• Home
 • »
 • News
 • »
 • state
 • »
 • Evening Digest: SSLC ಪರೀಕ್ಷಾ ದಿನಾಂಕದಿಂದ ಮಾಜಿ ಬಿಗ್​ಬಾಸ್​ ಸ್ಪರ್ಧಿ ಬಂಧನದವರೆಗೆ ಓದಲೇಬೇಕಾದ ಸುದ್ದಿಗಳು

Evening Digest: SSLC ಪರೀಕ್ಷಾ ದಿನಾಂಕದಿಂದ ಮಾಜಿ ಬಿಗ್​ಬಾಸ್​ ಸ್ಪರ್ಧಿ ಬಂಧನದವರೆಗೆ ಓದಲೇಬೇಕಾದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ ಮತ್ತು ವಿದೇಶದಲ್ಲಿ ಈ ದಿನ ನಡೆದ ಬೆಳವಣಿಗೆ ಕುರಿತು ಓದಲೇಬೇಕಾದ ಸುದ್ದಿಗಳು

 • Share this:

  ಜುಲೈ 19-20 ಎಸ್​ಎಸ್​ಎಲ್​​ಸಿ ಪರೀಕ್ಷೆ
  ಕೊರೋನಾದಿಂದಾಗಿ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಜುಲೈ 19ರಿಂದ ಎಸ್ಎಸ್ಎಲ್​ಸಿ ಪರೀಕ್ಷೆ (SSLC Exam) ನಡೆಸಲು ನಿರ್ಧರಿಸಿದೆ. ಈ ವರ್ಷ 2 ದಿನ ಎಸ್ಎಸ್ಎಲ್​ಸಿ ಪರೀಕ್ಷೆಗಳು ನಡೆಯಲಿದೆ. (SSLC Exam Timetable) ಜುಲೈ 19ರಂದು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಪರೀಕ್ಷೆ ನಡೆಯಲಿದೆ. ಜುಲೈ 22ರಂದು ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆಗಳು ನಡೆಯಲಿವೆ.


  ಜುಲೈ 2ನೇ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
  ಈಗಾಗಲೇ ಎಸ್ಎಲ್ಎಲ್​ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ರಾಜ್ಯ ಶಿಕ್ಷಣ ಇಲಾಖೆ ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಘೋಷಿಸುವಂತೆ ಸುಪ್ರಿಂಕೋರ್ಟ್ ಸೂಚನೆ ನೀಡಿದೆ. ಹೀಗಾಗಿ, ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.


  ಆತಂಕ ಮೂಡಿಸಿದ ಸೂಟ್​ಕೇಸ್​​
  ಮಲ್ಲೇಶ್ವರಂನ ಕಂಡು ಬಂದ ಅಪರಿಚಿತ ಸೂಟ್​ಕೇಸ್​ವೊಂದು ಆತಂಕಕ್ಕೆ ಕಾರಣವಾದ ಘಟನೆ ಇಂದು ನಡೆದಿದೆ. ಸೂಟ್​ಕೇಸ್​ ಕಂಡ ಜನರು ಆತಂಕಗೊಂಡು ಪೊಲೀಸ್​ ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯದಳ ತಂಡ ಆಗಮಿಸಿ ಪರಿಶೀಲನೆ ನಡೆಸಿದರು.ಪರಿಶೀಲನೆ ವೇಳೆ ಸೂಟ್ ಕೇಸ್ ನಲ್ಲಿ ಬಟ್ಟೆ ಪತ್ತೆಯಾಗಿದೆ. ಯಾವುದೇ ಬಾಂಬ್ ಹಾಗೂ ಸ್ಪೋಟಕ ವಸ್ತು ಪತ್ತೆಯಾಗಿಲ್ಲ ಎಂದು ಉತ್ತರ ವಿಭಾಗದ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.


  ಜಮ್ಮು ಸೇನಾ ನೆಲೆಯಲ್ಲಿ ಮತ್ತೆರಡು ಡ್ರೋನ್ ಪತ್ತೆ
  ಭಾನುವಾರ ಬೆಳಗ್ಗೆ ಜಮ್ಮು ವಾಯುನೆಲೆ ಮೇಲಿನ ದಾಳಿಯಾಗಿ 24 ಗಂಟೆ ಕಳೆಯುವ ಮುನ್ನ ಜಮ್ಮುವಿನ ಭಾರತೀಯ ಭೂಸೇನೆಯ ನೆಲೆಯ ಸಮೀಪ ಮತ್ತೊಮ್ಮೆ ಡ್ರೋಣ್‌ಗಳನ್ನು ಹಾರಿಬಿಡಲಾಗಿದೆ. ಭಾನುವಾರದ ದಾಳಿಯ ನಂತರ ತೀವ್ರ ಕಟ್ಟೆಚ್ಚರವಹಿಸಿದ್ದ ಸೇನಾ ಪಡೆಗಳು ಸಂಭವನೀಯ ದಾಳಿಯನ್ನು ಸೋಮವಾರ ಬೆಳಗಿನ ಜಾವ ತಡೆದಿದ್ದಾರೆ. ಆದರೆ, ಇಂದು ಕಾಣಿಸಿಕೊಂಡ ಡ್ರೋಣ್‌ಗಳು ಸ್ಫೋಟಕಗಳನ್ನು ಹೊತ್ತಿದ್ದವೇ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ.


  ಕಲ್ಯಾಣ ವ್ಯವಸ್ಥೆಯ ಮರುವಿನ್ಯಾಸ ಅಗತ್ಯ
  ಭಾರತದ ಆರ್ಥಿಕತೆಯನ್ನು ಶೀಘ್ರದಲ್ಲೇ ಸುಧಾರಿಸುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿರುವ ನೋಬಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ, "ಕೋವಿಡ್ ಸಾಂಕ್ರಾಮಿಕ ರೋಗವು ನಮಗೆ ಹಲವು ಪಾಠಗಳನ್ನು ಕಲಿಸಿದೆ. ದೇಶದ ಆರೋಗ್ಯ ಪರಿಸ್ಥಿತಿ ಮತ್ತು ಕೋವಿಡ್‍ ಅಲ್ಲದ ಸಂದರ್ಭದಲ್ಲೂ ಸಾಮಾನ್ಯ ಸನ್ನದ್ಧತೆಗೆ ಸಂಬಂಧಿಸಿದಂತೆ ಅನೇಕ ಪಾಠಗಳನ್ನು ಕಲಿಯಲು ದಾರಿ ಮಾಡಿಕೊಟ್ಟಿದೆ. ಈಗ ಕಲ್ಯಾಣ ಕಾರ್ಯಕ್ರಮಗಳನ್ನು ಮರು ವಿನ್ಯಾಸಗೊಳಿಸುವ ಅಗತ್ಯ ಇದೆ" ಎಂದು ತಿಳಿಸಿದ್ದಾರೆ.


  ಕಾಂಗ್ರೆಸ್​ನಲ್ಲಿ ಮನೆಯೊಂದು ನಾಲ್ಕು ಬಾಗಿಲು
  ಕಾಂಗ್ರೆಸ್​ ಒಂದು ಮನೆ ನಾಲ್ಕು ಬಾಗಿಲು ಎಂಬಂತೆ ಕಾಂಗ್ರೆಸ್​ ಸ್ಥಿತಿಯಾಗಿದೆ. ಕಾಂಗ್ರೆಸ್​ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ. ಆದರೆ, ಅವರು, ನಮ್ಮಲ್ಲಿ ಬಿದ್ದಿರುವ ನೊಣ ನೋಡುವುದಕ್ಕೆ ಬರುತ್ತಾರೆ. ಮೊದಲು ನಿಮ್ಮ ತಟ್ಟೆ ಶುದ್ದಿ ಮಾಡಿ, ಗಂಜಲ ಹಾಕಿ ಶುಚಿ ಮಾಡುವುದನ್ನು ನೋಡಿಕೊಳ್ಳಲಿ. ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಒಂದು ಬಾಗಿಲು ಹಿಂದುಳಿದ ವರ್ಗ ಆಗಬೇಕು ಅಂತ ಒಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮತ್ತೊಂದು ಬಾಗಿಲು ಹೀಗೆ ಬಿರುಕುಗಳಿಂದಲೇ ಕಾಂಗ್ರೆಸ್​ ಪಕ್ಷ ತುಂಬಿದೆ ಎಂದು ಟೀಕಿಸಿದ್ದಾರೆ.


  ಬಿಗ್​ಬಾಸ್​ ಮಾಜಿ ಸ್ಪರ್ಧಿ ಬಂಧನ
  ಡ್ರಗ್​​ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು ಬಿಗ್​ಬಾಸ್​ ಮರಾಠಿಯ ಮಾಜಿ ಸ್ಪರ್ಧಿ, ನಟಿ ಹೀನಾ ಪಂಚಾಲ್​​ನ ಬಂಧಿಸಿದ್ದಾರೆ. ಶನಿವಾರ ರಾತ್ರಿ ಇಲ್ಲಿನ ಇಗಾತಪುರಿಯ ಎರಡು ಬಂಗಲೆಗಳಲ್ಲಿ ಮರಾಠಿ ನಟಿ, ಮಾಡೆಲ್​​ಗಳು, ಬಾಲಿವುಡ್​​ನ​​ ಕೋರಿಯೋಗ್ರಾಫರ್​​ ಸೇರಿದಂತೆ 22 ಮಂದಿ ರೇವ್​ ಪಾರ್ಟಿ ನಡೆಸುತ್ತಿದ್ದದ್ದು ಪೊಲೀಸರ ರೇಡ್​ನಿಂದ ಬಯಲಾಗಿದೆ. 22 ಮಂದಿನೂ ಪಾರ್ಟಿಯಲ್ಲಿ ಕೊಕೇನ್​​, ಮಾರಿಜೋನಾ ಸೇರಿದಂತೆ ಇನ್ನು ಕೆಲ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಎಂದು ದಾಳಿ ಬಳಿಕ ಪೊಲೀಸರು ತಿಳಿಸಿದ್ದಾರೆ.


  ಯುಎಇಯಲ್ಲಿ ವಿಶ್ವಕಪ್​
  ಕೊರೋನಾ ಕಾರಣದಿಂದ ಈ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ . ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಅಲ್ಲದೆ ಶೀಘ್ರದಲ್ಲೇ ಯುಎಇ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿಯನ್ನು ಐಸಿಸಿ ನಿರ್ಧರಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

  Published by:Seema R
  First published: