Evening Digest: 16 ವರ್ಷದ ಮಗಳ ಮೇಲೆ ರೇಪ್ ಮಾಡು ಎಂದ ತಾಯಿ: ಮಾ.4 ರಂದು ಶಾಲಾಕಾಲೇಜು ಬಂದ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಗಳ ಮೇಲೆ ರೇಪ್ ಮಾಡು ಎಂದ ತಾಯಿ: ತಾಯಿಯನ್ನು (Mother) ದೇವರು (God) ಅಂತಾರೆ. ‘ಮಾತೃದೇವೋ ಭವ’ ಅಂತ ಗೌರವಿಸುತ್ತಾರೆ. “ಜಗತ್ತಿನಲ್ಲಿ ಕೆಟ್ಟ ತಂದೆ (Bad Father) ಇರಬಹುದು, ಆದ್ರೆ ಕೆಟ್ಟ ತಾಯಿ (Bad Mother) ಮಾತ್ರ ಇರಲಿಕ್ಕಿಲ್ಲ” ಅಂತಾರೆ ಹಿರಿಯರು. ಮಕ್ಕಳಿಗೆ ಏನೇ ಕಷ್ಟ ಬಂದರೂ ಅದನ್ನು ತಾನು ಮಾತ್ರ ಅನುಭವಿಸಿ, ಮಕ್ಕಳು ಸುಖವಾಗಿ ಇರುವಂತೆ ನೋಡಿಕೊಳ್ಳುವವಳು ತಾಯಿ. “ತಾಯಿ ನಿಂದಿಸಿದರೆ, ಹಿಂಸಿಸಿದರೆ ಅದಕ್ಕೆ ಪರಿಹಾರ ಇಲ್ಲ” ಅಂತ ಪುರಾಣಗಳೂ ಹೇಳುತ್ತವೆ. ಆದರೆ ಇಲ್ಲಿ ತಾಯಿಯೇ ಅಪರಾಧಿಯಾಗಿದ್ದಾಳೆ. ಅದೂ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಕೆಲಸ ಮಾಡಿ, ಕೋರ್ಟ್ನಿಂದ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Shocking News: 16 ವರ್ಷದ ಮಗಳ ಮೇಲೆ ರೇಪ್ ಮಾಡು ಎಂದ ಅಮ್ಮ! ಪಾಪಿ ತಾಯಿಗೆ ಈಗ ಏನಾಯ್ತು ಗೊತ್ತಾ?

ಮಾ.4 ರಂದು ಶಾಲಾಕಾಲೇಜು ಬಂದ್
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೀಗ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಬೃಹತ್ ಪ್ರತಿಭಟನೆಗೆ (Massive protest) ಸಜ್ಜಾಗಿದ್ದಾರೆ. ಮಾರ್ಚ್ 4ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನ(School, College) ಬಂದ್ ಮಾಡಿ, ಮೆಜೆಸ್ಟಿಕ್ನಿಂದ ವಿಧಾನಸೌಧದ ತನಕ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಅನಿರ್ದಿಷ್ಟ ಅಹೋರಾತ್ರಿ ಧರಣಿಗೂ ಸಿದ್ದವಾಗಿರುವುದಾಗಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಗೋಪಿನಾಥ್ (President Gopinath) ತಿಳಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಳೆದ 2014ರಿಂದಲ್ಲೂ ಅನೇಕ ಮನವಿಯನ್ನ ಸಲ್ಲಿಸಿದ್ದರೂ, ಹೋರಾಟಗಳನ್ನ ನಡೆಸಿದ್ದರೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Employees Protests: ಮಾರ್ಚ್​ 4 ರಂದು ರಾಜ್ಯಾದ್ಯಂತ ಶಾಲಾ-ಕಾಲೇಜು ಬಂದ್​

ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯುವ ವಿಚಾರ
ಹೆತ್ತವರ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸಮನಾಗಿ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಬಹುದು. ಆದರೆ ಹೆಣ್ಣುಮಕ್ಕಳ ಮದುವೆ ಸಮಯದಲ್ಲಿ ಹೆತ್ತವರು ಆಕೆಗೆ ಇಲ್ಲವೇ ಅಳಿಯನಿಗೆ ವರದಕ್ಷಿಯಾಗಿ ಆಸ್ತಿ, ಸೈಟ್-ಮನೆ ಕೊಟ್ಟಿರುತ್ತಾರೆ ಎಂದು ಭಾವಿಸುವುದಾದರೆ. ವರದಕ್ಷಿಣೆಯಾಗಿಯೂ ಆಸ್ತಿಯನ್ನು ಪಡೆದು ಮತ್ತೆ ತವರಿನಲ್ಲಿ ಉಳಿದಿರುವ ಆಸ್ತಿಯಲ್ಲೂ ಸಮ ಪಾಲು ಕೇಳುವುದು ಸರಿಯಲ್ಲ. ತವರಿನಲ್ಲಿ ಇರುವ ಆಸ್ತಿ, ವರದಕ್ಷಿಣೆಯಾಗಿ ಪಡೆದ ಆಸ್ತಿಯನ್ನ ಒಟ್ಟಾಗಿ ಸೇರಿಸಿ ಸೋದರ/ ಸೋದರಿ ಜೊತೆ ಹಂಚಿಕೊಳ್ಳಬೇಕು ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Court Case: ತವರಿನ ಆಸ್ತಿಯಲ್ಲಿ ಪಾಲು ಕೇಳುವ ಹೆಣ್ಣುಮಕ್ಕಳು ತಮ್ಮ ಮದುವೆಯ ವರದಕ್ಷಿಣೆಯನ್ನೂ ಉಲ್ಲೇಖಿಸಬೇಕೇ?

ಅಂಬರೀಶ್ ಜೊತೆ ಸೇರಿಕೊಂಡು ಮಾಡಬಾರದ್ದನ್ನೂ ಮಾಡಿದ್ದೇನೆ...CM
ದಿ.ಡಾ.ಅಂಬರೀಶ್ (Ambareesh) ಅವರ ಸಮಾಧಿ ಸ್ಥಳವಾದ ಕಂಠೀರವ ಸ್ಟುಡಿಯೋ (Kanteerava Studio) ಬಳಿ ಸ್ಮಾರಕ ನಿರ್ಮಾಣಕ್ಕೆ ಇಂದು ಅದ್ಧೂರಿಯಾಗಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. 1.35 ಎಕರೆ ಜಾಗದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣವಾಗುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಂಬರೀಶ್ ಅವರೊಂದಿಗಿನ ಗೆಳೆತನವನ್ನು ಮೆಲುಕು ಹಾಕಿ, ಅವರ ಪತ್ನಿ, ಸಂಸದೆಯೂ ಆಗಿರುವ ಸುಮಲತಾ ಅವರನ್ನು ಸಿಎಂ ಹಾಡಿ ಹೊಗಳಿದರು. ನನ್ನ ಆತ್ಮೀಯ ಸ್ನೇಹಿತ ಅಂಬರೀಶ್. ನಾನು ಯಾವಾಗಲೂ ಅಂಬರೀಶ್ ಅಂತಾ ಕರೆಯುತ್ತಿದ್ದೆ, ಈಗಲೂ ಹಾಗೆಯೇ ಕರೆಯುತ್ತೇನೆ. ನನಗೆ ಅವರೊಂದಿಗೆ 40 ವರ್ಷಗಳ ಸ್ನೇಹ. ರಾಜ್ಯಾದ್ಯಂತ ಸಂಚರಿಸಿದ್ದೇವೆ, ಕೆಲಸ ಮಾಡಿದ್ದೇವೆ. ಮಾಡಬೇಕಾಗಿದ್ದನ್ನು ಮಾಡಿದ್ದೇವೆ, ಮಾಡಬಾರದ್ದನ್ನೂ ಮಾಡಿದ್ದೇವೆ ಎಂದು ಗೆಳೆತನವನ್ನು ನೆನೆದರು.

ಜರ್ಮನ್ನಲ್ಲೂ ಗಂಗೂಬಾಯಿ ಅಬ್ಬರ..
ಆಲಿಯಾ ಭಟ್ ಸಿನಿಮಾದ ಆರಂಭದಲ್ಲಿ ಅಮಾಯಕ ಯುವತಿಯಾಗಿ, ನಂತರ ಗತ್ತು ಗಮ್ಮತ್ತಿನ, ಅಹಂ, ಆತ್ಮಾಭಿಮಾನದ ಗಂಗೂಬಾಯಿಯಾಗಿ ಅವರ ನಟನೆ ಅದ್ಭುತವಾಗಿದೆ. ಆಲಿಯಾ ಯಾವುದೇ ಪಾತ್ರವನ್ನು ಕೊಟ್ಟರು ನುಂಗಿ ನೀರು ಕುಡಿಯುತ್ತಾರೆ. ಕೇವಲ ಭಾರತದಲ್ಲಷ್ಟೇ ಅಲ್ಲದೇ ‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ವಿದೇಶದಲ್ಲೂ ಸಖತ್ ಸೌಂಡ್ ಮಾಡುತ್ತಿದೆ. ಜರ್ಮನ್ ದೇಶದಲ್ಲಿ ಆಲಿಯಾ ಭಟ್ ನಟನೆ ಕಂಡು ಫುಲ್ ಫಿದಾ ಆಗಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಕ್ಕೆ ಮನಸೋತು ಹೊರ ದೇಶದ ಸಿನಿಮಾ ಪ್ರೇಕ್ಷಕರು ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜರ್ಮನ್ ದೇಶದ ಬೆರ್ಲಿನ್ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್ಗೆ ವ್ಯಕ್ತವಾಗಿದೆ.
Published by:Kavya V
First published: