Evening Digest Sep 26: ನಾಳೆ ಭಾರತ ಬಂದ್ ಹೇಗಿರಲಿದೆ; ತಾರಕಕ್ಕೇರಿದ ಸಿದ್ದರಾಮಯ್ಯ-HDK ವಾಕ್ಸಮರ: ಇಂದಿನ ಪ್ರಮುಖ ಸುದ್ದಿಗಳು

Kannada news today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ನಾಳೆ ಭಾರತ್ ಬಂದ್: ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಯ (Agriculture Bill) ವಿರುದ್ಧ ರೈತರು ಸತತ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ (Central Government) ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ರೈತರ ಬೇಡಿಕೆಗೂ ಮಣಿಯವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ಸೆಪ್ಟೆಂಬರ್​. 27 ರಂದು ಭಾರತ್ ಬಂದ್​ಗೆ ಕರೆ ನೀಡಿದೆ. ಈ ಬಂದ್​ಗೆ ಬಿಜೆಪಿ (BJP) ಏತರ ಸರ್ಕಾರವಿರುವ ಅನೇಕ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್‌ಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (AAP) ಮತ್ತು ತೆಲುಗು ದೇಶಂ ಪಕ್ಷ (TDP) ಮತ್ತು ಎಡಪಕ್ಷಗಳು ಈಗಾಗಲೇ ಬೆಂಬಲವನ್ನು ಘೋಷಿಸಿವೆ.

ತಾರಕಕ್ಕೇರಿದ ಸಿದ್ದರಾಮಯ್ಯ-HDK ವಾಕ್ಸಮರ

ʼಅಕ್ಕಿಭಾಗ್ಯದ ಅಸಲಿಯೆತ್ತುʼ ಏನು ಎಂಬುದನ್ನು ಈಗಾಗಲೇ ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಅದಾದ ಮೇಲೂ ನಿಮ್ಮ ʼಸುಳ್ಳಿನ ಜಪʼ ಮುಂದುವರಿದಿದೆ. ಸತ್ಯ ಹೇಳಲು ಹಿಂಜರಿಕೆ- ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ? ಐದು ಕೆಜಿ ಅಕ್ಕಿ ಅಸಲಿಯೆತ್ತಿನ ಬಗ್ಗೆ ಹೇಳಲು ಅಂಜಿಕೆ ಏಕೆ ಸಿದ್ದರಾಮಯ್ಯನವರೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. 7 ಕೆಜಿ ಕೊಡಿ ಎಂದು ಬೊಬ್ಬೆ ಹೊಡೆದ ನೀವೇ ಹಣ ಇಟ್ಟಿದ್ದು 5 ಕೆಜಿಗೆ ಮಾತ್ರ. ಹೊರಗೆ ಕುಮಾರಸ್ವಾಮಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದೀರಿ. ಉಳಿದ 2 ಕೆಜಿ ಅಕ್ಕಿಗೆ ಹಣ ಎಲ್ಲಿತ್ತು? ಪಾಪಪ್ರಜ್ಞೆ ಇಲ್ಲವಾ ನಿಮಗೆ? ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಲೂಟಿ ಹೊಡೆದಿದ್ದಕ್ಕೆ BSY ಅತ್ಯುತ್ತಮ ಶಾಸಕನಾ?

ಹೆಬ್ಬಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲ ಜೆಡಿಎಸ್​ ಮುಖಂಡರು, ಜೆಡಿಎಸ್​ ಕಾರ್ಯಕರ್ತರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ(BJP Government)  ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದರು. ಬಿ.ಎಸ್​.ಯಡಿಯೂರಪ್ಪ ರಾಜಾಹುಲಿ ಅಂತೆ. ಏಕೆ ಅಕ್ಕಿ ನಿಲ್ಲಿಸಿದಕ್ಕೆ ಇವರನ್ನ ರಾಜಾಹುಲಿ ಅಂತ ಕರಿಬೇಕಾ? ಯಡಿಯೂರಪ್ಪ ಅತ್ಯುತ್ತಮ ಶಾಸಕ ಅಂತೆ. ಏಕೆ ಲೂಟಿ ಹೊಡೆದಿದಕ್ಕೆ ಯಡಿಯೂರಪ್ಪ ಅತ್ಯುತ್ತಮ ಶಾಸಕರಾ? ಏನ್ ಮಾಡಿದ್ದಾರೆ ಇವರು ಲೂಟಿ ಹೊಡೆದಿದ್ದು ಬಿಟ್ಟು ಎಂದು ಟೀಕಿಸಿದರು.

ಚುನಾವಣೆ ಹೊಸ್ತಿಲಲ್ಲಿ ಯೋಗಿ ಸಂಪುಟ ವಿಸ್ತರಣೆ

ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(cm yogi adityanath) ಸಂಪುಟ ವಿಸ್ತರಣೆಗೆ (cabinet expansion in Uttar Pradesh) ಮುಂದಾಗಿದ್ದಾರೆ. ಇಂದು ಸಂಜೆ 5.3.0ಕ್ಕೆ ಏಳು ಮಂದಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಳರಲ್ಲಿ ಓರ್ವ ಬ್ರಾಹ್ಮಣ ಇನ್ನುಳಿದವರು ಹಿಂದುಳಿದ ಮತ್ತು ದಲಿತ ಪಂಗಡಕ್ಕೆ ಸೇರಿದ ಮುಖಂಡರಾಗಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಗುಜರಾತಿನಿಂದ ಮಧ್ಯಾಹ್ನ 2 ಗಂಟೆಗೆ ಲಕ್ನೋ ತಲುಪಿದ್ದಾರೆ. ಕ್ಯಾಬಿನೆಟ್ ವಿಸ್ತರಣೆ ಹಿನ್ನೆಲೆ ಹೈಲೆವಲ್ ಸಭೆ ಸಭೆ ನಡೆಯಲಿದ್ದು, ತದನಂತರ ಅಧಿಕೃತ ಘೋಷಣೆ ಹೊರಬೀಳಲಿದೆ.

ಕೋಟಿಗೊಬ್ಬ-3 ರಿಲೀಸ್ ಡೇಟ್ ಅನೌನ್ಸ್

ಚಂದನವನದ ಸ್ವಾತಿಮುತ್ತು ಅಂದ್ರೆ ಅದು ಅಭಿನಯ ಚಕ್ರವರ್ತಿ ಸುದೀಪ್ (Sudeep). ಕೊರೊನಾ ಮತ್ತು ಲಾಕ್ಡೌನ್ ನಿಂದ ತೆರೆಗೆ ಅಪ್ಪಳಿಸಬೇಕಿದ್ದ ಸುದೀಪ್ ಚಿತ್ರಗಳು ತಡವಾಗುತ್ತಿವೆ. ಆದರೆ ಇಂದು ಕಿಚ್ಚನ ಅಭಿಮಾನಿ ಬಳಗಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಯ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ. ಚಿತ್ರ ಇದೇ ಅಕ್ಟೋಬರ್ 14ರಂದು ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದೆ. ಇನ್ನೂ ರಿಲೀಸ್ ಡೇಟ್ ಕೇಳುತ್ತಿದ್ದಂತೆ ಪೈಲ್ವಾನ್ ನ ಅಭಿಮಾನಿಗಳ ಬಳಗ ದಿನಾಂಕವನ್ನ ಮೊಬೈಲ್ ಗಳಲ್ಲಿ ಸೇವ್ ಮಾಡಿಕೊಂಡ್ರೆ, ಕೆಲವರು ಟಿಕೆಟ್ ಸಿಗುತ್ತಾ ಅಂತ ಗೂಗಲ್ ಜಾಲಾಡುತ್ತಿದ್ದಾರೆ.
Published by:Kavya V
First published: