Evening Digest: ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಹೆಂಡತಿ: ಮತ್ತೆ ಅಡುಗೆ ಎಣ್ಣೆ ಬೆಲೆ ಏರಿಕೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ : ಗಂಡ (Husband), ಹೆಂಡತಿ (Wife) ಸರಿಯಾಗಿದ್ದರೆ ಮಾತ್ರ ಸಂಸಾರ ಚೆನ್ನ. ಇದರಲ್ಲಿ ಒಬ್ಬರು ದಾರಿ ತಪ್ಪಿದರೂ ಸಂಸಾರದ ಬಂಡಿ ಎತ್ತಲೋ ಹೋಗುತ್ತದೆ. ಇಲ್ಲಿ ಆಗಿದ್ದೂ ಅದೇ. ಕಷ್ಟ ಸುಖದಲ್ಲಿ ಜೊತೆ ಇರುತ್ತೇನೆ ಎಂದಿದ್ದ ಹೆಂಡತಿ, ಸುಖದಲ್ಲಿ ಮಾತ್ರ ಇದ್ದಳು. ಆತನಿಂದ ಸುಖವೆಲ್ಲ ಪಡೆದಾದ ಮೇಲೆ ಆತನಿಗೆ ಸಂಕಷ್ಟ ತಂದಿಟ್ಟಳು. ಆದ್ಯಾವ ದ್ವೇಷವೋ ಏನೋ, ಚಾಕುವಿನಿಂದ (Knife) ಇರಿದು ಕೊಲೆ ಮಾಡಿದ್ದಾಳೆ. ಬರೀ ಕೊಲೆ ಮಾಡಿದ್ದೊಂದೇ ಅಲ್ಲ. ಆತನ ಮೃತ ದೇಹವನ್ನು (Dead Body) ಪೀಸ್ ಪೀಸ್ ಮಾಡಿದ್ದಾಳೆ. ಸಾಲದ್ದಕ್ಕೆ ಧೈರ್ಯದಿಂದ ಆತನ ದೇಹವನ್ನು ಮನೆಯಲ್ಲೇ ಬಚ್ಟಿಟ್ಟಿದ್ದಾಳೆ. ಇವೆಲ್ಲ ಕೆಲಸಕ್ಕೆ ಆಕೆಗೆ ಸಾಥ್ ನೀಡಿದ್ದು ಆಕೆಯ ಪ್ರಿಯಕರ (Lover). ಹಾಗಿದ್ರೆ ಈ ಭಯಾನಕ ಘಟನೆ ನಡೆದಿದ್ದು ಎಲ್ಲಿ, ಇಲ್ಲಿ ಹೆಂಡತಿ ಗಂಡನನ್ನು ಆ ಪರಿಯಾಗಿ ಕೊಂದಿದ್ದು ಏಕೆ?

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Murder: ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ! ಪೀಸ್ ಎಸೆದು ಬಂದಿದ್ದು ಆಕೆಯ ಪ್ರಿಯಕರ!

ಮತ್ತೆ ಅಡುಗೆ ಎಣ್ಣೆ ಬೆಲೆ ಏರಿಕೆ
ಎಲ್ಲಿ ಏನೇ ಆದರೂ ಮಿಡ್ಲ್ ಕ್ಲಾಸ್ (Middle Class) ಜನರಿಗೇ ಹಣಕಾಸು ತೊಂದರೆ ಆಗೋದು ಎಂಬ ಮಾತು ಮತ್ತೊಮ್ಮೆ ಸತ್ಯವಾಗಿದೆ. ಉಕ್ರೇನ್ (Ukraine) ದೇಶದ ಮೇಲೆ ರಷ್ಯಾ (Russia) ನಿರಂತರ ದಾಳಿಗಳನ್ನು ನಡೆಸುತ್ತಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ವಾಪಸ್ ಆಗಲಿ ಎಂದು ಎಲ್ಲೆಡೆಯೂ ಪ್ರಾರ್ಥಿಸಲಾಗುತ್ತಿದೆ. ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ಹೋಗಿದ್ದ ಕರ್ನಾಟಕದ (Karnataka) ವಿದ್ಯಾರ್ಥಿಗಳು ಅತಂತ್ರಗೊಂಡಿದ್ದು, ಕುಟುಂಬಸ್ಥರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದಿಂದ (Ukraine Russia War) ಭಾರತಕ್ಕೆ ಆಗುತ್ತಿರುವ ತೊಂದರೆ ಇದೊಂದೇ ಅಲ್ಲ. ನಮ್ಮ ದಿನನಿತ್ಯದ ಜೀವನದ ಮೇಲೂ ಯುದ್ಧದ ಭೀಕರತೆ ಕಾಣಿಸಿಕೊಳ್ಳಲಿದೆ. ಬಹುಮುಖ್ಯವಾಗಿ ಭಾರತದ ಮಧ್ಯಮ ವರ್ಗದವರ ಅಡುಗೆ ಮನೆಗಳ ಮೇಲೆ ಯುದ್ಧದ ಭೀತಿ ಬೇಗನೆ ಕಾಣಿಸಿಕೊಳ್ಳಲಿದೆ. ಏಕೆಂದರೆ ಉಕ್ರೇನ್-ರಷ್ಯಾ ಯುದ್ಧದಿಂದ ಅಡುಗೆ ಎಣ್ಣೆ ಬೆಲೆ (Cooking Oil Price) ದುಬಾರಿಯಾಗಲಿದೆ. ಸೂರ್ಯಕಾಂತಿ ಎಣ್ಣೆಯ ದರ ನಮ್ಮೆಲ್ಲರ ಜೇಬು ಸುಡಲಿದೆ. ಭಾರತ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಈ ಎರಡು ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಈಗ ರಷ್ಯಾ, ಉಕ್ರೇನ್ ಎರಡೂ ಯುದ್ಧದಲ್ಲಿ ತೊಡಗಿದ್ದು, ಭಾರತೀಯರಿಗೆ ಹೊಡೆತ ಬೀಳಲಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: ಭಾರತಕ್ಕೆ 90% ಅಡುಗೆ ಎಣ್ಣೆ ಬರೋದೆ ಉಕ್ರೇನ್, ರಷ್ಯಾದಿಂದ.. ಈಗ ಗಗನಕ್ಕೇರಲಿದೆ Cooking Oil Price

ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದ ಮೊಮ್ಮಗಳು
ಮೂರು ತಿಂಗಳ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಆತ್ಮಹತ್ಯೆಗೂ (Suicide) ಮುನ್ನ ಆಕಸ್ಮಿಕವಾಗಿ ತನ್ನ ಅಜ್ಜಿಯನ್ನು (Grandma) ಕೊಂದಿರುವ (Murder) ಭಯಾನಕ ಘಟನೆ ನಗರದ ಮಾರುತಿನಗರದಲ್ಲಿ ನಡೆದಿದೆ. ಕೊಟ್ಟಿಗೆಪಾಳ್ಯ ನಿವಾಸಿ 24 ವರ್ಷದ ಮಮತಾ ಎಂಬುವರು ತಮ್ಮ ತಾಯಿಯ ತಾಯಿ 70 ವರ್ಷದ ಅಜ್ಜಿ ಜಯಮ್ಮ ಎಂಬುವರನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಜ್ಞಾನಭಾರತಿ ಸಮೀಪದ ಮಾರುತಿನಗರದ ಅವರ ಮನೆಯಲ್ಲಿ ಅಜ್ಜಿ, ಮೊಮ್ಮಗಳ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು. ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದಿರಬಹುದು ಎಂದು ಶಂಕಿಸಿದ್ದಾರೆ. ಮಮತಾ ಫೋನ್ ಕರೆಗಳಿಗೆ ಉತ್ತರಿಸದ ಕಾರಣ ಅವರ ಪತಿ ಮಂಜುನಾಥ್ ಅವರು ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿದೆ.

ತಾಯಿಯ ಕಪಾಳಕ್ಕೆ ಹೊಡೆದು ಕೊಂದ ಪಾಪಿ ಪುತ್ರ!
ರಾಜ್ಯ ರಾಜಧಾನಿ ಬೆಂಗಳೂರಿನ ಮಾರತಹಳ್ಳಿ ವ್ಯಾಪ್ತಿಯ ದೇವರ ಬೀಸನಹಳ್ಳಿಯಲ್ಲಿ ನಿನ್ನೆ ರಾತ್ರಿ ಇಂಥದ್ದೊಂದು ಘಟನೆ ನಡೆದಿದೆ. ಮಗ ಅಂಬರೀಷ ಎಂಬಾತ 70 ವರ್ಷದ ವೃದ್ಧ ತಾಯಿ ಯುಮುನವ್ವ ಎಂಬಾಕೆಯನ್ನು ಕೊಂದೇ ಬಿಟ್ಟಿದ್ದಾನೆ. ಇದೀಗ ಪಾಪಿ ಪುತ್ರ ಮಾಡಿದ ತಪ್ಪಿಗೆ ತಾನು ಪೊಲೀಸರ ಅತಿಥಿಯಾಗಿದ್ದಾನೆ. ಈ ಅಂಬರೀಷನಿಗೆ ನಿತ್ಯ ಕುಡಿಯುವ ಚಟ ಇತ್ತು. ತನ್ನ ಬಳಿ ಹಣ ಇರಲಿ, ಇದರೇ ಇರಲಿ, ಆದ್ರೆ ಅವನಿಗೆ ಎಣ್ಣೆ ಮಾತ್ರ ಪ್ರತಿನಿತ್ಯ ಬೇಕಾಗಿತ್ತು. ಆದರೆ ತಾನು ಮಾತ್ರ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಅಪ್ಪು ಸಮಾಧಿಗೆ ತಮಿಳು ನಟ ವಿಜಯ್ ಭೇಟಿ
ಕಾಣದಂತೆ ನಮ್ಮ ಅಪ್ಪು (Appu) ಮಾಯವಾಗಿದ್ದಾರೆ. ಆದರೆ ಅವರು ಮಾಡಿರುವ, ಮಾಡುತ್ತಿದ್ದ ಕೆಲಸಗಳು ಅನೇಕ ಜನರಿಗೆ ಸ್ಪೂರ್ತಿಯಾಗಿದೆ. ಬೇರೆ ಭಾಷೆ ಸ್ಟಾರ್ ನಟರು (Star Actors) ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ತಮಿಳು ನಟ ದಳಪತಿ ವಿಜಯ್ (Thalapathy Vijay) ಅಪ್ಪು ಸಮಾಧಿಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ನಟ ಅಲ್ಲು ಅರ್ಜುನ್ ಅವರು ಆಗಮಿಸಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಇಂದು (ಫೆಬ್ರವರಿ 26) ತಮಿಳು ನಟ ‘ದಳಪತಿ’ ವಿಜಯ್ ಅವರು ಅಪ್ಪು ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿಗೆ ತಮಿಳು ನಟ ವಿಜಯ್ ಬರುತ್ತಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ. ಪುನೀತ್ ನಿಧನದ ನಂತರ ಭಾರತೀಯ ಚಿತ್ರರಂಗದವರೆಲ್ಲ ಅಪ್ಪು ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ವಿಜಯ್ ಅಪ್ಪು ಬಗ್ಗೆ ಏನನ್ನೂ ಮಾತನಾಡಿರಲಿಲ್ಲ. ಈ ಬಗ್ಗೆ ಅಪ್ಪು ಅಭಿಮಾನಿಗಳಿಗೆ ಕೊಂಚ ಬೇಸರವಾಗಿತ್ತು. ಇದೀಗ ವಿಜಯ್ ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ಪೂಜೆ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ.
Published by:Kavya V
First published: