Evening Digest: 9 ಸೆಕೆಂಡ್‌ಗಳಲ್ಲಿ ಟ್ವಿನ್ ಟವರ್ಸ್ ನೆಲಸಮ, Ind-Pak ಮ್ಯಾಚ್‌ಗೆ ಕ್ಷಣಗಣನೆ! ಸೂಪರ್ ಸಂಡೇಯ ಸಂಜೆ ಸುದ್ದಿ ಇಲ್ಲಿದೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
Noida Twin Towers Demolition: ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮ! 9 ಸೆಕೆಂಡ್‌ಗಳಲ್ಲಿ ಡೆಮಾಲಿಷನ್

ನೋಯ್ಡಾ: ಇಡೀ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನೋಯ್ಡಾದ (Noida) ಬೃಹತ್ ಅವಳಿ ಕಟ್ಟಡ (Big Twins Tower) ನೆಲಸಮವಾಗಿದೆ. 337 ಅಡಿ ಎತ್ತರದ ನೋಯ್ಡಾದ (Noida) ಸೂಪರ್​ಟೆಕ್ (Super tech) ಅವಳಿ ಕಟ್ಟಡಗಳ ನೆಲಸಮ (Demolition) ಆಗಿದೆ. ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ನೋಯ್ಡಾದ ಸೆಕ್ಟರ್ 93ಎ ( Noida Sector 93A) ಪ್ರದೇಶದಲ್ಲಿರುವ ಎರಡು ದೊಡ್ಡ ಕಟ್ಟಡಗಳನ್ನು ಕಾನೂನಿನ ನಿಯಮದ ವಿರುದ್ಧವಾಗಿ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾನೂನು ಹೋರಾಟದ (Legal fight)  ನಂತರ ಈ ಕಟ್ಟಡಗಳು ಧರೆಗುರುಳಿವೆ.

ಕಟ್ಟಡ ಉರುಳಿಸಿದ ಬಳಿಕ ಧೋಳೋ ಧೂಳು!

ನೋಯ್ಡಾ: ಇಡೀ ದೇಶದ ಗಮನ ಸೆಳೆದಿದ್ದ ನೋಯ್ಡಾದ (Noida) ಗಗನಚುಂಬಿ ಅವಳಿ ಕಟ್ಟಡ (Twin Towers) ಧರಾಶಾಹಿಯಾಗಿದೆ. ಇಂದು ಮಧ್ಯಾಹ್ನ 2.30ಕ್ಕೆ ಕೇವಲ ಒಂಬತ್ತೇ ಸೆಕೆಂಡ್‌ಗಳಲ್ಲೇ (9 Seconds) 337 ಅಡಿ ಎತ್ತರದ ಬೃಹತ್ ಕಟ್ಟಡ ಧರಾಶಾಹಿಯಾಗಿದೆ. 3,700 ಕೆಜಿ ಸ್ಫೋಟಕ (Explosive) ಬಳಸಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭಗೊಂಡಿದ್ದು, ಮಧ್ಯಾಹ್ನ 2.30ಕ್ಕೆ ಸರಿಯಾಗಿ ಅವಳಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಇದೀಗ ಕಟ್ಟಡ ಇದ್ದ ಸ್ಥಳದ ಸುತ್ತಮುತ್ತ ಧೂಳು ಇನ್ನೂ ಕಡಿಮೆಯಾಗಿಲ್ಲ. ಕಟ್ಟಡ ಧರಾಶಾಹಿ ಆಗಿರುವುದನ್ನು ಅತೀ ಹೆಚ್ಚು ಜನ ನೋಡಿ ಕಣ್ತುಂಬಿಕೊಂಡಿದ್ದಲ್ಲದೇ, ಈಗಲೂ ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರ

ಇದನ್ನೂ ಓದಿ: Noida Twin Towers Demolition: ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮ! 9 ಸೆಕೆಂಡ್‌ಗಳಲ್ಲಿ ಡೆಮಾಲಿಷನ್

ನಟ ಜಗ್ಗೇಶ್ ಮನೆ ಜಲಾವೃತ; ವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ರಾಜ್ಯಸಭಾ ಸದಸ್ಯ

ರಾಜ್ಯಾದ್ಯಂತ (Karnataka)  ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಎರಡು-ಮೂರು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ (Heay Rain). ಇದ್ರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ನೂರಾರು ರೈತರ ಬೆಳೆ ಹಾನಿಯಾಗಿದೆ. ಹಾಗೇ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Rajya Sabha Member Jaggesh) ಅವರ ಮಾಯಸಂದ್ರ ಮನೆ ಜಲಾವೃತಗೊಂಡಿದೆ. ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ನೀರು (Water) ತುಂಬಿಕೊಂಡಿರೋ ಫೋಟೋ ಅಪ್ಲೋಡ್​ ಮಾಡಿರೋ ನಟ ಜಗದೀಶ್​, ಸಮಸ್ಯೆಯ (Problem) ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ.

ಇಂಡೋ-ಪಾಕ್​ ಕದನದಲ್ಲಿ ಗೆಲುವು ಯಾರಿಗೆ?

ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿದೆ. ಇದರ ನಡುವೆ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೌದು, ಇನ್ನೇನು ಕೆಲವೇ ನಿಮಿಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ದುಬೈನ ಅಂತಾರಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಕೊರೋನಾ ಹಿನ್ನಲೆ 2 ವರ್ಷಗಳ ನಂತರ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ. 10 ತಿಂಗಳ ನಂತರ ಮತ್ತೆ ಬದ್ಧ ವೈರಿಗಳಾದ ಇಂಡೋ-ಪಾಕ್​ ಮುಖಾಮುಖಿಯಾಗುತ್ತಿದ್ದು, ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ.

ಇದನ್ನೂ ಓದಿ: Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಸ್ನೇಹಿತನಿಗೆ ವಿಶೇಷ ಸಂದೇಶ ಕಳುಹಿಸಿದ ಎಬಿಡಿ, ಸ್ಪೆಷಲ್ ರೆಕಾರ್ಡ್​ಗೆ ಕೊಹ್ಲಿ ಸಿದ್ಧ

ಇನ್ಮುಂದೆ Disney+Hotstarನಲ್ಲೇ ಕ್ರಿಕೆಟ್ ನೋಡಬೇಕು, ಇದಕ್ಕಾಗಿ Jioದಿಂದ 3 ತಿಂಗಳ ಉಚಿತ ಪ್ಲಾನ್

ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ನಲ್ಲಿ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಭಾರತ ಪಾಕಿಸ್ತಾನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ನೀವು ಸಹ ಅಗ್ಗದ ಯೋಜನೆಯನ್ನು ಹುಡುಕುತ್ತಿದ್ದರೆ, ಗ್ರಾಹಕರಿಗೆ ಡಿಸ್ನಿ + ಹಾಟ್‌ಸ್ಟಾರ್‌ನ ಪ್ರಯೋಜನವನ್ನು ನೀಡುವ ಜಿಯೋದ ಕೆಲವು ಯೋಜನೆಗಳ ಬಗ್ಗೆ ನಿಮಗೆ ಇಲ್ಲಿ ತಿಳಿಸಲಾಗಿದೆ. ಏಷ್ಯಾಕಪ್ನಲ್ಲಿ ಭಾರತದ ಮೊದಲ ಪಂದ್ಯ ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್ನಲ್ಲಿ ಮತ್ತು ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಭಾರತ ಪಾಕಿಸ್ತಾನ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
Published by:Annappa Achari
First published: