Evening Digest: ಪೈಪ್​​ನಲ್ಲಿ ಹಣ ಬಚ್ಚಿಟ್ಟಿದ್ದ ರಹಸ್ಯ ಬಯಲು; ಸುದ್ದಿಯಾದ ನಟಿ ರಶ್ಮಿಕಾ ಪಾಸ್​​ಪೋರ್ಟ್​​; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಪೈಪ್​​ನಲ್ಲಿ ಹಣ ಬಚ್ಚಿಟ್ಟಿದ್ದ ರಹಸ್ಯ ಬಯಲು: ನಿನ್ನೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು(ACB Raid) ರಾಜ್ಯಾದ್ಯಂತ 15 ಸರ್ಕಾರಿ ಅಧಿಕಾರಿಗಳ (15 Govt Officials) ಮನೆ, ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು.  ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್​ ಆಗಿರುವ ಶಾಂತನಗೌಡ ಬಿರಾದಾರ್ (Engineer Shanta Gowda Biradar) ಮನೆಯ ಪೈಪ್ ನಲ್ಲಿ ನೋಟಿನ ಕಂತೆಗಳು  ಪತ್ತೆಯಾಗಿದ್ದವು. ನೀರಿನ ಪೈಪ್​ನಿಂದ ಬರೋಬ್ಬರಿ 13 ಲಕ್ಷ ಹಣವನ್ನು ಅಧಿಕಾರಿಗಳು ಬಕಿಟ್​ಗೆ ಇಳಿಸಿಕೊಂಡಿದ್ದರು. ಹಣ ಬಚ್ಚಿಟ್ಟಿದ್ದ ಪೈಪನ್ನು ವಾಷಿಂಗ್ ಮಷಿನ್ ನಿಂದ ನೀರು ಹೋಗಲು ನಿರ್ಮಿಸಿದ್ದರು. ನೀರು ಹೊರ ಹೋಗಲು ಸಂಪರ್ಕ ನೀಡಿದ್ದ ಪೈಪ್ ಇದಾಗಿತ್ತು. ಆದರೆ ಕಳೆದ ಎರಡು ತಿಂಗಳಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ. ಇದರಿಂದ ನೋಟಿನ ಕಂತೆಗಳಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ತಿಳಿದಿದ್ದೇ ಬಿರಾದಾರ್​​ ಹಣವನ್ನು ಪೈಪ್​ ಒಳಗೆ ತುರುಕಿದ್ದರು. ಅವಸರದಲ್ಲಿ ಹಣ ಹಾಕಿ ಪೈಪ್​ ಮೇಲೆ ಪ್ಲೇಟ್ ಬದಲಾಗಿ ಮೇಲೆ ಕಲ್ಲು ಇಟ್ಟಿದ್ದರು. ಶಾಂತಗೌಡ ಬಿರಾದರ್ ಮನೆಯ ಟಾಯ್ಲೆಟ್​​​​ ಬಳಿ ವಾಷಿಂಗ್ ಮಷಿನ್ ಇಡಲಾಗಿದೆ. ದಾಳಿ ವೇಳೆ ಪದೇ ಪದೇ ಟಾಯ್ಲೆಟ್ ಗೆ ಹೋಗಿ ಬರೋದಾಗಿ ಹೇಳಿ ಪೈಪ್ ಬಳಿ ಬಿರಾದಾರ್​ ಹಾಗೂ ಅವರ ಪತ್ರ ಹೋಗುತ್ತಿದ್ದರು. ಪೈಪ್ ಬಳಿಯೇ ಹೆಚ್ಚು ಓಡಾಟ ನಡೆಸಿದ್ದರು. ಇದರಿಂದ ಅನುಮಾನಗೊಂಡು ಪೈಪ್ ಮೇಲಿನ ಕಲ್ಲು ತಳ್ಳಿದ್ದ ಎಸಿಬಿ ಸಿಬ್ಬಂದಿಗೆ ಹಣ ಇರೋದು ಕಾಣಿಸಿತ್ತು. ನಂತರ ಮನೆ ಹೊರಗಡೆಯಿಂದ ಪೈಪ್ ಕತ್ತರಿಸಿದಾಗ ಕಂತೆ ಕಂತೆ ಹಣ ಸಿಕ್ಕಿದೆ. ​​

7 ಜಿಲ್ಲೆಗಳಲ್ಲಿ ಮೊಟ್ಟೆ & ಬಾಳೆಹಣ್ಣು ವಿತರಣೆ

ಶಾಲಾ ಮಕ್ಕಳು (School Children)ಅಪೌಷ್ಟಿಕತೆಯಿಂದ (Poor Nutrition)ಹಾಗೂ ಹಸಿವಿನಿಂದ (Hunger)ಬಳಲಬಾರದು ಎಂಬ ಕಾರಣಕ್ಕೆ ಈಗಾಗಲೇ ಸರ್ಕಾರ ರಾಜ್ಯಾದ್ಯಂತ ಬಿಸಿಯೂಟ (Midday meal )ಯೋಜನೆಯನ್ನು ನಡೆಸುತ್ತಿದೆ.. ಆದ್ರೂ ಸಹ ಮಕ್ಕಳಲ್ಲಿ ಅಪೌಷ್ಟಿಕತೆಯ ಕೊರತೆ ಹೆಚ್ಚಾಗಿದೆ.. ಹೀಗಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ ಕೊರತೆಯನ್ನು ನೀಗಿಸಲು ಮುಂದಾಗಿದೆ. ಇನ್ನೂ ರಾಜ್ಯ ಸರ್ಕಾರ(State Government) ಈ ಹಿಂದೆ ಬಿಸಿಯೂಟದಲ್ಲಿ ಮೊಟ್ಟೆಯನ್ನ(Egg) ಮಕ್ಕಳಿಗೆ ನೀಡಲಾಗುತ್ತಿತ್ತು..ಆದರೆ ಕೆಲವು ಕಾರಣಗಳಿಂದ ಮೊಟ್ಟೆ ವಿತರಣೆ ಸ್ಥಗಿತಗೊಳಿಸಲಾಗಿತ್ತು.. ಆದ್ರೀಗ ಅಪೌಷ್ಟಿಕತೆಯಿಂದ ಬಳಲುತ್ತಿರುವ 7 ಜಿಲ್ಲೆಗಳ(District) ಮಕ್ಕಳಿಗೆ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು(Banana) ವಿತರಣೆ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.. ಈ ಮೂಲಕ ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ ಹಾಗೂ ರಕ್ತಹೀನ ಸಮಸ್ಯೆ ನಿವಾರಣೆ ಮಾಡಲು ರಾಜ್ಯ ಸರ್ಕಾರ ಹೆಜ್ಜೆಯಿಟ್ಟಿದೆ. ಉತ್ತರ ಕರ್ನಾಟಕ ಭಾಗದ ಯಾದಗಿರಿ, ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆ ಕಂಡುಬಂದಿದೆ.

ಉಗ್ರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ಡಿಕೆಶಿ ಅಸಹಾಯಕ

ಎ.ಮಂಜು (A.Manju)ವಿರುದ್ಧ ಬಿಜೆಪಿ (BJP) ಶಿಸ್ತು ಸಮಿತಿ ಕ್ರಮ ಕೈಗೊಂಡಿದೆ. ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಇದ್ದರೂ ಸೋದರ ಲಖನ್​ ಜಾರಕಿಹೊಳಿಯನ್ನು ಕಣಕ್ಕಿಳಿಸಿ ಬೆಂಬಲವಾಗಿ ನಿಂತಿರುವ, ಪಕ್ಷ ವಿರೋಧಿ ರಮೇಶ್​ ಜಾರಕಿಹೊಳಿ (Ramesh Jarkiholi) ಮೇಲೆ ಬಿಜೆಪಿ ಏಕೆ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ಪ್ರಶ್ನಿಸಿದ್ದರು. ಎ.ಮಂಜು ಮೇಲೆ ಕ್ರಮ ತೆಗೆದುಕೊಂಡಂತೆ ರಮೇಶ್​ ಜಾರಕಿಹೊಳಿ ಮೇಲೆ ಕ್ರಮ ತೆಗೆದುಕೊಳ್ಳಲು ಬಿಜೆಪಿಗೆ ಧಂ ಇಲ್ವಾ ಎಂದು ಡಿಕೆಶಿ ಕುಹಕವಾಡಿದ್ದರು. ಇದಕ್ಕೆ ಇಂದು ರಾಜ್ಯ ಬಿಜೆಪಿ ಟ್ವಿಟ್ಟರ್​ ಮೂಲಕ ತಿರುಗೇಟು ನೀಡಿದೆ. ಡಿಕೆಶಿ ತಕ್ಕಡಿ ಎದ್ದೇಳುತ್ತಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲೇ ವ್ಯಂಗ್ಯವಾಡಿದ್ದ ಉಗ್ರಪ್ಪ ವಿರುದ್ಧ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ? ಭಯವೋ, ಬೆದರಿಕೆಯೋ? ಎಂದು ಪ್ರಶ್ನಿಸಿದ್ದಾರೆ. #ಅಸಹಾಯಕಡಿಕೆಶಿ ಎಂದು ಹ್ಯಾಷ್​ಟ್ಯಾಗ್​ ಮೂಲಕ ಟ್ವೀಟ್​​ ಮಾಡಿ ವ್ಯಂಗ್ಯವಾಡಿದ್ದಾರೆ.

ಆ 'ಔಷಧ' ಬೇಕು ಅಂದ್ರೆ ಈ ಔಷಧ ಕಡ್ಡಾಯ

ಕೆಲವು ರಾಜ್ಯಗಳು ಜನರು ಲಸಿಕೆ ಪಡೆಯಬೇಕೆಂಬ ಉದ್ದೇಶದಿಂದಾಗಿ ಕೆಲವು ರಿಯಾಯಿತಿಗಳನ್ನು ತೆರೆದಿಟ್ಟಿದೆ. ಇನ್ನು ಕೆಲವು ರಾಜ್ಯಗಳು ಲಸಿಕೆ ಪಡೆಯದವರಿಗೆ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾನೂನು ವಿಧಿಸಿದೆ. ಅದರಂತೆ ಔರಂಗಾಬಾದ್ ಜಿಲ್ಲೆಯೊಂದರಲ್ಲಿ ಲಸಿಕೆ ಪಡೆಯದವರಿಗೆ ಮದ್ಯಪಾನ ದೊರಕದಂತೆ ನಿಯಮ ಹೊರಡಿಸಿದೆ. ಕೊರೋನಾ ದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೀಗಿರುವಾಗ ಪ್ರತಿ ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಲಸಿಕೆ ಪಡೆಯುವಂತೆ ಉತ್ತೇಜಿಸುತ್ತಿದೆ. ಬಹುತೇಕ ಜನರು ಕೊರೋನಾದಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯುವ ಮೂಲಕ ಕೊರೋನಾ ಮುಕ್ತ ರಾಜ್ಯವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸುತ್ತಿದೆ. ಕೆಲವು ರಾಜ್ಯಗಳು ಜನರು ಲಸಿಕೆ ಪಡೆಯಬೇಕೆಂಬ ಉದ್ದೇಶದಿಂದಾಗಿ ಕೆಲವು ರಿಯಾಯಿತಿಗಳನ್ನು ತೆರೆದಿಟ್ಟಿದೆ. ಇನ್ನು ಕೆಲವು ರಾಜ್ಯಗಳು ಲಸಿಕೆ ಪಡೆಯದವರಿಗೆ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾನೂನು ವಿಧಿಸಿದೆ. ಅದರಂತೆ ಔರಂಗಾಬಾದ್ ಜಿಲ್ಲೆಯೊಂದರಲ್ಲಿ ಲಸಿಕೆ ಪಡೆಯದವರಿಗೆ ಮದ್ಯಪಾನ ದೊರಕದಂತೆ ನಿಯಮ ಹೊರಡಿಸಿದೆ.

ಸುದ್ದಿಯಾದ ನಟಿ ರಶ್ಮಿಕಾ ಪಾಸ್​​ಪೋರ್ಟ್

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಬರೀ ಸಿನಿಮಾದಲ್ಲಿ ಅಷ್ಟೇ ಅಲ್ಲದೇ, ಅವರ ವೈಯಕ್ತಿಕ ಜೀವನದಿಂದಲೂ ಈ ನಟಿ ಭಾರಿ ಸುದ್ದಿಯಾಗಿದ್ದರು. ದೊಡ್ಡ ದೊಡ್ಡ ಸ್ಟಾರ್​​ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇವರ ಪಾಸ್​ಪೋರ್ಟ್​ನಲ್ಲಿದ್ದ ಸರ್​ ನೇಮ್​ ಕಂಡು ಫ್ಯಾನ್ಸ್​ ಶಾಕ್​ ಆಗಿದ್ದರು. ಸದ್ಯ ರಶ್ಮಿಕಾ ಯುಎಸ್​​ಗೆ ತೆರಳಿದ್ದಾರೆ. ಅದಕ್ಕೂ ಮುನ್ನ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪಾಸ್​ಪೋರ್ಟ್​ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಪಾಸ್​ಪೋರ್ಟ್​ನಲ್ಲಿ ರಶ್ಮಿಕಾ ಮಂದಣ್ಣ ಅವರ ಕೊನೆಯ ಹೆಸರು ‘Mundachadira’  ಎಂದು ಉಲ್ಲೇಖವಾಗಿತ್ತು. ಇದು ಅವರ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.
Published by:Kavya V
First published: