Evening Digest: ಐಕಿಯ ಸ್ಟೋರಿನಿಂದ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್; ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಮುಖಭಂಗ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಐಕಿಯ ಸ್ಟೋರಿನಿಂದ ಬೆಂಗಳೂರಲ್ಲಿ ಟ್ರಾಫಿಕ್​ ಜಾಮ್ : ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ (Nagasandra Metro Station)​ ಬಳಿ ನಿರ್ಮಾಣಗೊಂಡಿರುವ ಐಕಿಯ ಶಾಪಿಂಗ್​ ಮಾಲ್​ಗೆ ಜನ ಸಾಗರವೇ ಹರಿದು ಬರ್ತಿದೆ. ವೀಕೆಂಡ್ (Weekend)​ ಹಿನ್ನೆಲೆ ಜನರು ಶಾಪಿಂಗ್ (Shopping)​ ಮಾಡಲು ಐಕಿಯ ಮಳಿಗೆಗೆ ಮುಗಿಬಿದ್ದಿದ್ದಾರೆ. ಹೀಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್​ ಜಾಮ್​ ಉಂಟಾಗಿದೆ. ಮೆಟ್ರೋ ನಿಲ್ದಾಣದ ಬಳಿಯೇ ಸಾವಿರಾರು ಜನರ ಜಾತ್ರೆ ನಿರ್ಮಾಣಗೊಂಡಿದೆ. ಕೆಲವರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯ ಅಕ್ಕ-ಪಕ್ಕದಲ್ಲಿಯೇ ನಿಲ್ಲಿಸಿ ಹೋಗಿದ್ದರು. ಮೇಲ್ಸೇತುವೆಯಲ್ಲಿ ವಾಹನಗಳ (Vehicles) ಸಂಚಾರವನ್ನು ನಿಲ್ಲಿಸಿದ್ದು, ಕೆಳ ರಸ್ತೆಯಲ್ಲೇ ವಾಹನಗಳು ಓಡಾಡುತ್ತಿರುವುದರಿಂದ ಮತ್ತಷ್ಟು ಟ್ರಾಫಿಕ್ ಜಾಮ್​ ಉಂಟಾಗಿದೆ. ಟ್ರಾಫಿಕ್​ ಹಾಗೂ ಜನ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:IKEA Bengaluru: ಐಕಿಯ ಫರ್ನಿಚರ್ ಸ್ಟೋರ್​ಗೆ ಹರಿದು ಬರ್ತಿದೆ ಜನಸಾಗರ; ನಾಗಸಂದ್ರ ಬಳಿ ಫುಲ್ ಟ್ರಾಫಿಕ್, ಸ್ಥಳೀಯರಿಗೆ ಕಿರಿಕಿರಿ

ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ ಎಂದ ಹಂಸಲೇಖ

ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ (Retired judge HN Nagamohan Das) ಬರೆದಿರುವ ‘ಮೀಸಲಾತಿ ಭ್ರಮೆ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಆಯೋಜಿಸಲಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು (Ex CM Siddaramaiah) ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಬಿಡುಗೊಡೆಗೊಳಿಸಿದರು. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಬಂಜಗೆರೆ ಜೈ ಪ್ರಕಾಶ್, ಬಿ.ಎಂ. ಹನೀಫ್, ಟಿ.ಆರ್. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ (Music Director) ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ ಎಂದು ಹೇಳಿದರು.

ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಮುಖಭಂಗ

ಪಂಜಾಬ್ ಉಪಚುನಾವಣೆಯಲ್ಲಿ (Punjab By-Election) ಆಮ್ ಆದ್ಮಿ ಪಕ್ಷ ಹೀನಾಯ ಸೋಲು ಕಂಡಿದ್ದು, ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagwant Mann) ಅವರ ಲೋಕಸಭಾ ಕ್ಷೇತ್ರದಲ್ಲಿ ಆಪ್​​ ಅಭ್ಯರ್ಥಿಯನ್ನು ಶಿರೋಮಣಿ ಅಕಾಲಿದಳದ ಅಭ್ಯರ್ಥಿ (Shiromani Akali Dal-Amritsar) ಸಿಮ್ರಂಜಿತ್ ಸಿಂಗ್ ಮಾನ್ ಸೋಲಿಸಿದ್ದಾರೆ. ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ತಮ್ಮ ಎಎಪಿ ಪ್ರತಿಸ್ಪರ್ಧಿ ಗುರ್ಮೈಲ್ ಸಿಂಗ್ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ 7,000 ಮತಗಳ ಅಂತರದಿಂದ ಸೋಲಿಸಿದರು. ಆ ಮೂಲಕ ಸಿಎಂ ಭಗವಂತ್ ಮಾನ್ ಅವರ ಕ್ಷೇತ್ರವನ್ನು ಆಪ್​ ಕಳೆದುಕೊಂಡಂತೆ ಆಗಿದೆ. 77 ವರ್ಷದ ಸಿಮ್ರಂಜಿತ್ ಸಿಂಗ್ ಮಾನ್ ಅವರು ಮಾಜಿ ಸಂಸದ ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಮತ್ತು ಅಕಾಲಿದಳದ ಕಮಲದೀಪ್ ಕೌರ್ ರಾಜೋನಾ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Bypoll: ಪಂಜಾಬ್ ಉಪಚುನಾವಣೆಯಲ್ಲಿ AAPಗೆ ಭಾರೀ ಮುಖಭಂಗ; ಸಿಎಂ ಮಾನ್ ಕ್ಷೇತ್ರದಲ್ಲೇ ಸೋಲು!

ಶಿವಸೇನೆಯ ಬಂಡಾಯ ಶಾಸಕರಿಗೆ Y-plus CRPF ಭದ್ರತೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ (Maharashtra Political Crisis) ಮಧ್ಯೆ, ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಕೇಂದ್ರವು 15 ಬಂಡಾಯ ಶಿವಸೇನೆ ಶಾಸಕರಿಗೆ (Shiv Sena MLAs ) ಸಿಆರ್‌ಪಿಎಫ್ (CRPF) ಕಮಾಂಡೋಗಳ ವೈ-ಪ್ಲಸ್ (Y-plus) ಭದ್ರತೆಯನ್ನು ವಿಸ್ತರಿಸಿದೆ. ರೆಸಾರ್ಟ್​​ನಲ್ಲಿ ಉಳಿದುಕೊಂಡಿರುವ ಶಾಸಕರಾದ ರಮೇಶ್ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನಾವಾನೆ, ಪ್ರಕಾಶ್ ಸುರ್ವೆ ಸೇರಿದಂತೆ 10 ಮಂದಿ ವೈ ಪ್ಲಸ್​​​ ಭದ್ರತೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ವಾಸಿಸುವ ಶಾಸಕರ ಕುಟುಂಬಗಳಿಗೂ ಇದು ಭದ್ರತೆಯನ್ನು ಒದಗಿಸುತ್ತದೆ. ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಸರ್ಕಾರವು ಅವರ ಕುಟುಂಬ ಸೇರಿದಂತೆ 38 ಪಕ್ಷದ ಬಂಡಾಯ ಶಾಸಕರ ನಿವಾಸಗಳಿಂದ ಭದ್ರತೆಯನ್ನು ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಗೃಹ ಸಚಿವರ ಈ ಕ್ರಮವನ್ನು "ರಾಜಕೀಯ ಸೇಡು" ಎಂದು ಟೀಕಿಸಿದರು. ಆದರೆ ಈ ಆರೋಪವನ್ನು ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ನಿರಾಕರಿಸಿದ್ದಾರೆ.

ಪಘಾತಕ್ಕೀಡಾದ ಸ್ಯಾಂಡಲ್​ವುಡ್​ನ ನಿರ್ಮಾಪಕ ಸೂರಪ್ಪ ಬಾಬು ಕಾರು

ಸ್ಯಾಂಡಲ್​ವುಡ್​ನ (Sandalwood) ಖ್ಯಾತ ನಿರ್ಮಾಪಕರಾದ (Producer) ಸೂರಪ್ಪ ಬಾಬು (Soorappa Babu) ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇದೀಗ ಅವರ ಕುರಿತು ಆಘಾತಕಾರಿ ಸುದ್ದಿಯೊಂದು ಕೇಳಿಬರುತ್ತಿದೆ.  ನಿರ್ಮಾಪಕ ಸೂರಪ್ಪ ಬಾಬು ಮತ್ತು ಅವರ  ಕುಟುಂಬದವರಿಗೆ ರಸ್ತೆ ಅಪಘಾತ (Road Accident) ಸಂಭವಿಸಿದೆ ಎಂದು ತಿಳಿದುಬಂದಿದೆ.  ಸೂರಪ್ಪ ಬಾಬು ಅವರು ಕುಟುಂಬದವರ ಜೊತೆ ದೇವಸ್ಥಾನದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಗಿನ ಜಾವ ಈ ಅಪಘಾತ ನಡೆದಿದ್ದು, ಸದ್ಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಲಾಗಿದೆ. ಅಪಘಾತವಾದ ಹಿನ್ನಲೆ ಸೂರಪ್ಪ ಬಾಬು ಹಾಗೂ ಕುಟುಂಬದವರು ಬೆಂಗಳೂರಿಗೆ ಮ,ತ್ತೆ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.
Published by:Kavya V
First published: