Evening Digest: ಕಾಂಗ್ರೆಸ್​ ಸೇರಲ್ಲ ಎಂದ ಪ್ರಶಾಂತ್​ ಕಿಶೋರ್​​; ಟ್ವಿಟರ್​ ಖರೀದಿಸಿದ ಎಲಾನ್​ ಮಸ್ಕ್​​: ಈ ದಿನದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಶಾಲೆಗಳಿಗೆ ನೋಟಿಸ್​
  ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬಲವಂತವಾಗಿ ಬೈಬಲ್ ಬೋಧನೆ ಮಾಡಲಾಗತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಈ ಹಿನ್ನೆಲೆ ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದರು. ಇತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಹ ಸಂಜೆಯೊಳಗೆಯೇ ವರದಿ ಸಲ್ಲಿಸಲು ಡೆಡ್ ಲೈನ್ ನೀಡಿದ್ದರು. ಇಂದು ಬೆಳಗ್ಗೆ ತುರ್ತು ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವರು, ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಬೋಧನೆಯ ಕುರಿತು ಮಾಹಿತಿ ನೀಡಿದರು.

  ಆರೋಪಿ ದಿವ್ಯಾ ಜೊತೆ ಡಿಕೆಶಿ
  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು PSI ನೇಮಕಾತಿ ಅಕ್ರಮದ ಆರೋಪಿ ದಿವ್ಯಾ ಹಾಗರಗಿ, ಡಿಕೆಶಿ ನಿವಾಸದಲ್ಲಿ ಭೇಟಿ ಮಾಡಿದ್ದ ಫೋಟೋ ವೈರಲ್ ಇದೀಗ ವೈರಲ್​ ಆಗಿದೆ. PSI ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಜೊತೆ ಡಿಕೆಶಿ ಇರುವ ಫೋಟೋ ಟ್ಟಿಟರ್​ನಲ್ಲಿ ಶೇರ್​ ಮಾಡುವ ಮೂಲಕ ಬಿಜೆಪಿ , ಕಾಂಗ್ರೆಸ್​ಗೆ ತಿರುಗೇಟು ನೀಡಿದೆ. ​ಎಲ್ಲ ವಿವಾವದಕ್ಕೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯೇ ಸೂತ್ರಧಾರ, ಸಿಡಿ ವಿವಾದ, ಹಿಜಾಬ್ ಸಂಘರ್ಷ, 40% ಪರ್ಸೆಂಟ್ ಕಮಿಷನ್, ಹರ್ಷ ಕೊಲೆ, ಹುಬ್ಬಳ್ಳಿ ಗಲಭೆ, ಪಿಎಸ್ಐ ನೇಮಕ ಹಗರಣ ಎಲ್ಲದಕ್ಕೂ ಸೂತ್ರಧಾರ ಒಬ್ಬರೇ ಎಂದು ಬಿಜೆಪಿ ಟ್ವೀಟ್​ ಮೂಲಕ ಡಿಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  ಏಕವಚನದಲ್ಲೇ ಅಧಿಕಾರಿಗೆ ರೇವಣ್ಣ ಕ್ಲಾಸ್​
  ತಾಲೂಕಿನ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಟ್ರಕ್ ಟರ್ಮಿನಲ್ ಕಾಮಗಾರಿ ಮಾಡಲು ಒಪ್ಪಿಗೆ ಕೊಟ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಆರ್. ಗಿರೀಶ್ ಎದುರೇ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನಗರದ ಹೊರವಲಯದಲ್ಲಿರುವ ಹೇಮಗಂಗೋತ್ರಿ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್ ವಿರೋಧಿಸಿ 20 ದಿನದಿಂದ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಒಪ್ಪಿಗೆ ಕೊಟ್ಟ ಅಧಿಕಾರಿ ವಿರುದ್ಧ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಕೆಂಡಾಮಂಡಲರಾಗಿದ್ದಾರೆ.

  ಕಾಂಗ್ರೆಸ್​ ಸೇರಲ್ಲ ಎಂದ ಪ್ರಶಾಂತ್​ ಕಿಶೋರ್​​
  ಹಲವು ಚುನಾವಣೆಗಳ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್​​ಗೆ ಪುನಶ್ಚೇತನ ನೀಡಲು ಚುನಾವಣಾ ಚಾಣಕ್ಷ ಪ್ರಶಾಂತ್​ ಕಿಶೋರ್ ಆಸರೆ ಆಗಲಿದ್ದಾರೆ. ಈಗಾಗಲೇ ತಮ್ಮ ಚುನಾವಣಾ ತಂತ್ರಗಾರಿಕೆಯಿಂದ ಅನೇಕ ರಾಜಕೀಯ ಪಕ್ಷಗಳ ಗೆಲುವಿಗೆ ಸಹಕಾರಿ ಆಗಿರುವ ಅವರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್​ಗೆ ಆಸರೆ ಆಗುವ ಸಾಧ್ಯತೆಗಳಿಗೆ ಎಂಬ ಎಲ್ಲಾ ಲೆಕ್ಕಾಚಾರ ಇದೀಗ ತಲೆಗೆಳಕಾಗಿದೆ. ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಚುನಾವಣಾ ಚಾಣಕ್ಷ ಪ್ರಶಾಂತ್​ ಕಿಶೋರ್​ ತಾವು ಕಾಂಗ್ರೆಸ್​ ಸೇರುವ ನಿರ್ಧಾರವನ್ನು ನಿರಾಕರಿಸಿದ್ದಾರೆ.

  6-12 ವರ್ಷದ ಮಕ್ಕಳಿಕೆ ಲಸಿಕೆ
  ದೇಶದಲ್ಲಿ ಈಗಾಗಲೇ ಯಶಸ್ವಿ ಲಸಿಕಾ (Vaccine) ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ವಯಸ್ಕರು ಸೇರಿದಂತೆ 12 ವರ್ಷದ ಮೇಲ್ಪಟ್ಟವರಿಗೆ ಲಸಿಕಾ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ. ಇದೀಗ 6 ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಭಾರತ್​ ಬಯೋಟೆಕ್​​ನ ಕೋವಾಕ್ಸಿನ್​ ಲಸಿಕೆಯನ್ನು 6 ರಿಂದ 12 ವರ್ಷದ ಮಕ್ಕಳಿಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇದಕ್ಕೆ ಕೋವಿಡ್​ 19ನಲ್ಲಿರುವ ತಜ್ಞರ ಸಮಿತಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೂಡ ಶಿಫಾರಸ್ಸು ನೀಡಿದೆ.

  ಟ್ವಿಟರ್​ ಖರೀದಿಸಿದ ಎಲಾನ್​ ಮಸ್ಕ್​​
  ಹಲವು ದಿನಗಳಿಂದ ಟ್ವಿಟರ್‌ ಹಾಗೂ ಎಲಾನ್‌ ಮಸ್ಕ್‌ ನಡುವೆ ನಡೆಯುತ್ತಿದ್ದ ಅನಿಶ್ಚಿತತೆಗೆ ತೆರೆ ಬಿದ್ದಿದ್ದು, ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಲಾನ್‌ ಮಸ್ಕ್‌ ಟ್ವಿಟರ್ ಅನ್ನು ಖರೀದಿಸಿದ್ದಾರೆ. ನ್‌ ಮಸ್ಕ್‌ ಟ್ವಿಟರ್ ಅನ್ನು ಖರೀದಿಸಿದ್ದಾರೆ. ಹೌದು, ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಅನ್ನು 44 ಬಿಲಿಯನ್‌ ಅಮೆರಿಕ ಡಾಲರ್‌ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಎಲಾನ್‌ ಮಸ್ಕ್‌ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
  Published by:Seema R
  First published: