Evening Digest: ಕುಮಾರಸ್ವಾಮಿ ವಯಸ್ಸಿನ ಬಗ್ಗೆ ಡಿಕೆಶಿ ವ್ಯಂಗ್ಯ: ಸೆಕ್ಸ್​​ಗೆ ಪೀಡಿಸಿದ ಹೆಂಡತಿ ವಿರುದ್ಧ ದೂರು: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕುಮಾರಸ್ವಾಮಿಗೆ ಇನ್ನೂ ವಯಸ್ಸಿದೆ ಎಂದ ಡಿಕೆಶಿ:  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)​ ಮೇಕೆದಾಟು(Mekedatu) ಪಾದಯಾತ್ರೆ ಮೂಲಕ ಜನರಿಗೆ ಮಕ್ಮಲ್​ ಟೋಪಿ ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಟ್ವೀಟ್​ ಮೂಲಕ ಟೀಕಿಸಿದ್ದರು. ಇದಕ್ಕೆ ಡಿಕೆಶಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ರು.  ನನಗೆ ಎಚ್​ಡಿಕೆ ಜೊತೆ ಕಾಂಪಿಟ್​​​ ಮಾಡುವ ಶಕ್ತಿ ಇಲ್ಲ. ರಾಜಕಾರಣದಲ್ಲಿ ಯಾರು ಬೇಕಾದರು ಮಾಡಬಹುದು. ಕುಮಾರಸ್ವಾಮಿ ಏನೇ ಹೇಳಿದರು ನನ್ನನ್ನು ತಿದ್ದಲು ಹೇಳ್ತಾ ಇದ್ದಾರೆ, ನನ್ನ ಒಳ್ಳೆದಕ್ಕೆ ಹೇಳ್ತಾ ಇದಾರೆ. ನನಗೂ ಈಗ ವಯಸ್ಸಾಗಿದೆ, ಗಡ್ಡ ಬೆಳ್ಳಗಾಗಿದೆ. ಪಾಪ ಅವರಿಗೆ ಇನ್ನೂ ಕೂಡ ವಯಸ್ಸಿದೆ ಎಂದು ವ್ಯಂಗ್ಯವಾಡಿದರು.

ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ

ಇಲ್ಲೊಬ್ಬ ಪತಿ ತನ್ನ ಪತ್ನಿಯ ತನ್ನನ್ನು ಪೀಡಿಸುತ್ತಾಳೆ ಎಂದು ದೂರು ದಾಖಲಿಸಿದ್ದಾನೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ರಾಜೇಂದ್ರನಾಥ್ ಎಂಬವರು ದೂರು ದಾಖಲಿಸಿದ್ದಾರೆ. 2010ರಲ್ಲಿ ನಿಖಿಲ್ ರಾಜೇಂದ್ರನಾಥ್ ಮದುವೆ ಕೇರಳದ ಯುವತಿ ಜೊತೆ ನಡೆದಿತ್ತು. ಮದುವೆಯಾದ ಕೆಲವೇ ವರ್ಷಗಳಲ್ಲಿ ಪತ್ನಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮಗು ಜನಿಸಿದ ಬಳಿಕ  ನಿನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ ಎಂದು ಆಗಾಗ ಪತಿಯನ್ನು ನಿಂದಿಸುತ್ತಿದ್ದಳು. ಪತ್ನಿಯ ಬಗ್ಗೆ ಆಕೆಯ ಪೋಷಕರ ಗಮನಕ್ಕೆ ತಂದ್ರೂ ಅವರು ಸಹ ಮಗಳ ಪರವಾಗಿ ನಿಂತು ಅಳಿಯನನ್ನು ಬೈದು ಕಳುಹಿಸಿದ್ದಾರೆ. ಇಷ್ಟಾದ್ರು ನಿಖಿಲ್ ಎಲ್ಲವನ್ನು ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದನು. ಈಗ ದುಬಾರಿ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಿಖಿಲ್ ರಾಜೇಂದ್ರನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಠುಸ್ ಆಗುತ್ತಾ ಡಿ.31ರ Karnataka Bandh..?

ಕನ್ನಡ ಬಾವುಟ ಸುಟ್ಟ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ MES ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಹೋರಾಟಗಾರ ವಾಟಾಳ್​ ನಾಗರಾಜ್​​ (Vatal Nagaraj) ನೇತೃತ್ವದಲ್ಲಿ ಡಿ.31ರಂದು ಕರ್ನಾಟಕ ಬಂದ್​ ಗೆ (Karnataka Bandh) ಕರೆ ನೀಡಲಾಗಿದೆ. ಆದರೆ ಬಂದ್ ಬಗ್ಗೆ ಇನ್ನೂ ಒಮ್ಮತ ಮೂಡದೆ, ಗೊಂದಲದ ಗೂಡಾಗಿದೆ. ಪೂರ್ಣ ಪ್ರಮಾಣದ ಬಂದ್​​ ಬೆಂಬಲ ಇನ್ನು ಗೊಂದಲಮಯವಾಗಿದೆ. ವಾಟಾಳ್ ನಾಗರಾಜ್ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ಭಾರಿ ಹಿನ್ನಡೆಯಾಗಿದೆ. ಬಂದ್​ಗೆ ಓಲಾ, ಉಬರ್  ಬೆಂಬಲ ನೀಡೋಲ್ಲ ಎಂದು ಸ್ಪಷ್ಟನೆ ನೀಡಿವೆ. ಕನ್ನಡ ಸಂಘಟನೆಗಳಲ್ಲಿ ಒಗ್ಗಟ್ಟಿಲ್ಲ, ಇದರಿಂದ ನಾವು ಗೊಂದಲದಲ್ಲಿದ್ದೇವೆ. ಕನ್ನಡ ಸಂಘಟನೆಗಳು ಒಗ್ಗಟ್ಟಾಗಿ ಬಂದ್ ಗೆ ಕರೆ ಕೊಟ್ರೆ ಬೆಂಬಲಿಸುತ್ತೇವೆ. ಈಗ ನಮ್ಮ ಸಂಘಟನೆಯಿಂದ ಕೊಟ್ಟಿರುವ ಬೆಂಬಲ ವಾಪಸ್ ಪಡೆಯುತ್ತೇವೆ. ಬಂದ್ ಗೆ ಬೆಂಬಲ ಕೊಡುವ ಬಗ್ಗೆ  ಚಾಲಕರಿಗೆ ಬಿಟ್ಟಿದ್ದೇವೆ. ಮುಂದೆ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಿದ್ರೆ ಬೆಂಬಲ ಎಂದು ಓಲಾ, ಉಬರ್ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಹೇಳಿಕೆ ನೀಡಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಅಮಾನುಷ ಹಲ್ಲೆ

ಮೊಬೈಲ್ ಕದ್ದಿರುವ ಆರೋಪದ ಮೇಲೆ ಮನೆಯ ಸದಸ್ಯರು ಸೇರಿ ದಲಿತ ಅಪ್ರಾಪ್ತ ಬಾಲಕಿಗೆ (Minor Girl) ಮನಸೋ ಇಚ್ಛೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ (Amethi) ನಡೆದಿದೆ. ಬಾಲಕಿ ಕಾಲಿಗೆ ಕೋಲಿನಿಂದ ಅಮಾನುಷವಾಗಿ ಇಬ್ಬರು ಯುವಕರು ಥಳಿಸಿದ್ದು, ಮನೆ ಮಂದಿಯೆಲ್ಲಾ ಈ ಘಟನೆ ನೋಡುತ್ತಾ ನಿಂತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಸಲಾಗಿದೆ.

ಮತ್ತಷ್ಟು ಬಾಲಿವುಡ್ ತಾರೆಯರಿಗೆ ಕೋವಿಡ್ ಸೋಂಕು

ಕೋವಿಡ್ 19 ಹೊಸ ರೂಪಾಂತರ ಓಮೈಕ್ರಾನ್ (Variant Omicron ) ದೇಶದಲ್ಲಿ ಕ್ಷಿಪ್ರವಾಗಿ ಹರಡುತ್ತಿದ್ದು( Spreading) ಇದೀಗ ಬಾಲಿವುಡ್ (Bollywood ) ಅಂಗಳದಲ್ಲೂ ತನ್ನ ವಕ್ರದೃಷ್ಟಿ ಬೀರುತ್ತಿದೆ. ಹೆಚ್ಚಿನ ನಟ, ನಟಿಯರು,(Most Actors, Actresses) ನಿರ್ಮಾಪಕರು ಇದೀಗ ಸೋಂಕಿಗೆ ಒಳಪಡುತ್ತಿದ್ದು ಸೌಮ್ಯ ರೋಗಲಕ್ಷಣಗಳನ್ನು(Mild symptoms) ಹೊಂದಿರುವುದಾಗಿ ಖಚಿತಪಡಿಸಿದ್ದಾರೆ ಹಾಗೂ ಕೂಡಲೇ ಕ್ವಾರಂಟೈನ್‌ಗೆ (Quarantine ) ಒಳಗಾಗುತ್ತಿದ್ದಾರೆ. ಇತ್ತೀಚೆಗೆ ತಾನೇ ಕರೀನಾ ಕಪೂರ್ ಖಾನ್, ಅಮೃತಾ ಅರೋರಾ, ಸೀಮಾ ಖಾನ್, ಮಹೀಪ್ ಕಪೂರ್ ಹಾಗೂ ಅವರ ಪುತ್ರಿ ಶನಾಯಾ ಕಪೂರ್ ಕೋವಿಡ್-19 ದೃಢಪಟ್ಟಿರುವುದಾಗಿ ವರದಿಯಾಗಿತ್ತು. ಇದೀಗ ಅರ್ಜುನ್ ಕಪೂರ್, ಸಹೋದರಿ ಅನುಶಾಲಾ ಕಪೂರ್, ರಿಯಾ ಕಪೂರ್ ಹಾಗೂ ಅವರ ಪತಿ ಚಿತ್ರ ನಿರ್ಮಾಪಕರಾದ ಕರಣ್ ಬೂಲಾನಿಗೂ ಕೋವಿಡ್-19 ದೃಢಪಟ್ಟಿರುವುದಾಗಿ ವರದಿಯಾಗಿದೆ.
Published by:Kavya V
First published: