Evening Digest: ಸೋನಾಲಿ ಪೋಗಟ್ ಸಾವಲ್ಲ, ಕೊಲೆ! ಪ್ರೊ ಕಬಡ್ಡಿ ವೇಳಾಪಟ್ಟಿ ಪ್ರಕಟ -ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿಯದ್ದು ಸಾವಲ್ಲ, ಕೊಲೆ

ಆಗಸ್ಟ್ 23 ರಂದು ಗೋವಾದಲ್ಲಿ ನಿಧನರಾದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ರನ್ನು ಆಕೆಯ ಆಪ್ತ ಸಹಾಯಕ ಮತ್ತು ಸ್ನೇಹಿತನೇ ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಎಂದು ಪೋಗಟ್ ಕುಟುಂಬ ಆರೋಪಿಸಿದೆ. ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಪಿಎ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖ್ವಿಂದರ್ ಅವರು ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ

Fake University: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ!

ಮುಂಬೈ: ತಮ್ಮ ಮಕ್ಕಳು ದೊಡ್ಡ ದೊಡ್ಡ ಕಾಲೇಜ್‌ಗಳಲ್ಲಿ (Collage) ಓದಬೇಕು, ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ (University) ಪದವಿ ಪಡೆಯಬೇಕು ಅಂತ ಹೆತ್ತವರು ಕನಸು ಕಾಣ್ತಾರೆ. ತಮ್ಮ ಮಕ್ಕಳು ಪ್ರತಿಷ್ಠಿತ ಕಾಲೇಜ್‌, ಯುನಿವರ್ಸಿಟಿಗಳಲ್ಲಿ ಓದಿ, ಉದ್ಧಾರವಾಗಲಿ ಅಂತ ಕಷ್ಟಪಟ್ಟು ಹಣ ಹೊಂದಿಸ್ತಾರೆ. ಆದರೆ ಆ ಮಕ್ಕಳು ಓದುವ ವಿಶ್ವವಿದ್ಯಾಲಯಗಳೇ ನಕಲಿಯಾದರೆ (Fake) ಮಾಡುವುದು ಏನು? ಹೌದು ಇಂಥದ್ದೊಂದು ಶಾಕಿಂಗ್ ರಿಪೋರ್ಟ್ (Shocking Report) ಇದೀಗ ಬಂದಿದೆ. ದೇಶದ 21 ವಿಶ್ವವಿದ್ಯಾಲಯಗಳು ನಕಲಿ ಅಂತ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಯುಜಿಸಿ (UGC) ಸ್ಪಷ್ಟಪಡಿಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅತೀ ಹೆಚ್ಚು ನಕಲಿ ವಿಶ್ವವಿದ್ಯಾಲಯಗಳಿದ್ದು, ಕರ್ನಾಟಕದಲ್ಲೂ ಫೇಕ್ ಯುನಿವರ್ಸಿಟಿ ಇದೆ ಅಂತ ಯುಜಿಸಿ ವರದಿ ಹೇಳಿದೆ.

ಇದನ್ನೂ ಓದಿ: Fake University: ದೇಶದಲ್ಲಿದೆ 21 ಫೇಕ್ ಯುನಿವರ್ಸಿಟಿ! ಕರ್ನಾಟಕದಲ್ಲೂ ಇದೆ ನಕಲಿ ವಿಶ್ವವಿದ್ಯಾಲಯ!

Pro Kabaddi League: ಕಬಡ್ಡಿ ಪ್ರಿಯರಿಗೆ ಗುಡ್‌ ನ್ಯೂಸ್‌

ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಸೀಸನ್​ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ ನ್ಯೂಸ್. ಹೌದು, ಸೀಸನ್​ 9ರ ಪ್ರೊ ಕಬಡ್ಡಿ ಲೀಗ್ ನ ವೇಳಾಪಟ್ಟಿ ಬಿಡುಗಡೆ ಆಗಿದ್ದು, ಕಬ್ಬಡ್ಡಿ (Kabaddi )ಪ್ರಿಯರಿಗೆ ಸಂತಸ ತಂದಿದೆ. ಬೆಂಗಳೂರು (Bengaluru) ಸೇರಿದಂತೆ ಮೂರು ನಗರಗಳಲ್ಲಿ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಗಳು ನಡೆಯಲಿವೆ. ಕೆಲ ದಿನಗಳ ಹಿಂದೆಯಷ್ಟೇ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಇದೀಗ ಕಬ್ಬಡ್ಡಿ ಲೀಗ್​ನ ವೇಳಾಪಟ್ಟಿ ಬಿಡುಗಡೆ ಆಗಿದೆ. ಇನ್ನು, ಕಬ್ಬಡ್ಡಿ ಪಂದ್ಯಾವಳಿಯು ಬೆಂಗಳೂರು, ಪುಣೆ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ ಎಂದು ಪ್ರೊ ಕಬಡ್ಡಿ ಲೀಗ್‌ನ ಮುಖ್ಯಸ್ಥ ಅನುಪಮ್ ಗೋಸ್ವಾಮಿ ಮಾಹಿತಿ ನೀಡಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ಹಗ್ಗಜಗ್ಗಾಟ, ವಿವಾದದಿಂದ ಕೂಡಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan) ಗಣೇಶ ಹಬ್ಬ (Ganesha Festival) ಆಚರಿಸಲು ಕರ್ನಾಟಕ ಹೈಕೋರ್ಟ್ (Karnataka High Court)​ ಗ್ರೀನ್​ ಸಿಗ್ನಲ್ ನೀಡಿದೆ. ಚಾಮರಾಜಪೇಟೆ ಮೈದಾನದಲ್ಲಿ ಈವರೆಗೆ ಬಕ್ರೀದ್​ ಹಬ್ಬ ಮಾತ್ರ ಆಚರಿಸಲಾಗ್ತಿತ್ತು. ಈ ಬಾರಿ ವಿವಾದದ (Controversy) ಬಳಿಕ ಗಣೇಶ ಹಬ್ಬಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ವಕ್ಫ್​ ಬೋರ್ಡ್ (Waqf Board)​, ಶಾಸಕ ಜಮೀರ್​ ವಿರೋಧಿಸಿದ್ದರು. ಬಳಿಕ ವಿವಾದ ಹೈಕೋರ್ಟ್​ ಮೆಟ್ಟಿಲೇರಿತ್ತು. ನಿನ್ನೆಯಷ್ಟೇ ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.

ಇದನ್ನೂ ಓದಿ: Idgah Maidan: ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಹೈಕೋರ್ಟ್ ಗ್ರೀನ್​ ಸಿಗ್ನಲ್!

ಮೇಘನಾ ಮನದಲ್ಲಿ ಚಿರು ಉಸಿರು, ಕೈಯಲ್ಲಿ ಚಿರು ಹೆಸರು!

ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ ವರ್ಷಗಳೇ ಕಳೆದಿದೆ. ಪತ್ನಿ ಮೇಘನಾ ರಾಜ್ ಚಿರು ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮಗನ ಸಂಪೂರ್ಣ ಜವಾಬ್ದಾರಿ ಹೊಂದಿರೋ ಮೇಘನಾ ರಾಜ್, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪ್ರೀತಿಸಿ ಮದುವೆಯಾದವರು, ಚಿರು ಅಕಾಲಿಕ ಮರಣ ಮೇಘನಾ ಜೀವನವನ್ನೇ ಅಘಾತಕ್ಕೀಡು ಮಾಡಿತ್ತು. ಪತಿ ಚಿರಂಜೀವಿ ನೆನಪು ಮೇಘನಾ ರಾಜ್ ಮನದಲ್ಲಿ ಶಾಶ್ವತವಾಗಿದೆ ಅನ್ನೋದಕ್ಕೆ ಅವರು ಹಾಕಿಸಿಕೊಂಡಿರೋ ಟ್ಯಾಟೋ ಸಾಕ್ಷಿಯಾಗಿದೆ. ಮೇಘನಾ ರಾಜ್ ಅವರು ತಮ್ಮ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಚಿರು ಹಾಗೂ ರಾಯಲ್ಹೆಸರು ಹಾಕಿಸಿಕೊಂಡಿದ್ದಾರೆ.
Published by:Annappa Achari
First published: