Evening Digest: ಪ್ರೀತಿ ನಿರಾಕರಿಸಿದ್ದಕ್ಕೆ ಪಾಪದ ಕೃತ್ಯ; ಪಾಟ್ನಾದಲ್ಲಿ ಅಪಾಯಕಾರಿ ಓಮ್ರಿಕಾನ್​ ತಳಿ ಪತ್ತೆ: ಈ ದಿನದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಪ್ರೀತಿ ನಿರಾಕರಿಸಿದ್ದಕ್ಕೆ ಪಾಪದ ಕೃತ್ಯ
  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 24 ವರ್ಷದ ಯವತಿ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿದೆ. ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಈ ರೀತಿಯ ಪಾಪದ ಕೃತ್ಯ ಎಸಗಿದ್ದಾನೆ. ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ಎರಚಿದ್ದಾನೆ.ಯುವತಿ ನಾಗೇಶ್‌ನ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆಯೂ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ಇಂದು ಆಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಂದು ಆ್ಯಸಿಡ್ ಎರಚಿ, ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

  ಯುವತಿ ಸಾವಿನ ಸುತ್ತ ಅನುಮಾನದ ಹುತ್ತ
  ಗಲವಾಡಿ ಮೋಳೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಯುವತಿ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿದೆ. ಆತ್ಮಹತ್ಯೆಯೋ? ಮರ್ಯಾದಾ ಹತ್ಯೆಯೋ? ಅನ್ನೋ ಪ್ರಶ್ನೆ ಕಾಡುತ್ತಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಇದು ಮರ್ಯಾದಾ ಹತ್ಯೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೋಷಕರೇ ಆಕೆಯನ್ನು ಕೊಂದು ಹಾಕಿದ್ದಾರೆ ಅನ್ನೋ ಅನುಮಾನ ಮೂಡಿದೆ. ಯಾಕೆಂದ್ರೆ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿ ಮಾಡುತ್ತಿದ್ದಳು ಇದಕ್ಕೆ ಪೋಷಕರ ವಿರೋಧವಿತ್ತು. ಪೋಷಕರು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಗ್ರಾಮಸ್ಥರಿಗೆ ಹೇಳಿ, ಶವವನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

  ಸುಮಲತಾಗೆ ಬಿಜೆಪಿ ಆಹ್ವಾನ
  ಬಿಜೆಪಿ ನಾಯಕರು ರೆಡ್​ ಕಾರ್ಪೆಟ್​ ಹಾಕಿ ಸಂಸದೆ ಸುಮಲತಾ ಅವರಿಗೆ ಸ್ವಾಗತ ಕೋರಿದ್ದಾರೆ. ಆದ್ರೆ ಸಂಸದೆ ಸುಮಲತಾ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿಲ್ಲ ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರೋ ಸಂಸದೆ ಸುಮಲತಾ ಅವ್ರು, ಹಲವು ಬಾರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಬಿಜೆಪಿ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ, ಮಂಡ್ಯ ಜನರನ್ನು ಕೇಳ್ಬೇಕು ಅಂತಿದ್ರು. ಸಚಿವ ಅಶ್ವತ್ಥ್​ ನಾರಾಯಣ ಸಹ ಸುಮಲತಾಗೆ ಬಿಜೆಪಿ ಸೇರ್ಪಡೆ ಆಹ್ವಾನ ನೀಡಿದ್ದು, ಸದ್ಯಕ್ಕೆ ನನಗೆ ಯಾವ ಪಕ್ಷ ಸೇರುವ ಅವಶ್ಯಕತೆ ಇಲ್ಲ ಎಂದು ಸುಮಲತಾ ಹೇಳಿದ್ದಾರೆ.

  ಸೂರ್ಯನ ಸುಡು ಬಿಸಿಲು
  ಬೇಸಿಗೆ ಬಿಸಿ ಈಗಾಗಲೇ ದೇಶವನ್ನು ಆವರಿಸಿದೆ. ನೆತ್ತಿ ಮೇಲೆ ಸುಡುವ ಸೂರ್ಯನಿಂದ ಜನರು ಈಗಾಗಲೇ ಬಳಲಿದ್ದಾರೆ. ಅದರಲ್ಲೂ ಉತ್ತರ ಭಾರತದ ಈ ಪ್ರದೇಶಗಳಲ್ಲಿ ಈ ಸೂರ್ಯ (Summer Heat) ಇನ್ನು ಮೂರು ದಿನ ಬೆಂಕಿಯಂತೆ ಸುಡಲಿದ್ದಾನೆ. ದೈನಂದಿನ ತಾಪಮಾನ 2 ಡಿಗ್ರಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

  ಪಾಟ್ನಾದಲ್ಲಿ ಅಪಾಯಕಾರಿ ಓಮ್ರಿಕಾನ್​ ತಳಿ ಪತ್ತೆ
  ದೇಶದೆಲ್ಲೆಡೆ ಇದೀಗ ಕೋವಿಡ್​ ನಾಲ್ಕನೇ ಅಲೆ ಆತಂಕ ಎದುರಾಗಿದೆ. ಈ ನಡುವೆ ಪಾಟ್ನಾದಲ್ಲಿ ಓಮಿಕ್ರಾನ್​ನ ಹೊಸ ರೂಪಾಂತರ ತಳಿ ಪತ್ತೆ ಆಗಿರುವುದು ಆತಂಕ ಮೂಡಿಸಿದೆ. ವಿಶೇಷ ಎಂದರೆ, ಇಲ್ಲಿ ಪತ್ತೆಯಾಗಿರುವ ಈ ಓಮಿಕ್ರಾನ್​ ಹೊಸ ರೂಪಾಂತರ ತಳಿ ಈ ಹಿಂದಿನ BA.2. 12 BA.2 ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ

  ಕಿಚ್ಚಗೆ ಸಿಎಂ ಬೆಂಬಲ
  ಭಾಷೆ ವಿಚಾರಕ್ಕೆ ಬಂದಾಗ ಕನ್ನಡಿಗರು ಒಟ್ಟಾಗಿ ನಿಲ್ಲುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಕಿಚ್ಚ ಸುದೀಪ್​ ಹೇಳಿಕೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ಸಿಎಂ ಬಸವರಾಜ್​ ಬೊಮ್ಮಾಯಿ ಕೂಡ ಸಾಥ್​ ಕೊಟ್ಟಿದ್ದಾರೆ. 'ಕಿಚ್ಚ ಸುದೀಪ್​ ಹೇಳಿರುವುದು ಸರಿ ಇದೆ. ಆ ಆ ರಾಜ್ಯಗಳಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ಇದೆ. ಅದುವೇ ಸಾರ್ವಭೌಮ. ಅದೇ ವಿಚಾರವನ್ನು ಸುದೀಪ್​ ಹೇಳಿದ್ದಾರೆ. ಇದನ್ನು ಎಲ್ಲರೂ ಗೌರವಿಸಬೇಕು ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.
  Published by:Seema R
  First published: