Evening Digest: ಸರ್ಕಾರದ ವಿರುದ್ಧ 'ರಾಜಮಾತೆ' ಗರಂ: ಕಬಡ್ಡಿ ಆಡುವಾಗ 22 ವರ್ಷದ ಯುವಕನ ಸಾವು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಸರ್ಕಾರದ ವಿರುದ್ಧ 'ರಾಜಮಾತೆ' ಗರಂ: ಮಂಡ್ಯದ ಬೇಬಿ ಬೆಟ್ಟದ ವಿವಾದಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar) ಪ್ರತಿಕ್ರಿಯಿಸಿದ್ದಾರೆ. 1950 ರ ಕಾಲದಿಂದ ಆ ಬೆಟ್ಟದ 1,650 ಎಕರೆ ಜಾಗ ನಮ್ಮದು, ಭಾರತ ಸರಕಾರದ ಜೊತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲಿ ಬೇಬಿ ಬೆಟ್ಟ (Babi Betta) ಇದೆ. ಇದು ಖಾಸಗಿ ಆಸ್ತಿ. ಇದರಲ್ಲಿ ಟ್ರಯಲ್ ಬ್ಲಾಸ್ಟ್ (Trail Blast) ಮಾಡೋದು ಸರಿಯಲ್ಲ. ಟ್ರಯಲ್ ಬ್ಲಾಸ್ಟ್​ಗೆ ತಜ್ಞರು ಸರಕಾರಿ ಜಾಗ (Government Space) ಗುರುತಿಸಿಕೊಳ್ಳಬೇಕು. ಬೇಬಿ ಬೆಟ್ಟದ ಜಾಗವನ್ನು ಉದ್ದೇಶ ಪೂರ್ವಕವಾಗಿ ಬಿ ಖರಬ್ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ನಾನು ಆ ಜಾಗದ ವಿಚಾರದಲ್ಲಿ ನಾನು ಕೋರ್ಟ್​ಗೆ  ಹೋಗಿರಲಿಲ್ಲ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬ್ ಜಾಗದ ವಿವಾದ ಸುಪ್ರೀಂಕೋರ್ಟ್​ನಲ್ಲಿ ಅರಮನೆಗೆ ಜಯವಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಧಾನಸಭೆ ಎಲೆಕ್ಷನ್​ನಲ್ಲಿ ನಿಖಿಲ್ ಸ್ಪರ್ಧೆ ಮಾಡೋದಿಲ್ಲ

ವಿಧಾನಸಭೆಗೆ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D Kumarswamy) ಹೇಳಿದ್ದಾರೆ.  ಮದ್ದೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ 2023ರ ವಿಧಾನಸಭೆ ಚುನಾವಣೆಯಲ್ಲಿ (Election) ಸ್ಪರ್ಧೆ ಮಾಡ್ತಾರೆ ಅಂತ ಯಾರು ಹೇಳಿದ್ರು? ಅವರು ಆ ಚುನಾವಣೆಯಲ್ಲಿ ನಿಲ್ತಿಲ್ಲ. 20 ರಿಂದ 30 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಲು ನಿಖಿಲ್ ಹೋರಾಟ ಮಾಡ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (Assembly Election) ನಿಖಿಲ್ ಸ್ಪರ್ಧೆ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ರಾಜ್ಯಸಭೆಯ 19 ಸಂಸದರ ಅಮಾನತು!

ಇಂದು ಅಧಿವೇಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಪ್ರತಿಪಕ್ಷದ 19 ಸಂಸದರನ್ನು (Opposition MPs) ರಾಜ್ಯಸಭೆಯಿಂದ (Rajya Sabha) ಒಂದು ವಾರದವರೆಗೆ ಅಮಾನತುಗೊಳಿಸಲಾಗಿದೆ (Suspended). ನಿನ್ನೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರ ವರ್ತನೆ ಬಗ್ಗೆ ಎಚ್ಚರಿಕೆ ನೀಡಿದರೂ ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದಿದ್ದಕ್ಕಾಗಿ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರು ಆಗಸ್ಟ್ 12 ಕ್ಕೆ ಕೊನೆಗೊಳ್ಳುವ ಸಂಪೂರ್ಣ ಮುಂಗಾರು ಅಧಿವೇಶನದಲ್ಲಿ ಇದೇ ರೀತಿಯ ಕ್ರಮವನ್ನು ಎದುರಿಸಿದ ಒಂದು ದಿನದ ನಂತರ 19 ಸಂಸದರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಪ್ರತಿಪಕ್ಷದ ಸಂಸದರು ಸದನವನ್ನು ಬಿಡದೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. 19 ರಾಜ್ಯಸಭಾ ಸಂಸದರ ವಿರುದ್ಧದ ಕ್ರಮವು ಆಡಳಿತಾರೂಢ ಮೈತ್ರಿಕೂಟವನ್ನು ಪ್ರಶ್ನಿಸುವ ಧ್ವನಿಗಳನ್ನು ಮುಚ್ಚುವ ಪ್ರಯತ್ನ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ ವ್ಯಕ್ತಪಡಿಸಿದರು.

ಕಬಡ್ಡಿ ಆಡುವಾಗ 22 ವರ್ಷದ ಯುವಕ ಸಾವು

ಸಾವು (Death) ಹೇಗೆಲ್ಲಾ ಬರುತ್ತೆ ಅಂತ ಹೇಳೋದಕ್ಕೂ ಆಗಲ್ಲ. ನಾವೆಲ್ಲಾ ಸಾವಿಗೂ ಒಂದು ನ್ಯಾಯ ಇರಬೇಕು ಅಂದುಕೊಳ್ಳುತ್ತೇವೆ. ಆದರೆ ವಿಧಿಗೆ ಇದ್ಯಾವುದರ ಪರಿವೇ ಇರುವುದಿಲ್ಲ. ವಿಧಿಗೆ ಯಾವುದೇ ಕರುಣೆ ಇಲ್ಲ. ಕೇವಲ 22 ವರ್ಷದ ಯುವಕನನ್ನು ಹೃದಯಾಘಾತ (Heart Attack) ರೂಪದಲ್ಲಿ ಸಾವಿನ ಮನೆ ಸೇರಿಸಿದೆ. ಕಬಡ್ಡಿ (kabaddi) ಆಟದ ಮೈದಾನದಲ್ಲಿ ಚೆಂಡಿನಂತೆ ಪುಟಿಯುತ್ತಿದ್ದ ಯುವಕ ನೋಡನೋಡುತ್ತಿದಂತೆ ಕುಸಿದು ಬಿದ್ದು, ಕೆಲವೇ ಕ್ಷಣಗಳಲ್ಲಿ ಹೆಣವಾಗಿದ್ದಾನೆ. ಈ ದಾರುಣ ಘಟನೆ ನಡೆದಿರುವುದು ತಮಿಳುನಾಡಿನ ಮಾನ್ನಾಡಿಕುಪ್ಪಂನಲ್ಲಿ.  ಪುರಾಂಗಣಿಯ ವಿಮಲ್ ರಾಜ್ (22) ಮೃತಪಟ್ಟ ಸ್ಥಳೀಯ ಕಬಡ್ಡಿ ಅಟಗಾರ. ಎಂದಿನಂತೆ ಆಟನ ನಡೆಯುತ್ತಿತ್ತು, ವಿಮಲ್​ ರಾಜ್​​ ರೈಡ್ ವೇಳೆ ಇಬ್ಬರು ಆಟಗಾರರನ್ನು ಔಟ್ ಮಾಡಿ ಗೆರೆ ಮುಟ್ಟಿದ್ದ. ಆದರೆ ಮರು ಕ್ಷಣವೇ ಮೇಲೇಳಲಾಗದೆ ಕುಸಿದು ಬಿದ್ದ. ಕ್ಯಾಚ್ ಹಿಡಿಯಲು ಬಂದ ಎದುರಾಳಿ ಅಟಗಾರನ ಮೇಲೆ ಹಾರಿ ತಪ್ಪಿಸಿಕೊಂಡಿದ್ದ. ಆದ್ರೆ ವಿಧಿಯಾಟದ ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕುಸಿದು ಬಿದ್ದವನು ಮತ್ತೆ ಮೇಲೇಳಲೇ ಇಲ್ಲ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Heart Attack: ಅಯ್ಯೋ ದುರ್ವಿಧಿಯೇ, ಕಬಡ್ಡಿ ಆಡುವಾಗ ಕೇವಲ 22 ವರ್ಷದ ಯುವಕನಿಗೆ ಹೃದಯಾಘಾತ!

ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್

ಲಾಲ್ ಸಿಂಗ್ ಚಡ್ಡಾ ಏಪ್ರಿಲ್ 14ರಂದು ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ವಿಎಫ್​ಎಕ್ಸ್​ ಕೆಲಸ ವಿಳಂಬ ಮಾಡಿದರು. ಅದು ನಮ್ಮ ಅದೃಷ್ಟ. ನಾವು ಬದುಕಿದೆವು. ಇಲ್ಲವಾದರೆ ನಾವು ಕೆಜಿಎಫ್ 2 ಎದುರು ಸ್ಪರ್ಧಿಸಬೇಕಿತ್ತು’ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಮೂಲಕ ಬಾಲಿವುಡ್​ನ ಮಿಸ್ಟರ್​ ಫರ್ಫೆಕ್ಟ್ ಸಹ ಹೆದರಿದ್ದಾಗಿ ಮತ್ತೊಮ್ಮೆ ಸಾಬೀತಾಗಿದೆ.​
Published by:Kavya V
First published: