Evening Digest: ಮಹಾ ರಾಜಕೀಯದಲ್ಲಿ ಏನಾಯ್ತು? ಪ್ರಖ್ಯಾತ ನಟ ಸೂಸೈಡ್! ಇವು ಈ ಸಂಜೆಯ ಟಾಪ್‌ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಖ್ಯಾತ ನಟ ಆತ್ಮಹತ್ಯೆ; ಕೌಟುಂಬಿಕ ಸಮಸ್ಯೆ ಸಾವಿಗೆ ಕಾರಣವೇ?

ಮಲಯಾಳಂನ ಜನಪ್ರಿಯ ನಟ ND ಪ್ರಸಾದ್ ತಮ್ಮ ಮನೆಯ ಹೊರಗಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 43 ವರ್ಷದ ಅವರು ಇಂದು (ಜೂನ್ 25) ಕೊಚ್ಚಿ ಬಳಿಯ ಕಲಮಸ್ಸೆರಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಟ ND ಪ್ರಸಾದ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಮಕ್ಕಳೇ ತಮ್ಮ ತಂದೆಯ ಶವವನ್ನು ಪತ್ತೆಹಚ್ಚಿದ್ದಾರೆ. ಪ್ರಸಾದ್ ಅವರ ಮಕ್ಕಳು ತಮ್ಮ ತಂದೆಯ ಬಗ್ಗೆ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎನ್​ಡಿ ಪ್ರಸಾದ್ ಅನೇಕ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಆಕ್ಷನ್ ಹೀರೋ ಬಿಜು ಚಿತ್ರದಲ್ಲಿನ ಅವರ ಅಭಿನಯವು ಅವರನ್ನು ಖ್ಯಾತಿಗೆ ತಂದಿತು.

Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

ನವದೆಹಲಿ: ಮಹಾರಾಷ್ಟ್ರ (Maharashtra) ರಾಜ್ಯ ರಾಜಕೀಯ (State Politics) ಹೈಡ್ರಾಮಾ (High Drama) ಸುಪ್ರೀಂ ಕೋರ್ಟ್ (Supreme Court) ಅಂಗಳ ತಲುಪಿದೆ. ಶಿವಸೇನೆಯ (Shiv Sena) ಬಂಡಾಯ ಶಾಸಕರ (Rebel MLA) ನಾಯಕ ಏಕನಾಥ ಶಿಂಧೆ (Eknath Shindhe) ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏಕನಾಥ ಶಿಂಧೆ ಸೇರಿ 16 ಶಾಸಕರನ್ನು ಅನರ್ಹ (Disqualify) ಮಾಡಲು ಉಪ ಸ್ಪೀಕರ್‌ (Deputy Speaker) ನರಹರಿ ಅವರು ನೀಡಿರುವ ನೋಟಿಸ್‌ (Notice) ಅನ್ನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.

ಇದನ್ನೂ ಓದಿ: Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಟ ವಿಜಯ್ ಅರೆಸ್ಟ್!

ಲೈಂಗಿಕ ದೌರ್ಜನ್ಯ (sexual harassment ) ಆರೋಪ ಕೇಳಿ ಬಂದ ಹಿನ್ನೆಲೆ  ಮಲಯಾಳಂ (Malayalam) ನಟ ಮತ್ತು ನಿರ್ಮಾಪಕ ವಿಜಯ್ ಬಾಬು (Vijay Babu)  ಅವರನ್ನು  ಪೊಲೀಸರು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ವಿಚಾರಣೆಗೆ ಎಂದು ಕರೆಯಲಾಗಿತ್ತು, ಈ ಸಂದರ್ಭದಲ್ಲಿ ನಟ ವಿಜಯ್ ಬಾಬು ಅವರನ್ನು ಬಂಧನ ಮಾಡಲಾಗಿದೆ. ನಟಿಯೊಬ್ಬರು ಕಳೆದ ತಿಂಗಳು ವಿಜಯ್ ಬಾಬು ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆದರೆ ಜೂನ್ 22ರಂದು ವಿಜಯ್ ಬಾಬು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.

ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! 

ಶಿವಮೊಗ್ಗ: ಯುವಕನೋರ್ವ (Boy) ಸೆಲ್ಫಿ ವಿಡಿಯೋ (Selfie Video) ಮಾಡಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಇಂಥದ್ದೊಂದು ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ (Soraba) ತಾಲೂಕಿನಲ್ಲಿ ನಡೆದಿದೆ. ಬೆಂಗಳೂರಿನ (Bengaluru) ಗಾರ್ಮೆಂಟ್ಸ್‌ವೊಂದರಲ್ಲಿ (Garments) ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ (Assistant Quality Manager) ಆಗಿ ಕೆಲಸ (Work) ಮಾಡಿಕೊಂಡಿದ್ದ 26 ವರ್ಷದ ದಿಲೀಪ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು (Marriage) ಅವನಿಗೆ ತಿಳಿಯುತ್ತದೆ.  ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ (Poison) ಕುಡಿದು ಒದ್ದಾಡತೊಡಗಿದ್ದಾನೆ. ಬಳಿಕ ಆಸ್ಪತ್ರೆಗೆ (Hospital) ಸೇರಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Selfie Suicide: ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! ಸೆಲ್ಫಿ ವಿಡಿಯೋ ಮಾಡಿ ಸೂಸೈಡ್‌

Fly Over: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬೆಂಗಳೂರಿನಲ್ಲಿ 4 ಹೊಸ ಫ್ಲೈ ಓವರ್, ಎಲ್ಲೆಲ್ಲಿ ನಿರ್ಮಾಣವಾಗಲಿದೆ ಮೇಲ್ಸೇತುವೆ

ಬೆಂಗಳೂರು (ಜೂ 27): ಟ್ರಾಫಿಕ್ (Traffic) ಕಿರೀಟ ಹೊತ್ತಿರುವ ಬೆಂಗಳೂರಿಗೆ (Bengaluru) ಮತ್ತೆ ಸೇರ್ಪಡೆಯಾಗಲಿದೆ ಹೊಸ ಮೇಲ್ಸೇತುವೆಗಳು. ಸದ್ಯ ಬೆಂಗಳೂರಿನಲ್ಲಿ ಒಟ್ಟು 45 ಫ್ಲೈ ಓವರ್ ಗಳಿವೆ (Fly Over). ಇದೀಗ ಹೊಸ 4 ಮೇಲ್ಸೇತುವೆಗಳು ಹೊಸದಾಗಿ ನಿರ್ಮಾಣ ಆಗಲಿದೆ. ಹೊಸ 4 ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರದಿಂದ ಸಿಕ್ತು 404 ಕೋಟಿ ಅನುದಾನ ನೀಡಲಾಗಿದೆ.‌ ನೂತನ ಫ್ಲೈ ಓವರ್ ನಿರ್ಮಾಣಕ್ಕೆ ಬಿಬಿಎಂಪಿ (BBMP) ಸಲ್ಲಿಸಿದ್ದ ಡಿಪಿಆರ್ ಗೆ ಸರ್ಕಾರ ಅಸ್ತು ಎಂದಿದೆ. ಇಟ್ಮಡು ಮೇಲ್ಸೇತುವೆ, ಜೆಸಿ ರಸ್ತೆ ಮೇಲ್ಸೇತುವೆ, ಸಾರಕ್ಕಿ ಮೇಲ್ಸೇತುವೆ, ವೆಸ್ಟ್ ಆಫ್ ಕಾರ್ಡ್ ರೋಡ್ ಹೊಸ ನಿರ್ಮಾಣವಾಗುತ್ತಿರುವ 4 ಫ್ಲೈ ಓವರ್ ಗಳು.
Published by:Annappa Achari
First published: