Evening Digest: ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್? ಯಡವಟ್ಟು ಮಾಡಿಕೊಂಡ ಪಾಕ್ ಪ್ರಧಾನಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ದೀಪಾವಳಿಗೆ ಉಚಿತ ಗ್ಯಾಸ್ ಸಿಲಿಂಡರ್ : ಐದನೇ ಹಂತದ ಚುನಾವಣೆಗೆ ಸಜ್ಜಾಗಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಪ್ರಚಾರದ ಕಾವು ಜೋರಾಗಿದೆ. ಇಂದು ಸಿರತುನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ರಾಜ್ಯದಲ್ಲಿ ಮತ್ತೊಂದು ಬಾರಿಗೆ ಬಿಜೆಪಿ ಸರ್ಕಾರ ಹೋಳಿ ಹಬ್ಬದ ಸಮಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದರೆ ಯೋಗಿ ಆದಿತ್ಯನಾಥ್, ದೀಪಾವಳಿಗೆ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ (Gas Cylinder) ನೀಡುವುದಾಗಿ ಘೋಸಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ 1.67 ಕೋಟಿ ಮನೆಗಳಿಗೆ ಗ್ಯಾಸ್ ಸಿಲಿಂಡರ್ ತಲುಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:UP Election: ಮತ್ತೊಮ್ಮೆ ಬಿಜೆಪಿ ಸರ್ಕಾರ ಬಂದ್ರೆ ದೀಪಾವಳಿಗೆ ಉಚಿತ ಗ್ಯಾಸ್​ ಸಿಲಿಂಡರ್​; Amit Shah

ಯಡವಟ್ಟು ಮಾಡಿಕೊಂಡ ಪಾಕ್ ಪ್ರಧಾನಿ
ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತೆ ಎಂಬ ಹೇಳಿಕೆಗೆ ತಕ್ಕ ಹಾಗೆ ನಡೆದುಕೊಂಡಿದ್ದಾರೆ ಪಕ್ಕದ ಪಾಕಿಸ್ತಾನ(Pakistan) ದೇಶದ ಪ್ರಧಾನಿ(Prime Minister)ಯಾಗಿರುವ ಇಮ್ರಾನ್ ಖಾನ್(Imran Khan). ಸುಮ್ಮನೇ ಕೂರಲಾಗದೆ ಇರುವೆ ಬಿಟ್ಕೊಂಡ್ರಂತೆ. ಹಂಗಾಗಿದೆ ಈಗ ಇಮ್ರಾನ್ ಖಾನ್ ಅವರ ಪರಿಸ್ಥಿತಿ. ಕೆಲ ದಿನಗಳ ಹಿಂದೆಯೇ ರಷ್ಯಾ-ಉಕ್ರೇನ್(Russia-Ukraine) ಮಧ್ಯೆ ಯುದ್ಧ ಏರ್ಪಡುವ ಎಲ್ಲ ಸಾಧ್ಯತೆಗಳು ಗೋಚರವಾಗಿದ್ದವು. ಅಷ್ಟೆ ಅಲ್ಲ, ಯುದ್ಧವೂ ಘೋಷಣೆಯಾಯಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಇಮ್ರಾನ್ ಅವರು ರಷ್ಯಾ ಅಧ್ಯಕ್ಷ(Russia)ರನ್ನು ಭೇಟಿ ಮಾಡಿದ್ದು ಈಗ ಪಾಕಿಸ್ತಾನಕ್ಕೆ ದುಬಾರಿ(Costly)ಯಾಗಿ ಪರಿಣಮಿಸಿದೆ. ಗುರುವಾರದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್(Vladimir Putin) ಅವರನ್ನು ಕ್ರೆಮ್ಲಿನ್ ನಲ್ಲಿ ಭೇಟಿಯಾದ ಗಂಟೆಗಳ ಬಳಿಕ ಯುಎಸ್ ಫೆಡರಲ್ ರಿಸರ್ವ್ಸ್ ಸಂಸ್ಥೆ(US Federal Reserves Agency)ಯು, ನ್ಯಾಶನಲ್ ಬ್ಯಾಂಕ್ ಆಫ್ ಪಾಕಿಸ್ತಾನ್(National Bank of Pakistan) ಹಾಗೂ ಅದರ ಅಮೆರಿಕದಲ್ಲಿರುವ ಶಾಖೆಯ ಮೇಲೆ ಬರೋಬ್ಬರಿ 55 ಮಿಲಿಯನ್ ಡಾಲರ್(55 Million Doller) ದಂಡ ಹೇರಿದೆ ಎಂಬ ಸುದ್ದಿ ಬಂದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Imran Khan: ಸುಮ್ನೆ ಇರಲಾರದೇ ಇರುವೆ ಬಿಟ್ಕೊಂಡ ಪಾಕ್​ ಪ್ರಧಾನಿ, 55 ಮಿಲಿಯನ್ ಡಾಲರ್ ದಂಡ ಹೇರಿದ ಯುಎಸ್​!

‘ಹಿಜಾಬ್’ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
11 ದಿನಗಳ ಕಾಲ ಹಿಜಾಬ್(Hijab) ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (High Court of Karnataka) ನ್ಯಾಯಮೂರ್ತಿಗಳ ಪೀಠ ಇಂದು ವಾದ-ಪ್ರತಿವಾದಗಳನ್ನು ಮುಕ್ತಾಯಗೊಳಿಸಿ, ತನ್ನ ತೀರ್ಪುನ್ನು ಕಾಯ್ದಿರಿಸಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ಹಕ್ಕನ್ನು ರಕ್ಷಿಸುವಂತೆ ಕೋರಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಿಸಿದ ಸರ್ಕಾರಿ ಪಿಯು ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಲಾಗಿದೆ. ಹೈಕೋರ್ಟ್ ನಿನ್ನೆಯೇ ಹಿಜಾಬ್ ಪ್ರಕರಣದ ವಕೀಲರಿಗೆ ಶುಕ್ರವಾರದೊಳಗೆ ತಮ್ಮ ವಾದವನ್ನು ಮುಕ್ತಾಯಗೊಳಿಸುವಂತೆ ಕೇಳಿಕೊಂಡಿದ್ದು, ಶೀಘ್ರದಲ್ಲೇ ಆದೇಶವನ್ನು ನೀಡುವುದಾಗಿ ಸೂಚಿಸಿತ್ತು. ತ್ರಿಸದಸ್ಯ ಪೀಠದ ಭಾಗವಾಗಿರುವ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಶುಕ್ರವಾರದೊಳಗೆ ವಾದಗಳನ್ನು ಪೂರ್ಣಗೊಳಿಸಬೇಕು ಎಂದು ವಕೀಲರಿಗೆ ತಿಳಿಸಿದ್ದರು. ಎರಡು ಮೂರು ದಿನಗಳೊಳಗೆ ಲಿಖಿತ ಸಲ್ಲಿಕೆಗಳನ್ನು ನೀಡುವಂತೆಯೂ ಅವರು ಇಂದು ಎರಡೂ ಕಡೆಯ ವಕೀಲರಿಗೆ ಸೂಚಿಸಿದರು.

ಈ ಬಾರಿ ಬೇಸಿಗೆ ರಜಾ ದಿನ ಕಡಿತ
ಕೊರೊನಾ ಕಾಲದ ಶಿಕ್ಷಣ (Education) ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ (Summer Holiday) ಕಡಿತಗೊಳಿಸಲು ಶಿಕ್ಷಣ ಇಲಾಖೆ (Education Department) ನಿರ್ಧರಿಸಿದೆ. ಏಪ್ರಿಲ್ 1 ರಿಂದ ಮೇ 15ರ ವರೆಗೆ ಮಾತ್ರ ಈ ಬಾರಿಯ ಬೇಸಿಗೆ ರಜೆ ನೀಡಲಾಗಿದೆ. ಮೇ 16 ರಿಂದ ಮತ್ತೆ ಶಾಲೆ(Schools)ಗಳು ಪುನರರಾಂಭಗೊಳ್ಳಲಿದ್ದು, ಒಟ್ಟು 14 ದಿನಗಳ ಬೇಸಿಗೆ ರಜೆಯನ್ನು ಶಿಕ್ಷಣ ಇಲಾಖೆ ಕಡಿತಗೊಳಿಸಿದೆ. ಈ ಮೂಲಕ ಕೊರೊನಾ ಕಾಲದ ಶೈಕ್ಷಣಿಕ ನಷ್ಟ ತುಂಬುವ ಯೋಚನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. 'ಕಲಿಕಾ ಚೇತರಿಕೆ' (Kalika Chetarike) ಯೋಜನೆ ರೂಪಿಸಿ ಬೇಸಿಗೆ ರಜೆ ಕಡಿತಗೊಳಿಸಲಾಗಿದೆ.

ಕಾಲಿವುಡ್ನಲ್ಲಿ ಇದೆಂಥಾ ಸ್ಟಾರ್ ವಾರ್?
ಚಿತ್ರರಂಗದಲ್ಲಿ ಸ್ಟಾರ್ ವಾರ್ (Star War) ಇರುವುದು ಕಾಮನ್. ಸ್ಯಾಂಡಲ್ವುಡ್(Sandalwood)ನಲ್ಲಿ ಸ್ಟಾರ್ ವಾರ್ ಕಡಿಮೆ. ಆದರೆ, ಬೇರೆ ಭಾಷೆಯ ಚಿತ್ರರಂಗದಲ್ಲಿ ಇದು ಕಾಮನ್. ಅದರಲ್ಲೂ ತಮಿಳು ಸಿನಿಮಾರಂಗ(Tamil Cinema Industry)ದಲ್ಲಿ ಸ್ಟಾರ್ ವಾರ್ ಅನ್ನೋದು ಮೊದಲಿನಿಂದಲೂ ಇದೆ. ತಮಿಳುನಾಡಿನಲ್ಲಿ ಅಜಿತ್ (Ajith) ಹಾಗೂ ವಿಜಯ್ (Vijay) ಅಭಿಮಾನಿಗಳ ನಡುವಿನ ವೈರತ್ವ ಇನ್ನಾವುದೇ ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಲ್ಲ. ಅಜಿತ್ ಹಾಗೂ ವಿಜಯ್ ಅಭಿಮಾನಿಗಳದ್ದು ಸದಾ ಕಿತ್ತಾಟ. ಈ ಬಾರಿಯಂತೂ ಈ ವೈಷಮ್ಯ ಮೇರೆ ಮೀರಿದೆ. ಫೆಬ್ರವರಿ 24ರಂದು ಅಜಿತ್ ನಟನೆಯ ವಲಿಮೈ (Valimai) ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು (Ajith Fans) ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದು ದಳಪತಿ ವಿಜಯ್ ಅಭಿಮಾನಿಗಳ (Vijay Fans) ಕಣ್ಣು ಕೆಂಪು ಮಾಡಿತ್ತು. ಇದನ್ನು ಸಹಿಸದ ವಿಜಯ್ ಅಭಿಮಾನಿಗಳು ಅಜಿತ್ ಅಭಿಮಾನಿಗಳ ಮೇಲೆ ದಾಳಿ (Attack) ನಡೆಸಿದ್ದಾರೆ.
Published by:Kavya V
First published: