Evening Digest: ಜುಲೈ 30ಕ್ಕೆ ಸಿಇಟಿ ರಿಸಲ್ಟ್, ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರ ಅರೆಸ್ಟ್​; ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು (ಜು. 25):  ಜುಲೈ 30ರಂದು ಸಿಇಟಿ ಫಲಿತಾಂಶ (CET Result) ಪ್ರಕಟಗೊಳ್ಳಲಿದೆ. ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದಿದ್ದ ಪರೀಕ್ಷೆ ಫಲಿತಾಂಶ ಜುಲೈ 30ರಂದು ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್ ಅಶ್ವತ್ಥ ನಾರಾಯಣ (Ashwath Narayan) ಮಾಹಿತಿ ನೀಡಿದ್ದಾರೆ. ಸಿಬಿಎಸ್ ಇ, ಐಸಿಎಸ್ ಇ ಓದಿದ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಿತ್ತು. ವಿದ್ಯಾರ್ಥಿಗಳೆಲ್ಲಾ (Students) ಜು.26 ಸಂಜೆಯೊಳಗೆ ತಮ್ಮ ಅಂಕ ಅಪ್ಲೋಡ್ (Marks Upload) ಮಾಡಲು ಸೂಚನೆ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ (Website) ಅಪ್ ಲೋಡ್ ಮಾಡಲು ಸೂಚನೆ ನೀಡಲಾಗಿದೆ. ಅಧಿಕೃತ ವೆಬ್‌ಸೈಟ್‌ ಫಲಿತಾಂಶ ಪ್ರಕಟಗೊಳ್ಳಲಿದೆ,

ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಬೆಂಗಳೂರು (ಜು.25):  ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು (Suspected Terrorist) ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಳೆ ಮತ್ತೊಬ್ಬ ಶಂಕಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಬೆಂಗಳೂರಿನ (Bengaluru) ಮತ್ತೊಂದು ಭಾಗದಲ್ಲಿ ಸಿಸಿಬಿ ಅಧಿಕಾರಿಗಳ ಕಾರ್ಯಾಚರಣೆ (Operation of CCB Officers) ಮುಂದುವರಿದಿದೆ. ಒಟ್ಟು ನಾಲ್ಕು ತಂಡಗಳಾಗಿ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿದೆ. ಅಕ್ತರ್ ಉಸೇನ್ ಹೇಳಿಕೆ ಮೇರೆಗೆ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಉತ್ತರ ಕನ್ನಡಕ್ಕೆ ಶೀಘ್ರವೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರು (ಜು.25): ಉತ್ತರ ಕನ್ನಡ  (Uttara Kannada) ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ  (Multi specialty hospital)ಬೇಡಿಕೆ ಇಟ್ಟು ಜನರು ಟ್ಟಿಟರ್​ ಅಭಿಯಾನ ಶುರು ಮಾಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಆಗಬೇಕಿದೆ. ಆದರೆ ಕಳೆದ 50-60ವರ್ಷದಲ್ಲಿ ಆಗಿರಲಿಲ್ಲ. ಬಿಜೆಪಿ ಕಳೆದ ಎರಡು ವರ್ಷದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಮಾಡಿದೆ. ಸರ್ಕಾರಕ್ಕೆ ಹಣಕಾಸಿನ ನಿರ್ಬಂಧ ಇರುತ್ತದೆ. ಇನ್ನು ಕೋವಿಡ್ ಬಂದಿದ್ದರಿಂದಲೇ ಆರೋಗ್ಯ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಸಾಧ್ಯವಾಯಿತು. ವೈದ್ಯರ ನೇಮಕಾತಿಯಂತ ಪ್ರಕ್ರಿಯೆ ನಡೆದಿವೆ. ಈ ಹಿಂದಿನಗಿಂತಲೂ ಕಳೆದ ಎರಡು ವರ್ಷದಲ್ಲಿ ಆರೋಗ್ಯ, ವೈದ್ಯಕೀಯ ಸೇವೆ ಉತ್ತಮವಾಗಿದೆ. ಆದಷ್ಟು ಬೇಗ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಈಡೇರಿಸೋದಾಗಿ ಆರೋಗ್ಯ ಸಚಿವ  ಡಾ. ಸುಧಾಕರ್ (Sudhakar) ಹೇಳಿದ್ದಾರೆ.

15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು

ದ್ರೌಪದಿ ಮುರ್ಮು (Draupadi Murmur) ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ (15th President of India) ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ (NV Ramana) ದ್ರೌಪದಿ ಮುರ್ಮು ಅವರಿಗೆ ಇಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ಮಂಕಿಪಾಕ್ಸ್ ತಡೆಗೆ ಕರ್ನಾಟಕದಲ್ಲಿ ಕಟ್ಟೆಚ್ಚರ

ಬೆಂಗಳೂರು (ಜು.25): ದೇಶದಲ್ಲಿ ಮಂಕಿಪಾಕ್ಸ್ (MonkeyPox)​ ಕಾಯಿಲೆ ಹರಡುತ್ತಿದ್ದು, ಕೇರಳದಲ್ಲಿ ಮಂಕಿಪಾಕ್ಸ್​ ಕಾಯಿಲೆ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲೂ (Karnataka) ಟೆನ್ಷನ್ ​ ಶುರುವಾಗಿದೆ. ಹೀಗಾಗಿ ರಾಜ್ಯದಲ್ಲಿ  ಕಟ್ಟೆಚ್ಚರ ವಹಿಸಲಾಗಿದೆ. ಗಡಿಭಾಗ ಜಿಲ್ಲೆಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ಜಿಲ್ಲೆಗಳ ಜಿಲ್ಲಾಧಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ (K Sudhakar) ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳ ಜತೆ ಈಗಾಗಲೇ ಸಭೆ ನಡೆಸಿದ್ದೇವೆ. ಮಂಕಿಪಾಕ್ಸ್ ಪ್ರಕರಣ ಕಂಡು ಬಂದರೆ ರೋಗಿಗಳನ್ನು ಪ್ರತ್ಯೇಕಿಸಿ, ಅಗತ್ಯ ಚಿಕಿತ್ಸೆ ನೀಡುವ ಕುರಿತು ಸೂಚಿಸಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (World Health Organization) ಸಹ ಇದನ್ನು ಆರೋಗ್ಯ ತುರ್ತು ಪರಿಸ್ಥಿತಿ (Emergency
Published by:Pavana HS
First published: