Evening Digest: ಸ್ಕೂಲ್ ಮಕ್ಕಳ ಜಗಳದಲ್ಲಿ ಬಾಂಬ್ ಎಸೆತ: ಲಡ್ಡು ಜೊತೆ ಭಕ್ತನಿಗೆ ಸಿಗ್ತು 2 ಲಕ್ಷ ಹಣ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸ್ಕೂಲ್​ ಮಕ್ಕಳ ಜಗಳದಲ್ಲಿ ಬಾಂಬ್​ ಎಸೆತ: ವಿದ್ಯಾರ್ಥಿಗಳ ಗ್ಯಾಂಗ್​ ವಾರ್​ (Students Gang War) ಹೊಸದೇನು ಅಲ್ಲ. ಕಾಲೇಜುಗಳಲ್ಲಿ 2 ಗುಂಪುಗಳ ಮಧ್ಯೆ ಗಲಾಟೆಗಳಾಗುವುದನ್ನೂ ನೋಡಿದ್ದೇವೆ. ಆದರೆ ಶಾಲಾ ಮಟ್ಟದಲ್ಲಿ ಹುಡುಗರ ಗ್ಯಾಂಗ್ ವಾರ್​ ನಡೆಯುತ್ತೆ ಎಂದರೆ ನಿಜಕ್ಕೂ ನಂಬಲು ಅಸಾಧ್ಯ. ಆದರೆ ಇದು ಸತ್ಯವಾಗಿದೆ. ಶಾಲಾ ಹುಡುಗರ ಗುಂಪುಗಳ (School Students Gangs) ಮಧ್ಯೆ ನಡೆದ ಗಲಾಟೆಯಲ್ಲಿ ಬಾಂಬ್​ (Bombs) ಅನ್ನು ಸಹ ಬಳಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸ್ಕೂಲ್​ ಮಕ್ಕಳ ಗ್ಯಾಂಗ್​ ವಾರ್​ ನಡೆದಿರೋದು ಉತ್ತರ ಪ್ರದೇಶದಲ್ಲಿ.  ಐದು ಪ್ರತಿಷ್ಠಿತ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ನಗರದಲ್ಲಿ ಮೂರು ಗುಂಪುಗಳನ್ನು ರಚಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಆರು ಕಚ್ಚಾ ಬಾಂಬ್ ಸ್ಫೋಟಗನ್ನೂ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Students Gang War: ಶಾಕಿಂಗ್; ಶಾಲಾ ಮಕ್ಕಳ ಗ್ಯಾಂಗ್ ವಾರ್​​ನಲ್ಲಿ ಬಾಂಬ್​ಗಳ ಎಸೆತ! ಬಾಂಬ್​ ಅನ್ನೂ ಅವರೇ ತಯಾರಿಸಿದ್ದರು

14ರ ಹುಡುಗನೊಂದಿಗೆ ಪರಾರಿಯಾಗಿದ್ದ 34ರ ಆಂಟಿ ಸಿಕ್ಕಿಬಿದ್ದಳು!

ಕಳೆದ ವಾರ, ಆಂಧ್ರಪ್ರದೇಶ (Andhra Pradesh)ದ ಗುಡುವಾಡ ಪಟ್ಟಣದ ಗುಡ್‍ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳು (Women) ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿದ್ದಳು. ಬಾಲಕ (Boy), ಆಂಟಿ  ಮೊಬೈಲ್ (Mobile) ಎರಡು ಸ್ವಿಚ್ಛ್ ಆಫ್ ಆಗಿತ್ತು. ಮಹಿಳೆಯನ್ನು 34 ವರ್ಷದ ಸ್ವಪ್ನಾ ಎಂದು ಗುರುತಿಸಲಾಗಿತ್ತು. ಮದುವೆಯಾಗಿ ನಾಲ್ವರು ಮಕ್ಕಳಿದ್ದರೂ, 8ನೇ ತರಗತಿ ಓದುತ್ತಿದ್ದು ಎದುರು ಮನೆಯ ಬಾಲಕನೊಂದಿಗೆ ಓಡಿ ಹೋಗಿರುತ್ತಾಳೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂದು ಊರಿನವರು ಮಾತನಾಡಿಕೊಂಡಿದ್ರು. ಈಗ ಪ್ರಕರಣವನ್ನು ಭೇದಿಸಿದ ಪೊಲೀಸರು (Police) ಮಹಿಳೆಯನ್ನು ಬಂಧಿಸಿದ್ದಾರೆ (Arrested). ಬಾಲಕನ ಪೋಷಕರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ನ್ಯೂಸ್ ಗೊತ್ತಾಗಿದೆ.

ಲಡ್ಡು ಜೊತೆ ಭಕ್ತನಿಗೆ ಸಿಗ್ತು 2 ಲಕ್ಷ ಹಣ

ಮಲೆಮಹದೇಶ್ವರ ದೇಗುಲದಲ್ಲಿ (Mahadeshwara Betta Temple)  ನಿನ್ನೆ (ಗುರುವಾರ) ಭೀಮನ ಅಮವಾಸ್ಯೆ ಪ್ರಯುಕ್ತ ದೇಗುಲಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ರಾಜಗೋಪುರದ ಬಳಿ ವಿಶೇಷ ದರ್ಶನ ಕೌಂಟರ್​ನಲ್ಲಿ (Special Darshan Counter) ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ (Worker) ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್​ನ ಜೊತೆಗೆ 2.91 ಲಕ್ಷ ರೂ ಹಣವನ್ನೂ ಭಕ್ತನೋರ್ವನಿಗೆ (Devote) ಒಪ್ಪಿಸಿದ್ದಾರೆ. ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾಗಿದೆ. ಪ್ರಸಾದದ ಚೀಲದ ಜೊತೆಗೆ ಹಣವಿದ್ದ ಚೀಲವನ್ನು ಭಕ್ತನಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿದ್ದಾನೆ. ವಿಶೇಷ ದರ್ಶನಕ್ಕೆ ಟಿಕೆಟ್ ಹಾಗೂ ಪ್ರಸಾದ ನೀಡಲು ಕುಳಿತಿದ್ದ ಸಿಬ್ಬಂದಿ, ಲಾಡು ಪ್ರಸಾದದ ಚೀಲಗಳನ್ನು (Ladu Prasada Bag) ತುಂಬಿದ್ದ ಬಕೆಟ್‌ ಪಕ್ಕದಲ್ಲೇ ಹಣದ ಚೀಲಗಳನ್ನು ಇಟ್ಟಿದ್ದ ಈ ವೇಳೆ ಪ್ರಸಾದ ನೀಡೋ ಬರದಲ್ಲಿ ಹಣದ ಚೀಲವನ್ನು ಭಕ್ತನಿಗೆ ನೀಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Chamarajanagar: ಮಲೆಮಹದೇಶ್ವರ ಬೆಟ್ಟದಲ್ಲಿ ಲಡ್ಡು ಜೊತೆ ಭಕ್ತನಿಗೆ ಸಿಗ್ತು 2 ಲಕ್ಷ ಹಣ!

ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ?

ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು (Praveen Nettar) ಅವರ ಹತ್ಯೆ ಬಗ್ಗೆ ಅವರ ಸಹೋದರ ರಂಜಿತ್ (Ran)​ ಸ್ಫೋಟಕ ಮಾಹಿತಿ ನೀಡಿದ್ದು, ಪ್ರವೀಣ್ ನೆಟ್ಟಾರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಕೂಡಲೇ ಬೆದರಿಕೆ ಕರೆಗಳು (Threatening Calls) ಬರುತ್ತಿದ್ದವು. ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇನ್ನು, ಚಿಕನ್, ಮಟನ್​, ಮೀನು ಮಾರಾಟ ದಂಧೆ ಮುಸ್ಲಿಮರ ಹಿಡಿತದಲ್ಲಿದ್ದು, ಹಿಂದೂಗಳು ಈ ವ್ಯಾಪಾರಕ್ಕೆ ಇಳಿದಿರುವುದು ಮತ್ತು 9 ತಿಂಗಳ ಹಿಂದೆ ಪ್ರವೀಣ್​ ಚಿಕನ್ ಅಂಗಡಿ (Chicken Shop) ತೆರೆದಿದ್ದು ಅವರಿಗೆ ಇಷ್ಟವಾಗಿಲ್ಲ. ಕೊಲೆಯ ಹಿಂದೆ ದೊಡ್ಡ ಜಾಲವಿದೆ ಎಂದು ಪ್ರವೀಣ್ ಹೋದರನ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಾಕ್ಸಾಫೀಸ್​ನಲ್ಲಿ ವಿಕ್ರಾಂತ್​ ರೋಣನ ದರ್ಬಾರ್​!

ಸ್ಯಾಂಡಲ್​ವುಡ್​ನ (Sandalwood) ಕಿಚ್ಚ ಸುದೀಪ್​ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ   ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಬಾಕ್ಸ್ ಆಫೀಸ್​ನಲ್ಲಿ ಕಿಚ್ಚನ ಅಬ್ಬರ ಪ್ರಾರಂಭವಾಗಿದೆ. ವಿಕ್ರಾಂತ್​ ರೋಣ ಸಂಪೂರ್ಣ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರತಂದಿದೆ. ಆದರೂ ಕಿಚ್ಚನ ಅಬ್ಬರಕ್ಕೆ ಯಾವುದೇ ಕೊರತೆ ಆಗಲಿಲ್ಲ. ಈ ಬಾರಿ ಕಿಚ್ಚ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದಾರೆ. ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ರಿಪೋರ್ಟ್​ ಹೊರಬಿದಿದ್ದು, ಸುದೀಪ್ ವೈತ್ತಿ ಜೀವನದಲ್ಲಿ ಇದೊಂದು ಬ್ಲಾಕ್​ಬಸ್ಟರ್​ ಸಿನಿಮಾ ಆಗಿ ಹೊರಹೊಮ್ಮಿದೆ. ಮೂಲಗಳ ಪ್ರಕಾರ ಚಿತ್ರವು ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ.
Published by:Kavya V
First published: