Evening Digest: ನಾನು ಜಾತಿವಾದಿಯೇ ಏನೀಗ ಎಂದ ಸಿದ್ದರಾಮಯ್ಯ; ಧೋನಿ ನುಡಿದ ಭವಿಷ್ಯ ನಿಜವಾಯ್ತು: ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ನಾನು ಜಾತಿವಾದಿಯೇ ಏನೀಗ ಎಂದ ಸಿದ್ದರಾಮಯ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ವಿರುದ್ಧ ಬಿಜೆಪಿ ನಾಯಕರು ಪ್ರತಿದಿನ ತರಹೇವಾರಿ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ(BJP Leaders) ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ (Srinivas Prasad) ಸಿದ್ದರಾಮಯ್ಯ ಬಾದಾಮಿಗೆ (Badami) ಪಲಾಯನ ಮಾಡಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದರೆ, ಬಿಜೆಪಿ ರಾಜ್ಯ ಘಟಕದಿಂದ  (State BJP Party) ಟ್ವೀಟ್​ ಮೂಲಕ ಸಿದ್ದರಾಮಯ್ಯ ಓರ್ವ ಜಾತೀವಾದಿ ಎಂದು ಹೀಯಾಳಿಸಲಾಗಿತ್ತು. "ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ" ಎಂದು ಆರೋಪಿಸಲಾಗಿತ್ತು. ಆದರೆ, ಬಿಜೆಪಿ ಆರೋಪದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, "ಹೌದು..ನಾನು ಜಾತಿವಾದಿಯೇ ಏನೀಗ?" ಎಂದು ತಿರುಗೇಟು ನೀಡಿದ್ದಾರೆ.

ಟೀಂ ಇಂಡಿಯಾ ಸೋತಿದ್ದಕ್ಕೆ ಕಾಶ್ಮೀರಿಗಳ ಮೇಲೆ ಹಲ್ಲೆ

ಭಾರತ ಮತ್ತು ಪಾಕಿಸ್ತಾನ (India vs Pakistan) ಕ್ರಿಕೆಟ್​ನಲ್ಲಿ (Cricket) ಮುಖಾಮುಖಿಯಾಗುವುದು ವಿಶ್ವಕಪ್​ (T20 World Cup) ಟೂರ್ನಿಯಲ್ಲಿ ಮಾತ್ರ. ಹೀಗಾಗಿ ಈ ಪಂದ್ಯಕ್ಕೆ ಎಲ್ಲಿಲ್ಲದ ಮಹತ್ವ ಇದೆ. ಅಲ್ಲದೆ, ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಈವರೆಗೆ ಪಾಕ್ ವಿರುದ್ಧ ಸೋಲನುಭವಿಸಿಲ್ಲ. ಹೀಗಾಗಿ ಈ ಬಾರಿಯ ಟಿ-20 ವಿಶ್ವಕಪ್​ ಟೂರ್ನಿಯಲ್ಲೂ ಭಾರತ ಗೆಲುವು ದಾಖಲಿಸಲಿದೆ ಎಂದೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಸಹ ಭಾವಿಸಿದ್ದರು. ಆದರೆ, ಭಾನುವಾರ ರಾತ್ರಿ ನಡೆದ T20 ವರ್ಲ್ಡ್‌ ಕಪ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಮೊದಲ ಬಾರಿಗೆ ಸೋಲನುಭವಿಸಿತ್ತು. ಆದರೆ, "ಭಾರತ ಈ ಪಂದ್ಯದಲ್ಲಿ ಸೋತದ್ದಕ್ಕೆ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ" ಎಂದು ಪಂಜಾಬ್‌ನ ಸರ್ಗೂರಿನಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು (Kashmir Students) ಆರೋಪಿಸಿದ್ದಾರೆ.

ಮನೆ ಹಾಳು ಮಾಡೋಕೆ ಸಿದ್ದ ಸೂತ್ರ ಒಂದೇ ಸಾಕು

ಉಪ ಚುನಾವಣೆ (by election) ಹಿನ್ನೆಲೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಪತ್ರಿಕಾಗೋಷ್ಠಿ ನಡೆಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರದಿಂದ 3 ರೂಪಾಯಿಗೆ ಕೆಜಿ ಅಕ್ಕಿ ಬರುತ್ತೆ, ತಿಂಗಳಿಗೆ ಹತ್ತು ಕೆಜಿ ಅಕ್ಕಿಗೆ 30 ರೂಪಾಯಿ ಆಯ್ತು. ಆದರೆ ಒಂದು ಕ್ವಾಟರ್ ಗೆ 55 ರೂ. ಬೆಲೆ ಇತ್ತು ಅದನ್ನು 110 ರೂಪಾಯಿ‌ ಮಾಡಿದ್ರು. ದಿನಾ ಒಂದು ಕ್ವಾಟರ್ ಅಂದ್ರೆ ತಿಂಗಳಿಗೆ ಎಷ್ಟಾಗುತ್ತೆ. ಇನ್ನೊಂದು ಕ್ವಾಟರ್ ಕುಡಿಯೋಕೆ ಹಣವೇ ಇರೋದಿಲ್ಲ. ಇದನ್ನೆಲ್ಲಾ ಕಿತ್ತುಕೊಂಡಿದೆ ಸಿದ್ರಾಮಯ್ಯನ ಸರ್ಕಾರ. ಮನೆ ಹಾಳು‌ ಮಾಡೋಕೆ ಸಿದ್ದರಾಮಯ್ಯನ ಸಿದ್ದ ಸೂತ್ರ ಒಂದೇ ಸಾಕು ಎಂದು ಕಿಡಿಕಾರಿದರು.

ದೇವೇಗೌಡರ ಸೋಲಿಗೆ ಅವರೇ ಕಾರಣ

ಲೋಕಸಭಾ ಚುನಾವಣೆ(Loksabha Election 2019)ಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ(HD Devegowda)ರ ಸೋಲಿಗೆ ತಮ್ಮ ಪಕ್ಷದ ಶಾಸಕರಾದ ಎಸ್.ಆರ್.ಶ್ರೀನಿವಾಸ್ (SR Srinivas) ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.  ಸ್ಥಳೀಯ ಶಾಸಕ ಎಸ್.ಆರ್.ಶ್ರೀನಿವಾಸ್ ನಿರೀಕ್ಷೆಯಂತೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಎಸ್.ಆರ್.ಶ್ರೀನಿವಾಸ್ ಹೆಸರು ಹೇಳದಯೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಧೋನಿ ನುಡಿದ ಭವಿಷ್ಯ ಐದು ವರ್ಷ ಬಳಿಕ ನಿಜ ಆಯ್ತು

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತೀವ್ರ ಮುಖಭಂಗ ಅನುಭವಿಸಿತು. ಪಾಕಿಸ್ತಾನದ ವಿರುದ್ಧ ಪಂದ್ಯ ಸೋತಿದ್ದಕ್ಕಿಂತ ಹೆಚ್ಚಾಗಿ ಹೀನಾಯವಾಗಿ ಸೋತಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಆಕ್ರೋಶಗೊಂಡಿದ್ಧಾರೆ. ಭಾರತವನ್ನು 10 ವಿಕೆಟ್ಗಳಿಂದ ಸೋಲಿಸಿದ ಬಳಿಕ ಪಾಕಿಸ್ತಾನ ತಂಡಕ್ಕೆ ರಾಜಮರ್ಯಾದೆ ಸಿಗುತ್ತಿದೆ. ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಪಂದ್ಯಕ್ಕೆ ಮುನ್ನ ಭಾರತ ತಂಡ ಅಭ್ಯಾಸ ನಡೆಸುತ್ತಿದ್ದ ಸ್ಥಳದಲ್ಲಿ ಪಾಕ್ ಅಭಿಮಾನಿಯೊಬ್ಬಳು ಎಂಎಸ್ ಧೋನಿ ಮತ್ತು ಕೆಎಲ್ ರಾಹುಲ್ ಅವರಿಗೆ ಈ ಪಂದ್ಯವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಕತಾಳೀಯವೆಂಬಂತೆ ಭಾರತ ಈ ಪಂದ್ಯವನ್ನ ತಾನೇ ಕೈಯ್ಯಾರೆ ಪಾಕಿಸ್ತಾನಕ್ಕೆ ಇಟ್ಟಂತಿತ್ತು. ಇನ್ನು, ಮಹೇಂದ್ರ ಸಿಂಗ್ ಧೋನಿ ಅವರ ಐದು ವರ್ಷ ಹಿಂದಿನ ಹೇಳಿಕೆಯೊಂದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಮಾತನಾಡಿದ್ದರು. ಅವರ ಮಾತು ಈಗ ನಿಜವಾಗಿದೆ.
Published by:Kavya V
First published: