Evening Digest Sep 27: ಬೆಂಗಳೂರಲ್ಲಿ ನೈಟ್​​ಕರ್ಫ್ಯೂ ವಿಸ್ತರಣೆ; 45 ದಿನ ಬಾರುಗಳು ಬಂದ್: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಬೆಂಗಳೂರಲ್ಲಿ ನೈಟ್​​ಕರ್ಫ್ಯೂ ಮುಂದುವರಿಕೆ: ರಾಜ್ಯದಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಅನ್ನು ಅಕ್ಟೋಬರ್​ 11ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಈ ಹಿಂದೆ ಸೆ. 27ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಆದೇಶ ನೀಡಿತ್ತು. ಈಗ ಈ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ರವರೆಗೆ ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಮೇರೆಗೆ ನಗರ ಪೊಲೀಸ್ ಆಯುಕ್ತರ ಆದೇಶ ಹೊರಡಿಸಿದ್ದಾರೆ.

45 ದಿನ ಬಾರುಗಳು ಬಂದ್

ಅಕ್ಟೋಬರ್ 1ರಿಂದ ಸತತ ಒಂದೂವರೆ ತಿಂಗಳುಗಳ ಕಾಲ ರಾಜ್ಯದ ಎಲ್ಲ ಖಾಸಗಿ ಲಿಕ್ಕರ್ ಶಾಪ್​​ಗಳು ಬಂದ್​​ ಆಗಲಿವೆ. ಅದಕ್ಕೆ ಕಾರಣವೂ ಇದೆ. ಅಂದ ಹಾಗೆ ಲಿಕ್ಕರ್ ಅಂಗಡಿ ಬಂದ್​ ಆಗುತ್ತಿರುವುದು ದೆಹಲಿಯಲ್ಲಿ. ದೆಹಲಿಯ ಮದ್ಯದ ಅಂಗಡಿಗಳು ಖಾಲಿ ಖಾಲಿಯಾಗಿವೆ. ಅಲ್ಲಿಯ ಅಂಗಡಿಯ ಕಪಾಟುಗಳು ಖಾಲಿಯಾಗಿವೆ. ದೆಹಲಿಯ ಜನರು ತಮ್ಮ ಇಷ್ಟದ ಲಿಕ್ಕರ್ ಪಡೆಯಲು ಕಷ್ಟಪಡುತ್ತಿದ್ದಾರೆ. ನವೆಂಬರ್ 16 ರಿಂದ ದೆಹಲಿಯಲ್ಲಿ ಹೊಸ ಮದ್ಯ ಪರವಾನಗಿ ನೀತಿ ಜಾರಿಗೆ ಬರಲಿದೆ. ನವೆಂಬರ್ 16 ರಿಂದ ಹೊಸ ಮದ್ಯ ನೀತಿ ಜಾರಿಗೆ ಬರುವ ಕಾರಣ, ಎಲ್ಲಾ ಖಾಸಗಿ ಮದ್ಯದಂಗಡಿಗಳು ಅಕ್ಟೋಬರ್ 1 ರಿಂದ ನವೆಂಬರ್ 16 ರವರೆಗೆ ಬಂದ್ ಆಗಿರಲಿವೆ. ಇದು ಸಹಜವಾಗಿ ದೆಹಲಿಯಲ್ಲಿ ಮದ್ಯದ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಸರ್ಕಾರದ ಹೊಸ ಅಬಕಾರಿ ನೀತಿಯಡಿಯಲ್ಲಿ, 32 ವಲಯಗಳಲ್ಲಿ ಅತಿಹೆಚ್ಚು ಬಿಡ್ಡರ್‌ಗಳಿಗೆ ಚಿಲ್ಲರೆ ಮದ್ಯ ಮಾರಾಟ ಪರವಾನಗಿಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ.

ಸಿದ್ದರಾಮಯ್ಯನ ನೇತು ಹಾಕಿದ್ರೆ ಅವರ ಪಂಚೆ ಏನಾಗುತ್ತಿತ್ತು

ಬಿಜೆಪಿಯವರು ತಾಲಿಬಾನಿಗಳು(Talibanis) ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah )ಹೇಳಿಕೆ ವಿರುದ್ಧ ಕೇಸರಿ ನಾಯಕರು ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿ, ತಾಲಿಬಾನ್ ಒಂದೇ ಆಗಿದ್ರೆ, ಸಿದ್ದರಾಮಯ್ಯ ಪರಿಸ್ಥಿತಿ ಏನು ಆಗ್ತಿತ್ತು. ಅಫ್ಘಾನಿಸ್ತಾನದಲ್ಲಿ ವಿಪಕ್ಷಗಳನ್ನು ಕ್ರೇನ್ ನಲ್ಲಿ ನೇತು ಹಾಕಿದ್ದಾರೆ. ಅದರಂತೆ ಇಲ್ಲಿ ಬಿಜೆಪಿ ತಾಲಿಬಾನ್ ಆಗಿದ್ರೆ ಅವರ ಸ್ಥಿತಿಗತಿ ಏನು ಆಗ್ತಿತ್ತು. ಅವರನ್ನು ಕ್ರೇನ್ ಮೂಲಕ ನೇತಾಡಿಸ್ತಿದ್ರೆ ಅವ್ರ ಪಂಚೇ ಏನು ಆಗ್ತಿತ್ತು ಎಂದು ವ್ಯಂಗ್ಯವಾಡಿದರು. ಅಕಾಸ್ಮಾತ್ ಬಿಜೆಪಿ ಸರ್ಕಾರ ತಾಲಿಬಾನ್ ಆಗಿದಿದ್ರೆ, ವಿಪಕ್ಷ ನಾಯಕರನ್ನು ಕ್ರೇನ್ ಮೂಲಕ ನೇತು ಹಾಕ್ತಿದ್ವಿ. ಆದರೆ ನಾವು ತಾಲಿಬಾನ್ ಗಳಲ್ಲ. ಎಲ್ಲಿವರೆಗೂ ಆರ್ ಎಸ್ ಎಸ್ ಇರುತ್ತೋ, ಅಲ್ಲಿಯವರೆಗೂ ಸಿದ್ದರಾಮಯ್ಯ ಸೇರಿದಂತೆ ಅವ್ರ ಮಕ್ಕಳು, ಮೊಮ್ಮಕ್ಕಳು ಮಜಬೂತರಾಗಿರ್ತಾರೆ.

ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅಲ್ಲ ಯಾರಿಂದಲೂ ಸಾಧ್ಯವಿಲ್ಲ

ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ (JDS) ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಮಾಜಿ ಪ್ರಧಾನಮಂತ್ರಿಗಳ ಹೆಚ್.ಡಿ.ದೇವೇಗೌಡರು (HD Devegowda) ಹೇಳಿದರು. 2023ಕ್ಕೆ ಜಾತ್ಯತೀತ ಜನತಾದಳದ ಹಾಗೂ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜನತಾ ಸರಕಾರ ರಚನೆ ಮಾಡುವ ಗುರಿಯೊಂದಿಗೆ ಬಿಡದಿ ಫಾರ್ಮ್ ಹೌಸ್ ನಲ್ಲಿ ಆರಂಭವಾದ 4 ದಿನಗಳ 'ಜನತಾ ಪರ್ವ 1.O'  (Janata Parva 1.0) ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರೈತರ ಹೋರಾಟ 10 ತಿಂಗಳಲ್ಲ 10 ವರ್ಷವಾದರೂ ಮುಂದುವರೆಯುತ್ತದೆ

 ಕೇಂದ್ರ ಸರ್ಕಾರದ (Central Govrnment) ವಿವಾದಾತ್ಮಕ ಕೃಷಿ ಕಾಯ್ದೆಗಳ (Agriculture Bill) ವಿರುದ್ಧ ಕಳೆದ ಒಂದು ವರ್ಷದಿಂದ ದೇಶದಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಹೋರಾಟದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪರಿಣಾಮ ಇಂದು ರೈತ ಸಂಘಟನೆಗಳು ದೇಶದಾದ್ಯಂತ ಬಂದ್​ಗೆ ಕರೆ ನೀಡಿದ್ದು, ಈ ಬಂದ್​ ಸಹ ಯಶಸ್ವಿಯಾಗಿದೆ. ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಇಂದು ಹೇಳಿಕೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್​ (Rakesh Tikait), " ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಮುಂದಿನ 10 ವರ್ಷಗಳವರೆಗೂ ಚಳವಳಿ ನಡೆಸಲು ಸಿದ್ಧರಿದ್ದಾರೆ. ಆದರೆ ಈ ಕರಾಳ ಕಾಯ್ದೆಗಳನ್ನು ಜಾರಿಗೊಳಿಸಲು ಯಾವತ್ತೂ ಬಿಡುವುದಿಲ್ಲ" ಎಂದು ಘೋಷಿಸಿದ್ದಾರೆ.
Published by:Kavya V
First published: