Evening Digest: ಶೀಘ್ರವೇ ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್? ಮೀಟರ್ ಬಡ್ಡಿ ದಂಧೆಗೆ ಗೃಹಿಣಿ ಬಲಿ: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಶೀಘ್ರವೇ ಸಿಎಂ ಸ್ಥಾನದಿಂದ ಬೊಮ್ಮಾಯಿಗೆ ಕೊಕ್​? ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ರಾಜೀನಾಮೆ ನೀಡಿ ಮಂಡಿ ನೋವಿನ‌ ಶಸ್ತ್ರಚಿಕಿತ್ಸೆಗೆ ವಿದೇಶಕ್ಕೆ ತೆರಳುತ್ತಾರೆ. ಮಂಡಿ ನೋವಿನ ನೆಪ ಇಟ್ಟುಕೊಂಡೇ ಅವರಿಂದ ಬಿಜೆಪಿ ಹೈಕಮಾಂಡ್ (BJP High Command) ರಾಜೀನಾಮೆ ಪಡೆಯುತ್ತೆ ಎಂಬ ಚರ್ಚೆಗಳು ರಾಜ್ಯ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿವೆ. ಈ ನಡುವೆ ಡಿಸೆಂಬರ್ 28 ಮತ್ತು 29ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ‌ ಕಾರ್ಯಕಾರಣಿ ಸಭೆ (State BJP Executive Meeting) ನಡೆಯುತ್ತಿದ್ದು ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೋ ಅಥವಾ ರಾಜೀನಾಮೆ ಪಡೆಯಬೇಕೋ ಎಂಬುದನ್ನು ‌ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.

​ ಮೀಟರ್​ ಬಡ್ಡಿ ದಂಧೆಗೆ ಗೃಹಿಣಿ ಬಲಿ

ಬಂಗಾರಪೇಟೆ  (Bangarapet) ಪಟ್ಟಣದ ಕೂಗಳತೆ ದೂರದ ಅತ್ತಗಿರಿಕೊಪ್ಪ ನಿವಾಸಿ  ಲಕ್ಷ್ಮೀದೇವಮ್ಮ ಮೀಟರ್ ಬಡ್ಡಿದಾರರಿಗೆ (Interest rate) ಹೆದರಿ ಆತ್ಮಹತ್ಯೆ (Suicide) ಶರಣಾಗಿದ್ದಾರೆ.  ಬಡ್ಡಿ ಹಣಕ್ಕಾಗಿ ತೊಂದರೆ ನೀಡುತ್ತಿರುವುದನ್ನು ಸಹಿಸಿಕೊಳ್ಳಲು ಆಗದೆ ಲಕ್ಮೀದೇವಮ್ಮ ಮನೆಯಲ್ಲಿದ್ದಂತಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.  ಕಳೆದ ಗುರುವಾರ ಆತ್ಮಹತ್ಯೆ ಯತ್ನ ನಡೆಸಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಹೆಚ್ಚಿ‌ನ ಚಿಕಿತ್ಸೆಗೆಂದ ಲಕ್ಷ್ಮೀದೇವಮ್ಮ ರನ್ನ ದಾಖಲು ಮಾಡಲಾಗಿತ್ತು, ಆದರೆ  ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇತ್ತೀಚಿಗೆ ಬಡ್ಡಿದಾರರಿಂದ ಪಡೆದ ಹಣಕ್ಕೆ ವಾಪಾಸ್ ಬಡ್ಡಿ ಕಟ್ಟಲಾಗದೆ, ಸಮಸ್ಯೆಗಳು ಒಂದೊಂದಾಗಿ ಹೆಚ್ಚಾಗಿದೆ.  ಬಡ್ಡಿದಾರರು ಕೊಡುವ ಮಾನಸಿಕ ಹಿಂಸೆ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾನು ಭಯಸ್ಥ ಅಲ್ಲ, ಪೋಲಿ ಆಟ ಆಡಿ ಬಂದವನು

ಇತ್ತೀಚಿಗೆ ಒಂದು ವಿವಾದ ಆಗಿ ನನಗೆ ಗೊತ್ತಿಲ್ಲದ ಸಮುದಾಯಗಳೆಲ್ಲ ನನ್ನ ಜೊತೆಗೆ ನಿಂತರು, ಹೀಗೆಲ್ಲ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಎಸ್.ಜಿ ಸಿದ್ದರಾಮಯ್ಯ. ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನನ್ನ ದೇಸಿ ಶಾಲೆಗೆ ಸಹಾಯ ಮಾಡಿದ್ದರು. ನಾಗರಾಜ ಮೂರ್ತಿ ಯಾರಿಗೂ ಹೆದರಬೇಡಿ ಅಂತ ಬೆಂಬಲ ನೀಡಿದ್ದಾರೆ. ನಾನು ಭಯಸ್ಥ ಅಲ್ಲ, ಮಾಗಡಿ ರೋಡ್​​ನಲ್ಲಿ ದೊಡ್ಡ ದೊಡ್ಡ ಪೋಲಿ ಆಟಗಳನ್ನು ಆಡಿ ಬಂದವನು. ಅದಕ್ಕೊಂದು ಚರಿತ್ರೆಯೇ ಇದೆ. ಆದರೆ ಈಗ ನನಗೆ ಎಪ್ಪತ್ತು, ತಿನ್ನೋದು ಒಪ್ಪತ್ತು ಎಂದು ಮಾತಿನ ಝರಿ ಹರಿಸಿದರು. ಹಾಲಿನ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಸಿಎಂ ಆಗಲಿ. ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮೋಕ್ರಸಿಯನ್ನು ಸಿದ್ದರಾಮಯ್ಯ ಉಳಿಸಲಿ ಎಂದು ಹಂಸಲೇಖ ಆಶಿಸಿದರು.

ಸಾವಿಗೆ ಬರಲೂ ಹಣವಿಲ್ಲ ಎಂದ ಹೆತ್ತವರು!

ಮಂಗಳೂರು: 19 ವರ್ಷದ ಬಿಟೆಕ್ ವಿದ್ಯಾರ್ಥಿ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಸೌರವ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ಸೌರವ್​​ ಕರ್ನಾಟಕದ ಸುರತ್ಕಲ್‌ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NITK) ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡುತ್ತಿದ್ದನು. ಹಣಕಾಸಿನ ಸಮಸ್ಯೆಯಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಸೌರವ್​ ಸಾವಿಗೂ ಮುನ್ನ ತಂದೆಗೆ ಬರೆದಿರುವ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಡತನದಿಂದ ಮಗನ ಅಂತ್ಯಸಂಸ್ಕಾರಕ್ಕೆ ಬಿಹಾರದಿಂದ ಮಂಗಳೂರಿಗೆ ಬರಲು ಸಾಧ್ಯವಾಗುತ್ತಿಲ್ಲ, ನೀವೇ ಅಂತ್ಯಕ್ರಿಯೆ ನಡೆಸಿ ಎಂದು ಅಧಿಕಾರಿಗಳಿಗೆ ಪೋಷಕರು ಮನವಿ ಮಾಡಿದ್ದರಂತೆ. ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೌರವ್​ ಪೋಷಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪಾರ್ಥಿವ ಶರೀರವನ್ನು ಮನೆಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಸುರತ್ಕಲ್ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯ್ ಹಜಾರೆ ಟ್ರೋಫಿ- ಹಿಮಾಚಲ ನೂತನ ಚಾಂಪಿಯನ್ಸ್; ತಮಿಳುನಾಡಿಗೆ ನಿರಾಸೆ

ಶುಭಮ್ ಅರೋರಾ (Shubham Arora) ಅವರ ಅಮೋಘ ಶತಕ ಹಾಗೂ ನಾಯಕ ರಿಷಿ ಧವನ್ (Rishi Dhawan) ಅವರ ಆಲ್​ರೌಂಡ್ ಆಟದ ನೆರವಿನಿಂದ ಹಿಮಾಚಲಪ್ರದೇಶ (Himachal Pradesh) ಇಂದು ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಫೈನಲ್​ನಲ್ಲಿ ತಮಿಳುನಾಡನ್ನು ಸೋಲಿಸಿತು. ಗೆಲ್ಲಲು 315 ರನ್​ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಹಿಮಾಚಲ ಪ್ರದೇಶ 48ನೇ ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿದ್ದಾಗ ಮಂದ ಬೆಂಕಿನ ಕಾರಣಕ್ಕೆ ಅಂಪೈರ್​ಗಳು ಆಟ ನಿಲ್ಲಿಸಿದರು. ಆ ಸಂದರ್ಭದಲ್ಲಿ ಹಿಮಾಚಲ ತಂಡ 15 ಎಸೆತದಲ್ಲಿ 16 ರನ್ ಗಳಿಸುವ ಅಗತ್ಯತೆ ಇದು. ಪಂದ್ಯ ಸ್ಥಗಿತಗೊಂಡ ನಂತರ ವಿಜೆಡಿ ನಿಯಮದ ಅನುಸಾರ ಹಿಮಾಚಲ ಪ್ರದೇಶ ತಂಡವನ್ನು 11 ರನ್​ಗಳಿಂದ ವಿಜಯಶಾಲಿ ಎಂದು ಘೋಷಿಸಲಾಯಿತು.
Published by:Kavya V
First published: