Evening Digest: ಗಂಡ-ಹೆಂಡತಿ ವಿಚಾರಕ್ಕೆ ಹೋದ ಪೊಲೀಸ್​​ಗೆ ಫೈನ್​​; ನಟಿ ರಚಿತಾ ಆಸ್ಪತ್ರೆಗೆ ದಾಖಲು: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಗಂಡ-ಹೆಂಡತಿ ವಿಚಾರಕ್ಕೆ ಹೋದ ಪೊಲೀಸ್​ಗೆ ದಂಡ : ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು (Dharwad bench of Karnataka High Court)  ವಿವಾಹಿತ ಮಹಿಳೆ (Married Woman) ಮತ್ತು ಆಕೆಯ 3 ವರ್ಷದ ಮಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಲವಂತವಾಗಿ ಇರಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ (Police Inspector) ಮತ್ತು ಪುನರ್ವಸತಿ ಕೇಂದ್ರಕ್ಕೆ (Rehabilitation Centre) ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಕೃತ್ಯವನ್ನು ನೈತಿಕ ಪೊಲೀಸ್​ಗಿರಿ ಎಂದು ಕರೆಯುವ ಮೂಲಕ ನ್ಯಾಯಾಲಯವು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮಹಿಳೆಯ ವೈವಾಹಿಕ ಜೀವನದಲ್ಲಿ ಇನ್ಸ್‌ಪೆಕ್ಟರ್ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ವಿವಾಹಿತೆ ಕೌಟುಂಬಿಕ ಸಮಸ್ಯೆಗಳಿಂದಾಗಿ ತಮ್ಮ ಮಗುವಿನೊಂದಿಗೆ ತನ್ನ ಗಂಡನ ಮನೆಯಿಂದ ಹೊರ ಬಂದಿದ್ದರು. ಪತಿ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಬಾಳಾಸಾಹೇದ್ ಪಾಟೀಲ್ ಮಹಿಳೆಯನ್ನು ಠಾಣೆಗೆ ಕರೆಸಿ ದಂಪತಿ ನಡುವೆ ಸಂಧಾನಕ್ಕೆ ಯತ್ನಿಸಿದ್ದರು. ಪಕ್ಕದ ಮನೆಯಲ್ಲಿ ವಾಸಿಸುವ ವ್ಯಕ್ತಿಯನ್ನು ಹೆಂಡತಿ ಪ್ರೀತಿಸುತ್ತಿದ್ದು, ಅವನೊಂದಿಗೆ ವಾಸಿಸುವ ಉದ್ದೇಶದಿಂದ ನನ್ನಿಂದ ದೂರವಾಗಿದ್ದಾಳೆ ಎಂದು ಪತಿ ದೂರಿದ್ದ. ನನಗೆ ಗಂಡನೊಂದಿಗೆ ಬದುಕಲು ಇಷ್ಟವಿಲ್ಲ, ಈ ಹಿನ್ನೆಲೆ ಮನೆಯಿಂದ ಹೊರ ಬಂದಿದ್ದೇನೆ ಎಂದು ಪತ್ನಿ ಹೇಳಿದ್ದಳು.

ನಟಿ ರಚಿತಾ ಆಸ್ಪತ್ರೆಗೆ ದಾಖಲು

ಕಳೆದ 15 ದಿನಗಳಿಂದ ಸ್ಯಾಂಡಲ್​ವುಡ್​(Sandalwood) ಡಿಂಪಲ್​ ಕ್ವೀನ್​ ರಚಿತಾ ರಾಮ್(Dimple Queen Rachita Ram​ ಸಖತ್​ ಬ್ಯುಸಿಯಾಗಿದ್ದಾರೆ. ಎಲ್ಲಿ ನೋಡಿದರು ಅವರೇ ಕಾಣುತ್ತಿದ್ದರು. ಮೊನ್ನೆ ಮೊನ್ನೆಯಷ್ಟೇ ರಚಿತಾ ರಾಮ್​ ತಮ್ಮ ಲವ್​​ ಯೂ ರಚ್ಚು(Love You Rachchu) ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಇದಾದ ಬಳಿಕ ಮಂಗಳೂರಿಗೆ ಹೋಗಿ ಬಂದಿದ್ದರು. ನಿಖಿಲ್​ ಕುಮಾರಸ್ವಾಮಿ ಅಭಿನಯದ ರೈಡರ್(Rider)​ ಸಿನಿಮಾದ ಪ್ರಿ ರಿಲೀಸ್​ ಇವೆಂಟ್​ನಲ್ಲಿ ಭಾಗಿಯಾಗಿದ್ದರು. ಚಿತ್ರದ ಶೂಟಿಂಗ್, ಪ್ರಮೋಷನ್ ಅಂತ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ನಟಿ ರಚಿತಾ ರಾಮ್ (Rachita Ram) ಆಯಾಸಕ್ಕೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಡಿಸ್ಚಾರ್ಚ್‌ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಬ್ಯೂಸಿಯಾಗಿರುವ ನಟಿಗೆ ಹೆಚ್ಚಿದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ ಮನೆ ಬಳಿ ಇರುವ ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪ್ರಚಾರ ಭರಾಟೆಯಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಒಂದೇ ಒಂದು ದಿನವೂ ಬಿಡುವಿಲ್ಲದೆ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ರಚಿತಾ ರಾಮ್. ಈ ಮಧ್ಯೆ ಸಿನಿಮಾಗಳ ಪ್ರಚಾರಕ್ಕೂ ಸಮಯ ಮೀಸಲಿಟ್ಟಿದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿರುವುದರಿಂದ ರಚಿತಾ ರಾಮ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಲಾಗಿದೆ.

ಧ್ವಜಾರೋಹಣ ಮಾಡುವಾಗ ಕಳಚಿ ಬಿದ್ದ ಕಾಂಗ್ರೆಸ್ ಬಾವುಟ

ಕಾಂಗ್ರೆಸ್​​ ಸಂಸ್ಥಾಪನಾ ದಿನ ಹಿನ್ನಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಕ್ಷದ (Congress Flag) ಧ್ವಜವನ್ನು ಹಾರಿಸುತ್ತಿರುವಾಗ ಧ್ವಜಸ್ತಂಭದಿಂದ ಧ್ವಜ ಬಿದ್ದು ಘಟನೆ ದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ 137ನೇ ಸಂಸ್ಥಾಪನಾ ದಿನವನ್ನು (Congress Foundation Day) ಆಚರಿಸುತ್ತಿದ್ದಾಗ ಈ ಅವಘಡ ನಡೆದಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಧ್ವಜಾರೋಹಣ ಮಾಡುವಾಗ ಈ ಅಚಾತುರ್ಯ ನಡೆದಿದೆ. ಧ್ವಜ ಹಾರಿಸುವಾಗ ಧ್ವಜವೇ ಕೆಳಗೆ ಬಿತ್ತು. ಬಳಿಕ ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರೊಂದಿಗೆ ಸೋನಿಯಾ ಗಾಂಧಿ ಅವರು ಪಕ್ಷದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಕ್ಷದ ಇದನ್ನು ಸರಿಪಡಿಸಿ, ಧ್ವಜಾರೋಹಣ ಮಾಡಿದರು

2ನೇ ಗಂಡನಿಂದ ಕೊಲೆ

ಜಿಗಣಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ವೋಟ್​ ಮಾಡಿ ಹಿಂತಿರುಗುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ಮಹಿಳೆಯನ್ನು ಅರ್ಚನಾ ರೆಡ್ಡಿ (32) ಎಂದು ಗುರುತಿಸಲಾಗಿದೆ. ಜಿಗಣಿ ನಿವಾಸಿ ಅರ್ಚನಾ ರೆಡ್ಡಿಯನ್ನು 2ನೇ ಗಂಡ ನವೀನ್​ ಕುಮಾರ್​​ ಹತ್ಯೆಗೈದಿದ್ದಾನೆ. ವೋಟ್​ ಮಾಡಿ ಕಾರಿನಲ್ಲಿ ಹೋಗುತ್ತಿದ್ದ ಅರ್ಚನಾರನ್ನು ನವೀನ್​ ತನ್ನ ಸಹಚರರೊಂದಿಗೆ ರಸ್ತೆ ಮಧ್ಯೆ ಅಡ್ಡಗಟ್ಟಿ ಕೊಲೆ ಮಾಡಿದ್ದಾನೆ. ಅರ್ಚನಾಗೆ ಈಗಾಗಲೇ ಮದುವೆ ಆಗಿ ಒಂದು ಮಗು ಇತ್ತು. ಮೊದಲ ಗಂಡನಿಂದ ಡಿವೋರ್ಸ್​ ಪಡೆದ ಬಳಿಕ 5 ವರ್ಷಗಳ ಹಿಂದೆ ಆರೋಪಿ ನವೀನ್​ ಕುಮಾರನನ್ನು 2ನೇ ಮದುವೆಯಾಗಿದ್ದರು. 2ನೇ ಗಂಡನೊಂದಿಗೆ ಅನೋನ್ಯವಾಗೇ ಇದ್ದ ಅರ್ಚನಾ ಇತ್ತೀಚೆಗೆ ಆತನಿಂದಲೂ ದೂರವಾಗಿ ಮಗನೊಂದಿಗೆ ಬದುಕುತ್ತಿದ್ದರು. ಅರ್ಚನಾ-ನವೀನ್​ ಮಧ್ಯೆ ಕೌಟುಂಬಿಕ ಜಗಳ ಹೆಚ್ಚಾಗಿದ್ದರಿಂದ ದೂರವಾಗಿದ್ದರು. ಸಾಂಸಾರಿಕ ಜಗಳ ಮಾತ್ರವಲ್ಲದೇ ಆಸ್ತಿ ವಿವಾದವೂ ​ಅರ್ಚನಾ-ನವೀನ್​ ವೈಮನಸ್ಸಿಗೆ ಕಾರಣವಾಗಿತ್ತು. ಆಸ್ತಿ ವಿಚಾರವಾಗಿ ಕಿತ್ತಾಡಿಕೊಂಡಿದ್ದ ಗಂಡ ನವೀನ್​​ ಹೆಂಡತಿಯ ಕೊಲೆಗೆ ಸ್ಕೆಚ್​ ಹಾಕಿದ್ದ.
Published by:Kavya V
First published: