Evening Digest: ಸೋನಿಯಾಗೆ ಸಿದ್ದರಾಮಯ್ಯ ಗುಟುರು ಹಾಕಬೇಕಂತೆ: ನಟಿಗೆ ಮುಜುಗರ ತಂದಿಟ್ಟ ಸಲ್ಮಾನ್ ಖಾನ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸೋನಿಯಾಗೆ ಸಿದ್ದರಾಮಯ್ಯ ಗುಟುರು ಹಾಕಬೇಕಂತೆ : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ (Congress Mekedatu Padayatra) ಬಗ್ಗೆ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಬಗ್ಗೆ ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದರು. ಎಲ್ಲರಿಗೂ ಸ್ಪಷ್ಟ ಇದೆ, ಈ ಪಾದಯಾತ್ರೆತಲ್ಲಿ ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲ. ನಮ್ಮ ಪ್ರಶ್ನೆಗಳಿಗೆ ಇವತ್ತಿನವರೆಗೂ ಉತ್ತರ ಕೊಡ್ಲಿಲ್ಲ. ಇಲ್ಲಿ ಪಾದಯಾತ್ರೆ ನಾಟಕವನ್ನು ಮಾಡೋದರ ಬದಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ನಿಯೋಗ ಕರ್ಕೊಂಡು ಹೋಗಿ ಅಲ್ಲಿರುವ ಕಾಂಗ್ರೆಸ್ ಮುಖಂಡರಾದ ಚಿದಂಬರಂ, ಡಿಎಂಕೆ ಸ್ಟಾಲಿನ್ ಅವ್ರನ್ನ ಒಪ್ಪಿಸಿದ್ರೆ ಸುಲಭವಾಗುತ್ತೆ. ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಒಂದು ಮಾತು ಇಲ್ಲವೇ ಸಿದ್ದರಾಮಯ್ಯ ಅವರು ಒಂದು ಗುಟುರು ಹಾಕಿದ್ರೆ ಸಾಕು. ಸೋನಿಯಾ ಗಾಂಧಿ ಅಲರ್ಟ್ ಅಗ್ತಾರೆ. ಸೋನಿಯಾಗಾಂದಿ ಮಾತು ಹೇಳಿದ್ರೆ ಚಿದಂಬರಂ ತೆಗೆದುಹಾಕಲ್ಲ. ಚಿದಂಬರಂ ಒಂದು ಮಾತು ಹೇಳಿದ್ರೆ ಸ್ಟಾಲಿನ್ ತೆಗೆದುಹಾಕಲ್ಲ. ಇದು ಸುಲಭದಲ್ಲಿ ಅಗಲಿರುವ ಸಂಗತಿ. ಇಲ್ಲಿ ಪಾದಯಾತ್ರೆ ಮಾಡ್ತಾ ಇರುವ ಉದ್ದೇಶ ರಾಜಕಾರಣ, ಅದು ಬಿಟ್ಟು ಬೇರೆನೂ ಇಲ್ಲ ಎಂದು ಮಾತಿನಲ್ಲೇ ತಿವಿದರು.

ಸಿದ್ದು, ಡಿಕೆಶಿ ಸೇರಿ 38 ಮಂದಿ ವಿರುದ್ಧ FIR
ಕೊರೊನಾ (Corona) ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ (Mekedatu padayatre) 2.0 ಕೈಗೊಂಡಿರುವ ಕಾಂಗ್ರೆಸ್ ನಾಯಕರ (Congress leaders) ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿರುದ್ಧ ಸಮರ ಸಾರಲು ಮುಂದಾಗಿರುವ ಬಿಜೆಪಿ ಸರ್ಕಾರ ಇಂದು 38 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ ಆದ್ರೆ ಕೊರೊನಾ ಮತ್ತೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ರಾಜ್ಯ ಸರ್ಕಾರ ಕೊರೊನಾ ನಿಯಮ ಪಾಲಿಸುವಂತೆ ಆದೇಶ ಹೊರಡಿಸಿದೆ. ಕೊರೊನಾ ನಿಯಮ (Corona Rule) ಲೆಕ್ಕಿಸದೆ ರಾಜ್ಯ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದಾರೆ. ಮಾರ್ಗಸೂಚಿ ಪಾಲಿಸದೆ ಪಾದಯಾತ್ರೆ ಕೈಗೊಂಡ ನಾಯಕರಿಗೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದ್ದು, 38 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Mekedatu Padayatre: ಮತ್ತೆ 'ಕೈ' ನಾಯಕರ ಮೇಲೆ ಬಿತ್ತು ಕೇಸ್, ಸಿದ್ದು, ಡಿಕೆಶಿ ಸೇರಿ 38 ಮಂದಿ ವಿರುದ್ಧ FIR

ಹೆಂಡ್ತಿ, ಮಕ್ಕಳನ್ನ ಸಾಕಲು ಕಿಡ್ನಿ ಮಾರುತ್ತಿರುವ ಅಫ್ಘನ್ನರು
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಕೊಂಡ ಬಳಿಕ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಆಗಿಬಿಟ್ಟಿದೆ. ಅಫ್ಘಾನಿಸ್ತಾನದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಜನರು ಕೆಲಸವಿಲ್ಲದೆ ಸಾಲದ ಹೊರೆಯಿಂದ ಹೊರಬರಲಾಗದೆ ಪರದಾಡುತ್ತಿದ್ದಾರೆ. ಹೆಂಡತಿ, ಮಕ್ಕಳನ್ನು ಸಾಕಲು ಹೆಣಗಾಡುತ್ತಿರುವಾಗ. ನೂರುದ್ದೀನ್ ಎಂಬಾತ ನಮ್ಮ ಕುಟುಂಬ ಸಾಕಲು ನಮಗೆ ಕಿಡ್ನಿ ಮಾರಾಟ ಮಾಡೋದನ್ನ ಬಿಟ್ರಿ ಬೇರೆ ದಾರಿಯೇ ಇಲ್ಲ ಎಂದು ಇರಾನ್ನ ಗಡಿಗೆ ಸಮೀಪವಿರುವ ಎಎಫ್ಪಿಗೆ ತಿಳಿಸಿದ್ದಾರೆ. ಈ ಕಿಡ್ನಿ ಮಾರಾಟ ವಿಚಾರ ಪಶ್ಚಿಮ ನಗರವಾದ ಹೆರಾತ್ನಲ್ಲಿ ಎಷ್ಟು ವ್ಯಾಪಕವಾಗಿ ಹರಡಿದೆ ಅಂದ್ರೆ ‘ಒಂದು ಕಿಡ್ನಿ ಗ್ರಾಮ‘ ಎಂದೇ ಅಡ್ಡ ಹೆಸರನ್ನು ಪಡೆದುಕೊಂಡಿದೆ..

ನಟಿಗೆ ಮುಜುಗರ ತಂದಿಟ್ಟ ಸಲ್ಮಾನ್ ಖಾನ್
ಸಲ್ಮಾನ್ ಖಾನ್(Salman Khan).. ಸಲ್ಲು ಭಾಯ್.. ಬಜರಂಗಿ ಭಾಯ್ಜಾನ್.. ಬಾಲಿವುಡ್ ಸುಲ್ತಾನ.. ಹೌದು, ಸಲ್ಲು ಸಿನಿಮಾಗಳು ಅಂದರೆ ಅಲ್ಲಿ ಭರ್ಜರಿ ಕಲೆಕ್ಷನ್(Collection)ಗೆ ಕಮ್ಮಿ ಇಲ್ಲ.. ಸಿನಿಮಾ ಚೆನ್ನಾಗಿಲ್ಲ ಅಂದರೂ ದುಡ್ಡಿನ ಹೊಳೆ ಹರಿಯುತ್ತೆ. ಹೀಗಾಗಿ ಸಲ್ಲು ಭಾಯ್ ಜೊತೆ ಸಿನಿಮಾ ಮಾಡಲು ನಿಮಾರ್ಪಕ(Producers)ರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೂ, ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸಖತ್ ಸುದ್ದಿ ಮಾಡಿದವರೆ.ಅಪಘಾತ(Accident) ಪ್ರಕರಣ, ಕೃಷ್ಣ ಮೃಗ ಬೇಟೆ(Hunting), ಹೀಗೆ ಒಂದಲ್ಲ ಒಂದು ಸಲ್ಮಾನ್ ಖಾನ್ ಅವರ ಕೊರಳಿಗೆ ಸುತ್ತಿಕೊಂಡಿರುತ್ತೆ. ಬೇಕು ಅಂತ ಯಾವುದೇ ವಿವಾದಗಳನ್ನು ಸಲ್ಲು ಭಾಯ್ ಮಾಡಿಲ್ಲ. ಆದರೆ, ಇವರು ಏನೇ ಮಡಿದರೂ ಒಂದಲ್ಲ ಒಂದು ಕಾಂಟ್ರವರ್ಸಿ(Controversy) ಸೃಷ್ಟಿಯಾಗುತ್ತೆ. ಇದೀಗ ಸ್ಟೇಜ್ ಮೇಲೆ ಸಲ್ಲು ಅವರ ವರ್ತನೆಯಿಂದ ಸ್ವತಃ ಸಲ್ಲು ಹಾಗೂ ಪೂಜಾ ಹೆಗ್ಡೆ(Pooja Hegde) ಮುಜುಗರಕ್ಕೊಳಗಾಗಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Mouni Roy ಮದ್ವೆಯಲ್ಲಿ ತೊಟ್ಟಿದ್ದ ಆಭರಣಕ್ಕೂ-ಬೆಂಗಳೂರಿಗೆ ಇದೆ ನಂಟು! ಏನದು ಅಂತೀರಾ? ನೀವೇ ನೋಡಿ

Mouni Roy ಮದ್ವೆಯಲ್ಲಿ ತೊಟ್ಟಿದ್ದ ಆಭರಣಕ್ಕೂ ಬೆಂಗಳೂರಿಗೆ ಇದೆ ನಂಟು!

ಬಾಲಿವುಡ್ (Bollywood) ನಟಿ ಮೌನಿ ರಾಯ್ (Mouni Roy) ಹಾಗೂ ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ವಿವಾಹ ಮಹೋತ್ಸವ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಬೆಂಗಾಲಿ (Bengali) ಬೆಡಗಿ ಸೌತ್ ಇಂಡಿಯನ್ ಲುಕ್(South Indian Look)ನಲ್ಲಿ ಕಂಗೊಳಿಸಿದ್ದು, ಚರ್ಚೆಯ ವಿಷಯವಾಗಿದ್ದು, ವಿಶೇಷವಾಗಿ ವಿವಾಹ ಮಹೋತ್ಸವದ ವೇಳೆ ಆಕೆ ಧರಿಸಿದ್ದ ಆಭರಣಗಳು ಎಲ್ಲರನ್ನ ಆಕರ್ಷಿಸಿವೆ. ಬೆಂಗಳೂರಿನ ಕೃಷ್ಣಯ್ಯ ಚೆಟ್ಟಿ ಜ್ಯುವೆಲರ್ಸ್ನಲ್ಲಿ ಎಲ್ಲಾ ಆಭರಣಗಳನ್ನು ಖರೀದಿಸಲು ಬಾಲಿವುಡ್ ನಟಿ ನಿರ್ಧರಿಸಿದ್ದರು. ಇದಕ್ಕೆ ಕಾರಣವಾಗಿದ್ದು ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಮದುವೆಯ ಉಂಗುರವಂತೆ. ಈ ಬಗ್ಗೆ ಮಾಹಿತಿ ನೀಡಿರುವ ಕೃಷ್ಣಯ್ಯ ಚೆಟ್ಟಿ ಜ್ಯುವೆಲರ್ಸ್ ಸಿಇಒ ಚೈತನ್ಯ ವಿ. ಕೋಥಾ, ಸೂರಜ್ ಅವರು ಮದುವೆ ಉಂಗುರವನ್ನು ನೋಡುತ್ತಿದ್ದ ವೇಳೆ ಅವರು ಯಾವ ಡಿಸೈನ್ ನೋಡುತ್ತಿದ್ದಾರೆ ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರಿಗೆ ವಿವಿಧ ಬಗೆಯ ವಜ್ರದ ಡಿಸೈನ್ಗಳು ಮತ್ತು ಕಟ್ಗಳನ್ನ ತೋರಿಸಿದೆವು. ಅಂತಿಮವಾಗಿ ಅವರು ಮೂರು ಕ್ಯಾರೆಟ್ ಪ್ರಿನ್ಸೆಸ್-ಕಟ್ ಉಂಗುರವನ್ನ ಆಯ್ಕೆ ಮಾಡಿಕೊಂಡರು.
Published by:Kavya V
First published: