Evening digest: ಗೋಪೂಜೆ ಮಾಡುವಂತೆ ಸರ್ಕಾರದ ಆದೇಶ: ನಟಿಗೆ ಹಿಂಸೆ ಕೊಡುತ್ತಿದ್ದ ಪಾಗಲ್ ಪ್ರೇಮಿ ಸೆರೆ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಗೋಪೂಜೆ ಮಾಡುವಂತೆ ಸರ್ಕಾರದಿಂದ ಆದೇಶ: ದೀಪಾವಳಿ (deepavali 2021) ಹಬ್ಬದೊಂದು ದೇವಾಲಯಗಳಲ್ಲಿ ಗೋಪೂಜೆ ಮಾಡಲು ರಾಜ್ಯ ಸರ್ಕಾರದಿಂದ (karnataka government) ಆದೇಶ ಹೊರಡಿಸಲಾಗಿದೆ. ನವೆಂಬರ್​ 5ರಂದು ಬಲಿಪಾಢ್ಯಮಿಯಂದು (balipadyami 2021) ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲಿ(hindu temples) ಗೋವಿನ ಪೂಜೆಯನ್ನು ಹೇಗೆ, ಯಾವ ಸಮಯದಲ್ಲಿ ಮಾಡಬೇಕೆಂದು ಆದೇಶ ಹೊರಡಿಸಿದೆ. ಬಲಿಪಾಡ್ಯಮಿ ದಿನದಂದು ಗೋಮಾತೆಯನ್ನು ಪೂಜಿಸಿ ಆರಾಧಿಸಲು ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ಗೋಮಾತೆಗೆ ಪೂಜೆ ಸಲ್ಲಿಸಲು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಬಲಿಪಾಡ್ಯಮಿ ದಿನ ಸಂಜೆ 5.30ರಿಂದ 6.30ರ ಸಮಯದಲ್ಲಿ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸದಲಾಗಿದೆ.

ನಿಮಗೆ ಧಮ್ ಇದ್ರೆ ಒಂದೇ ವೇದಿಕೆ ಬನ್ನಿ ಚರ್ಚೆ ಮಾಡೋಣ

ಉಪ ಚುನಾವಣೆ (By Election) ಹಿನ್ನೆಲೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಕಾಂಗ್ರೆಸ್​​ ನಾಯಕರು ಮಾದಿಗರ ಸಮಾಜದ ಸಭೆ ನಡೆಸಿದರು. ಇಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಅವ್ರೇ ಸುಳ್ಳು ಹೇಳೋಕೆ‌ ಹೋಗಬೇಡಿ. ನಿಮಗೆ ಧಮ್ ಇದ್ರೆ ಒಂದೇ ವೇದಿಕೆ‌ ಬನ್ನಿ ಚರ್ಚೆ ಮಾಡೋಣ. ಯಾರು ಸುಳ್ಳು, ಸತ್ಯ ಹೇಳ್ತಾರೆ ಎಂಬುದು ಗೊತ್ತಾಗುತ್ತೆ ಎಂದು ಸವಾಲೆಸೆದರು. ಸುಳ್ಳು ಹೇಳೋಕೆ ನಿಮಗೆ, ನಾಚಿಕೆ ಆಗೋಲ್ವಾ ಎಂದು ಕಿಡಿಕಾರಿದರು. ನಾನು ಚರ್ಚೆಗೆ ತಯಾರು ಇದ್ದೇನೆ, ಧಮ್ ಇದ್ರೆ ಬನ್ನಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ ಮತ್ತೆ ಸವಾಲು ಹಾಕಿದರು.

ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ

ಮುಂದಿನ‌ ವರ್ಷದ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarkhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. 2024ರ ಲೋಕಸಭಾ‌ ಚುನಾವಣೆಯ (2024 Lokasabha Election) ದೃಷ್ಟಿಯಿಂದ ಈ ಐದು ರಾಜ್ಯಗಳು ಬೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕಾವಾಗಿವೆ. ಏಕೆಂದರೆ ಈ ಚುನಾವಣೆಗಳಲ್ಲಿ ಸಾಧ್ಯವಾದಷ್ಟು ಕಡೆ ಗೆಲ್ಲಬೇಕಾಗಿದೆ. ಆ ಮೂಲಕ ಪಕ್ಷದ ನೆಲೆಯನ್ನು‌ ವೃದ್ಧಿ ಮಾಡಿಕೊಳ್ಳಬೇಕಿದೆ. ಈ‌ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 30ರಂದು ಎಐಸಿಸಿ ಮಾಜಿ ಅಧ್ಯಕ್ಷರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ (AICC Former President Rahul Gandhi) ಗೋವಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಬೆಲೆ ಏರಿಕೆ ವಿರುದ್ಧ ಬೀದಿಗಿಳಿಯಲು ಕಾಂಗ್ರೆಸ್ ನಿರ್ಧಾರ

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ (International Oil Market) ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳು ಕಡಿಮೆ ಇದ್ದರೂ, ನಿರುದ್ಯೋಗ (Unemployment), ಹಣದುಬ್ಬರ, ಹವಾಮಾನ ವೈಪರೀತ್ಯ ಮತ್ತಿತರ ಸಮಸ್ಯೆಗಳಿಂದ ಜನ ಸಾಮಾನ್ಯ ಕಂಗಲಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡುತ್ತಿದೆ. ಈ‌ ಹಿನ್ನೆಲೆಯಲ್ಲಿ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ (Congress) ನವೆಂಬರ್ 14ರಿಂದ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಲು ‌ನಿರ್ಧರಿಸಿದೆ. ಅಲ್ಲದೆ ಮಿಸ್ ಕಾಲ್ (Miss Call) ಕೊಟ್ಟು ಪಕ್ಷದ ಸದಸ್ಯತ್ವ ನೊಂದಣಿ (Membership Registration) ಮಾಡಿಕೊಳ್ಳುವ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಿದೆ.

ನಟಿಗೆ ಹಿಂಸೆ ಕೊಡುತ್ತಿದ್ದ ಪಾಗಲ್​ ಪ್ರೇಮಿ ಬಂಧನ

ದಿನ ಬೆಳಗಾದರೆ ಪಾಗಲ್​ ಪ್ರೇಮಿಗಳು ಮಾಡುವ ಅವಾಂತರದ ಸುದ್ದಿ ಬಗ್ಗೆ ಕೇಳುತ್ತಿರುತ್ತೇವೆ. ಇಂತಹದ್ದೇ ಘಟನೆಯೊಂದು ಈಗ ಮತ್ತೆ ಬೆಂಗಳೂರಿನಲ್ಲಿ ನಡೆದಿದೆ. ರೈಡರ್ ಸಿನಿಮಾದಲ್ಲಿ ನಟಿಸಿರುವ ನಟಿ ಅನುಷಾ ರೈ ಅವರಿಗೆ ಅವರ ಎಕ್ಸ್​ ಬಾಯ್​ಫ್ರೆಂಡ್​ ಬ್ರೇಕಪ್​ ನಂತರ ಹಿಂಸೆ ಕೊಡುತ್ತಿದ್ದರಂತೆ. ಈ ಪ್ರಕರಣದಲ್ಲಿ ಈಗ ಈ ಪಾಗಲ್​ ಪೇಮಿ ಪೊಲೀಸರ ಅತಿಥಿಯಾಗಿದ್ದಾನೆ. ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದಲ್ಲಿ ನಟಿಸಿರುವ ನಟಿ ಅನುಷಾ ರೈ ಮೇಲೆ ಹಲ್ಲೆ ಮಾಡಿ, ಅವಾಚ್ಯಶಬ್ದಗಳಿಂದ ನಿಂದಿಸಿರೋ ಆರೋಪ ಮೇಲೆ ಚಂದನ್​ ಪ್ರಸಾದ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Published by:Kavya V
First published: