Evening Digest: ಪ್ರವೀಣ್ ಹತ್ಯೆ, ರೇಣುಕಾಚಾರ್ಯ ರಾಜೀನಾಮೆ ಬೆದರಿಕೆ; ಕಟೀಲ್ ಕಾರು ಉರುಳಿಸಲು ಯತ್ನ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ರೇಣುಕಾಚಾರ್ಯ ರಾಜೀನಾಮೆ ಬೆದರಿಕೆ:  ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರ್ (BJP Karyakarta Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು (BJP Leaders) ಸಾಂತ್ವನ ಹೇಳಲು ಬಂದಾಗ ಕಾರ್ಯಕರ್ತರು ಮುತ್ತಿಗೆಹಾಕಿದ್ದಾರೆ. ಸುಳ್ಯದ (Sullia) ಬೆಳ್ಳಾರೆ ಪೇಟೆ 144 ಸೆಕ್ಷನ್  (Section 144) ಜಾರಿಗೊಳಿಸಲಾಗಿದೆ. ಬೆಳ್ಳಾರೆಯ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿದ್ದು ವಾಹನ ಸಂಚಾರ ವಿರಳಗೊಂಡಿದೆ. ಯುವಕರು ಗುಂಪುಗೂಡದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಹಿಂದೂಗಳ ಹತ್ಯೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರುವ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.  ಈ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸಿರುವ ಶಾಸಕ ರೇಣುಕಾಚಾರ್ಯ ಸಿಎಂ ಭೇಟಿ ಮಾಡಿದ ಬಳಿಕ ನಿರ್ಧಾರ ಪ್ರಕಟಿಸೋ ಸಾಧ್ಯತೆ ಇದೆ ಎನ್ನಲಾಗಿದೆ.

ಕಟೀಲ್​ ಕಾರು ಉರುಳಿಸಲು ಯತ್ನ

ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್​​ (BJP worker Praveen Nettar) ಅವರ ಅಂತ್ಯಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP workers) , ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು. ಆದರೆ ಭಾವೋದ್ವೇಗಕ್ಕೆ ಒಳಗಾದ  ಗುಂಪೊಂದು ಹಿಂಸಾಚಾರಕ್ಕೆ ತಿರುಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಕಾರನ್ನು ಉರುಳಿಸಲು ಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್​ ಲಾಠಿ ಚಾರ್ಜ್​​ ಮಾಡಬೇಕಾಯಿತು. ನ್ಯಾಯಕ್ಕಾಗಿ ಆಗ್ರಹಿಸಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಸುಮಾರು 30 ನಿಮಿಷಗಳ ಕಾಲ ಪಕ್ಷದ ಅಧ್ಯಕ್ಷರು ಹಾಗೂ ಸಚಿವರಾದ ಸುನೀಲ್ ಕುಮಾರ್, ಎಸ್ ಅಂಗಾರ, ಶಾಸಕ ಸಂಜೀವ ಮಠಂದೂರು ಅವರ ಸಂಚಾರವನ್ನು ಕಾರ್ಯಕರ್ತರು ನಿರ್ಬಂಧಿಸಿದರು ಎಂದು ತಿಳಿದುಬಂದಿದೆ.

ಕಾಣೆಯಾಗಿದ್ದ ಗೃಹಿಣಿ ಬಾಯ್​​ ಫ್ರೆಂಡ್​ ಜೊತೆ ಪತ್ತೆ

ಆಂಧ್ರ ಪ್ರದೇಶದಲ್ಲಿ (Andhra Pradesh) ವರದಿಯಾಗಿರುವ ವಿಚಿತ್ರ ಪ್ರಕರಣ ಪೊಲೀಸರನ್ನೇ ದಂಗು ಬಡಿಸಿದೆ. ಎರಡ್ಮೂರು ದಿನಗಳ ಹಿಂದೆಯಷ್ಟೇ ವಿಶಾಖಪಟ್ಟಣಂನ ಆರ್.ಕೆ ​​ಬೀಚ್​ನಿಂದ (Visakhapatnam RK Beach) ಗೃಹಿಣಿಯೊಬ್ಬರು ಏಕಾಏಕಿ ಕಾಣೆಯಾಗಿದ್ದರು (Missing Case). ಗಂಡನೊಂದಿಗೆ ತಮ್ಮ ಮದುವೆಯ 2ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಬಂದಿದ್ದ ಹೆಂಡತಿ ನಾಪತ್ತೆಯಾಗಿದ್ದರು. ಬೀಚ್​ನಲ್ಲಿ ಸುತ್ತಾಡಲು ಹೋದಾಗ ಗಂಡ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಎದ್ದು ನೋಡಿದ್ರೆ ಹೆಂಡತಿ ಕಾಣೆಯಾಗಿರುವುದು ತಿಳಿದು ಬಂದಿದೆ. ಪತಿ ಶ್ರೀನಿವಾಸ್​​ ಕೂಡಲೇ ಸ್ಥಳೀಯ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ಗೃಹಿಣಿ ಸಮುದ್ರ ಪಾಲಾಗಿರಬಹುದೆಂದು ಶಂಕಿಸಿದ್ದರು. ಆಕೆಯ ಹುಡುಕಾಟಕ್ಕಾಗಿ ನೌಕಾಪಡೆ, ವಾಯುಪಡೆ, ಹೆಲಿಕಾಪ್ಟರ್​ ಸಹಾಯವನ್ನೂ ಪಡೆದಿದ್ದರು. 36 ಗಂಟೆಗಳ ಕಾಲ ಮಹಿಳೆಯಾಗಿ ತೀವ್ರ ಶೋಧ ನಡೆಸಿದ್ದಾರೆ. ಇದಕ್ಕಾಗಿ ಪೊಲೀಸರು ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಹುಡುಕಾಟದಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ದೊಡ್ಡ ಶಾಕ್​​ ಕಾದಿತ್ತು.

 ED ಎದುರು ಒಂದೇ ಉತ್ತರ ನೀಡಿದ ತಾಯಿ-ಮಗ!

ನ್ಯಾಷನಲ್ ಹೆರಾಲ್ಡ್ (National Herald)  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿಗೆ ಸಂಕಷ್ಟ ಇನ್ನಿಲ್ಲದಂತೆ ಕಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ನಿನ್ನೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ನಿನ್ನೆ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಇಂದು ಸಹ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಸೋನಿಯಾ ಗಾಂಧಿ ವಿಚಾರಣೆ ನಡೆಸಿದ್ದಾರೆ. ಇ.ಡಿ ಅಧಿಕಾರಿಗಳ ಮುಂದೆ ಸೋನಿಯಾ ಗಾಂಧಿ, ಎಲ್ಲಾ ಹಣಕಾಸು ನಿರ್ಧಾರಗಳನ್ನು ದಿವಂಗತ ಮೋತಿ ಲಾಲ್ ವೋರಾ (Moti Lal Vora) ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ. ಹಣಕಾಸಿನ ಅಂಶಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರಶ್ನಿಸಿದ್ದಾಗ, ಅವರು ಇದೇ ರೀತಿ ಹೇಳಿದ್ರಂತೆ. ಎಲ್ಲಾ ವಹಿವಾಟುಗಳನ್ನು ವೋರಾ ನಿರ್ವಹಿಸಿದ್ದಾರೆ ಅಂತ ತಿಳಿಸಿದ್ರಂತೆ.

ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​ ಸುದ್ದಿ

ಎಲ್ಲರಿಗೂ ಗೊತ್ತಿರುವಂತೆ ಟೈಗರ್​ ಶ್ರಾಫ್​ ಹಾಗು ದಿಶಾ ಪಾಟ್ನಿ ಸುಮಾರು ವರ್ಷಗಳಿಂದ ಜೊತೆಯಿದ್ದರು. ಆದರೆ ಈಗ ಈ ಜೋಡಿ ಬೇರೆಯಾಗಿದೆ ಎನ್ನಲಾಗುತ್ತಿದೆ. ಹೌದು, ಕಳೆದ 6 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ ಈ ಸ್ಟಾರ್ ಜೋಡಿ ಈ ವರ್ಷದ ಆರಂಭದಲ್ಲಿಯೇ ದೂರಾಗಿದ್ದಾರೆ ಎನ್ನುವ ಮಾಹಿತಿ ಇದೆ. ದಿಶಾ ಹಾಗೂ ಟೈಗರ್ ಈಗ ಜೊತೆಗಿಲ್ಲ ಇಬ್ಬರು ಸದ್ಯಕ್ಕೆ ಸಿಂಗಲ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಇಬ್ಬರ ನಡುವೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇಬ್ಬರು ಒಟ್ಟಿಗೆ. ಕಳೆದ ಒಂದು ವರ್ಷದಿಂದ ಅವರ ಸಂಬಂಧದಲ್ಲಿ ಹಲವಾರು ವ್ಯತ್ಯಾಸಗಳಾಗಿದೆ. ಇನ್ನು ಟೈಗರ್‌ ಸ್ನೇಹಿತರೊಬ್ಬರು ಅವರಿಬ್ಬರು ದೂರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ವಿಚಾರ ಅವರ ಸ್ನೇಹಿತರಿಗೆ ತಿಳಿದು ಬಂದಿದ್ದು,  ಈ ಬಗ್ಗೆ ಟೈಗರ್ ಶ್ರಾಫ್​ ತನ್ನ ಸ್ನೆಹಿತರ ಬಳಿ ಹೆಚ್ಚು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. ಟೈಗರ್ ಪ್ರಸ್ತುತ ತನ್ನ ಕೆಲಸದ ಮೇಲೆ ಗಮನಹರಿಸಿದ್ದು, ಈ ಬ್ರೇಕಪ್ ಅವರ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.
Published by:Kavya V
First published: