿಡುಗಡೆಯಾಗಿ ಎಲ್ಲಡೆ ಅಬ್ಬರಿಸಿದೆ. ಈ ಚಿತ್ರ ನಿರ್ಮಿಸಿದ ದಾಖಲೆಗಳು ಒಂದಲ್ಲಾ ಎರಡಲ್ಲಾ. ಸಾಲು ಸಾಲು ದಾಖಲೆಗಳನ್ನು ಪುಡಿಗಟ್ಟಿರುವ ಕೆಜಿಎಫ್ 2 ಚಿತ್ರದಲ್ಲಿ ಪ್ರತಿಯೊಬ್ಬರ ಶ್ರಮವೂ ಮಹತ್ವದ್ದಾಗಿದೆ. ಯಶ್ (Yash) ನಟರಾಗಿ ಅಬ್ಬರಿಸಿದರೆ, ಅವರ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಕ್ಯಾಮರಾಮನ್ ಭುವನ್ ಗೌಡ ಹೀಗೆ ಎಲ್ಲರ ಶ್ರಮದ ಭಾಗವಾಗಿ ಸಿದ್ದವಾಗಿದ್ದೆ ಈ ಕೆಜಿಎಫ್  ಎಂಬ ಚಿತ್ರ. ಇದರ ಯಶಸ್ಸಿನ ಹಿಂದೆ ಇವರಗಳಷ್ಟೇ ಅಲ್ಲದೇ ಖಳನಟರೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದರಲ್ಲಿಯೂ ಬಿಎಸ್ ಅವಿನಾಶ್ (BS Avinash) ಅವರ ಪಾತ್ರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಇಂದು ಅವರ ಕಾರಿಗೆ ಅಪಘಾತವಾಗಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ  ಎಂದು ತಿಳಿದುಬಂದಿದೆ.

ಬಿಗಿ ಭದ್ರತೆಯಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ

ರಾಜಸ್ಥಾನ: ನಿನ್ನೆ ಇಬ್ಬರು ವ್ಯಕ್ತಿಗಳಿಂದ ಹತ್ಯೆಗೆ ಒಳಗಾದ ರಾಜಸ್ಥಾನದ (Rajasthan) ಉದಯಪುರದ (Udaipur) ಟೈಲರ್ (Tailor) ಕನ್ಹಯ್ಯಾ ಲಾಲ್ (Kanhaiya Lal) ಅವರ ಅಂತ್ಯಕ್ರಿಯೆಯು (Funeral) ಇಂದು ನಡೆಯಿತು. ತೀವ್ರ ಬಿಗಿ ಪೊಲೀಸ್ ಭದ್ರತೆಯಲ್ಲಿ (Police Security) ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ನೆರವೇರಿಸಲಾಯ್ತು. ಈ ವೇಳೆ ಅವರ ಕುಟುಂಬಸ್ಥರಷ್ಟೇ (Family) ಅಲ್ಲದೇ, ಗ್ರಾಮಸ್ಥರು, ಅಪಾರ ಸಂಖ್ಯೆಯ ಸಾರ್ವಜನಿಕರು, ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿದಂತೆ ಅಪಾರ ಜನ ಸೇರಿದ್ದರು. ಅಂತ್ಯ ಕ್ರಿಯೆ ವೇಳೆ ಕನ್ಹಯ್ಯ ಲಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಪತ್ನಿ (Wife), ತಮ್ಮ ಗಂಡನನ್ನು ಹತ್ಯೆ ಮಾಡಿದ ಹಂತಕರಿಗೆ ಮರಣ ದಂಡನೆ (sentenced to death) ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ: Udaipur Murder Case: ಬಿಗಿ ಭದ್ರತೆಯಲ್ಲಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ, ಹಂತಕರಿಗೆ ಮರಣ ದಂಡನೆ ನೀಡುವಂತೆ ಪತ್ನಿ ಆಗ್ರಹ

ಟೈಲರ್ ಹತ್ಯೆ ಕೇಸ್ ತನಿಖೆ ಹೊಣೆ ಎನ್ಐಎ ಹೆಗಲಿಗೆ

ಉದಯಪುರ, ರಾಜಸ್ಥಾನ: ಮತಾಂಧರ ಕ್ರೌರ್ಯಕ್ಕೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಬಡ ಟೈಲರ್‌ನೊಬ್ಬ (Tailor) ಬಲಿಯಾಗಿದ್ದಾನೆ. ಮತಾಂಧರ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟೈಲರ್ ಕನ್ಹಯ್ಯ ಲಾಲ್ (Kanhaiah Lal) ಕೊಲೆಯನ್ನು (Murder) ಪಕ್ಷಬೇಧ ಮರೆತು ರಾಜಕಾರಣಿಗಳೆಲ್ಲ (Politicians)  ಖಂಡಿಸಿದ್ದಾರೆ. ಈ ಹತ್ಯೆ ಹಿಂದೆ ಐಸಿಸ್ ಉಗ್ರರ (ISIS Terrorist) ನೆರಳು ಇರುವ ಶಂಕೆ ವ್ಯಕ್ತವಾಗಿದೆ. ಇದೀಗ ಈ ಮರ್ಡರ್‌ ಕೇಸ್‌ (Murder Case) ತನಿಖೆ (Investigation) ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (National Investigation Agency) ನೀಡಿ ಕೇಂದ್ರ ಗೃಹ ಸಚಿವಾಲಯ (Union Home Ministry) ಆದೇಶ ನೀಡಿದೆ.

Murder: ಸಂಧಾನಕ್ಕೆ ಕರೆಸಿ ಮಾವನಿಗೆ ಬೆಂಕಿ ಇಟ್ಟ ಪಾಪಿ ಅಳಿಯ!

ಯಾದಗಿರಿ: ಹೆಣ್ಣು ಕೊಟ್ಟ ಮಾವ (Father-in-Law) ಕಣ್ಣು ಕೊಟ್ಟ ದೇವರಿಗೆ (God) ಸಮಾನ ಅಂತಾರೆ. ಆದ್ರೆ ಇಲ್ಲಿ ಬುದ್ದಿ ಮಾತು ಹೇಳಿದ ಮಾವನ ಜೊತೆಗೆ  ಸಂಬಂಧಿಕರಿಗೆ (Relatives) ಪಾಪಿ ಅಳಿಯ (Son-in-Law) ಬೆಂಕಿ ಹಚ್ಚಿ ಪಾಪಿ ಕೃತ್ಯ ಎಸಗಿದ್ದಾನೆ. ಯಾದಗಿರಿ: ಹೆಣ್ಣು ಕೊಟ್ಟ ಮಾವ (Father-in-Law) ಕಣ್ಣು ಕೊಟ್ಟ ದೇವರಿಗೆ (God) ಸಮಾನ ಅಂತಾರೆ. ಆದ್ರೆ ಇಲ್ಲಿ ಬುದ್ದಿ ಮಾತು ಹೇಳಿದ ಮಾವನ ಜೊತೆಗೆ  ಸಂಬಂಧಿಕರಿಗೆ (Relatives) ಪಾಪಿ ಅಳಿಯ (Son-in-Law) ಬೆಂಕಿ ಹಚ್ಚಿ ಪಾಪಿ ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: Murder: ಸಂಧಾನಕ್ಕೆ ಕರೆಸಿ ಮಾವನಿಗೆ ಬೆಂಕಿ ಇಟ್ಟ ಪಾಪಿ ಅಳಿಯ! ನೋಡ ನೋಡುತ್ತಲೇ ಇಬ್ಬರ ಸಜೀವ ದಹನ

ಬಿಗ್ ಬಾಸ್ ಸ್ಪರ್ಧಿಗೆ ಕೊಲೆ ಬೆದರಿಕೆ; ಸಿಧು ಮೂಸೆವಾಲಾರಂತೆಯೇ ಗುಂಡಿಕ್ಕುವೆ ಎಂದ ಆರೋಪಿ

ಮಾಜಿ ಬಿಗ್ ಬಾಸ್ ಸ್ಪರ್ಧಿಯೋರ್ವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. 'ಬಿಗ್ ಬಾಸ್ 10' ರ ಸ್ಪರ್ಧಿ ಮನು ಪಂಜಾಬಿ (Manu Punjabi Life Threat) ತಮಗೆ ಕೊಲೆ ಬೆದರಿಕೆ ಬಂದಿರುವುದಾಗಿ ತಿಳಿಸಿದ್ದಾರೆ.  ಇತ್ತೀಚಿಗಷ್ಟೇ ಪಂಜಾಬಿ ರಾಪರ್ ಸಿಧು ಮೂಸೆವಾಲಾ (Sidhu Moose Wala) ಅವರಂತೆ ನನ್ನನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಮನು ಪಂಜಾಬಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ರೀತಿ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಈಗ  ಪೊಲೀಸರು ಬಂಧಿಸಿದ್ದು ರಕ್ಷಣ ನೀಡಿದ್ದಕ್ಕಾಗಿ ಮನು ಪಂಜಾಬಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ವರದಿಗಳ ಪ್ರಕಾರ  ಹಣ ಕೊಡದೇ ಇದ್ದಲ್ಲಿ ಸಿದ್ದು ಮೂಸೆವಾಲಾ ಅವರಂತೆ ಗುಂಡಿಕ್ಕಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಲಾಗಿತ್ತು.
Published by:Annappa Achari
First published: