Evening Digest: ದೀಪಾವಳಿಗೆ ಜಿಯೋ 5G ಗಿಫ್ಟ್! ಮಂಗಳೂರು ಗಣಪನ ಅಮೆರಿಕಾ ಪ್ರವಾಸ! ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ದೀಪಾವಳಿಗೆ ಭಾರತೀಯರಿಗೆ ಬಂಪರ್! ಜಿಯೋ 5ಜಿ ಆರಂಭ

ಇದೇ ವರ್ಷದ ದೀಪಾವಳಿ ಹಬ್ಬದ ವೇಳೆಗೆ ರಿಲಯನ್ಸ್ ಜಿಯೋ 5G ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಹಾನಗರಗಳು ಸೇರಿದಂತೆ ಹಲವು ನಗರಗಳಲ್ಲಿ (Reliance Jio 5G) ಆರಂಭವಾಗಲಿದೆ ಎಂದು ಉದ್ಯಮ ಕ್ಷೇತ್ರದ ದಿಗ್ಗಜ ಮುಕೇಶ್ ಅಂಬಾನಿ (Mukesh Ambani) ಘೋಷಿಸಿದ್ದಾರೆ. JIO 5G ಎಲ್ಲಾ ಅಂಶಗಳಲ್ಲಿ ನಿಜವಾದ 5G ಆಗಿರುತ್ತದೆ. ಇದು ಇಡೀ ದೇಶವನ್ನು ಒಂದುಗೂಡಿಸುತ್ತದೆ ಎಂದು ಅವರು ಖಚಿತಪಡಿಸಿದರು. ರಿಲಯನ್ಸ್ ವಾರ್ಷಿಕ ಸಭೆಯಲ್ಲಿ (RIL AGM Live Updates) ಭಾಗವಹಿಸಿ ಮಾತನಾಡಿದ ಅವರು ರಿಲಯನ್ಸ್​ ಹಮ್ಮಿಕೊಂಡಿರುವ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸ್ವಾಮೀಜಿ ಕೇಸ್‌ ಬೇರೆಡೆಗೆ ವರ್ಗಾಯಿಸಲು ಬಿಜೆಪಿ ನಾಯಕ ಮನವಿ

ಬೆಂಗಳೂರು: ಮುರುಘಾ ಮಠಾಧೀಶ (Murugha Math) ಡಾ. ಶಿಮಮೂರ್ತಿ ಶರಣರ (Dr. Shivamurthy Sharanaru) ವಿರುದ್ಧ ಪೋಕ್ಸೋ ಕಾಯ್ದೆಯಡಿ (POCSO Act) ಪ್ರಕರಣ (Case) ದಾಖಲಾಗಿದೆ. ಆದರೆ ಈ ಕೇಸ್‌ ಅನ್ನು ಚಿತ್ರದುರ್ಗದಿಂದ (Chitradurga) ಬೇರೆ ಕಡೆಯ ಪೊಲೀಸ್ ಠಾಣೆಗೆ (Police Station) ವರ್ಗಾಯಿಸಬೇಕು ಅಂತ ಬಿಜೆಪಿ ನಾಯಕ (BJP Leader), ರಾಜ್ಯಸಭಾ ಸದಸ್ಯ (Rajyasabha Member) ಲೆಹರ್ ಸಿಂಗ್ (Leher Singh) ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರ (Letter) ಬರೆದಿರುವ ಅವರು, ಈ ಪ್ರಕರಣದಲ್ಲಿ ನಿಪ್ಷಕ್ಷಪಾತ ತನಿಖೆ (Enquiry) ಆಗಬೇಕು. ಹೀಗಾಗಿ ಪ್ರಕರಣವನ್ನು ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು, ಈ ಸಂಪೂರ್ಣ ಪ್ರಕರಣದಲ್ಲಿ ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಬೇಕು ಅಂತ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Murugha Swamiji: ಸ್ವಾಮೀಜಿ ಕೇಸ್‌ ಬೇರೆಡೆಗೆ ವರ್ಗಾಯಿಸಲು ಬಿಜೆಪಿ ನಾಯಕ ಮನವಿ, ಅತ್ತ ರಾಜ್ಯಪಾಲರಿಗೆ ಸಲ್ಲಿಕೆಯಾಯ್ತು ದೂರು

ಟೊಮ್ಯಾಟೊ ಕೆಜಿಗೆ 500, ಈರುಳ್ಳಿ 400 ರೂಪಾಯಿ! ಪ್ಲೀಸ್, ಸಹಾಯ ಮಾಡಿ ಎಂದ ಪಾಕ್

ಕರಾಚಿ: ಪಕ್ಕದ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪ (Pakistan Flood Updates) ತಲುಪಿದೆ. ವಿನಾಶಕಾರಿ ಪ್ರವಾಹದಿಂದಾಗಿ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದ ಇತರ ಭಾಗಗಳಲ್ಲಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳ (Fruits And Vegetables Price In Pakistan) ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಪಾಕಿಸ್ತಾನದ ಜನರು ದಿನನಿತ್ಯದ ಬಳಕೆಗೆ ಅಗತ್ಯವಿರುವ ತರಕಾರಿ, ಹಣ್ಣು ಹಂಪಲುಗಳನ್ನು ಖರೀದಿ ಮಾಡಲು ಸಹ ಹಿಂದೆಮುಂದೆ ನೋಡುವಂತಹ ದುರದೃಷ್ಟಕರ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ (Pakistan Government) ಭಾರತದಿಂದ ಟೊಮೆಟೊ ಮತ್ತು ಈರುಳ್ಳಿಯನ್ನು ಆಮದು ಮಾಡಿಕೊಳ್ಳಬಹುದು ಎಂದು ಸ್ಥಳೀಯ ಮಾರುಕಟ್ಟೆ ಡೀಲರ್‌ಗಳು ತಿಳಿಸಿದ್ದಾರೆ.

ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

ಮಂಗಳೂರು: ಗಣೇಶ ಹಬ್ಬಕ್ಕೆ (Ganesh Chaturthi) ಭರ್ಜರಿ ತಯಾರಿ ಆರಂಭವಾಗಿದೆ. ಮೊದಲೊಂದಿಪೆ ನಿನಗೆ ಗಣನಾಥ ಅನ್ನೋದಕ್ಕೆ ಇಡೀ ಜಗತ್ತೇ ಸಿದ್ಧವಾಗಿ ನಿಂತಿದೆ. ಕರಾವಳಿ ಮಂಗಳೂರಲ್ಲಿ (Mangaluru) ತಯಾರಾಗೋ ಗಣೇಶನಿಗೆ ಅಮೆರಿಕಾದಲ್ಲೂ ಪೂಜೆ ಪುನಸ್ಕಾರ ನಡೆಯಲಿದೆ. ಈಗಾಗಲೇ ಇಲ್ಲಿ ತಯಾರಾದ ವಿಘ್ನ ವಿನಾಯಕನ ಮೂರ್ತಿ ಚಿಕಾಗೋ (Mangaluru To Chicago) ಸೇರಿದೆ. ಕರಾವಳಿ ಪ್ರತಿಷ್ಟಿತ ಈ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಗಣೇಶ ವಿಗ್ರಹದ (Ganesh Idol Making) ತಯಾರಿಯಲ್ಲಿ ತೊಡಗಿಸಿಕೊಂಡಿದ್ದು ಇನ್ನೊಂದು ವಿಶೇಷ.

ಇದನ್ನೂ ಓದಿ: Ganesh Chaturthi: ಮಂಗಳೂರು ಗಣಪನ ಅಮೆರಿಕಾ ಪ್ರಯಾಣ!

ಒಂದೇ ಸಿನಿಮಾದಲ್ಲಿ ಶಿವಣ್ಣ-ಪ್ರಭುದೇವ್!

ಗಾಳಿಪಟ 2 ಸಕ್ಸಸ್​ ಬಳಿಕ ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​ ಮತ್ತೊಂದು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಹ್ಯಾಟ್ರಿಕ್​ ಹೀರೋ ಶಿವರಾಜ್​​ ಕುಮಾರ್ (Shivaraj Kumar) ಹಾಗೂ ಪ್ರಭುದೇವ್​ (Prabhudev) ಕಾಂಬಿನೇಷನ್ ಚಿತ್ರದ ಚಿತ್ರೀಕರಣ ಶುರುವಾಗಿದೆ. ಯೋಗರಾಜ್ ಭಟ್‌ ನಿರ್ದೇಶನದ ಹೊಸ ಸಿನಿಮಾಕ್ಕೆ ಕಳೆದ ಜೂನ್‌ನಲ್ಲಿ ಮುಹೂರ್ತ ನೆರವೇರಿತ್ತು. ಆನಂತರ ನಿರ್ದೇಶಕ ಯೋಗರಾಜ್ ಭಟ್‌ ಅವರು 'ಗಾಳಿಪಟ 2' ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಇದೀಗ ಅವರು ಪುನಃ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ (Shooting)​ ಬೆಂಗಳೂರಲ್ಲಿ (Bengaluru) ನಡೀತಿದೆ.
Published by:Annappa Achari
First published: