Evening Digest: ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ದೀದಿ ಕ್ಯಾಬಿನೆಟ್​​ನಿಂದ ಪಾರ್ಥ ಚಟರ್ಜಿ ವಜಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ರಾಜ್ಯದಲ್ಲಿ ಮತ್ತೆ ಮುಂಗಾರು ಆರ್ಭಟ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಜನರಲ್ಲಿ ಮಳೆ ಆತಂಕ ಎದುರಾಗಿದೆ. ಮತ್ತೆ ಭಾರೀ ಮಳೆಯಾಗೋ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ರಾಜ್ಯದಲ್ಲಿ ಬುಧವಾರ ಹಲವೆಡೆ ಉತ್ತಮ ಮಳೆಯಾಗಿದ್ದು, ಗುರುವಾರ ಸಂಜೆ ವೇಳೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೂಡ ಆರೆಂಜ್ ಅಲರ್ಟ್ ನೀಡಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Rain Update: ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ಕರಾವಳಿ; ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಮೃತ ಪ್ರವೀಣ್ ಕುಟುಂಬಕ್ಕೆ 10 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ ಅಶ್ವತ್ಥ ನಾರಾಯಣ

ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್ (Praveen) ಹತ್ಯೆಯಾಗಿದೆ ಈ ಹಿನ್ನೆಲೆ ಇವತ್ತು ನಡೆಯಬೇಕಿದ್ದ ಜನೋತ್ಸವವನ್ನು ರದ್ದು ಮಾಡಿದ್ದೀವಿ ಎಂದು ಸಚಿವ ಅಶ್ವತ್ಥ ನಾರಾಯಣ (Ashwath Narayan) ಹೇಳಿದ್ದಾರೆ.  ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆ ಗಳ‌‌ ಬಗ್ಗೆ ವಿವರ ನೀಡಿದ್ದಾರೆ. ಪ್ರವೀಣ್ ಹತ್ಯೆ ಪ್ರಕರಣವನ್ನು  ಸರ್ಕಾರ (Government) ಗಂಭೀರವಾಗಿ ತೆಗೆದುಕೊಂಡಿದೆ. ಅಲ್ಲದೇ ಗಂಭೀರವಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ತಿಳಿಸಿದೆ ಎಂದ್ರು. ಇನ್ನು ಮೃತ ದುರ್ದೈವಿ ಪ್ರವೀಣ್​ ಕುಟುಂಬಕ್ಕೆ 25 ಲಕ್ಷ ಪರಿಹಾರ (Solution) ನೀಡಲು ಹಾಗೂ ಅವರಿಗೆ ಮನೆ ಕಟ್ಟಿಕೊಡುವ ಜವಾಬ್ದಾರಿ ರಾಜ್ಯಾಧ್ಯಕ್ಷರು ತೆಗೆದುಕೊಂಡಿದ್ದಾರೆ. ಪ್ರವೀಣ್ ಮನೆಗೆ ನಾಯಕರ (Leaders) ಭೇಟಿಗೂ ನಿರ್ಧಾರ ಮಾಡಿದ್ದೇವೆ. ಕೇಸ್​ನಲ್ಲಿ ಬೇರೆ ರಾಜ್ಯಗಳ ದುಷ್ಟ ಶಕ್ತಿಗಳ ಪಾತ್ರ ಏನಾದರೂ ಇದೆಯಾ ಎಂಬುದರ ಬಗ್ಗೆ ಪರಿಶೀಲಿಸಿ, ಇದನ್ನು NIAಗೆ ಕೊಡಬೇಕು ಎಂದು ಆಗ್ರಹ ಮಾಡುತ್ತೇವೆ ಎಂದು ಸಚಿವ ಅಶ್ವತ್ಥ​ ನಾರಾಯಣ್ ಹೇಳಿದ್ದಾರೆ.

ದೀದಿ ಕ್ಯಾಬಿನೆಟ್​​ನಿಂದ ಪಾರ್ಥ ಚಟರ್ಜಿ ವಜಾ

ಎಸ್‌ಎಸ್‌ಸಿ ಹಗರಣದಲ್ಲಿ (SSC scam) ಬಂಧಿತರಾಗಿರುವ ಕಳಂಕಿತ ಪಾರ್ಥ ಚಟರ್ಜಿ (Partha Chatterjee) ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ಅವರು ತಮ್ಮ ಸಂಪುಟದಿಂದ ವಜಾ (Sacked) ಮಾಡಿದ್ದಾರೆ. TMC ಯ ಪ್ರಧಾನ ಕಾರ್ಯದರ್ಶಿ ಚಟರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಸಂಸದೀಯ ವ್ಯವಹಾರಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಖಾತೆಗಳನ್ನು ಹೊಂದಿದ್ದರು. ಸಂಪುಟದಿಂದ ಚಟರ್ಜಿ ಅವರನ್ನು ವಜಾ ಮಾಡಿದ ಬಳಿಕ ಅವರ ಖಾತೆಯನ್ನು ಸಿಎಂ ಸ್ವತಃ ನೋಡಿಕೊಳ್ಳಲಿದ್ದಾರೆ.  ಪಾರ್ಥ ಚಟರ್ಜಿ ಅವರ ಹಗರಣ ಬಯಲಾಗುತ್ತಿದ್ದಂತೆ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂಬ ಮಾತು ಪಕ್ಷದೊಳಗೆ ಕೇಳಿ ಬಂದಿತ್ತು. ಹೀಗಾಗಿ ಡ್ಯಾಮೇಜ್​ ಕಂಟ್ರೋಲ್​ ಮಾಡಲು ದೀದಿ ವಜಾ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗ್ತಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Partha Chatterjee Sacked: SSC ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ ಸಚಿವ ಸ್ಥಾನದಿಂದ ವಜಾ

ನನ್ನನ್ನು ಗಲ್ಲಿಗೇರಿಸಿ, ಆದ್ರೆ ಸೋನಿಯಾ ಮೇಡಂ ಹೆಸರನ್ನು ಎಳೆದು ತರಬೇಡಿ

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು (New President Draupadi Murmur) ಅವರನ್ನು ಕಾಂಗ್ರೆಸ್​ ಸಂಸದ ಅಧೀರ್​​ ರಂಜನ್​ ಚೌಧರಿ (Adhir Ranjan Chowdhury) ‘ರಾಷ್ಟ್ರಪತ್ನಿ’ (Rashtrapatni) ಎಂದು ಸಂಬೋಧಿಸಿರುವುದು ದೊಡ್ಡ ವಿವಾದಕ್ಕೆ ಎಡೆ ಮಾಡಿದೆ. ಸದನದಲ್ಲಿ ಕಾಂಗ್ರೆಸ್​​ ವಿರುದ್ಧ ಬಿಜೆಪಿ ಸದಸ್ಯರು ಮುಗಿ ಬಿದ್ದಿದ್ದಾರೆ. ಕೂಡಲೇ ಅಧೀರ್​​ ರಂಜನ್​ ಚೌಧರಿ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚನೆ ಮಾಡಿದ್ದಾರೆ. ಇದರಿಂದ ತೃಪ್ತರಾಗದ ಬಿಜೆಪಿಯವರು ಸೋನಿಯಾ ಗಾಂಧಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಭಾವೋಗ್ವೇದಿಂದ ಪ್ರತಿಕ್ರಿಯಿಸಿರುವ ಅಧೀರ್​ ರಂಜನ್​ ಚೌಧರಿ, ನನ್ನ ಹೇಳಿಕೆಗೆ ನನ್ನನ್ನು ಬೇಕಾದರೆ ನೇಣಿಗೇರಿಸಿ. ಆದರೆ ಸೋನಿಯಾ ಮೇಡಂ ಅವರನ್ನು ಇದಕ್ಕೆ ಎಳೆದು ತರಬೇಡಿ ಎಂದಿದ್ದಾರೆ. ಇಡೀ ಸದನ ‘ರಾಷ್ಟ್ರಪತ್ನಿ’ ವಿವಾದದಿಂದ ಗದ್ದಲಮಯವಾಗಿದೆ.

ವಿಕ್ರಾಂತ್​ ರೋಣ ಚಿತ್ರಕ್ಕೆ ಪೈರಸಿ ಕಾಟ

ಸ್ಯಾಂಡಲ್​ವುಡ್​ನಲ್ಲಿ (Sandalwood) ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ ಕಿಚ್ಚ ಸುದೀಪ್​ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಇಂದು ಭರ್ಜರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಚಿತ್ರಕ್ಕೆ ಇದೀಗ ಪೈರಸಿ (Piracy) ಕಾಟ ಎದುರಾಗಿದೆ. ಹೌದು, ವಿಕ್ರಾಂತ್​ ರೋಣ ಸಂಪೂರ್ಣ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಬೇಸರತಂದಿದೆ.  ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಆದರೆ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸುದೀಪ್​ ಅವರ ಹಿಂದಿನ ಮಾತನ್ನು ನೆನಪಿಸಿಕೊಂಡಿದ್ದು, ಪೈರಸಿಗೆ ತಿರುಗೇಟು  ನೀಡಿದ್ದಾರೆ.
Published by:Kavya V
First published: