• Home
 • »
 • News
 • »
 • state
 • »
 • Evening Digest: ಮತ್ತೊಂದು ಲಸಿಕೆಗೆ ದೇಶದಲ್ಲಿ ಅನುಮತಿಯಿಂದ ಟಿ20 ವಿಶ್ವಕಪ್​ ದಿನಾಂಕ ಪ್ರಕಟದವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

Evening Digest: ಮತ್ತೊಂದು ಲಸಿಕೆಗೆ ದೇಶದಲ್ಲಿ ಅನುಮತಿಯಿಂದ ಟಿ20 ವಿಶ್ವಕಪ್​ ದಿನಾಂಕ ಪ್ರಕಟದವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ ಮತ್ತು ವಿದೇಶದಲ್ಲಿ ಈ ದಿನ ನಡೆದ ಬೆಳವಣಿಗೆ ಕುರಿತು ಓದಲೇಬೇಕಾದ ಸುದ್ದಿಗಳು

 • Share this:

  ಗೊಂದಲಕ್ಕೆ ತೆರೆಏಳೆದ ಸಿಎಂ
  ಶಿಕ್ಷಣ ಸಚಿವ ಸುರೇಶ್​ ಕುಮಾರ್​​​ ಅವರು ಜುಲೈ 19, 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದು ಘೋಷಿದ ಬೆನ್ನಲ್ಲೇ ಸಂಪುಟದಲ್ಲಿನ ಸಮನ್ವಯತೆ ಕೊರತೆ ಬಹಿರಂಗಗೊಂಡಿತ್ತು. ಸಚಿವ ಸುರೇಶ್​ ಕುಮಾರ್​​ ಘೋಷಣೆ ನಂತರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಸುಧಾಕರ್​​ 10ನೇ ತರಗತಿ ಪರೀಕ್ಷೆ ಘೋಷಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದರು. ಶಿಕ್ಷಣ ಸಚಿವರಾಗಲಿ ಮತ್ತೊಬ್ಬರಾಗಲಿ ನನ್ನ ಜೊತೆ ಈ ಬಗ್ಗೆ ಚರ್ಚಿಸಿಲ್ಲ. ನನ್ನ ಗಮನಕ್ಕೆ ಇದು ಬಂದೇ ಇಲ್ಲ ಎಂಬ ಹೇಳಿಕೆ ಸರ್ಕಾರಕ್ಕೆ ಇರಿಸುಮುರಿಸು ತರಿಸಿತ್ತು. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ-ಆರೋಗ್ಯ ಇಲಾಖೆ ಸಚಿವರ ನಡುವೆಯೇ ಸಮನ್ವಯತೇ ಇಲ್ಲವೇ? ಎಂಬ ವಿಚಾರ ಸೋಮವಾರ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಿಗೆ ಈ ವಿವಾದದ ಕುರಿತು ಸಿಎಂ ಬಿ.ಎಸ್​. ಯಡಿಯೂರಪ್ಪ ಇಂದು ಸ್ಪಷ್ಟನೆ ನೀಡಿದ್ದಾರೆ.


  ಕಾಂಗ್ರೆಸ್​ನಲ್ಲಿ ಬಣಗಳಿಲ್ಲ; ಸಿದ್ದರಾಮಯ್ಯ
  ಕಾಂಗ್ರೆಸ್​ ಪಕ್ಷದಲ್ಲಿ ಒಳ ಜಗಳ ಇಲ್ಲ. ಎಲ್ಲವೂ ಮಾಧ್ಯಮದ ಸೃಷ್ಟಿ. ಏನೇ ಇದ್ರು ಸಹ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೀವಿ. ನಿಮಗೆ ಹೇಳಕ್ಕೆ ಆಗಲ್ಲ. ಯಾವುದೇ ವಿಚಾರಕ್ಕೂ ನಾನು ರಿಯಾಕ್ಟ್ ಮಾಡಲ್ಲ. ಎಲ್ಲಿ ಚರ್ಚೆ ಮಾಡಬೇಕೋ ಅಲ್ಲಿ ಮಾಡ್ತೀನಿ. ನಿಮ್ಮ ಮುಂದೆ ಚರ್ಚೆ ಮಾಡಲ್ಲ. ಇನ್ನೂ ಕಾಂಗ್ರೆಸ್​ನಲ್ಲಿ ಸಮನ್ವಯತೆ ಇಲ್ಲ ಎಂದು ಯಾರು ಹೇಳಿದ್ದು?, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನೀವು ಸೃಷ್ಟಿ ಮಾಡ್ತಿದ್ದೀರಾ. ಸಮನ್ವಯ ಸಮಿತಿ ಮಾಡಿದ್ರೆ ನಿಮಗೆ ಹೇಳ್ತಾರೆ ಬಿಡಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ


  ದೆಹಲಿಯಲ್ಲಿ ರಮೇಶ್​ ಜಾರಕಿಹೊಳಿ
  ಸಿಎಂ ಬಿ.ಎಸ್​.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರಮೇಶ್​ ಜಾರಕಿಹೊಳಿ, ಸದ್ಯಕ್ಕೆ ಏನು ಮಾತನಾಡುವುದಿಲ್ಲ ಆಮೇಲೆ ಮಾತನಾಡುವೆ ಎಂದಷ್ಟೇ ಮಾಧ್ಯಮಗಳಿಗೆ ತಿಳಿಸಿ ಹೊರಟರು. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಸಲಹೆ ಮೇರೆಗೆ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರಂತೆ. ರಮೇಶ್ ಜಾರಕಿಹೊಳಿ ಮತ್ತು ಹೈಕಮಾಂಡ್ ನಾಯಕರ ನಡುವೆ ಫಡ್ನವಿಸ್ ಅವರು ಸಮನ್ವಯ ಸಾಧಿಸುತ್ತಿದ್ದಾರೆ ಎನ್ನಲಾಗುತ್ತಿದೆ.


  ಮತ್ತೊಂದು ಲಸಿಕೆಗೆ ಅನುಮತಿ
  ಕೋವ್ಯಾಕ್ಸಿನ್​​, ಕೋವಿಶೀಲ್ಡ್​​ ಹಾಗೂ ಸ್ಪುಟ್ನಿಕ್​ ಕೊರೊನಾ ಲಸಿಕೆ ಬಳಿಕ ಭಾರತದಲ್ಲಿ ಮತ್ತೊಂದು ವ್ಯಾಕ್ಸಿನ್​ಗೆ ಅನುಮತಿ ಸಿಕ್ಕಿದೆ. ದೇಶದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಅವರ ಕೋವಿಡ್ ಲಸಿಕೆಯನ್ನ ಆಮದು ಮಾಡಿಕೊಳ್ಳಲು ಮುಂಬೈ ಮೂಲದ ಕಂಪನಿ ಸಿಪ್ಲಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ. ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಔಷಧ ಕಂಪನಿ ಸಿಪ್ಲಾ, ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಕೊರೊನಾ ವೈರಸ್ ಲಸಿಕೆಯನ್ನ ಆಮದು ಮಾಡಿಕೊಳ್ಳಲು ಡಿಸಿಜಿಐ ಅನುಮತಿಯಿಂದ ಪಡೆದುಕೊಂಡಿದೆ.


  ಜು. 19ರಿಂದ ಮುಂಗಾರು ಅಧಿವೇಶನ?
  ಕೋವಿಡ್ ಎರಡನೇ ಅಲೆ ಸೋಂಕು ಕಡಿಮೆಯಾಗಿರುವ ಹಿನ್ನಲೆ ಮುಂಗಾರು ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ ಸಂಸದೀಯ ಸಮಿತಿ ಶಿಫಾರಸ್ಸು ಮಾಡಿದೆ. ಇದೇ ಜುಲೈ 19ರಿಂದ ಆಗಸ್ಟ್​ 13ರವರೆಗೆ 20 ದಿನಗಳ ಕಾಲ ಮುಂಗಾರು ಅಧಿವೇಶನ ನಡೆಸುವಂತೆ ಸಮಿತಿ ಸಲಹೆ ನೀಡಿದೆ. ಈ ಕುರಿತು ಸಂಸದೀಯ ವ್ಯವಹಾರ ಕ್ಯಾಬಿನೆಟ್​ ಕಳೆದ ವಾರ ಈ ಕುರಿತು ಸಭೆ ನಡೆಸಿದ್ದು, ಈ ಸಂಬಂಧ ಪ್ರಧಾನಿ ಮೋದಿ ಅವರಿಂದ ಅಂತಿಮ ಅನುಮೋದನೆಗೆ ನಿರೀಕ್ಷೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.


  ಇನ್ನು 10ದಿನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ
  ಇನ್ನು 10 ದಿನದೊಳಗೆ ರಾಜ್ಯದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ಆಯಾ ಕಾಲೇಜು ಪ್ರಾಂಶುಪಾಲರಿಗೆ ನೀಡಲಾಗುವುದು ಎಂದು ಡಿಸಿಎಂ ಅಶ್ವಥ್​ನಾರಾಯಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ ಸಿಗುವಂತೆ ನೋಡಿಕೊಳ್ಳಲಾಗುವುದು. ಈಗಾಗಲೇ ಲಸಿಕೆಯನ್ನು ಸಮಪರ್ಕವಾಗಿ ರಾಜ್ಯ ನೀಡುತ್ತಿದೆ. ದೇಶದಲ್ಲಿಯೇ ನಾವು ಲಸಿಕೆ ನೀಡುವಿಕೆಯಲ್ಲಿ ಮೂರನೇ ಸ್ಥಾನದಲ್ಲಿ ಕರ್ನಾಟಕವಿದೆ ಎಂದು ಅವರು ತಿಳಿಸಿದರು.


  ಟಿ20 ವಿಶ್ವಕಪ್​ ದಿನಾಂಕ ಪ್ರಕಟ
  ಈ ವರ್ಷದ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುಎಇನಲ್ಲಿ ನಡೆಯಲಿದೆ ಎಂಬ ಪ್ರಕಟಣೆಯ ಬೆನ್ನಲ್ಲೇ, ಪಂದ್ಯಾವಳಿ ಆರಂಭದ ದಿನಾಂಕವನ್ನು ಐಸಿಸಿ ಪ್ರಕಟಿಸಿದೆ. ಅದರಂತೆ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್​ಗೆ ಚಾಲನೆ ದೊರೆಯಲಿದ್ದು, ನವೆಂಬರ್​ 14ರಂದು ಫೈನಲ್ ಪಂದ್ಯ ನಡೆಯಲಿದೆ. ಕೊರೋನಾ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಈ ಬಾರಿಯ ಐಪಿಎಲ್ ಪಂದ್ಯಾವಳಿ ಇದೇ ಅರಬ್ ನಾಡಿನಲ್ಲಿ ಮುಂದುವರಿಯಲಿದೆ. ಐಪಿಎಲ್ ಫೈನಲ್ ನಡೆದ ಎರಡೇ ದಿನಕ್ಕೆ ಟಿ20 ವರ್ಲ್ಡ್ ಕಪ್ ಆರಂಭಗೊಳ್ಳುತ್ತಿರುವುದು ಗಮನಾರ್ಹ.

  Published by:Seema R
  First published: