Evening Digest: ಮುರುಘಾ ಶ್ರೀಗಳ ವಿರುದ್ಧ ಆರೋಪ; 1 ತಿಂಗಳಿಂದ ಮರದ ಮೇಲಿದ್ದ ಭೂಪ! ಶನಿವಾರದ ಸಖತ್ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮುರುಘಾ ಶ್ರೀಗಳಿಗೆ ವಿವಿಧ ಮಠಾಧೀಶರ ಬೆಂಬಲ

ರಾಜ್ಯದ ಪ್ರತಿಷ್ಠಿತ ಚಿತ್ರದುರ್ಗದ ಮುರುಘಾರಾಜೇಂದ್ರ  (Murugha Math) ಬ್ರಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ (Shivamurthy Murugha Sharanaru) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ದಿ ಫೈಲ್ಸ್ ವರದಿ ಮಾಡಿದೆ. ಮುರುಘಾ ಶರಣರ ವಿರುದ್ಧ ಮಠದ ಉಚಿತ ವಿದ್ಯಾರ್ಥಿ ನಿಲಯದಲ್ಲಿರುವ (Hostel) ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾದ ಮಕ್ಕಳೇ (Students) ಈ ಸಂಬಂಧ ಮಠದ ಸ್ವಾಮೀಜಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಈಗ ಶಿವಮೂರ್ತಿ ಮುರುಘಾ ಶರಣರ  ಬೆಂಬಲಕ್ಕೆ ಮಠದ ಭಕ್ತರು (Devotees), ಚಿತ್ರದುರ್ಗದ (Chitradurga) ದಲಿತ ಸಂಘಟನೆಗಳು (Dalit Organizations) ನಿಂತಿವೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡೋಕೆ ಶ್ರೀಗಳು ಕರೆನೀಡಿದ್ದಾರೆ.

ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು

ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದ (Murugha Math) ಡಾ. ಶಿವಮೂರ್ತಿ ಮುರುಘಾ ಶರಣರ (Shivamurthy Murugha Sharanaru) ಬೆಂಬಲಕ್ಕೆ ಮಠದ ಭಕ್ತರು (Devotees), ಚಿತ್ರದುರ್ಗದ (Chitradurga) ದಲಿತ ಸಂಘಟನೆಗಳು (Dalit Organizations) ನಿಂತಿವೆ. ಸ್ವಾಮೀಜಿ (Swamiji) ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ. ಮತ್ತೊಂದೆಡೆ ಮಠದ ಆಡಳಿತಾಧಿಕಾರಿ (Administrator) ಆಗಿದ್ದ ಬಸವರಾಜನ್ (Basavarajan) ವಿರುದ್ಧ ಷಡ್ಯಂತ್ರದ ಆರೋಪ ಮಾಡಲಾಗಿದೆ. ಅಲ್ಲದೇ ಬಸವರಾಜನ್ ಹಾಗೂ ಅವರ ಪತ್ನಿ (Wife) ವಿರುದ್ಧ ದೂರು (Complaint) ನೀಡಲಾಗಿದೆ.

ಇದನ್ನೂ ಓದಿ: Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಕಾಣದಂತೆ ಮಾಯವಾಯಿತೇ ಚಿರತೆ?

ಬೆಳಗಾವಿ ಜನರ ನಿದ್ದೆ ಗೆಡಿಸಿರುವ ಚಿರತೆ (Leopard) ಮಾತ್ರ, ಬೆಳಗಾವಿ ಬಿಟ್ಟು ಹೋಗುವುದಕ್ಕೆ ಮನಸ್ಸು ಮಾಡಿದಂತೆ ಕಾಣಿಸುತ್ತಿಲ್ಲ. ಕಣ್ಣ ಮುಂದೆ ಸುಳಿದಾಡಿದಂತೆ ಕಾಣಿಸುವ ಚಿರತೆ, ಕ್ಷಣಮಾತ್ರದಲ್ಲೇ ಕಣ್ಣಿಗೆ ಕಾಣದಂತೆ ಮಾಯವಾಗುತ್ತಿದೆ. ಸತತ 23 ದಿನಗಳಿಂದ ಬೆಳಗಾವಿಯ ಗಾಲ್ಫ್ ಕ್ಲಬ್​​ನಲ್ಲಿ (Golf Club) ಚಿರತೆ ಅಡಗಿದೆ ಎನ್ನಲಾಗುತ್ತಿದೆ. ಚಿರತೆ ಪತ್ತೆ ಕಾರ್ಯಾಚರಣೆಗೆ (operation) ಶಿವಮೊಗ್ಗದ (Shivamogga) ಸಕ್ರೆಬೈಲು (Sakrebailu) ಬಿಡಾರದಿಂದ ಆನೆಗಳನ್ನು (Elephants) ಕರೆತರಲಾಗಿದೆ. ಆದರೂ ಲಾಭವೇನೂ ಆಗುತ್ತಿಲ್ಲ. ಮತ್ತೊಂದೆಡೆ ಅರಣ್ಯಾಧಿಕಾರಿಗಳು, ತಜ್ಞರಿಗೆಲ್ಲ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತರಹೇವಾರಿ ಟ್ರೋಲ್ಸ್‌ (Trolls) ಹರಿದಾಡುತ್ತಿದೆ.

ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! 

ಉತ್ತರ ಪ್ರದೇಶದ ಲಕ್ನೋದ ಹಳ್ಳಿಯೊಂದರಲ್ಲಿ 42 ವರ್ಷ ಸಂಸಾರಸ್ಥ ವ್ಯಕ್ತಿಯೊಬ್ಬ ಹೆಂಡತಿಯೊಂದಿಗೆ ಜಗಳ ಆಡಿ ಮನೆ ಮುಂದಿನ ತಾಳೆ ಮರದ ಮೇಲೆ ಹತ್ತಿದ್ದಾನೆ. ಅದು ಬರೋಬ್ಬರಿ 80 ಅಡಿ ಎತ್ತರದ ಮರದ ಮೇಲೆ ಹತ್ತಿ ಕುಳಿತಿದ್ದಾನೆ. 42 ವರ್ಷದ ರಾಮ್ ಪ್ರವೇಶ್ ಎಂಬಾತನೇ ತಾಳೆ ಮರ ಏರಿ ಕುಳಿತ ವ್ಯಕ್ತಿ. ಈತ ಮನೆ ಮುಂದಿದ್ದ 80 ಅಡಿ ಎತ್ತರದ ತಾಳೆ ಮರದ ಮೇಲೆ ಕುಳಿತಿದ್ದಾನೆ. ಅದೂ ಒಂದಲ್ಲ, ಎರಡಲ್ಲ ಬರೋಬ್ಬರಿ 1 ತಿಂಗಳುಗಳ ಕಾಲ ಅದೇ ಮರದ ಮೇಲೆ ರಾಮ್ ಪ್ರವೇಶ್ ಕುಳಿತಿದ್ದಾನೆ. ಇದನ್ನು ಕಂಡ ಕುಟುಂಬಸ್ಥರು, ಸ್ನೇಹಿತರು ಮತ್ತು ಸ್ಥಳೀಯರು ಕೆಳಕ್ಕೆ ಇಳಿದು ಬರುವಂತೆ ವಿವಿಧ ರೀತಿಯಲ್ಲಿ ಹೇಳಿದ್ದಾರೆ, ಮನವಿ ಮಾಡಿದ್ದಾರೆ. ಆದರೆ ಅದ್ಯಾವುದಕ್ಕೂ ಮಣಿಯದ ರಾಮ್ ಪ್ರವೇಶ್ ಮರದಿಂದ ಕೆಳಕ್ಕೆ ಇಳಿಯಲೂ ಇಲ್ಲ, ಮನೆಗೆ ವಾಪಸ್ ಬರಲೂ ಇಲ್ಲ.

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಬೆಂಗಳೂರಲ್ಲಿ ಚಿಯಾನ್​ ವಿಕ್ರಮ್; ಕೋಬ್ರಾ ಚಿತ್ರ ತಂಡದೊಂದಿಗೆ ಸಿನಿಮಾ ಪ್ರಮೋಷನ್​

ಚಿಯಾನ್ ವಿಕ್ರಮ್ (Chiyan Vikram)​ ಅವರ ಬಹುನಿರೀಕ್ಚಿತ ಚಿತ್ರ ಕೋಬ್ರಾ (Cobra) ಚಿತ್ರ  ಬಿಡುಗಡೆ ರೆಡಿಯಾಗಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ವಿಕ್ರಮ್​ ಅವರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ. ಸಿನಿಮಾ ಪ್ರಚಾರಕ್ಕೆಂದು ತಮಿಳು ನಟ (Tamil Actress) ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದಾರೆ.  ಏರ್​ಪೋರ್ಟ್​ನಲ್ಲಿ ನಟ ವಿಕ್ರಮ್​ ಹೊಸ ಲುಕ್​ನಲ್ಲಿ (New Look) ಕಾಣಿಸಿಕೊಂಡಿದ್ದಾರೆ. ವೈಟ್​ ಟೀ ಶರ್ಟ್, ಬ್ಲೂ ಕೋಟ್​, ಸನ್​ ಗ್ಲಾಸ್​ ಹಾಗೂ ಸ್ಟೈಲಿಶ್​ ಕ್ಯಾಪ್​ ಧರಿಸಿದ್ದ ನಟ ಚಿಯಾನ್​ ವಿಕ್ರಮ್​ ಕಂಡು ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು.
Published by:Annappa Achari
First published: