Evening Digest: ಮಾ. 29ರಂದು KSRTC, BMTC ರಸ್ತೆಗಿಳಿಯಲ್ವಾ? ಹೇಗಿದೆ KGF 2 ಟ್ರೈಲರ್? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಾ. 29ರಂದು KSRTC, BMTC ಬಸ್ ರಸ್ತೆಗಿಳಿಯಲ್ವಾ?: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು (Karnataka Road Transport) ರಾಜ್ಯ ಸರ್ಕಾರದ (Karnataka Government)ವಿರುದ್ಧ ಮತ್ತೆ ಸಿಡಿದಿದ್ದಾರೆ. ತಮ್ಮ ವೇತನ ಪರಿಷ್ಕರಣೆ, ಅಧಿಕಾರಿಗಳ ಕಿರುಕುಳ ಸೇರಿದಂತೆ 2021 ರ ಮುಷ್ಕರದಲ್ಲಿ ಭಾಗಿಯಾದ ನೌಕರರನ್ನು ವಜಾಗೊಳಿದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು (KSRTC Strike) ತೀರ್ಮಾನಿಸಿದ್ದಾರೆ. ಮಾರ್ಚ್ 29ರಂದು ಕರ್ನಾಟಕ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳ (Government Bus Service) ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಲನ್ನೇ ನಂಬಿಕೊಂಡು ಪ್ರಯಾಣ ಮಾಡುವ ನಾಗರಿಕರು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಒಳಿತು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Bus Strike: ಗಮನಿಸಿ! ಮಾರ್ಚ್ 29ರಂದು KSRTC, BMTC ಬಸ್ ರಸ್ತೆಗಿಳಿಯೋದು ಅನುಮಾನ!

ಕೋಲಾರದಿಂದ ಕಣಕ್ಕಿಳೀತಾರಾ ಸಿದ್ದರಾಮಯ್ಯ?
2023ರ ವಿಧಾನಸಭೆ ಚುನಾವಣೆಗೆ (Assembly Election) ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು (Congress MLA) ಮೇಲಿಂದ ಮೇಲೆ ಒತ್ತಡ ಹಾಕ್ತಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾದ ಹಿನ್ನೆಲೆ ಸಿದ್ದರಾಮಯ್ಯ ಅವರನ್ನು ಇಲ್ಲಿಯೇ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದಾರೆ. ಇದುವರೆಗೂ ಕೋಲಾರ (Kolara) ವಿಧಾನಸಭಾ ಕ್ಷೇತ್ರದಲ್ಲಿ ಯಾವೊಬ್ಬ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Karnataka Politics: ಕೋಲಾರದಿಂದ ಕಣಕ್ಕಿಳೀತಾರಾ ಸಿದ್ದರಾಮಯ್ಯ? ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಎಂದ್ರು ಸಿದ್ದು

ಭಾರತ್ ಬಂದ್ ಗೆ ಕರೆ
ಮಾರ್ಚ್ 28 ಮತ್ತು 29 ರಂದು 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ/ಬಂದ್ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ಮಾರ್ಚ್ 28 ಮತ್ತು 29 ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪಶ್ಚಿಮ ಬಂಗಾಳ ಸರ್ಕಾರ ಎಲ್ಲಾ ಕಚೇರಿಗಳು ಆ ದಿನಗಳಲ್ಲಿ ತೆರೆದಿರುತ್ತವೆ. ನೌಕರರು ಕರ್ತವ್ಯಕ್ಕೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಹೋಟೆಲ್ ಗಳು ತೆರೆದಿರುತ್ತವೆ. ಬಸ್ಗಳು ಮತ್ತು ರೈಲುಗಳ ಟಿಕೆಟ್ಗಳ ಆನ್ಲೈನ್ ಬುಕ್ಕಿಂಗ್ ಲಭ್ಯವಿರಲಿದೆ. ಸಾರಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

ಪುಟಿನ್ ಅವರನ್ನು ಕಟುಕ ಎಂದ ಬಿಡೆನ್
ಉಕ್ರೇನ್ ಮೇಲೆ ರಷ್ಯಾ ದಾಳಿಯೂ (Russia Ukraine War) ಮತ್ತಷ್ಟು ಭೀಕರತೆಯನ್ನು ಮುಟ್ಟಿದೆ. ರಷ್ಯಾದ ರಾಕೆಟ್ಗಳು ಪಶ್ಚಿಮ ಉಕ್ರೇನಿಯನ್ ನಗರವಾದ ಎಲ್ವಿವ್ ಅನ್ನು ಹೊಡೆದುರುಳಿಸಿವೆ. ಇದೇ ಸಮಯದಲ್ಲಿ ನೆರೆಯ ಪೋಲೆಂಡ್ಗೆ ಭೇಟಿ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್(US President Joe Biden) , ರಷ್ಯಾ ಅಧ್ಯಕ್ಷ ಪುಟಿನ್ (Russian President Vladimir Putin) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ಪುಟಿನ್ನ ಕಟುಕ ಎಂದು ಬಿಡೆನ್ ಜರಿದಿದ್ದಾರೆ. ಅಂತಹ ವ್ಯಕ್ತಿ ರಷ್ಯಾದ ಅಧ್ಯಕ್ಷನಾಗಿ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಪೊಲೆಂಡ್ನಲ್ಲಿ ಮಾಡಿದ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ‘ಸುದೀರ್ಘ ಸಂಘರ್ಷಕ್ಕೆ ರಷ್ಯಾ ಸಿದ್ಧವಾಗಬೇಕಿದೆ’ ಎಂದು ಎಚ್ಚರಿಸಿದ್ದರು. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಅಮೆರಿಕ ಸಹಿಸುವುದಿಲ್ಲ. ರಷ್ಯಾದ ಕಾರ್ಯತಂತ್ರವನ್ನು ಅಮೆರಿಕಾ ಖಂಡಿಸುತ್ತಿದೆಯೇ ಹೊರತು, ಸಾಮಾನ್ಯ ರಷ್ಯನ್ನರು ನಮ್ಮ ಶತ್ರುಗಳಲ್ಲ ಎಂದು ಬಿಡೆನ್ ಸ್ಪಷ್ಟನೆ ನೀಡಿದ್ದಾರೆ.

ಹೇಗಿದೆ KGF 2 ಟ್ರೈಲರ್?
ಹೊರ ದೇಶಗಳಲ್ಲಿಯೂ ಟ್ರೈಲರ್ ಬಿಡುಗಡೆ ಮಾಡಲು ಟ್ರೇಲರ್ನ ಸೆನ್ಸಾರ್ ಮಾಡಲಾಗಿದ್ದು, ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ನೋಡಿದ ಸೆನ್ಸಾರ್ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್ಬೋರ್ಡ್ ಸದಸ್ಯ ತಾವು ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೈಲರ್ ಬಗ್ಗೆ ಸಹ ಹೇಳಿದ್ದಾರೆ. ‘ಈ ಟ್ರೈಲರ್ ಅದ್ಭುತವಾಗಿದೆ, ಗೂಸ್ಬಂಪ್ಸ್ ಮತ್ತು ಮೈಂಡ್ಬ್ಲೋವಿಂಗ್ ಆಗಿದೆ. ಯಶ್ಗೆ ದೊಡ್ಡ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.
Published by:Kavya V
First published: