Evening Digest Sep 25: ಪಾಕ್ ಬೆವರಿಳಿಸಿದ ಮಹಿಳಾ ಅಧಿಕಾರಿ; ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​ಗಳ ಹವಾ: ಇಂದಿನ ಪ್ರಮುಖ ಸುದ್ದಿಗಳು

Today Kannada news: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಪಾಕ್​​ ಬೆವರಿಳಿಸಿದ ಮಹಿಳಾ ಅಧಿಕಾರಿ : ಪದೇ ಪದೇ ಕದನ ವಿರಾಮ ನೀತಿ ಉಲ್ಲಂಘಿಸುವ ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯ (UN) ಸಾಮಾನ್ಯ ಸಭೆಯಲ್ಲಿ ಭಾರತದ ಅಧಿಕಾರಿ ಸ್ನೇಹಾ ದುಬೆ (Sneha Dubey)  ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಪಾಕಿಸ್ತಾನ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿದ್ದು, ಅಲ್ಪಸಂಖ್ಯಾತರ ದಮನಕಾರಿ ನಿಲುವು ತೆಗೆದುಕೊಳ್ಳುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಆಕ್ರಮಿತ ಪ್ರದೇಶವನ್ನು ಕೂಡಲೇ ತೊರೆಯಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಗಟ್ಟಿ ನಿಲುವಿನ ಮೂಲಕ ಶತ್ರು ದೇಶದ ವಿರುದ್ಧ ಎಚ್ಚರಿಕೆ ನೀಡಿದ 2012ರ ಐಎಫ್​ಎಸ್​ ಅಧಿಕಾರಿ ಮಾತಿಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆಕೆಯನ್ನು ಮುಕ್ತ ಕಂಠದಿಂದ ಹೊಗಳಲಾಗುತ್ತಿದ್ದು, ಎಲ್ಲರ ಕಣ್ಮಣಿಯಾಗಿ ಈಗ ಸ್ನೇಹ ದುವೆ ಹೊರ ಹೊಮ್ಮಿದ್ದಾರೆ.

ನಾಳೆಯಿಂದ ಓಡಾಡಲಿವೆ ಎಲೆಕ್ಟ್ರಿಕ್ ಬಸ್​​ಗಳು

ಅತಿಯಾಗಿ ವಾಹನಗಳು ಉಗುಳುವ ಹೊಗೆ, ಕಿವಿಗೆ ಕಿರಿಕಿರಿ ಎನ್ನುವಷ್ಟರ ಮಟ್ಟಿಗೆ ಆ ವಾಹನಗಳ ಶಬ್ದ, ಇವೆಲ್ಲವೂ ನೀವು ಬೆಂಗಳೂರಿನಲ್ಲಿದ್ದರೆ ನಿಮಗೆ ಸಾಕಪ್ಪಾ ಸಾಕು ಈ ಕಿರಿಕಿರಿ ಅನ್ನಿಸದೆ ಇರದು. ಆದರೆ ಬೆಂಗಳೂರಿನ(Bengaluru) ಜನರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ, ಏನಪ್ಪಾ ಆ ಸುದ್ದಿ ಅಂತೀರಾ. ನಾಳೆ ಭಾನುವಾರದಂದು ಬೆಂಗಳೂರಿನ ಮೊದಲ ಎಲೆಕ್ಟ್ರಿಕ್ ಬಸ್(Electric Buses) ಬರಲಿದ್ದು, ಅದನ್ನು ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ(Kengeri Metro Station) ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎನ್‌ಟಿಪಿಸಿ ಮತ್ತು ಜೆಬಿಎಂ ಆಟೋ ಕಂಪೆನಿಗಳು ಜಂಟಿಯಾಗಿ 9 ಮೀಟರ್ ಉದ್ದದ 90 ನಾನ್-ಎಸಿ ಎಲೆಕ್ಟ್ರಿಕ್ ಬಸ್‌(Non AC Electric bus)ಗಳನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿವೆ.

ಕುಮಾರಸ್ವಾಮಿ ಹೆದರಿಸಿ ಜಾತಿ ಸಮೀಕ್ಷೆ ವರದಿ ತಡೆದರು

ಜಾತಿ ಸಮೀಕ್ಷೆ ವರದಿ (Caste Survey Report) ವಿಚಾರವಾಗಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು, ಜಾತಿ‌ ಸಮೀಕ್ಷೆ ವರದಿ ನಾನು ಸಿಎಂ ಆಗಿದ್ದಾಗ ಪೂರ್ಣವಾಗಿರಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪೂರ್ಣವಾಯ್ತು.  ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವನಾಗಿದ್ದರು. ವರದಿ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದರು. ಬಿಡುಗಡೆಗೆ ಪ್ರಯತ್ನ ಮಾಡಲು ಹೋಗಿದ್ದ ಪುಟ್ಟರಂಗಶೆಟ್ಟಿ. ಆದರೆ ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ. ಸಚಿವ ಪುಟ್ಟರಂಗಶೆಟ್ಟಿಗೆ ಕುಮಾರಸ್ವಾಮಿ ಅವರು ಹೆದರಿಸಿ ಬಿಟ್ಟಿದ್ರು. ಕುಮಾರಸ್ವಾಮಿಗೆ ಹೆದರಿ ಪುಟ್ಟರಂಗಶೆಟ್ಟಿ ಜಾತಿ ಸಮೀಕ್ಷೆ ವರದಿ ಬಿಡುಗಡೆ ಗೋಜಿಗೆ ಹೋಗಲಿಲ್ಲ. ಇದನ್ನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತದೆ. ಇದ್ದಿದ್ದು ಇದ್ದ ಹಾಗೆ ಹೇಳಿದರೆ ಕೋಪ ಬರುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಪಂಜಾಬ್ ಕ್ಯಾಬಿನೆಟ್ ಫೈನಲ್

ಪಂಜಾಬ್ ಸಂಪುಟ ಸಚಿವ ಪಟ್ಟಿ (punjab cabinet ministers list )ಅಂತಿಮಗೊಂಡಿದ್ದು, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ (amarinder singh )ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರಿಗೆ ಕೊಕ್ ನೀಡಲಾಗಿದೆ. ಈ ಹಿಂದೆ ಸಂಪುಟದಲ್ಲಿದ್ದ ಎಂಟು ಜನ ಸಂಪುಟ ಸೇರ್ಪಡೆಯಾಗಿದ್ದು, ಏಳು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಮಂತ್ರಿಗಳ ಪಟ್ಟಿ ಅಂತಿಮಗೊಳಿಸಿದ ಬಳಿಕ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಶಿಮ್ಲಾದತ್ತ ಪ್ರಯಾಣ ಬೆಳೆಸಿದ್ದಾರೆ. ಸಂಪುಟ ರಚನೆಯ ಕುರಿತು ಸಭೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ದೆಹಲಿಗೆ ಆಗಮಿಸಿದ್ದರು. ಇತ್ತ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ (Punjab Chief Minister Charanjit Singh) ಸಹ ಪಂಜಾಬ್‍ಗೆ ಹೊರಟಿದ್ದಾರೆ.

DC vs RR- ಡೆಲ್ಲಿ ಬ್ಯಾಟರ್ಸ್ ನಿರಾಸೆ

ಪ್ರಬಲ ಬ್ಯಾಟರ್​ಗಳ ಪಡೆ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದೆ. ಶ್ರೇಯಸ್ ಅಯ್ಯರ್ 43 ರನ್ ಗಳಿಸಿದ್ದ ಆ ತಂಡದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ರಿಷಭ್ ಪಂತ್ ಮತ್ತು ಶಿಮ್ರೋನ್ ಹೆಟ್ಮಯರ್ ಅವರೂ ಉತ್ತಮ ಬ್ಯಾಟಿಂಗ್ ಮಾಡಿದರು. ಅದು ಬಿಟ್ಟರೆ ಉಳಿದಂತೆ ಈ ಇನ್ನಿಂಗ್ಸಲ್ಲಿ ಆರ್ ಆರ್ ತಂಡದ ಬೌಲರ್​ಗಳದ್ದೇ ಹೆಚ್ಚು ಪ್ರಾಬಲ್ಯ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ಪಾಲಿನ ಹೀರೋ ಆಗಿದ್ದ ಕಾರ್ತಿಕ್ ತ್ಯಾಗಿ ಅವರು ಇವತ್ತಿನ ಪಂದ್ಯದಲ್ಲಿ ಶಿಖರ್ ಧವನ್ ಅವರನ್ನ ಔಟ್ ಮಾಡಿ ಮಂದಹಾಸ ಮೂಡಿಸಿದರು.
Published by:Kavya V
First published: